AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

e-RUPI: ಬ್ಯಾಂಕೇತರ ಸಂಸ್ಥೆಗಳಿಂದಲೂ ಇ-ರುಪೀ ವೋಚರ್ ವಿತರಣೆಗೆ ಅವಕಾಶ; ಏನಿದು ಇ-ರುಪೀ?

RBI Simplifies e-RUPI: ಆರ್​ಬಿಐನ ಡಿಜಿಟಲ್ ಕರೆನ್ಸಿಯ ವ್ಯಾಪ್ತಿ ಹೆಚ್ಚಿಸುವ ಉದ್ದೇಶದಿಂದ ಇ-ರುಪೀ ವೋಚರ್​ಗಳನ್ನು ವಿತರಿಸಲು ಬ್ಯಾಂಕೇತರ ಹಣಕಾಸು ಸಂಸ್ಥೆಗಳಿಗೂ ಅವಕಾಶ ಕೊಡಲಾಗಿದೆ. ಆರ್​ಬಿಐ ಗವರ್ನರ್ ಶಕ್ತಿಕಾಂತ ದಾಸ್ ಜೂನ್ 8ರಂದು ಎಂಪಿಸಿ ಸಭೆ ಬಳಿಕ ಸುದ್ದಿಗೋಷ್ಠಿಯಲ್ಲಿ ಈ ವಿಚಾರ ಪ್ರಕಟಿಸಿದ್ದಾರೆ.

e-RUPI: ಬ್ಯಾಂಕೇತರ ಸಂಸ್ಥೆಗಳಿಂದಲೂ ಇ-ರುಪೀ ವೋಚರ್ ವಿತರಣೆಗೆ ಅವಕಾಶ; ಏನಿದು ಇ-ರುಪೀ?
ಇ-ರುಪೀ
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Jun 08, 2023 | 12:21 PM

Share

ಆರ್​ಬಿಐನ ಡಿಜಿಟಲ್ ಕರೆನ್ಸಿಯ ವ್ಯಾಪ್ತಿ ಹೆಚ್ಚಿಸುವ ಉದ್ದೇಶದಿಂದ ಇರುಪೀ ವೋಚರ್​ಗಳನ್ನು (e-RUPI Vouchers) ವಿತರಿಸಲು ಬ್ಯಾಂಕೇತರ ಹಣಕಾಸು ಸಂಸ್ಥೆಗಳಿಗೂ ಅವಕಾಶ ಕೊಡಲಾಗಿದೆ. ಆರ್​ಬಿಐ ಗವರ್ನರ್ ಶಕ್ತಿಕಾಂತ ದಾಸ್ (RBI Governor Shaktikanta Das) ಜೂನ್ 8ರಂದು ಎಂಪಿಸಿ ಸಭೆ ಬಳಿಕ ಸುದ್ದಿಗೋಷ್ಠಿಯಲ್ಲಿ ಈ ವಿಚಾರ ಪ್ರಕಟಿಸಿದ್ದಾರೆ. ನಿರ್ದಿಷ್ಟ ಉದ್ದೇಶಕ್ಕೆ ಬಳಸುವಂತಹ ಇರುಪೀ ಡಿಜಿಟಲ್ ವೋಚರ್​ಗಳನ್ನು ಸದ್ಯಕ್ಕೆ ಬ್ಯಾಂಕುಗಳು ಮಾತ್ರ ವಿತರಿಸುವ ಅಧಿಕಾರ ಹೊಂದಿವೆ. ಇದನ್ನು ವಿಸ್ತರಿಸಲು ಮತ್ತು ಇರುಪೀ ವ್ಯಾಪ್ತಿಯನ್ನು ಹೆಚ್ಚಿಸಲು ಮೂರು ಕ್ರಮಗಳನ್ನು ಆರ್​ಬಿಐ ಕೈಗೊಂಡಿದೆ. ಒಂದು, ಬ್ಯಾಂಕೇತರ ಸಂಸ್ಥೆಗಳಿಂದಲೂ ಇರುಪೀ ವೋಚರ್ ವಿತರಿಸುವ ಸೌಲಭ್ಯ ಕೊಡಲಾಗಿದೆ. ಎರಡನೆಯದು, ವ್ಯಕ್ತಿಗಳ ಪರವಾಗಿ ಇರುಪೀ ವೋಚರ್​ಗಳನ್ನು ವಿತರಿಸು ಅವಕಾಶ. ಹಾಗೆಯೇ, ಕೊನೆಯದಾಗಿ, ರುಪೀ ವಿತರಿಸುವ ಪ್ರಕ್ರಿಯೆ ಮತ್ತು ಅದನ್ನು ಬಳಸುವ ಪ್ರಕ್ರಿಯೆಯನ್ನು ಸರಳಗೊಳಿಸಲಾಗಿದೆ.

