Top Earners: ಇಡೀ ದೇಶದಲ್ಲೇ ಕರ್ನಾಟಕದ ಕುಟುಂಬಗಳ ಆದಾಯ ಹೆಚ್ಚು! ಮನಿ9 ಸಮೀಕ್ಷೆಯ ಇಂಟರೆಸ್ಟಿಂಗ್ ವಿಚಾರಗಳು ಇಲ್ಲಿವೆ

| Updated By: ಸುಗ್ಗನಹಳ್ಳಿ ವಿಜಯಸಾರಥಿ

Updated on: Dec 29, 2023 | 5:16 PM

Money9 Pulse Personal Finance Survey 2023: ದೇಶಾದ್ಯಂತ ನಡೆಸಲಾದ ಮನಿ9 ಪಲ್ಸ್ ಪರ್ಸನಲ್ ಫೈನಾನ್ಸ್ ಸಮೀಕ್ಷೆಯಲ್ಲಿ ಕೌಟುಂಬಿಕ ಆದಾಯ ವಿಚಾರವನ್ನೂ ಸರ್ವೆ ಮಾಡಲಾಗಿದೆ. ಭಾರತೀಯರು ತಿಂಗಳಿಗೆ ಎಷ್ಟು ಸಂಪಾದಿಸುತ್ತಾರೆ? ಯಾವ ರಾಜ್ಯದಲ್ಲಿ ಜನರು ಹೆಚ್ಚು ಸಂಪಾದಿಸುತ್ತಾರೆ ಎಂಬುದನ್ನು ಸಮೀಕ್ಷೆ ಕಂಡುಕೊಂಡಿದೆ. ಭಾರತದ ಇತರ ರಾಜ್ಯಗಳಿಗೆ ಹೋಲಿಸಿದರೆ ಕರ್ನಾಟಕದಲ್ಲಿ ಸರಾಸರಿಯಾಗಿ ಒಂದು ಕುಟುಂಬ ಹೆಚ್ಚು ಹಣ ಸಂಪಾದಿಸುತ್ತದೆ.

Top Earners: ಇಡೀ ದೇಶದಲ್ಲೇ ಕರ್ನಾಟಕದ ಕುಟುಂಬಗಳ ಆದಾಯ ಹೆಚ್ಚು! ಮನಿ9 ಸಮೀಕ್ಷೆಯ ಇಂಟರೆಸ್ಟಿಂಗ್ ವಿಚಾರಗಳು ಇಲ್ಲಿವೆ
ಮನಿ9 ಸಮೀಕ್ಷೆ
Follow us on

ಭಾರತೀಯರು ತಿಂಗಳಿಗೆ ಎಷ್ಟು ಸಂಪಾದಿಸುತ್ತಾರೆ? ಯಾವ ರಾಜ್ಯದಲ್ಲಿ ಜನರು ಹೆಚ್ಚು ಸಂಪಾದಿಸುತ್ತಾರೆ, ಯಾವ ರಾಜ್ಯದ ಜನರ ಆದಾಯ ಕಡಿಮೆ ಇದೆ? ಕಳೆದ ಒಂದು ವರ್ಷದಲ್ಲಿ ಭಾರತೀಯ ಕುಟುಂಬಗಳ ಆದಾಯ ಯಾವ ಕಾರಣದಿಂದ ಹೆಚ್ಚಿದೆ? ಈ ರೀತಿಯ ನೂರಾರು ಪ್ರಶ್ನೆಗಳಿಗೆ ಮನಿ9 ನಡೆಸಿರುವ ದೇಶದ ಅತಿದೊಡ್ಡ ಪರ್ಸನಲ್ ಫೈನಾನ್ಸ್ ಸಮೀಕ್ಷೆ (Money9 Pulse Personal Finance Survey 2023) ಉತ್ತರ ನೀಡಿದೆ.

