Kisan Vikas Patra Interest Rate 2023: ಹೊಸ ವರ್ಷದಲ್ಲಿ ಎಷ್ಟಿರಲಿದೆ ಕಿಸಾನ್ ವಿಕಾಸ್ ಪತ್ರ ಬಡ್ಡಿ?

| Updated By: Ganapathi Sharma

Updated on: Dec 29, 2022 | 4:37 PM

KVP Details; ಹೆಚ್ಚುತ್ತಿರುವ ಹಣದುಬ್ಬರ ತಡೆಗಾಗಿ ಆರ್​ಬಿಐ ರೆಪೊ ದರವನ್ನು ಸತತವಾಗಿ ಹೆಚ್ಚು ಮಾಡಿರುವುದು ಮತ್ತು ಮುಂದಿನ ಹಣಕಾಸು ನೀತಿಯಲ್ಲಿ ಮತ್ತೆ ಏರಿಕೆ ಮಾಡುವ ಸುಳಿವು ನೀಡಿರುವುದು ಕಿಸಾನ್ ವಿಕಾಸ್ ಪತ್ರ ಠೇವಣಿಯ ಬಡ್ಡಿ ದರ ಹೆಚ್ಚಳದ ನಿರೀಕ್ಷೆ ಮೂಡಿಸಿದೆ.

Kisan Vikas Patra Interest Rate 2023: ಹೊಸ ವರ್ಷದಲ್ಲಿ ಎಷ್ಟಿರಲಿದೆ ಕಿಸಾನ್ ವಿಕಾಸ್ ಪತ್ರ ಬಡ್ಡಿ?
ಕಿಸಾನ್ ವಿಕಾಸ್ ಪತ್ರ (ಸಾಂದರ್ಭಿಕ ಚಿತ್ರ)
Follow us on

ಕಿಸಾನ್ ವಿಕಾಸ್ ಪತ್ರದ (Kisan Vikas Patra) ಅಥವಾ ಕೆವಿಪಿ ಠೇವಣಿಯ ಹಾಲಿ ಬಡ್ಡಿ ದರ ವಾರ್ಷಿಕವಾಗಿ ಶೇಕಡಾ 7ರಷ್ಟಿದೆ. ಡಿಸೆಂಬರ್ 31ರ ವರೆಗೆ ಈ ಬಡ್ಡಿ ದರದಲ್ಲಿ (Interest Rate) ಯಾವುದೇ ಬದಲಾವಣೆ ಆಗುವ ಸಾಧ್ಯತೆ ಇಲ್ಲವಾದ್ದರಿಂದ 2023ರ ಮೊದಲ ತ್ರೈಮಾಸಿಕದಲ್ಲಿ ಇದೇ ಬಡ್ಡಿ ದರ ಮುಂದುವರಿಯಲಿದೆ. ಆದರೆ ಹೆಚ್ಚುತ್ತಿರುವ ಹಣದುಬ್ಬರ ತಡೆಗಾಗಿ ಆರ್​ಬಿಐ ರೆಪೊ ದರವನ್ನು ಸತತವಾಗಿ ಹೆಚ್ಚು ಮಾಡಿರುವುದು ಮತ್ತು ಮುಂದಿನ ಹಣಕಾಸು ನೀತಿಯಲ್ಲಿ ಮತ್ತೆ ಏರಿಕೆ ಮಾಡುವ ಸುಳಿವು ನೀಡಿರುವುದು ಕಿಸಾನ್ ವಿಕಾಸ್ ಪತ್ರ ಠೇವಣಿಯ ಬಡ್ಡಿ ದರ ಹೆಚ್ಚಳದ ನಿರೀಕ್ಷೆ ಮೂಡಿಸಿದೆ. ಕೆಲವು ಬ್ಯಾಂಕ್​ಗಳು ಈಗ ಕಿಸಾನ್ ವಿಕಾಸ್ ಪತ್ರ ಠೇವಣಿಗೆ ನೀಡುವುದಕ್ಕಿಂತಲೂ ಹೆಚ್ಚು ಬಡ್ಡಿಯನ್ನು ಸ್ಥಿರ ಠೇವಣಿಗೆ (ಎಫ್​​ಡಿ) ನೀಡುತ್ತಿವೆ.

