AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Note Withdrawal: 2,000 ರೂ ನೋಟು ಹಿಂಪಡೆದ ಬಳಿಕ ಮರಳಿದೆ ಶೇ. 50ರಷ್ಟು ಹಣ; ಶೇ. 15ರಷ್ಟು ನೋಟು ಬದಲಾವಣೆ

Rs 2,000 Notes Back From Public: ಆರ್​ಬಿಐ ಮಾಹಿತಿ ನೀಡಿದ ಪ್ರಕಾರ 2,000 ರೂ ಮುಖಬೆಲೆಯ ಶೇ. 50ರಷ್ಟು ನೋಟುಗಳನ್ನು ಸಾರ್ವಜನಿಕರು ಮರಳಿಸಿದ್ದಾರೆ. ಇದರಲ್ಲಿ ಶೇ. 85ರಷ್ಟು ನೋಟುಗಳು ಖಾತೆಗಳಿಗೆ ಡೆಪಾಸಿಟ್ ಆಗಿವೆಯಂತೆ.

Note Withdrawal: 2,000 ರೂ ನೋಟು ಹಿಂಪಡೆದ ಬಳಿಕ ಮರಳಿದೆ ಶೇ. 50ರಷ್ಟು ಹಣ; ಶೇ. 15ರಷ್ಟು ನೋಟು ಬದಲಾವಣೆ
2,000 ರೂ ಮುಖಬೆಲೆಯ ನೋಟು
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Jun 08, 2023 | 1:21 PM

Share

ನವದೆಹಲಿ: ಭಾರತೀಯ ರಿಸರ್ವ್ ಬ್ಯಾಂಕ್ (RBI) ಇತ್ತೀಚೆಗೆ 2,000 ರೂ ಮುಖಬೆಲೆಯ ನೋಟುಗಳನ್ನು ಚಲಾವಣೆಯಿಂದ ಹಿಂಪಡೆದುಕೊಂಡಿತ್ತು. 3.50 ಲಕ್ಷಕ್ಕೂ ಹೆಚ್ಚು ಕೋಟಿ ರೂ ಮೊತ್ತದ 2000 ರೂ ನೋಟುಗಳ ಪೈಕಿ ಅರ್ಧದಷ್ಟು ನೋಟುಗಳು ಆರ್​ಬಿಐ ಅಥವಾ ಬ್ಯಾಂಕುಗಳಿಗೆ ಮರಳಿವೆಯಂತೆ. ಆರ್​ಬಿಐನ ಎಂಪಿಸಿ ಸಭೆ ಬಳಿಕ ನಡೆದ ಮಾಧ್ಯಮ ಸಂವಾದದಲ್ಲಿ ಆರ್​ಬಿಐ ಈ ಬಗ್ಗೆ ಮಾಹಿತಿ ನೀಡಿದ್ದು, ಇಲ್ಲಿಯವರೆಗೆ 1.82 ಲಕ್ಷ ಕೋಟಿ ರೂ ಮೌಲ್ಯದ 2,000 ರೂ ಮುಖಬೆಲೆಯ ನೋಟುಗಳು ವಾಪಸ್ ಬಂದಿವೆ ಎಂದು ಹೇಳಿದೆ. ಈ ಪೈಕಿ ಶೇ. 85ರಷ್ಟು ನೋಟುಗಳು ಗ್ರಾಹಕರ ಬ್ಯಾಂಕ್ ಖಾತೆಗೆ ಠೇವಣಿಯಾಗಿವೆ. ಅಂದರೆ ಶೇ. 15ರಷ್ಟು ನೋಟು ಬದಲಾವಣೆ ಆಗಿರುವುದು ತಿಳಿದುಬಂದಿದೆ.

2,000 ರೂ ಮುಖಬೆಲೆಯ ನೋಟುಗಳನ್ನು ಹೊಂದಿರುವ ಜನರು ತಮಗೆ ಅನುಕೂಲವಾಗುವ ಸಮಯದಲ್ಲಿ ಬ್ಯಾಂಕ್​ಗೆ ಹೋಗಿ ಠೇವಣಿ ಇಟ್ಟು ಬರಬಹುದು ಅಥವಾ ನೋಟು ಬದಲಾವಣೆ ಮಾಡಿಕೊಳ್ಳಬಹುದು. ಯಾವುದೇ ಆತುರ ಬೇಡ. ಆದರೆ, ಕೊನೆಯ ಕ್ಷಣದವರೆಗೂ ಕಾಯುವುದೂ ಬೇಡ ಎಂದು ದಾಸ್ ಹೇಳಿದರು.

ಆರ್​ಬಿಐ ಘೋಷಣೆ ಪ್ರಕಾರ 2,000 ರೂ ನೋಟುಗಳನ್ನು ವಾಪಸ್ ಮಾಡಲು ಸೆಪ್ಟೆಂಬರ್ 30ರವರೆಗೂ ಕಾಲಾವಕಾಶ ಇದೆ. ಮೇ 19ರಂದು 2,000 ರೂ ನೋಟುಗಳನ್ನು ಚಲಾವಣೆಯಿಂದ ಹಿಂಪಡೆದಿರುವುದಾಗಿ ಆರ್​ಬಿಐ ಘೋಷಣೆ ಮಾಡಿತ್ತು.

