AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

IPO: ಐಪಿಒ ಷೇರುಗಳನ್ನು ಪಡೆಯಲು ಯುಪಿಐ ಬಳಸುವುದು ಹೇಗೆ? ಇಲ್ಲಿದೆ ಹಂತ ಹಂತದ ವಿಧಾನ

How To Buy IPO Through UPI: ಎಲೆಕ್ಟ್ರಿಕ್ ಬಿಲ್​ನಿಂದ ಹಿಡಿದು ಖಾತೆಯಿಂದ ಖಾತೆಗೆ ಹಣ ವರ್ಗಾವಣೆವರೆಗೂ ನಾವು ಯುಪಿಐ ಬಳಸುತ್ತೇವೆ. ಈಗ ಐಪಿಒದ ಷೇರುಗಳನ್ನು ಖರೀದಿಸಲೂ ಯುಪಿಐ ಬಳಸಬಹುದಾಗಿದೆ.

IPO: ಐಪಿಒ ಷೇರುಗಳನ್ನು ಪಡೆಯಲು ಯುಪಿಐ ಬಳಸುವುದು ಹೇಗೆ? ಇಲ್ಲಿದೆ ಹಂತ ಹಂತದ ವಿಧಾನ
ಯುಪಿಐ
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Jun 08, 2023 | 5:19 PM

ನಮ್ಮ ಬಹುತೇಕ ಹಣಕಾಸು ವಹಿವಾಟುಗಳಿಗೆ ಯುಪಿಐ ಮಾದರಿ ಪಾವತಿ ವ್ಯವಸ್ಥೆ (UPI Payments Platform) ಬಳಸುತ್ತೇವೆ. ಎಲೆಕ್ಟ್ರಿಕ್ ಬಿಲ್​ನಿಂದ ಹಿಡಿದು ಖಾತೆಯಿಂದ ಖಾತೆಗೆ ಹಣ ವರ್ಗಾವಣೆವರೆಗೂ ನಾವು ಯುಪಿಐ ಬಳಸುತ್ತೇವೆ. 10 ರುಪಾಯಿ ಸಾಮಾನು ಖರೀದಿಗೂ ನಾವು ಯುಪಿಐ ಮುಖಾಂತರವೇ ಹಣ ಪಾವತಿ ಮಾಡುವುದಿದೆ. ಈಗ ಷೇರು ಮಾರುಕಟ್ಟೆಗೆ ಅಡಿ ಇಡಲು ಮುಂದಾಗುವ ಐಪಿಒದ ಷೇರುಗಳನ್ನು (IPO) ಖರೀದಿಸಲೂ ಯುಪಿಐ ಬಳಸಬಹುದಾಗಿದೆ. ನೀವು ಐಪಿಒ ಖರೀದಿಸಲು ಅರ್ಜಿ ಸಲ್ಲಿಸುವಾಗ ಯುಪಿಐ ಐಡಿ ನೀಡಬೇಕಾಗುತ್ತದೆ. ನೀವು ಯುಪಿಐ ಮೂಲಕ 5 ಲಕ್ಷ ರೂ ಮೊತ್ತದಷ್ಟು ಐಪಿಒಗಳನ್ನು ಖರೀದಿಸಬಹುದು. ಹಿಂದೆ ಈ ಮೊತ್ತ ಕಡಿಮೆ ಇತ್ತು. ಈಗ ಸೆಬಿ ಇದರ ಮಿತಿಯನ್ನು 5 ಲಕ್ಷ ರೂಗೆ ಹೆಚ್ಚಿಸಿದೆ.

