Masked Aadhaar: ಮಸುಕು ಮಾಡಿದ ಆಧಾರ್ ಕಾರ್ಡ್ ಯಾಕೆ ಅಗತ್ಯ? ಹೇಗೆ ಪಡೆಯುವುದು, ಇಲ್ಲಿದೆ ಡೀಟೇಲ್ಸ್
How To Get Masked Aadhaar: ಆಧಾರ್ ಕಾರ್ಡ್ನಲ್ಲಿ ಪೂರ್ಣ 12 ಅಂಕಿಗಳ ಬದಲು 8 ಅಂಕಿಗಳು ಕಾಣುವ ಫೀಚರ್ ಅನ್ನು ಯುಐಡಿಎಐ ನೀಡುತ್ತದೆ. ಗೌಪ್ಯತೆ ರಕ್ಷಣೆ ಬಯಸುವವರಿಗೆ ಈ ಮಸುಕುಮಾಡಿದ ಆಧಾರ್ ಕಾರ್ಡ್ ಅನುಕೂಲವಾಗುತ್ತದೆ.
ಆಧಾರ್ ಕಾರ್ಡ್ನಲ್ಲಿ ವೈಯಕ್ತಿಕ ಮಾಹಿತಿ ಕಳುವಾಗುತ್ತದೆ ಎಂದು ಹಲವರು ಅಳುಕುವುಂಟು. ಈ ಭಯ ನಿವಾರಣೆಗೆ ಯುಐಡಿಎಐ ಮಸುಕು ಮಾಡಿದ ಆಧಾರ್ ಕಾರ್ಡ್ (Aadhaar Card) ಸೌಲಭ್ಯ ನೀಡಿದೆ. ಈ ಮಾಸ್ಕ್ಡ್ ಆಧಾರ್ನಲ್ಲಿ (Masked Aadhaar) ಹೆಚ್ಚಿನ ಮಾಹಿತಿ ಹೊರಗೆ ಕಾಣುವುದಿಲ್ಲ. ವ್ಯಕ್ತಿಯ ಗೌಪ್ಯತೆ ಕಾಪಾಡುವ ಉದ್ದೇಶದಿಂದ ಇಂಥ ಫೀಚರ್ ಅನ್ನು ಜಾರಿಗೆ ತರಲಾಗಿದೆ. ಈ ಮಸುಕಾದ ಆಧಾರ್ನಲ್ಲಿ ಪೂರ್ಣ 12 ಅಂಕಿಗಳು ಕಾಣುವುದಿಲ್ಲ. ಕೆಲವೇ ಅಂಕಿಗಳಿದ್ದು ಉಳಿದವನ್ನು ಮಾಸ್ಕ್ ಮಾಡಲಾಗಿರುತ್ತದೆ. ಒಟ್ಟು 12 ಅಂಕಿಗಳ ಪೈಕಿ ಮೊದಲ 8 ಅಂಕಿಗಳು ಕಾಣುತ್ತವೆ. ಉಳಿದ 4 ಅಂಕಿಗಳ ಜಾಗದಲ್ಲಿ X ಕಾಣುತ್ತದೆ. ಆದರೆ, ಆಧಾರ್ ಕಾರ್ಡ್ನಲ್ಲಿ ನಿಮ್ಮ ಹೆಸರು, ಫೋಟೋ, ಕ್ಯೂಆರ್ ಕೋಡ್ ಇತ್ಯಾದಿ ಡೆಮಾಗ್ರಾಫಿಕ್ ಮಾಹಿತಿ ಮಾತ್ರ ಕಾಣುತ್ತದೆ.
ಮಸುಕು ಮಾಡಿದ ಆಧಾರ್ನಿಂದ ಏನು ಉಪಯೋಗ?
- ಗೌಪ್ಯತೆಯ ಪಾಲನೆ
- ಆಧಾರ್ ನಂಬರ್ ದುರ್ಬಳಕೆ ಆಗದಂತೆ ತಡೆಯುವುದು
- ಮಸುಕು ಮಾಡಿದ ಆಧಾರ್ ಕೂಡ ಅಧಿಕೃತ ದಾಖಲೆಯಾಗಿರುತ್ತದೆ.