ಇದನ್ನೂ ಓದಿRBI: ಈ ಹಣಕಾಸು ವರ್ಷ ಹಣದುಬ್ಬರ ಶೇ. 5.1, ಜಿಡಿಪಿ ಶೇ. 6.5; ಆರ್​ಬಿಐ ಅಂದಾಜು

ಆರ್​ಬಿಐನ ಮಾನಿಟರಿ ಪಾಲಿಸಿ ಕಮಿಟಿಯಲ್ಲಿ ಗವರ್ನರ್ ಶಕ್ತಿಕಾಂತ ದಾಸ್ ಸೇರಿ 6 ಮಂದಿ ಸದಸ್ಯರಿದ್ದಾರೆ. ಡಾ. ಮೈಕೇಲ್ ದೇಬಬ್ರತ ಪಾತ್ರ, ಡಾ. ಶಶಾಂಕ ಭಿಡೆ, ಡಾ. ಅಶಿಮಾ ಗೋಯಲ್, ಪ್ರೊ. ಜಯಂತ್ ವರ್ಮಾ, ಡಾ. ರಾಜೀವ್ ರಂಜನ್ ಅವರೂ ಈ ಸಮಿತಿಯಲ್ಲಿದ್ದಾರೆ. ರೆಪೋ ದರವನ್ನು ಶೇ. 6.5ರಲ್ಲಿ ಮುಂದುವರಿಸಲು ಈ ಆರೂ ಸದಸ್ಯರು ಸರ್ವಾನುಮತದಿಂದ ನಿರ್ಧಾರ ಕೈಗೊಂಡಿರುವುದು ತಿಳಿದುಬಂದಿದೆ.

2023-24ರ ಹಣಕಾಸು ವರ್ಷದಲ್ಲಿ ಹಣದುಬ್ಬರವು ಶೇ. 5.1ರಷ್ಟು ಇರಬಹುದು ಎಂದು ಆರ್​ಬಿಐ ಅಂದಾಜು ಮಾಡಿದೆ. ಆದರೆ, ಹಣದುಬ್ಬರವನ್ನು ಶೇ. 4ಕ್ಕೆ ಇಳಿಸುವುದು ತನ್ನ ಗುರಿ. ಈ ನಿಟ್ಟಿನಲ್ಲಿ ನಮ್ಮ ಪ್ರಯತ್ನಗಳಿರುತ್ತವೆ. ಆದರೆ, ಅನಿಶ್ಚಿತ ಸಂದರ್ಭಗಳಿಂದಾಗಿ ಈ ಗುರಿ ನಿಖರವಾಗಿ ಈಡೇರಿಸಲಾಗುತ್ತದೆ ಎಂದು ಹೇಳಲು ಆಗುವದಿಲ್ಲ ಎಂದು ಮಾಧ್ಯಮ ಸಂವಾದದ ವೇಳೆ ಶಕ್ತಿಕಾಂತ ದಾಸ್ ಹೇಳಿದ್ದಾರೆ.

ಇದನ್ನೂ ಓದಿe-RUPI: ಬ್ಯಾಂಕೇತರ ಸಂಸ್ಥೆಗಳಿಂದಲೂ ಇ-ರುಪೀ ವೋಚರ್ ವಿತರಣೆಗೆ ಅವಕಾಶ; ಏನಿದು ಇ-ರುಪೀ?

