ಭಾರತೀಯ ಮಹಿಳಾ ಕ್ರಿಕೆಟಿಗರಿಗೆ ಹಣದ ಹೊಳೆ; ಇವರಿಗೆ ಎಷ್ಟು ಟ್ಯಾಕ್ಸ್ ಹೊರೆ ಬೀಳುತ್ತೆ ಗೊತ್ತಾ?

Know how much taxes Indian cricket players pays on their income: ಭಾರತೀಯ ಮಹಿಳಾ ಕ್ರಿಕೆಟ್ ತಂಡ ಮೊದಲ ಬಾರಿಗೆ ವಿಶ್ವಕಪ್ ಗೆದ್ದು ಬೀಗಿದೆ. ಬಿಸಿಸಿಐನಿಂದ ತಂಡಕ್ಕೆ 51 ಕೋಟಿ ರೂ ಬಹುಮಾನ ಘೋಷಣೆಯಾಗಿದೆ. ಕ್ರಿಕೆಟಿಗರಿಗೆ ನೀಡುವ ಹಣದಲ್ಲಿ ಜಿಎಸ್​ಟಿ, ಟಿಡಿಎಸ್ ಮುರಿದುಕೊಳ್ಳಲಾಗುತ್ತದೆ. ಇದರ ಜೊತೆಗೆ ಒಟ್ಟು ವಾರ್ಷಿಕ ಆದಾಯಕ್ಕೆ ಇನ್ಕಮ್ ಟ್ಯಾಕ್ಸ್ ಸ್ಲ್ಯಾಬ್ ದರಗಳ ಪ್ರಕಾರ ತೆರಿಗೆ ಅನ್ವಯ ಆಗುತ್ತದೆ.

ಭಾರತೀಯ ಮಹಿಳಾ ಕ್ರಿಕೆಟಿಗರಿಗೆ ಹಣದ ಹೊಳೆ; ಇವರಿಗೆ ಎಷ್ಟು ಟ್ಯಾಕ್ಸ್ ಹೊರೆ ಬೀಳುತ್ತೆ ಗೊತ್ತಾ?
ಭಾರತೀಯ ಮಹಿಳಾ ಕ್ರಿಕೆಟ್ ತಂಡ

Updated on: Nov 03, 2025 | 4:38 PM

ನವದೆಹಲಿ, ನವೆಂಬರ್ 3: ಸೌತ್ ಆಫ್ರಿಕಾವನ್ನು ಮಣಿಸಿ ಚೊಚ್ಚಲ ವಿಶ್ವಕಪ್​ಗೆ ಮುತ್ತಿಟ್ಟ ಟೀಮ್ ಇಂಡಿಯಾ ಮಹಿಳಾ ಕ್ರಿಕೆಟಿಗರಿಗೆ (Indian cricket team) ಮಾನ ಸನ್ಮಾನಗಳು ಭರಪೂರವಾಗಿ ಸಿಗುತ್ತಿವೆ. ಹಣದ ಹೊಳೆಯೂ ಹರಿದುಬರುತ್ತಿದೆ. ಬಿಸಿಸಿಐ 51 ಕೋಟಿ ರೂ ಕ್ಯಾಷ್ ಬಹುಮಾನವನ್ನು ತಂಡಕ್ಕೆ ನೀಡಿದೆ. 2024ರ ಟಿ20 ವಿಶ್ವಕಪ್ ಗೆದ್ದಿದ್ದ ಭಾರತ ಪುರುಷರ ತಂಡಕ್ಕೆ ಬಿಸಿಸಿಐ 125 ಕೋಟಿ ರೂ ಬಹುಮಾನ ಪ್ರಕಟಿಸಿತ್ತು. ಮಹಿಳಾ ಕ್ರಿಕೆಟಿಗರಿಗೆ ಹಿಂದೆ ಕೊಡುತ್ತಿದ್ದುದಕ್ಕಿಂತಲೂ ಬಹಳ ಹೆಚ್ಚು ಸಂಭಾವನೆಯನ್ನು ಈಗ ಕೊಡಲಾಗುತ್ತಿದೆ. ಈ ಹಣವೆಲ್ಲವೂ ಕ್ರಿಕೆಟಿಗರಿಗೆ ಪೂರ್ಣವಾಗಿ ಸಿಗುತ್ತಾ, ಅಥವಾ ತೆರಿಗೆಗಳು (taxes) ಕಡಿತಗೊಳ್ಳುತ್ತವಾ?

ಕ್ರಿಕೆಟಿಗರ ಆದಾಯಕ್ಕೆ ಎಷ್ಟು ತೆರಿಗೆ?