ನೀವು ಐಪಿಒ ಖರೀದಿಗೆ ಅರ್ಜಿ ಹಾಕಿದಾಗ ನಿಮ್ಮ ಬ್ಯಾಂಕ್ ಖಾತೆಯಲ್ಲಿ ಅಷ್ಟು ಮೊತ್ತದ ಹಣವು ಫ್ರೀಜ್ ಅಥವಾ ಬ್ಲಾಕ್ ಆಗುತ್ತದೆ. ಒಂದು ವೇಳೆ ನಿಮಗೆ ಐಪಿಒ ಅಲಾಟ್ ಆದರೆ ಆಗ ಬ್ಯಾಂಕ್ ಖಾತೆಯಲ್ಲಿ ಬ್ಲಾಕ್ ಮಾಡಲಾದ ಹಣವು ಕಡಿತಗೊಂಡು ನಿಮ್ಮ ಡೀಮ್ಯಾಟ್ ಖಾತೆಗೆ ವರ್ಗವಾಗುತ್ತದೆ. ಒಂದು ವೇಳೆ ನಿಮಗೆ ಐಪಿಒ ಸಿಗದೇ ಹೋದಲ್ಲಿ ನಿಮ್ಮ ಬ್ಯಾಂಕ್ ಖಾತೆಯಲ್ಲಿ ಬ್ಲಾಕ್ ಮಾಡಲಾಗಿದ್ದ ಹಣವು ಅನ್​ಬ್ಲಾಕ್ ಆಗಿ ನಿಮಗೆ ಲಭ್ಯ ಇರುತ್ತದೆ.

ಇದನ್ನೂ ಓದಿMasked Aadhaar: ಮಸುಕು ಮಾಡಿದ ಆಧಾರ್ ಕಾರ್ಡ್ ಯಾಕೆ ಅಗತ್ಯ? ಹೇಗೆ ಪಡೆಯುವುದು, ಇಲ್ಲಿದೆ ಡೀಟೇಲ್ಸ್

ಯುಪಿಐ ಬಳಸಿ ಐಪಿಒಗೆ ಅರ್ಜಿ ಹಾಕುವುದು ಹೇಗೆ?

  • ಮೊದಲು ನೀವು ಯುಪಿಐಗೆ ರಿಜಿಸ್ಟರ್ ಆಗಿರಬೇಕು. ಅಂದರೆ ನೀವು ಗೂಗಲ್ ಪೇ, ಪೇಟಿಎಂ ಇತ್ಯಾದಿ ಯುಪಿಐ ಪೇಮೆಂಟ್ ಪ್ಲಾಟ್​ಫಾರ್ಮ್ ಹೊಂದಿರಬೇಕು. ಯುಪಿಐಗೆ ಎನೇಬಲ್ ಆದ ಬ್ಯಾಂಕ್ ಖಾತೆ ಲಿಂಕ್ ಆಗಿರಬೇಕು.
  • ಐಪಿಒ ಅಪ್ಲಿಕೇಶನ್ ಫಾರ್ಮ್​ನಲ್ಲಿ ನಿಮ್ಮ ಯುಪಿಐ ಐಡಿಯನ್ನು ನಮೂದಿಸಿರಬೇಕು.
  • ಅರ್ಜಿಯಲ್ಲಿ ಇತರೆಲ್ಲಾ ಅಗತ್ಯ ಮಾಹಿತಿ ಭರ್ತಿ ಮಾಡಿ ನಂತರ ಸಲ್ಲಿಸಬೇಕು.
  • ಈಗ ನಿಮ್ಮ ಬ್ಯಾಂಕ್ ಖಾತೆಯಿಂದ ಹಣ ಬ್ಲಾಕ್ ಮಾಡಬಹುದಾ ಎಂದು ನಿಮ್ಮ ಯುಪಿಐ ಆ್ಯಪ್​ನಲ್ಲಿ ಮನವಿ ಬರುತ್ತದೆ.
  • ಈ ಮನವಿಗೆ ನೀವು ಸಮ್ಮತಿಸಿದರೆ ಯುಪಿಐಗೆ ಜೋಡಿತವಾದ ಬ್ಯಾಂಕ್ ಖಾತೆಯಲ್ಲಿ ಆ ಮೊತ್ತದ ಹಣ ಬ್ಲಾಕ್ ಆಗಿರುತ್ತದೆ.
  • ನಿಮಗೆ ಐಪಿಒ ಷೇರುಗಳು ವಿತರಣೆ ಆದಾಗ ಬ್ಯಾಂಕ್ ಖಾತೆಯಲ್ಲಿ ಬ್ಲಾಕ್ ಮಾಡಲಾಗಿದ್ದ ಹಣ ಡೀಮ್ಯಾಟ್ ಖಾತೆಗೆ ಯುಪಿಐ ಮೂಲಕ ವರ್ಗಾವಣೆ ಆಗುತ್ತದೆ.
  • ಐಪಿಒ ಷೇರುಗಳು ನಿಮಗೆ ಸಿಗದೇ ಹೋದಾಗ ಬ್ಯಾಂಕ್ ಖಾತೆಗೆ ನಿಮ್ಮ ಹಣ ಮರಳುತ್ತದೆ.