ಆರ್​ಬಿಐ ಪ್ರಕಟಣೆ ಬಳಿಕವೂ ಏರಿಕೆ ಮುಂದುವರಿಸಿದ ಸೆನ್ಸೆಕ್ಸ್, ನಿಫ್ಟಿ

ಭಾರತೀಯ ರಿಸರ್ವ್ ಬ್ಯಾಂಕ್ ಎಂಪಿಸಿ ಸಭೆ ಮುಗಿಯುವ ಮುನ್ನವೇ ನಿನ್ನೆ ಷೇರುಮಾರುಕಟ್ಟೆಗಳು ಗರಿಗೆದರಿದ್ದವು. ಇಂದು ಬೆಳಗ್ಗೆಯೂ ಏರಿಕೆ ಆಗಿತ್ತು. ಗವರ್ನರ್ ಸುದ್ದಿಗೋಷ್ಠಿ ಬಳಿಕ ಷೇರುಪೇಟೆ ಇನ್ನಷ್ಟು ಕಳೆಗಟ್ಟಿದೆ. ಸೆನ್ಸೆಕ್ಸ್ ಮತ್ತು ನಿಫ್ಟಿ ಸೂಚ್ಯಂಕಗಳು ದಾಖಲೆ ಮಟ್ಟಕ್ಕೆ ಏರಿವೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಮುಸ್ಲಿಂರನ್ನ ಓಲೈಸಿಕೊಳ್ಳಲು ಜಮೀರ್ ಬಳ್ಳಾರಿ ಉಸ್ತುವಾರಿ ಸಚಿವ: ಶ್ರೀರಾಮುಲು
ಮುಸ್ಲಿಂರನ್ನ ಓಲೈಸಿಕೊಳ್ಳಲು ಜಮೀರ್ ಬಳ್ಳಾರಿ ಉಸ್ತುವಾರಿ ಸಚಿವ: ಶ್ರೀರಾಮುಲು
2800 ನಾಯಿಗಳನ್ನ ವಿಷ ಹಾಕಿ ಸಾಯಿಸಿದ್ದೆ: ಉದಾಹರಣೆ ಕೊಟ್ಟ ಭೋಜೇಗೌಡ
2800 ನಾಯಿಗಳನ್ನ ವಿಷ ಹಾಕಿ ಸಾಯಿಸಿದ್ದೆ: ಉದಾಹರಣೆ ಕೊಟ್ಟ ಭೋಜೇಗೌಡ
ವ್ಯಸನಿಯ ಹುಚ್ಚಾಟದ ಬಗ್ಗೆ ದೂರು ಸಲ್ಲಿಸಿದರೂ ಶಿವಮೊಗ್ಗ ಪೊಲೀಸರು ನಿಷ್ಕ್ರಿಯ
ವ್ಯಸನಿಯ ಹುಚ್ಚಾಟದ ಬಗ್ಗೆ ದೂರು ಸಲ್ಲಿಸಿದರೂ ಶಿವಮೊಗ್ಗ ಪೊಲೀಸರು ನಿಷ್ಕ್ರಿಯ
ಎಸ್​ಐಟಿ ರಚನೆಯಾಗರುವುದರಿಂದ ಸತ್ಯ ಹೇಳಲು ಭಯವಿಲ್ಲ: ಸಾಕ್ಷಿದಾರ
ಎಸ್​ಐಟಿ ರಚನೆಯಾಗರುವುದರಿಂದ ಸತ್ಯ ಹೇಳಲು ಭಯವಿಲ್ಲ: ಸಾಕ್ಷಿದಾರ
ಕಾಂಗ್ರೆಸ್ ಸರ್ಕಾರ ಬಾಲ್ಯವಿವಾಹಗಳ ಮೇಲೆ ಕಡಿವಾಣ ಹಾಕುತ್ತಿದೆ: ಹೆಬ್ಬಾಳ್ಕರ್
ಕಾಂಗ್ರೆಸ್ ಸರ್ಕಾರ ಬಾಲ್ಯವಿವಾಹಗಳ ಮೇಲೆ ಕಡಿವಾಣ ಹಾಕುತ್ತಿದೆ: ಹೆಬ್ಬಾಳ್ಕರ್
ಬೀದಿ ನಾಯಿ ಕಾಟದ ಬಗ್ಗೆ ವಿಧಾನಸಭೆಯಲ್ಲಿ ಬಿಸಿಬಿಸಿ ಚರ್ಚೆ
ಬೀದಿ ನಾಯಿ ಕಾಟದ ಬಗ್ಗೆ ವಿಧಾನಸಭೆಯಲ್ಲಿ ಬಿಸಿಬಿಸಿ ಚರ್ಚೆ
ಎಸ್ಐಟಿ ಆದಷ್ಟು ಬೇಗ ತನಿಖೆಯನ್ನು ಪೂರ್ತಿಗೊಳಿಸಬೇಕು: ವಿಜಯೇಂದ್ರ
ಎಸ್ಐಟಿ ಆದಷ್ಟು ಬೇಗ ತನಿಖೆಯನ್ನು ಪೂರ್ತಿಗೊಳಿಸಬೇಕು: ವಿಜಯೇಂದ್ರ
ಮುಂದಿನ ಭಾನುವಾರ ಧರ್ಮಸ್ಥಳಕ್ಕೆ ಬಿಜೆಪಿ ತಂಡ: ವಿಜಯೇಂದ್ರ ಹೇಳಿದ್ದೇನು ನೋಡಿ
ಮುಂದಿನ ಭಾನುವಾರ ಧರ್ಮಸ್ಥಳಕ್ಕೆ ಬಿಜೆಪಿ ತಂಡ: ವಿಜಯೇಂದ್ರ ಹೇಳಿದ್ದೇನು ನೋಡಿ
ವಾಲ್ಮೀಕಿ ಸಮುದಾಯದವರಿಂದ ತುಮಕೂರುನಲ್ಲಿ ಇಂದು ಬೃಹತ್ ರ‍್ಯಾಲಿ!
ವಾಲ್ಮೀಕಿ ಸಮುದಾಯದವರಿಂದ ತುಮಕೂರುನಲ್ಲಿ ಇಂದು ಬೃಹತ್ ರ‍್ಯಾಲಿ!
ಬೀದಿ ನಾಯಿಗಳಿಂದ ಮಕ್ಕಳನ್ನು ಕಾಪಾಡಿದ ಜರ್ಮನ್ ಶೆಫರ್ಡ್​
ಬೀದಿ ನಾಯಿಗಳಿಂದ ಮಕ್ಕಳನ್ನು ಕಾಪಾಡಿದ ಜರ್ಮನ್ ಶೆಫರ್ಡ್​