ಕ್ರಿಕೆಟ್ ಆಟಗಾರರು ಮತ್ತು ಆಟಗಾರ್ತಿಯರಿಗೆ ಮ್ಯಾಚ್ ಫೀ, ಕಾಂಟ್ರಾಕ್ಟ್, ಬಹುಮಾನ ಇತ್ಯಾದಿಯಿಂದ ಆದಾಯ ಸಿಗುತ್ತದೆ. ಈ ಆದಾಯಕ್ಕೆ ಇನ್ಕಮ್ ಟ್ಯಾಕ್ಸ್ ಅನ್ವಯ ಆಗುತ್ತದೆ. ಸಂಭಾವನೆ ಕೊಡುವಾಗಲೇ ಬಿಸಿಸಿಐ ಆಗಲೀ ಅಥವಾ ಐಪಿಎಲ್ ಆಗಲೀ ಶೇ. 10ರಿಂದ 30 ಟಿಡಿಎಸ್ ಅನ್ನು ಮುರಿದುಕೊಳ್ಳುತ್ತದೆ. ಆಟಗಾರರು ಒಟ್ಟಾರೆ ಒಂದು ವರ್ಷದಲ್ಲಿ ಎಷ್ಟು ಆದಾಯ ಗಳಿಸುತ್ತಾರೆ ಅದಕ್ಕೆ ಇನ್ಕಮ್ ಟ್ಯಾಕ್ಸ್ ಸ್ಲ್ಯಾಬ್ ದರಗಳು ಅನ್ವಯ ಆಗುತ್ತದೆ. ಐಟಿಆರ್ ಸಲ್ಲಿಸುವಾಗ ಆಟಗಾರರು ಟ್ಯಾಕ್ಸ್ ಬಾಕಿ ಹಣವನ್ನು ಪಾವತಿಸಬೇಕಾಗುತ್ತದೆ.

ಮ್ಯಾಚ್ ಫೀ ಮೇಲೆ ಟಿಡಿಎಸ್ ಮತ್ತು ಜಿಎಸ್​ಟಿ

ಬಿಸಿಸಿಐ ಮತ್ತು ಐಪಿಎಲ್ ಆಯೋಜಿಸುವ ಪಂದ್ಯಗಳಲ್ಲಿ ಭಾರತೀಯ ಕ್ರಿಕೆಟಿಗರಾದರೆ ಮ್ಯಾಚ್ ಫೀ ಹಣಕ್ಕೆ ಶೇ. 10ರಷ್ಟು ಟಿಡಿಎಸ್ ಇರುತ್ತದೆ. ಐಪಿಎಲ್​ನಲ್ಲಿ ಆಡುವ ವಿದೇಶೀ ಆಟಗಾರರಿಗೆ ನೀಡುವ ಹಣಕ್ಕೆ ಶೇ. 20ರಷ್ಟು ಟಿಡಿಎಸ್ ಮುರಿದುಕೊಳ್ಳಲಾಗುತ್ತದೆ. ಜೊತೆಗೆ ಶೇ 18ರಷ್ಟು ಜಿಎಸ್​​ಟಿಯೂ ಅನ್ವಯ ಆಗುತ್ತದೆ.

ಇದನ್ನೂ ಓದಿ: ಟೀಮ್ ಇಂಡಿಯಾಗೆ ಅರ್ಧ ಶತಕೋಟಿ ರೂ. ಬಹುಮಾನ ಘೋಷಿಸಿದ ಬಿಸಿಸಿಐ

ಬಹುಮಾನ ಹಣಕ್ಕೆ ಹೆಚ್ಚು ಟಿಡಿಎಸ್

ಪ್ಲೇಯರ್ ಆಫ್ ದಿ ಮ್ಯಾಚ್, ಪ್ಲೇಯರ್ ಆಫ್ ದಿ ಸೀರೀಸ್ ಇತ್ಯಾದಿ ಬಹುಮಾನಗಳಿಗೆ ಸಿಗುವ ಹಣಕ್ಕೆ ಶೇ. 30ರಷ್ಟು ಟಿಡಿಎಸ್ ಮುರಿದುಕೊಳ್ಳಲಾಗುತ್ತದೆ. ಇದಕ್ಕೆ ಜಿಎಸ್​ಟಿ ಇರುವುದಿಲ್ಲ.

ಜಾಹೀರಾತುಗಳಿಂದ ಬರುವ ಆದಾಯಕ್ಕೆ ಎಷ್ಟು ಟ್ಯಾಕ್ಸ್?