ಏನಿದು ಆರ್​ಬಿಐನ ಇರುಪೀ?

ರುಪೀ ಅಥವಾ ಎಲೆಕ್ಟ್ರಾನಿಕ್ ರುಪಾಯಿಯು ಆರ್​ಬಿಐನ ಉದ್ದೇಶಿತ ಡಿಜಿಟಲ್ ಕರೆನ್ಸಿಯ ರಚನೆಯ ಮೊದಲ ಹಂತ ಎಂದೆನ್ನಲಾಗಿದೆ. ಇದು ಸರ್ಕಾರದ ವಿವಿಧ ಯೋಜನೆಗಳ ಹಣವನ್ನು ನಿರ್ದಿಷ್ಟ ವರ್ಗದ ಜನರಿಗೆ ತಲುಪಿಸಲು ಉಪಯೋಗವಾಗುತ್ತದೆ. ಫಲಾನುಭವಿಗಳ ಮೊಬೈಲ್​ಗಳಿಗೆ ಕ್ಯೂಆರ್ ಕೋಡ್ ಅಥವಾ ಎಸ್ಸೆಮ್ಮೆಸ್ ಆಧಾರಿತ ವೋಚರ್ ಅನ್ನು ಕಳುಹಿಸಲಾಗುತ್ತದೆ. ಇದನ್ನು ಬಳಸಿ ಫಲಾನುಭವಿಗಳು ಹಣ ಪಡೆಯಬಹುದು. ಇದನ್ನು ಬಳಸಲು ಪೇಟಿಎಂ ಇತ್ಯಾದಿ ಯಾವುದೇ ಆ್ಯಪ್ ಬೇಕಿಲ್ಲ. ಬ್ಯಾಂಕ್ ಖಾತೆಯೂ ಇರಬೇಕೆಂದಿಲ್ಲ. ಕ್ಯೂಆರ್ ಕೋಡ್ ಅಥವಾ ಎಸ್ಸೆಮ್ಮೆಸ್​ನಲ್ಲಿ ಪೂರ್ವನಿಗದಿತ ಮೊತ್ತ ದಾಖಲಾಗಿರುತ್ತದೆ.

ಇದನ್ನೂ ಓದಿRBI: ಈ ಹಣಕಾಸು ವರ್ಷ ಹಣದುಬ್ಬರ ಶೇ. 5.1, ಜಿಡಿಪಿ ಶೇ. 6.5; ಆರ್​ಬಿಐ ಅಂದಾಜು

ಸದ್ಯಕ್ಕೆ ರಸಗೊಬ್ಬರದ ಸಬ್ಸಿಡಿ, ಮಗು ಮತ್ತು ತಾಯಿ ಕಲ್ಯಾಣ ಯೋಜನೆಯಲ್ಲಿನ ಪೌಷ್ಟಿಕಾಂಶ ನೆರವು, ಟಿಬಿ ನಿರ್ಮೂಲನೆ ಯೋಜನೆ, ಆಯುಷ್ಮಾನ್ ಭಾರತ್ ಪಿಎಂ ಆರೋಗ್ಯ ಯೋಜನೆಗಳು ಮೊದಲಾದವನ್ನು ಇ ರುಪೀ ಕವರ್ ಮಾಡುತ್ತದೆ.