ಇದನ್ನೂ ಓದಿRBI: ಸಹಕಾರಿ ಬ್ಯಾಂಕುಗಳಿಗೂ ಲೋನ್ ರೈಟಾಫ್, ರಾಜೀ ಸಂಧಾನಕ್ಕೆ ಸಿಗಲಿದೆ ಅವಕಾಶ; ಎನ್​ಪಿಎ, ರೈಟ್ ಆಫ್, ಸಾಲಮನ್ನಾ ಏನು ವ್ಯತ್ಯಾಸ?

ಷೇರು ವ್ಯವಹಾರಕ್ಕೆ ಡೀಮ್ಯಾಟ್ ಖಾತೆ ಬೇಕು

ಷೇರುಗಳ ವ್ಯವಹಾರಕ್ಕೆ ಡೀಮ್ಯಾಟ್ ಖಾತೆ ತೆರೆಯುವುದು ಅವಶ್ಯಕ. ಷೇರುಗಳನ್ನು ಖರೀದಿಸಲು ಬ್ಯಾಂಕ್ ಖಾತೆ ಇದ್ದರೆ ಸಾಕಲ್ಲವೆ ಎಂದು ಅನಿಸಬಹುದು. ಆದರೆ, ಬ್ಯಾಂಕ್ ಖಾತೆಗೂ ಡೀಮ್ಯಾಟ್ ಖಾತೆಗೂ ಒಂದು ಪ್ರಮುಖ ವ್ಯತ್ಯಾಸ ಇದೆ. ಬ್ಯಾಂಕ್ ಖಾತೆಯಲ್ಲಿ ನಿಮ್ಮ ನೈಜ ಹಣವು ಎಲೆಕ್ಟ್ರಾನಿಕ್ ರೂಪದಲ್ಲಿ ಸಂಗ್ರಹವಾಗಿರುತ್ತದೆ. ಅದೇ ರೀತಿ ಡೀಮ್ಯಾಟ್ ಖಾತೆಯಲ್ಲಿ ನಿಮ್ಮ ಷೇರು ಆಸ್ತಿಗಳು ಎಲೆಕ್ಟ್ರಾನಿಕ್ ರೂಪದಲ್ಲಿ ಸಂಗ್ರಹ ಆಗಿರುತ್ತವೆ.

ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಆಡಿದ ಮಾತಿಗೆ ಕ್ಷಮೆ ಯಾಚಿಸಿದ ಮಧ್ಯಪ್ರದೇಶದ ಮಂತ್ರಿ ವಿಜಯ್ ಶಾ
ಆಡಿದ ಮಾತಿಗೆ ಕ್ಷಮೆ ಯಾಚಿಸಿದ ಮಧ್ಯಪ್ರದೇಶದ ಮಂತ್ರಿ ವಿಜಯ್ ಶಾ
ಒಪ್ಪಿಕೊಂಡಷ್ಟು ಅನುದಾನವನ್ನು ಕೇಂದ್ರ ಬಿಡುಗಡೆ ಮಾಡಬೇಕು: ಸಿದ್ದರಾಮಯ್ಯ
ಒಪ್ಪಿಕೊಂಡಷ್ಟು ಅನುದಾನವನ್ನು ಕೇಂದ್ರ ಬಿಡುಗಡೆ ಮಾಡಬೇಕು: ಸಿದ್ದರಾಮಯ್ಯ
ರಾಮನ ಹಾಡು ಹಾಡಿ ಮಗುವ ಮಲಗಿಸಿದ ನಟಿ ಹರಿಪ್ರಿಯಾ, ವಿಡಿಯೋ ನೋಡಿ
ರಾಮನ ಹಾಡು ಹಾಡಿ ಮಗುವ ಮಲಗಿಸಿದ ನಟಿ ಹರಿಪ್ರಿಯಾ, ವಿಡಿಯೋ ನೋಡಿ
ಸಿಂದಗಿ ಡಿಪೋದಲ್ಲಿ ಡೀಸೆಲ್​​ ಸಮಸ್ಯೆ, ನಿಂತಲ್ಲೇ ನಿಂತ ಬಸ್​ಗಳು..!
ಸಿಂದಗಿ ಡಿಪೋದಲ್ಲಿ ಡೀಸೆಲ್​​ ಸಮಸ್ಯೆ, ನಿಂತಲ್ಲೇ ನಿಂತ ಬಸ್​ಗಳು..!
ರೌಡಿಶೀಟರ್ ಎಂದ ಮಾತ್ರಕ್ಕೆ ಎಲ್ಲರೂ ರೌಡಿಶೀಟರ್​​ಗಲ್ಲ: ಸಿಟಿ ರವಿ
ರೌಡಿಶೀಟರ್ ಎಂದ ಮಾತ್ರಕ್ಕೆ ಎಲ್ಲರೂ ರೌಡಿಶೀಟರ್​​ಗಲ್ಲ: ಸಿಟಿ ರವಿ
ಅನೀಸುದ್ದೀನ್ ಹೆಸರಿನ ವ್ಯಕ್ತಿಯಿಂದ ಎಕ್ಸ್ ಹ್ಯಾಂಡಲ್​ನಲ್ಲಿ ಪೋಸ್ಟ್​
ಅನೀಸುದ್ದೀನ್ ಹೆಸರಿನ ವ್ಯಕ್ತಿಯಿಂದ ಎಕ್ಸ್ ಹ್ಯಾಂಡಲ್​ನಲ್ಲಿ ಪೋಸ್ಟ್​
ಭಾರತದ ಷರತ್ತುಗಳನ್ನು ಪ್ರಧಾನಿ ಮೋದಿ ಸ್ಪಷ್ಟಪಡಿಸಿದ್ದಾರೆ: ಯದುವೀರ್
ಭಾರತದ ಷರತ್ತುಗಳನ್ನು ಪ್ರಧಾನಿ ಮೋದಿ ಸ್ಪಷ್ಟಪಡಿಸಿದ್ದಾರೆ: ಯದುವೀರ್
ಮೈಸೂರು ಕ್ರಿಕೆಟ್ ಸ್ಟೇಡಿಯಂ ಬಗ್ಗೆ ಸಂಸದ ಯದುವೀರ್ ಮಹತ್ವದ ಮಾಹಿತಿ
ಮೈಸೂರು ಕ್ರಿಕೆಟ್ ಸ್ಟೇಡಿಯಂ ಬಗ್ಗೆ ಸಂಸದ ಯದುವೀರ್ ಮಹತ್ವದ ಮಾಹಿತಿ
ಮಳೆಗಾಲವನ್ನು ನೆನಪಿಸಿಕೊಳ್ಳಲೂ ಸಾಯಿ ಲೇಔಟ್ ಜನ ತಯಾರಿಲ್ಲ!
ಮಳೆಗಾಲವನ್ನು ನೆನಪಿಸಿಕೊಳ್ಳಲೂ ಸಾಯಿ ಲೇಔಟ್ ಜನ ತಯಾರಿಲ್ಲ!
ಸೋಫಿಯಾ ಮಾವನ ಮನೆ ಮೇಲೆ ದಾಳಿ ನಡೆಸುವ ಮನಸ್ಥಿತಿ ಕನ್ನಡಿಗರು ಕ್ಷಮಿಸಲಾರರು
ಸೋಫಿಯಾ ಮಾವನ ಮನೆ ಮೇಲೆ ದಾಳಿ ನಡೆಸುವ ಮನಸ್ಥಿತಿ ಕನ್ನಡಿಗರು ಕ್ಷಮಿಸಲಾರರು