ಕ್ರಿಕೆಟಿಗರು ಮ್ಯಾಚ್​ಗಳಿಂದ ಮಾತ್ರವಲ್ಲ, ಜಾಹೀರಾತುಗಳಿಂದಲೂ ಆದಾಯ ಗಳಿಸುತ್ತಾರೆ. ಇವುಗಳಿಂದ ಬರುವ ಹಣಕ್ಕೆ ಶೇ. 10ರಷ್ಟು ಟಿಡಿಎಸ್ ಹಾಗೂ ಶೇ. 18ರಷ್ಟು ಜಿಎಸ್​ಟಿ ಅನ್ವಯ ಆಗುತ್ತದೆ. ಕೋಚಿಂಗ್, ಕಾಮೆಂಟರಿ, ಟಿವಿ ಶೋ ಇತ್ಯಾದಿ ಕೆಲಸಗಳಿಂದ ಸಿಗುವ ಆದಾಯಕ್ಕೂ ಶೇ. 10ರಷ್ಟು ಟಿಡಿಎಸ್ ಮತ್ತು ಶೇ. 18 ಜಿಎಸ್​ಟಿ ಅನ್ವಯ ಆಗುತ್ತದೆ.

ಎಷ್ಟು ತೆರಿಗೆ ಕಡಿತ ಆಗುತ್ತೆ, ಇಲ್ಲಿದೆ ಉದಾಹರಣೆ

ಒಬ್ಬ ಕ್ರಿಕೆಟ್ ಆಟಗಾರ ಇಡೀ ವರ್ಷ ವಿವಿಧ ಪಂದ್ಯಗಳಿಂದ ಮತ್ತು ಗುತ್ತಿಗೆಗಳಿಂದ ಪಡೆಯುವ ಆದಾಯ 50,00,000 ರೂ ಎಂದಿಟ್ಟುಕೊಳ್ಳಿ. ಇದರಲ್ಲಿ ಮ್ಯಾಚ್ ಫೀಗಳಿಂದಲೇ 20 ಲಕ್ಷ ರೂ ಆದಾಯ ಸಿಗುತ್ತದೆ. ಈ 20 ಲಕ್ಷ ರೂ ಮ್ಯಾಚ್ ಫೀಗೆ 2 ಲಕ್ಷ ರೂ ಟಿಡಿಎಸ್ ಕಡಿತವಾಗಿರುತ್ತದೆ.

ಇದನ್ನೂ ಓದಿ: ‘ಬಿಜೆಪಿ ಸರ್ಕಾರ ನಾರಿ ಶಕ್ತಿಯನ್ನು ಸದಾ ಪ್ರೋತ್ಸಾಹಿಸುತ್ತದೆ’; ಮಹಿಳಾ ಕ್ರಿಕೆಟ್ ತಂಡದ ವಿಶ್ವಕಪ್ ಗೆಲುವಿಗೆ ಪ್ರಧಾನಿ ಮೋದಿ ಶ್ಲಾಘನೆ

ಒಟ್ಟಾರೆ 50 ಲಕ್ಷ ರೂ ಆದಾಯಕ್ಕೆ ಇನ್ಕಮ್ ಟ್ಯಾಕ್ಸ್ ಸ್ಲ್ಯಾಬ್ ದರ ಪ್ರಕಾರ ಎಣಿಕೆ ಮಾಡಿದರೆ ಒಟ್ಟು ಟ್ಯಾಕ್ಸ್ ಬಾಧ್ಯತೆ 13,12,500 ರೂ ಆಗುತ್ತದೆ. ಇದಕ್ಕೆ ಶೇ. 4ರಷ್ಟು ಎಜುಕೇಶನ್ ಸೆಸ್ ಆಗಿ 52,500 ರೂ ಸೇರಿಸಿದರೆ ಒಟ್ಟು ಟ್ಯಾಕ್ಸ್ ಲಯಬಿಲಿಟಿ 13,65,000 ರೂ ಆಗುತ್ತದೆ.

ಈಗಾಗಲೇ 2 ಲಕ್ಷ ರೂ ಟಿಡಿಎಸ್ ಪಾವತಿಸಿರುವುದರಿಂದ ತೆರಿಗೆ ಬಾಧ್ಯತೆಯು 13,65,000 – 2,00,000 = 11,65,000 ರೂ ಆಗುತ್ತದೆ. ಐಟಿಆರ್ ಸಲ್ಲಿಸುವಾಗ ಈ ತೆರಿಗೆ ಬಾಕಿಯನ್ನು ಆಟಗಾರ ಪಾವತಿಸಬೇಕಾಗುತ್ತದೆ.

ಈಗ ಬಿಸಿಸಿಐ ಪ್ರಕಟಿಸಿರುವ 51 ಕೋಟಿ ರೂ ಬಹುಮಾನದಲ್ಲಿ ಒಬ್ಬ ಆಟಗಾರ್ತಿಗೆ 1 ಕೋಟಿ ರೂ ಸಿಕ್ಕಿತೆಂದರೆ ಅದಕ್ಕೆ ಟ್ಯಾಕ್ಸ್ ಆಗಿ ಆಕೆ ಸುಮಾರು 27ರಿಂದ 30 ಲಕ್ಷ ರೂ ಪಾವತಿಸಬೇಕಾಗುತ್ತದೆ.

ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