Gpay Aadhaar: ಡೆಬಿಟ್ ಕಾರ್ಡ್ ಇಲ್ಲದೇ ಆಧಾರ್ ಮೂಲಕ ಯುಪಿಐ ಆ್ಯಕ್ಟಿವೇಟ್ ಮಾಡಲು ಗೂಗಲ್ ಪೇ ಅವಕಾಶ

Aadhaar For UPI Activation: ಗೂಗಲ್ ಪೇನಲ್ಲಿ ಈ ಹಿಂದೆ ಯುಪಿಐ ಆ್ಯಕ್ಟಿವೇಶನ್​ಗೆ ಡೆಬಿಟ್ ಕಾರ್ಡ್ ಮಾತ್ರ ಕೇಳಲಾಗುತ್ತಿತ್ತು. ಈಗ ಆಧಾರ್ ಆಪ್ಷನ್ ಕೂಡ ಸೇರಿಸಲಾಗಿದೆ. ಆಧಾರ್​ಗೆ ನೊಂದಾಯಿತವಾದ ಮೊಬೈಲ್ ನಂಬರ್, ಮತ್ತು ಬ್ಯಾಂಕ್​ಗೆ ಜೋಡಿತವಾದ ಮೊಬೈಲ್ ನಂಬರ್ ಸಹಾಯದಿಂದ ಯುಪಿಐ ಆ್ಯಕ್ಟಿವೇಟ್ ಮಾಡಬಹುದು.

Gpay Aadhaar: ಡೆಬಿಟ್ ಕಾರ್ಡ್ ಇಲ್ಲದೇ ಆಧಾರ್ ಮೂಲಕ ಯುಪಿಐ ಆ್ಯಕ್ಟಿವೇಟ್ ಮಾಡಲು ಗೂಗಲ್ ಪೇ ಅವಕಾಶ
ಯುಪಿಐ
Follow us
|

Updated on: Jun 08, 2023 | 2:00 PM

ನೀವು ಈಗ ಡೆಬಿಟ್ ಕಾರ್ಡ್ ಮೂಲಕ ಯುಪಿಐ ಆ್ಯಕ್ಟಿವೇಟ್ ಮಾಡುವ ಅಗತ್ಯ ಇರುವುದಿಲ್ಲ. ಆಧಾರ್ ಮೂಲಕವೂ ಯುಪಿಐ ವೆರಿಫಿಕೇಶನ್ ಮಾಡಬಹುದು. ಗೂಗಲ್ ಪೇ ಇಂಥದ್ದೊಂದು ಸೌಲಭ್ಯ ಕಲ್ಪಿಸಿದೆ. ಗೂಗಲ್ ಪೇನಲ್ಲಿ ಗ್ರಾಹಕರು ಆಧಾರ್ ಕಾರ್ಡ್ ಮೂಲಕ ಯುಪಿಐಗೆ ನೊಂದಣಿ ಮಾಡಿಸಬಹುದು. ಈ ಫೀಚರ್​ಗೆ ನ್ಯಾಷನಲ್ ಪೇಮೆಂಟ್ಸ್ ಕಾರ್ಪೊರೇಷನ್ ಬೆಂಬಲಿಸುತ್ತದೆ.

ನೊಂದಾಯಿತ ಮೊಬೈಲ್ ನಂಬರ್ ಇರಬೇಕು

ಗೂಗಲ್ ಪೇನಲ್ಲಿ ಈ ಹಿಂದೆ ಯುಪಿಐ ಆ್ಯಕ್ಟಿವೇಶನ್​ಗೆ ಡೆಬಿಟ್ ಕಾರ್ಡ್ ಮಾತ್ರ ಕೇಳಲಾಗುತ್ತಿತ್ತು. ಈಗ ಆಧಾರ್ ಆಪ್ಷನ್ ಕೂಡ ಸೇರಿಸಲಾಗಿದೆ. ಆಧಾರ್​ಗೆ ನೊಂದಾಯಿತವಾದ ಮೊಬೈಲ್ ನಂಬರ್, ಮತ್ತು ಬ್ಯಾಂಕ್​ಗೆ ಜೋಡಿತವಾದ ಮೊಬೈಲ್ ನಂಬರ್ ಸಹಾಯದಿಂದ ಗ್ರಾಹಕರು ಯುಪಿಐ ಆ್ಯಕ್ಟಿವೇಟ್ ಮಾಡಬಹುದು. ಇಲ್ಲಿ ಬ್ಯಾಂಕ್ ಖಾತೆ ಮತ್ತು ಆಧಾರ್​ಗೆ ಜೋಡಿತವಾದ ಮೊಬೈಲ್ ನಂಬರ್ ಒಂದೇ ಆಗಿರಬೇಕು.

