ಬೇರರ್ ಚೆಕ್ (Bearer Cheque) ಬಗ್ಗೆ ಕೇಳಿರಬಹುದು. ನಾವು ನೀವು ಸಾಮಾನ್ಯವಾಗಿ ಬಳಸುವುದು ಆರ್ಡರ್ ಚೆಕ್. ಬೇರರ್ ಚೆಕ್ ಕೂಡ ಅದೇ ಚೆಕ್ ಆದರೂ ಸ್ವೀಕೃತರು ಯಾರೇ ಆದರೂ ಚೆಕ್ ಬಳಸಬಹುದು. ಆರ್ಡರ್ ಚೆಕ್ನಲ್ಲಿ ಸ್ವೀಕೃತರ ಹೆಸರು ಬರೆಯಲಾಗಿದ್ದರೆ ಆ ಹೆಸರಿನ ವ್ಯಕ್ತಿ ಮಾತ್ರ ಹಣ ಪಡೆಯಬಹುದು. ಕ್ರಾಸ್ಡ್ ಚೆಕ್ (Crossed Cheque) ಆದರೆ ಸ್ವೀಕೃತ ವ್ಯಕ್ತಿ ತನ್ನ ಖಾತೆ ಇರುವ ಬ್ಯಾಂಕಿಗೆ ಹೋಗಿ ಅಲ್ಲಿ ಆ ಚೆಕ್ ಅನ್ನು ಸಲ್ಲಿಸಿ ಹಣ ವರ್ಗಾವಣೆ ಮಾಡಿಸಿಕೊಳ್ಳಬಹುದು. ಬೇರರ್ ಚೆಕ್ನಿಂದ ಯಾರು ಬೇಕಾದರೂ ಹಣ ವಿತ್ಡ್ರಾ ಮಾಡಬಹುದು. ಹಣ ಪಡೆಯುವ ವ್ಯಕ್ತಿ ಬ್ಯಾಂಕ್ ಖಾತೆ ಹೊಂದಿರಬೇಕಾದ ಅಗತ್ಯ ಇರುವುದಿಲ್ಲ. ಬೇರರ್ ಚೆಕ್ ಬಳಕೆ ಹೆಚ್ಚು ಇಲ್ಲ. ವ್ಯವಹಾರಗಳಲ್ಲಿ ಕೆಲವೊಮ್ಮೆ ಬೇರರ್ ಚೆಕ್ಗಳ ಮೂಲಕ ಹಣ ವಹಿವಾಟು ನಡೆಯುವುದುಂಟು.
ಬೇರರ್ ಚೆಕ್ನಲ್ಲಿ ಖಾತೆದಾರ ಸಹಿಹಾಕಿ ಯಾವುದೇ ಹಣದ ಮೊತ್ತವನ್ನು ನಮೂದಿಸದಿದ್ದರೆ ಅದು ಬ್ಲ್ಯಾಂಕ್ ಚೆಕ್ ಆಗುತ್ತದೆ. ಚೆಕ್ ಹೊಂದಿರುವವರು ಎಷ್ಟು ಬೇಕಾದರೂ ಹಣ ನಮೂದಿಸಬಹುದು. ಆದರೆ, ಬೇರರ್ ಚೆಕ್ನಲ್ಲಿ 2 ಲಕ್ಷ ರೂಗಿಂತ ಹೆಚ್ಚು ಮೊತ್ತ ಹಾಕಲಾಗಿದ್ದರೆ ಆಗ ಆದಾಯ ತೆರಿಗೆ ಕಾನೂನು ಅಡ್ಡಿ ಬರುತ್ತದೆ. ಐಟಿ ಸೆಕ್ಷನ್ 269ಎಸ್ಟಿ ಪ್ರಕಾರ ಒಂದು ದಿನದಲ್ಲಿ 2 ಲಕ್ಷ ರೂಗಿಂತ ಹೆಚ್ಚು ಮೊತ್ತದ ಕ್ಯಾಷ್ ವಹಿವಾಟು ನಡೆಯುವಂತಿಲ್ಲ. ಒಂದು ವೇಳೆ ಬೇರರ್ ಚೆಕ್ನಿಂದ 2.5 ಲಕ್ಷ ರೂ ಹಣವನ್ನು ಒಮ್ಮೆಗೇ ಪಡೆದರೆ ಆಗ ಅಷ್ಟೂ ಮೊತ್ತದ ದಂಡ ಪಾವತಿಸಬೇಕಾಗುತ್ತದೆ.
ಇದನ್ನೂ ಓದಿ: PVR Inox: 50 ಸಿನಿಮಾ ಹಾಲ್ ಮುಚ್ಚಲಿರುವ ಪಿವಿಆರ್ ಐನಾಕ್ಸ್; ಭಾರೀ ನಷ್ಟ ಕಾರಣ- ಹಿಂದಿ ಚಿತ್ರಗಳನ್ನು ನೋಡೋರಿಲ್ಲವಾ?
ಬೇರರ್ ಚೆಕ್ ಬಳಸಲು ಖಾತೆದಾರರ ಬ್ಯಾಂಕ್ನ ಯಾವುದೇ ಬ್ರ್ಯಾಚ್ಗೆ ಬೇಕಾದರೂ ಹೋಗಿ ಹಣ ಪಡೆಯಬಹುದು. ಈ ಚೆಕ್ ಇದ್ದವರು ಯಾರೇ ಆದರೂ ಹಣ ಪಡೆಯಲು ಅಡ್ಡಿ ಇರುವುದಿಲ್ಲ. ಆದರೆ, 50,000 ಸಾವಿರ ರೂಗಿಂತ ಹೆಚ್ಚು ಹಣವನ್ನು ಬೇರರ್ ಚೆಕ್ ಮೂಲಕ ಪಡೆದರೆ ಬ್ಯಾಂಕಿಗೆ ಕೆವೈಸಿ ಸಲ್ಲಿಸಬೇಕಾಗುತ್ತದೆ. ಕೆಲ ಬ್ಯಾಂಕುಗಳು 50,000 ರೂಗಿಂತ ಕಡಿಮೆ ಮೊತ್ತಕ್ಕೂ ವ್ಯಕ್ತಿಯಿಂದ ಕೆವೈಸಿ ದಾಖಲೆಗಳನ್ನು ಪಡೆಯಲು ಮುಂದಾಗಬಹುದು. ಆದರೆ, ಕಾನೂನು ಪ್ರಕಾರ ಅದು ಕಡ್ಡಾಯವಲ್ಲ. 50,000 ರೂಗಿಂತ ಹೆಚ್ಚು ಮೊತ್ತಕ್ಕೆ ಮಾತ್ರ ಕೆವೈಸಿ ಕಡ್ಡಾಯ.