ನೀವು ಯಾರಿಗಾದರೂ ಆಧಾರ್ ದಾಖಲೆ ನೀಡುವ ಅಗತ್ಯ ಇದ್ದರೆ ನಿಶ್ಚಿಂತೆಯಿಂದ ಮಾಸ್ಕ್ಡ್ ಆಧಾರ್ ಅನ್ನು ಕೊಡಬಹುದು. ಇದರಿದ ನಿಮ್ಮ ವೈಯಕ್ತಿಕ ಮಾಹಿತಿ ದುರ್ಬಳಕೆ ಆಗಬಹುದು ಎನ್ನುವ ಭಯ ಇರುವುದಿಲ್ಲ.
ಇದನ್ನೂ ಓದಿ: Gpay Aadhaar: ಡೆಬಿಟ್ ಕಾರ್ಡ್ ಇಲ್ಲದೇ ಆಧಾರ್ ಮೂಲಕ ಯುಪಿಐ ಆ್ಯಕ್ಟಿವೇಟ್ ಮಾಡಲು ಗೂಗಲ್ ಪೇ ಅವಕಾಶ
ಮಸುಕು ಮಾಡಿದ ಆಧಾರ್ ಎಲ್ಲಿ ಪಡೆಯುವುದು?
ಇದನ್ನು ಯುಐಡಿಎಐನ ಅಧಿಕೃತ ವೆಬ್ಸೈಟ್ ಮೂಲಕವೇ ಪಡೆಯಬಹುದು. ಅದರ ಕ್ರಮಗಳು ಇಲ್ಲಿವೆ…
- ಯುಐಡಿಎಐ ವೆಬ್ಸೈಟ್ಗೆ ಹೋಗಿ
- ವೆಬ್ಸೈಟ್ನಲ್ಲಿ ಮೈ ಆಧಾರ್ ಸೆಕ್ಷನ್ ಅಡಿಯಲ್ಲಿ ಡೌನ್ಲೋಡ್ ಆಧಾರ್ ಮೇಲೆ ಕ್ಲಿಕ್ ಮಾಡಿ
- ನಿಮ್ಮ ಆಧಾರ್ ಕಾರ್ಡ್ನ 12 ಅಂಕಿಗಳನ್ನು ನಮೂದಿಸಿ. ಅಥವಾ 16 ಅಂಕಿಗಳ ವರ್ಚುವಲ್ ಐಡಿ ನಂಬರ್ ನಮೂದಿಸಿ.
- ನಿಮ್ಮ ಹೆಸರು, ಪಿನ್ ಕೋಡ್ ಮತ್ತು ಸೆಕ್ಯೂರಿಟಿ ಕೋಡ್ ಮೊದಲಾದ ವಿವರ ತುಂಬಿರಿ
- ಬಳಿಕ ಸೆಲೆಕ್ಟ್ ಯುವರ್ ಪ್ರಿಫರೆನ್ಸ್ ಸೆಕ್ಷನ್ನಲ್ಲಿ ಮಾಸ್ಕ್ಡ್ ಆಧಾರ್ ಆಯ್ಕೆ ಆರಿಸಿಕೊಳ್ಳಿ.
- ನಿಮ್ಮ ನೊಂದಾಯಿತ ಮೊಬೈಲ್ ನಂಬರ್ಗೆ ಒಟಿಪಿ ಬರುವ ಆಯ್ಕೆ ಅರಿಸಿ.
- ಒಟಿಪಿ ಬಂದ ಬಳಕ ಅದನ್ನು ನಮೂದಿಸಿದರೆ ವೆರಿಫಿಕೇಶನ್ ಪ್ರಕ್ರಿಯೆ ಪೂರ್ಣಗೊಳ್ಳುತ್ತದೆ.
ಈಗ ನೀವು ಮಸುಕುಮಾಡಿದ ಆಧಾರ್ ಅನ್ನು ಪಿಡಿಎಫ್ ಫೈಲ್ನಲ್ಲಿ ಡೌನ್ಲೋಡ್ ಮಾಡಿಕೊಳ್ಳಬಹುದು. ಪಾಸ್ವರ್ಡ್ ರಕ್ಷಣೆ ಒಳಗೊಂಡಿರುತ್ತದೆ.
ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