ಕುಟುಂಬದ ಆದಾಯ ಹೆಚ್ಚಳ

Money9 ನಡೆಸಿರುವ ಸರ್ವೇ ಪ್ರಕಾರ ಭಾರತದ ಕುಟುಂಬವೊಂದು ತಿಂಗಳಿಗೆ 25,910 ರೂಪಾಯಿ ಗಳಿಸುತ್ತದೆ. ಕಳೆದ ವರ್ಷಕ್ಕೆ ಹೋಲಿಕೆ ಮಾಡಿದರೆ ಭಾರತೀಯ ಕುಟುಂಬಗಳ ಆದಾಯ ಶೇ. 12ರಷ್ಟು ಹೆಚ್ಚಾಗಿದೆ. 2022ರ ಸಮೀಕ್ಷೆಯಲ್ಲಿ ಭಾರತೀಯ ಕುಟುಂಬದ ಸರಾಸರಿ ಆದಾಯ 23,000 ರೂ. ಇತ್ತು. ಈ ಆದಾಯ ಹೆಚ್ಚಳಕ್ಕೆ ಪ್ರಮುಖ ಕಾರಣ ಅಂದರೆ ಕುಟುಂಬದ ದುಡಿಯುವ ಸದಸ್ಯರ ಸಂಖ್ಯೆಯಲ್ಲಿ ಹೆಚ್ಚಳವಾಗಿದೆ. ಅಂದರೆ ದುಡಿಯುವ ಕೈಗಳು ಹೆಚ್ಚಿವೆ. ಕಳೆದ ವರ್ಷ ಕುಟುಂಬದ ಸರಾಸರಿ ಸದಸ್ಯರ ಸಂಖ್ಯೆ 4.2 ಇದ್ದರೆ ದುಡಿಯುವವರ ಸಂಖ್ಯೆ 1.6 ರಷ್ಟಿತ್ತು. ಅದೇ ಈ ಸಾರಿ ಕುಟುಂಬದ ಸದಸ್ಯರ ಸಂಖ್ಯೆ 4.3 ಕ್ಕೆ ಏರಿರುವುದರ ಜತೆಗೆ ಆದಾಯ ಗಳಿಸುವ ಸದಸ್ಯರ ಸಂಖ್ಯೆ 1.8 ಕ್ಕೆ ಏರಿದೆ.

ಹಾಗಿದ್ದರೆ ಕುಟುಂಬದ ಆದಾಯ ಮತ್ತು ಗಳಿಸುವ ಸದಸ್ಯರ ಸಂಖ್ಯೆಯಲ್ಲಿ ಹೆಚ್ಚಳವಾಗಲು ಕಾರಣವೇನು? ಎನ್ನುವುದನ್ನು ತಿಳಿದುಕೊಳ್ಳಬೇಕು. ವಾಸ್ತವವಾಗಿ, ಕೊರೋನಾ ಸಮಯದಲ್ಲಿ, ನಗರಗಳಲ್ಲಿ ವಾಸಿಸುವ ಕುಟುಂಬಗಳು ಹಳ್ಳಿಗಳಿಗೆ ವಲಸೆ ಹೋಗಿದ್ದವು. ಈಗ ಕೊರೋನಾ ಪರಿಣಾಮ ಮುಗಿದ ನಂತರ, ಈ ಜನರು ಗಳಿಸಲು ನಗರಕ್ಕೆ ಮರಳುತ್ತಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಕಳೆದ ವರ್ಷಕ್ಕೆ ಹೋಲಿಸಿದರೆ ಕುಟುಂಬದ ಆದಾಯ ಮತ್ತು ಕುಟುಂಬದ ಗಾತ್ರ ಹೆಚ್ಚಾಗಿದೆ.

ಇದನ್ನೂ ಓದಿ: Savings In Gold: ಭಾರತದ ಚಿನ್ನದ ಗಣಿಯಾದ ಬೆಂಗಳೂರು! ಚಿನ್ನದ ಮೇಲೆ ಹೂಡಿಕೆ ಮಾಡೋದ್ರಲ್ಲಿ ಬೆಂಗಳೂರೇ ಫಸ್ಟ್!