ಗೂಗಲ್ ಪೇ ಗ್ರಾಹಕರು ತಮ್ಮ ಆಧಾರ್ ನಂಬರ್​ನ ಮೊದಲ 6 ಅಂಕಿಗಳನ್ನು ನಮೂದಿಸಿದಾಗ ಯುಐಡಿಎಐ ಡಾಟಾಬೇಸ್​ನಲ್ಲಿ ಆ ಮಾಹಿತಿ ಶೇಖರಣೆ ಆಗುತ್ತದೆ. ಈ ಆರು ನಂಬರ್ ನಮೂದಿಸಿದ ಬಳಿಕ ಯುಐಡಿಎಐ ಮತ್ತು ಬ್ಯಾಂಕ್​ನಿಂದ ಒಟಿಪಿ ಬರುತ್ತದೆ. ಇದನ್ನು ಹಾಕಿದ ಬಳಿಕ ಗ್ರಾಹಕರ ಬ್ಯಾಂಕ್​ನಿಂದ ಯುಪಿಐ ಸಕ್ರಿಯಗೊಳ್ಳುತ್ತದೆ. ಆ ಬಳಿಕ ಗ್ರಾಹಕರು ಯುಪಿಐ ಪಿನ್ ಸೆಟ್ ಮಾಡಬಹುದು.

ಇದನ್ನೂ ಓದಿNote Withdrawal: 2,000 ರೂ ನೋಟು ಹಿಂಪಡೆದ ಬಳಿಕ ಮರಳಿದೆ ಶೇ. 50ರಷ್ಟು ಹಣ; ಶೇ. 15ರಷ್ಟು ನೋಟು ಬದಲಾವಣೆ

ಗಮನಿಸಬೇಕಾದ ಸಂಗತಿ ಎಂದರೆ ಆಧಾರ್ ನಂಬರ್​ನ ಮೊದಲ ಆರು ಅಂಕಿಗಳನ್ನು ಗೂಗಲ್ ಪೇ ಸಂಗ್ರಹಿಸಿಟ್ಟುಕೊಳ್ಳುವುದಿಲ್ಲ. ಯುಐಡಿಎಐನಿಂದ ದೃಢೀಕರಣಕ್ಕಾಗಿ ಮಾತ್ರ ಅದರ ಬಳಕೆ ಆಗುತ್ತದೆ ಎಂದು ಗೂಗಲ್ ಸಂಸ್ಥೆ ಸ್ಪಷ್ಟಪಡಿಸಿದೆ. ಭಾರತದಲ್ಲಿ ಬಹುತೇಕ ಜನರು ಆಧಾರ್ ನಂಬರ್ ಬಳಸುತ್ತಿದ್ದಾರೆ. ಇವರಲ್ಲಿ ಹೆಚ್ಚಿನವರು ಆಧಾರ್​ಗೆ ಮೊಬೈಲ್ ಸಂಖ್ಯೆಯನ್ನೂ ಜೋಡಿಸಿದ್ದಾರೆ. ಹೀಗಾಗಿ, ಯುಪಿಐ ಆ್ಯಕ್ಟಿವೇಶನ್​ಗೆ ಆಧಾರ್ ಬಳಕೆ ಮಾಡುವುದರಿಂದ ಹೆಚ್ಚಿನ ಜನರಿಗೆ ಅನುಕೂಲವಾಗುತ್ತದೆ ಎನ್ನುವುದು ಗೂಗಲ್​ನ ಲೆಕ್ಕಾಚಾರ.

ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