2023ರಲ್ಲಿ ಕಿಸಾನ್ ವಿಕಾಸ್ ಪತ್ರ ಬಡ್ಡಿ ದರ

ಕಿಸಾನ್ ವಿಕಾಸ್ ಪತ್ರದ ಬಡ್ಡಿ ದರವನ್ನು ಕೇಂದ್ರ ಸರ್ಕಾರ ತ್ರೈಮಾಸಿಕ ಅವಧಿಗೊಮ್ಮೆ ಪರಿಷ್ಕರಣೆ ಮಾಡಬಹುದಾಗಿದೆ. ಮುಂದಿನ ಪರಿಷ್ಕರಣೆ (2023ರ ಜನವರಿ – ಮಾರ್ಚ್​ ಅವಧಿಗೆ) 2022ರ ಡಿಸೆಂಬರ್ 31ರ ಒಳಗೆ ನಡೆಯಬೇಕಾಗಿದೆ. ಇನ್ನು 2 ದಿನಗಳ ಒಳಗೆ ಬಡ್ಡಿ ದರ ಹೆಚ್ಚಳವಾಗಲಿದೆಯೇ ಎಂಬ ಪ್ರಶ್ನೆಗೆ ಉತ್ತರ ದೊರೆಯಲಿದೆ.

ಇದನ್ನೂ ಓದಿ: SIP Vs Lumpsum: ಲಂಸಮ್ ಅಥವಾ ಎಸ್​ಐಪಿ; 2023ರಲ್ಲಿ ಮ್ಯೂಚುವಲ್ ಫಂಡ್ ಹೂಡಿಕೆಗೆ ಯಾವುದು ಉತ್ತಮ? ತಜ್ಞರ ಸಲಹೆ ಇಲ್ಲಿದೆ

ಕಿಸಾನ್ ವಿಕಾಸ್ ಪತ್ರದ ಕೆಲವು ವಿಶೇಷತೆಗಳು

ಗ್ಯಾರಂಟೀಡ್ ರಿಟರ್ನ್ಸ್: ಕಿಸಾನ್ ವಿಕಾಸ್ ಪತ್ರ ಠೇವಣಿಯನ್ನು ಅಂಚೆ ಕಚೇರಿಗಳಲ್ಲಿ ತೆರೆಯಲಾಗುತ್ತದೆ. ಇದು ಸಾವರಿನ್ ಗ್ಯಾರಂಟೀ ಒಳಗೊಂಡ ಠೇವಣಿಯಾಗಿದೆ. ಅಂಚೆ ಕಚೇರಿಯಲ್ಲೇನಾದರೂ ಸಮಸ್ಯೆಯಾದರೂ ಸರ್ಕಾರ ಈ ಠೇವಣಿಗೆ ಖಾತರಿ ನೀಡುತ್ತದೆ.

123 ತಿಂಗಳಲ್ಲಿ ದ್ವಿಗುಣವಾಗುವ ಆದಾಯ: ಕಿಸಾನ್ ವಿಕಾಸ್ ಪತ್ರದಲ್ಲಿ ಹೂಡಿಕೆ ಮಾಡಿದ ಮೊತ್ತವು 10 ವರ್ಷ 3 ತಿಂಗಳ ನಂತರ ದ್ವಿಗುಣಗೊಳ್ಳುತ್ತದೆ.

ಠೇವಣಿ ಮಿತಿ: ಕನಿಷ್ಠ 1,000 ರೂ. ಠೇವಣಿ ಇಡಬೇಕಾಗುತ್ತದೆ. ಗರಿಷ್ಠ ಮಿತಿ ಇಲ್ಲ.

ಅಪ್ರಾಪ್ತರ ಖಾತೆ: 10 ವರ್ಷ ಮೇಲ್ಪಟ್ಟ ಮಕ್ಕಳೂ ಸಹ ತಮ್ಮದೇ ಹೆಸರಿನಲ್ಲಿ ಕಿಸಾನ್ ವಿಕಾಸ್ ಪತ್ರ ಖಾತೆ ತೆರೆಯಬಹುದು.

ಖಾತೆಗೆ ಮಿತಿಯಿಲ್ಲ: ಒಬ್ಬ ವ್ಯಕ್ತಿ ಎಷ್ಟು ಬೇಕಾದರೂ ಕಿಸಾನ್ ವಿಕಾಸ್ ಪತ್ರ ಖಾತೆಯನ್ನು ತೆರೆಯಬಹುದಾಗಿದೆ.

ಅವಧಿಪೂರ್ವ ಹಿಂಪಡೆಯುವಿಕೆ: ಕಿಸಾನ್ ವಿಕಾಸ್ ಪತ್ರದ ಠೇವಣಿಯನ್ನು 2 ವರ್ಷ ಮತ್ತು 6 ತಿಂಗಳು ಕಳೆದ ನಂತರ ಯಾವಾಗ ಬೇಕಾದರೂ ಅವಧಿಪೂರ್ವ ವಾಪಸ್ ಪಡೆಯಬಹುದಾಗಿದೆ.

ಇನ್ನಷ್ಟು ವಾಣಿಜ್ಯ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