ಆದರೆ ಭಾರತದ ಯಾವ ರಾಜ್ಯದಲ್ಲಿ ಕುಟುಂಬಗಳು ಹೆಚ್ಚು ಸಂಪಾದಿಸುತ್ತವೆ ಎಂಬ ಕುತೂಹಲ ನಿಮ್ಮನ್ನು ಕಾಡುತ್ತಿದೆಯೆ? ಅದಕ್ಕೆ ಉತ್ತರವನ್ನು ಸಮೀಕ್ಷೆ ನೀಡಿದೆ. Money9 ನ ಸಮೀಕ್ಷೆಯು ಭಾರತದಲ್ಲಿ ಆದಾಯ ಗಳಿಸುವ ಟಾಪ್ ಒನ್ ರಾಜ್ಯ ನಮ್ಮ ಕರ್ನಾಟಕ. ಕರ್ನಾಟಕ, ಮಹಾರಾಷ್ಟ್ರ ಮತ್ತು ಚಂಡೀಗಢ ಮೊದಲ ಮೂರು ಸ್ಥಾನದಲ್ಲಿವೆ. ಕಳೆದ ವರ್ಷದ ಸಮೀಕ್ಷೆಯಲ್ಲಿ ಮಹಾರಾಷ್ಟ್ರದ ಕುಟುಂಬಗಳು 35,559 ರೂ ಸರಾಸರಿ ಆದಾಯದೊಂದಿಗೆ ಮೊದಲ ಸ್ಥಾನದಲ್ಲಿದ್ದವು. ಈ ಬಾರಿ ಕರ್ನಾಟಕ ಮೊದಲ ಸ್ಥಾನದಲ್ಲಿದ್ದು ಸರಾಸರಿ 35,411 ರೂ. ಆದಾಯ ಕಳಿಸುತ್ತಿವೆ.

ಆದರೆ ಮಹಾರಾಷ್ಟ್ರ ಈ ವರ್ಷ 35,392 ಸರಾಸರಿ ಆದಾಯದೊಂದಿಗೆ ಎರಡನೇ ಸ್ಥಾನದಲ್ಲಿದೆ. ಕಳೆದ ವರ್ಷ, ದೆಹಲಿಯು 28,536 ರೂ ಕುಟುಂಬದ ಸರಾಸರಿ ಆದಾಯದೊಂದಿಗೆ ಮೂರನೇ ಸ್ಥಾನದಲ್ಲಿತ್ತು. ಈ ವರ್ಷ, ಚಂಡೀಗಢವು ಸರಾಸರಿ ರೂ 34,588 ಆದಾಯದೊಂದಿಗೆ ಮೂರನೇ ಸ್ಥಾನ ಆಕ್ರಮಿಸಿಕೊಂಡಿದೆ.

ಅರ್ಧ ದೊಡ್ಡ ರಾಜ್ಯಗಳ ಆದಾಯ ರಾಷ್ಟ್ರೀಯ ಸರಾಸರಿಗಿಂತ ಕಡಿಮೆ ಇದೆ ಎನ್ನುವ ಶಾಕಿಂಗ್ ಮಾಹಿತಿಯನ್ನು ಸಹ ಸಮೀಕ್ಷೆ ಬಹಿರಂಗಪಡಿಸಿದೆ. ಇನ್ನೊಂದು ಪ್ರಮುಖ ಅಂಶ ಎಂದರೆ ಆದಾಯ ಗಳಿಕೆಯಲ್ಲಿ ಹಿಂದುಳಿದಿರುವ ರಾಜ್ಯಗಳ ಶ್ರೇಯಾಂಕದಲ್ಲೂ ಬದಲಾವಣೆಯಾಗಿದೆ. ಬಿಹಾರದ ಸರಾಸರಿ ಆದಾಯ ಹೆಚ್ಚಾಗಿದೆ, ಆದರೆ ಇನ್ನೂ ಈ ರಾಜ್ಯವು ಆದಾಯದ ವಿಷಯದಲ್ಲಿ ದೇಶದಲ್ಲೇ ಅತ್ಯಂತ ಹಿಂದುಳಿದ ರಾಜ್ಯವಾಗಿದೆ.