ಖಾಸಗಿ ವಲಯದಲ್ಲೂ ಇರುಪೀ ಬಹಳ ಉಪಯೋಗಕ್ಕೆ ಬರಬಹುದು. ಉದ್ಯೋಗಿಯ ಬ್ಯುಸಿನೆಸ್ ಟ್ರಿಪ್, ಆಹಾರ, ಆರೋಗ್ಯ ವೆಚ್ಚಕ್ಕೆ ಸಂಸ್ಥೆಗಳು ಇರುಪೀ ವೋಚರ್​ಗಳನ್ನು ನೀಡಬಹುದು.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Follow Us
Vijaya Sarathy SN
Vijaya Sarathy SN

ಹುಟ್ಟೂರು ಹಾಸನ ಜಿಲ್ಲೆಯ ಶ್ರವಣಬೆಳಗೊಳ ಸಮೀಪದ ಒಂದು ಪುಟ್ಟ ಹಳ್ಳಿ. ಬೆಳದದ್ದು ಬೆಂಗಳೂರು ನಗರದಲ್ಲಿ. ಹಲವು ವರ್ಷಗಳಿಂದ ಪತ್ರಿಕಾ ರಂಗದಲ್ಲಿ ನೆಲೆ. ಬರವಣಿಗೆಯ ಆಸಕ್ತಿ ಮತ್ತು ಪರಿಣಿತಿಯ ಕ್ಷೇತ್ರಗಳು ಆರ್ಥಿಕತೆ, ಹಣಕಾಸು, ಅಂತರರಾಷ್ಟ್ರೀಯ ವಿದ್ಯಮಾನ, ಜನಕ್ರಾಂತಿ, ರಾಷ್ಟ್ರೀಯತೆ, ಸಂಸ್ಕೃತಿ, ಮಾನವ ಸಂಬಂಧ, ಕ್ರೀಡೆ ಮೊದಲಾದವು ಇವೆ. ಓದುಗರಿಗೆ ಸುಲಭವಾಗಿ ಅರ್ಥವಾಗುವಂತೆ ಸಾಧ್ಯವಾದಷ್ಟೂ ಸ್ಫುಟವಾಗಿ, ಸರಳವಾಗಿ ಬರೆಯುವ ಇಚ್ಛೆ.