ಕಳೆದ ಸಮೀಕ್ಷೆಯಲ್ಲಿ ಬಿಹಾರದ ಕುಟುಂಬಗಳ ಸರಾಸರಿ ಆದಾಯ 14,366 ರೂ.ಗಳಾಗಿದ್ದು, ಈ ವರ್ಷ 17,567 ರೂ.ಗೆ ಏರಿಕೆಯಾಗಿದೆ. ಕಳೆದ ವರ್ಷ ಜಾರ್ಖಂಡ್ ಎರಡನೇ ಮತ್ತು ಒಡಿಶಾ ಮೂರನೇ ಸ್ಥಾನದಲ್ಲಿದ್ದರೆ, ಒಡಿಶಾ ಎರಡನೇ ಮತ್ತು ಜಾರ್ಖಂಡ್ ಮೂರನೇ ಸ್ಥಾನದಲ್ಲಿದೆ.

ಇದನ್ನೂ ಓದಿ: Fear of Job Loss: ಜಾಬ್ ಲಾಸ್ ಭಯ ನಿಮ್ಮನ್ನೂ ಕಾಡ್ತಿದೆಯಾ? ಜಾಬ್ ಕಳೆದುಕೊಳ್ಳುವ ಭಯದಲ್ಲಿರುವ ದೇಶದ ಜನರೆಷ್ಟು?

ಈ ಸಮೀಕ್ಷೆಯನ್ನು ಪ್ರತಿಷ್ಠಿತ ಜಾಗತಿಕ ಏಜೆನ್ಸಿ ಆರ್‌ಟಿಐ ಇಂಟರ್‌ನ್ಯಾಷನಲ್ ಮಾಡಿದೆ. ವಿಶ್ವಬ್ಯಾಂಕ್‌ನಂತಹ ದೊಡ್ಡ ಸಂಸ್ಥೆಗಳಿಗಾಗಿ ಈ ಸಂಸ್ಥೆ ಇಂತಹ ಸಮೀಕ್ಷೆಗಳನ್ನು ನಡೆಸುತ್ತಾ ಬಂದಿದೆ. ಈಗ ಮನಿ9 ನಡೆಸಿರುವಂತಹ ಸಮೀಕ್ಷೆಗಳನ್ನು ಭಾರತದಲ್ಲಿ ಸಾಮಾನ್ಯವಾಗಿ ರಿಸರ್ವ್ ಬ್ಯಾಂಕ್ ಇಂಡಿಯಾ ಅಥವಾ ನ್ಯಾಷನಲ್ ಸ್ಯಾಂಪಲ್ ಸರ್ವೆ ಆಫ್ ಇಂಡಿಯಾ ನಡೆಸುತ್ತದೆ. ಆದರೆ ಈ ಎರಡೂ ಸಂಸ್ಥೆಗಳ ಇತ್ತೀಚಿನ ಸಮೀಕ್ಷೆಯು Money9 ನ ಸಮೀಕ್ಷೆಗಿಂತ ಹೆಚ್ಚು ಹಳೆಯದು. ಪ್ರಸ್ತುತ ಪರಿಸ್ಥಿತಿಯ ಕುರಿತು ಮನಿ 9 ರ ಸಮೀಕ್ಷೆಯು ಭಾರತೀಯರ ಆರ್ಥಿಕ ಆರೋಗ್ಯದ ನಿಖರ ಮಾಹಿತಿ ನಿಮ್ಮ ಮುಂದೆ ಇಟ್ಟಿದೆ.

ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