Read More
ಭೀಕರ ಬಿರುಗಾಳಿಗೆ ಶೀಟ್​ ಸಮೇತ ಗಾಳಿಯಲ್ಲಿ ಹಾರಿದ ವ್ಯಕ್ತಿ
ಭೀಕರ ಬಿರುಗಾಳಿಗೆ ಶೀಟ್​ ಸಮೇತ ಗಾಳಿಯಲ್ಲಿ ಹಾರಿದ ವ್ಯಕ್ತಿ
ಮಾಧುಸ್ವಾಮಿ ದಿಢೀರ್ ಪ್ರತ್ಯಕ್ಷ:ಸ್ವಪಕ್ಷದ ನಾಯಕರ ನಡೆಗೆ ಬಹಿರಂಗ ಅಸಮಾಧಾನ
ಮಾಧುಸ್ವಾಮಿ ದಿಢೀರ್ ಪ್ರತ್ಯಕ್ಷ:ಸ್ವಪಕ್ಷದ ನಾಯಕರ ನಡೆಗೆ ಬಹಿರಂಗ ಅಸಮಾಧಾನ
ಪೋಕ್ಸೋ ಕೇಸ್​​ ವಿಚಾರಣೆ ಬಳಿಕ ವಚನಾನಂದ ಶ್ರೀ ಫಸ್ಟ್​​ ರಿಯಾಕ್ಷನ್​​
ಪೋಕ್ಸೋ ಕೇಸ್​​ ವಿಚಾರಣೆ ಬಳಿಕ ವಚನಾನಂದ ಶ್ರೀ ಫಸ್ಟ್​​ ರಿಯಾಕ್ಷನ್​​
ರಾಹುಲ್,ಸೋನಿಯಾ ಅತ್ಯಾಪ್ತನನ್ನು ಬಿಟ್ಟು ಸತೀಶನ್ ಆಯ್ಕೆ ಹಿಂದಿನ ಕಾರಣವೇನು?
ರಾಹುಲ್,ಸೋನಿಯಾ ಅತ್ಯಾಪ್ತನನ್ನು ಬಿಟ್ಟು ಸತೀಶನ್ ಆಯ್ಕೆ ಹಿಂದಿನ ಕಾರಣವೇನು?
ನಾಯಂಡಹಳ್ಳಿ ಗೋದಾಮಿನಲ್ಲಿ ಅಗ್ನಿ ಅನಾಹುತ: ಧಗ ಧಗಿಸಿದ ವಸ್ತುಗಳು
ನಾಯಂಡಹಳ್ಳಿ ಗೋದಾಮಿನಲ್ಲಿ ಅಗ್ನಿ ಅನಾಹುತ: ಧಗ ಧಗಿಸಿದ ವಸ್ತುಗಳು
ಬುರ್ಖಾ ಧರಿಸಿ ಬಂದು ಚಿನ್ನದಂಗಡಿ ಮಾಲೀಕನ ಕಣ್ಣಿಗೆ ಖಾರದಪುಡಿ ಎರಚಿದ ಮಹಿಳೆ
ಬುರ್ಖಾ ಧರಿಸಿ ಬಂದು ಚಿನ್ನದಂಗಡಿ ಮಾಲೀಕನ ಕಣ್ಣಿಗೆ ಖಾರದಪುಡಿ ಎರಚಿದ ಮಹಿಳೆ
ಮೋದಿ ರೀತಿ ಬೆಂಗಾವಲು ಪಡೆ ವಾಹನ ಕಡಿಮೆ ಮಾಡ್ತಾರಾ ಸಿಎಂ? ಹೇಳಿದ್ದೇನು ನೋಡಿ
ಮೋದಿ ರೀತಿ ಬೆಂಗಾವಲು ಪಡೆ ವಾಹನ ಕಡಿಮೆ ಮಾಡ್ತಾರಾ ಸಿಎಂ? ಹೇಳಿದ್ದೇನು ನೋಡಿ
ಅಜ್ಜನ ಹೆಸರ ಮೇಲೆ ಶಾಸಕರಾಗಿ ಪ್ರಮಾಣ ವಚನ ಸ್ವೀಕರಿಸಿದ ಸಮರ್ಥ್ ಶಾಮನೂರು!
ಅಜ್ಜನ ಹೆಸರ ಮೇಲೆ ಶಾಸಕರಾಗಿ ಪ್ರಮಾಣ ವಚನ ಸ್ವೀಕರಿಸಿದ ಸಮರ್ಥ್ ಶಾಮನೂರು!
ದಿಲೀಪ್​​ರ ಉಳಿಸಿಕೊಳ್ಳಲು ಪತ್ನಿ ಮಾಡಿದ ಪ್ರಯತ್ನಗಳ ವಿವರಿಸಿದ ಆಟೋ ಚಾಲಕ
ದಿಲೀಪ್​​ರ ಉಳಿಸಿಕೊಳ್ಳಲು ಪತ್ನಿ ಮಾಡಿದ ಪ್ರಯತ್ನಗಳ ವಿವರಿಸಿದ ಆಟೋ ಚಾಲಕ
ಇಂದಿರಾ ಗಾಂಧಿ ಬಳಿಕ ಮೋದಿಯೇ ಮಾಸ್​​ ಲೀಡರ್​​ ಎಂದ ಕೆ.ಎನ್​​. ರಾಜಣ್ಣ
ಇಂದಿರಾ ಗಾಂಧಿ ಬಳಿಕ ಮೋದಿಯೇ ಮಾಸ್​​ ಲೀಡರ್​​ ಎಂದ ಕೆ.ಎನ್​​. ರಾಜಣ್ಣ