ಭಾರತದಲ್ಲಿ ಸೈಟು ಖರೀದಿಸಬೇಕಾದರೆ ಅಥವಾ ಮನೆ ಕಟ್ಟಬೇಕಾದರೆ ಹೋಮ್ ಲೋನ್ (Home Loan) ಬಹಳ ಮುಖ್ಯ. ಗೃಹಸಾಲ ಇಲ್ಲದೇ ಮನೆ ನಿರ್ಮಾಣ ಬಹುತೇಕ ಕಷ್ಟ. ನಿಮ್ಮ ಆಸ್ತಿ ಅಡಮಾನ ಪಡೆದು ಬ್ಯಾಂಕುಗಳು ದೊಡ್ಡ ಮೊತ್ತದ ಸಾಲ ನೀಡುತ್ತವೆ. ಬಡ್ಡಿದರವೂ ಕೆಳಗಿನ ಮಟ್ಟದಲ್ಲೇ ಇರುತ್ತದೆ. ಆದರೆ, ಗೃಹಸಾಲ ತೀರಿಸುವುಷ್ಟರಲ್ಲಿ ನಮ್ಮ ಬಹುತೇಕ ವೃತ್ತಿಜೀವನ ಮುಗಿದುಹೋಗಿರುತ್ತದೆ. ಮನೆ ಕಟ್ಟಿರುವುದು ಬಿಟ್ಟರೆ ಬೇರೇನೂ ಮಾಡಲೂ ಕಷ್ಟ ಎನಿಸುವಷ್ಟು ಹಣಕಾಸು ಇಕ್ಕಟ್ಟಿಗೆ ಸಿಲುಕುತ್ತೇವೆ. ಈ ಹಿನ್ನೆಲೆಯಲ್ಲಿ ಗೃಹ ಸಾಲ ಪಡೆಯುವಾಗ ನಿಮ್ಮ ಕೈಯಲ್ಲಿ ಸಾಧ್ಯವಾದಷ್ಟೂ ಹೆಚ್ಚು ಡೌನ್ಪೇಮೆಂಟ್ ಮಾಡುವುದು ಉತ್ತಮ. ಹಾಗೆಯೇ, ಹೆಚ್ಚು ಹಣ ಸಿಕ್ಕರೆ ಪ್ರೀಪೇಮೆಂಟ್ ಮಾಡುವುದರಿಂದಲೂ ಸಾಲದ ಹೊರೆ ಕಡಿಮೆ ಆಗುತ್ತದೆ.
ನಿಮ್ಮ ಆಸ್ತಿ ಮೌಲ್ಯ 30 ಲಕ್ಷ ರೂಗಿಂತ ಹೆಚ್ಚು ಇದ್ದರೆ ಬ್ಯಾಂಕುಗಳು ಶೇ. 80ರಷ್ಟು ಹಣವನ್ನು ನಿಮಗೆ ಸಾಲವಾಗಿ ನೀಡಬಹುದು. ಕನಿಷ್ಠ ಶೇ 20ರಷ್ಟು ಹಣವನ್ನು ನೀವು ಡೌನ್ಪೇಮೆಂಟ್ ಆಗಿ ನೀಡಬೇಕಾಗುತ್ತದೆ.
ಬ್ಯಾಂಕುಗಳಿಗೆ ಆದಾಯ ಬರುವುದೇ ಬಡ್ಡಿ ಹಣದಿಂದ. ಬ್ಯಾಂಕ್ ನೀಡುವ ಯಾವುದೇ ಸಾಲವಾದರೂ ಆರಂಭದ ಕಂತುಗಳಲ್ಲಿ ಹೆಚ್ಚಿನ ಮೊತ್ತವು ಬಡ್ಡಿಯೇ ಆಗಿರುತ್ತದೆ. ಸಾಲದ ಅವಧಿ ಅರ್ಧಕ್ಕೆ ಬರುವಷ್ಟರಲ್ಲಿ ಬ್ಯಾಂಕುಗಳು ಶೇ. 75ಕ್ಕಿಂತ ಹೆಚ್ಚು ಬಡ್ಡಿ ಹಣವನ್ನು ವಸೂಲಿ ಮಾಡಿರುತ್ತವೆ. ಹೀಗಾಗಿ, ನೀವು ಆರಂಭಿಕ ವರ್ಷಗಳಲ್ಲಿ ಕಟ್ಟುವ ಇಎಂಐಗಳ ಒಟ್ಟು ಮೊತ್ತಕ್ಕೆ ಅನುಗುಣವಾಗಿ ಸಾಲದ ಅಸಲಿ ಹಣ ತೀರಿರುವುದಿಲ್ಲ.
ಇದನ್ನೂ ಓದಿ: 5 ವರ್ಷದ ಸೇವೆಗಿಂತ ಮುನ್ನವೇ ಗ್ರಾಚುಟಿ ಪಡೆಯಲು ಸಾಧ್ಯವಾ? ಇಲ್ಲಿದೆ ಡೀಟೇಲ್ಸ್
ಈ ಸಂದರ್ಭದಲ್ಲಿ ಉತ್ತಮ ಉಪಾಯ ಎಂದರೆ ಡೌನ್ಪೇಮೆಂಟ್ ಹೆಚ್ಚಿಸುವುದು ಮತ್ತು ಪ್ರೀಮೆಂಟ್ ಮಾಡುವುದು. ಇದಕ್ಕೆ ಉದಾಹರಣೆ ಇಲ್ಲಿದೆ, ಗಮನಿಸಿ:
ಕೋವಿಡ್ ಪೂರ್ವದಲ್ಲಿ ಹೋಮ್ ಲೋನ್ ದರ ಶೇ. 6.85 ರ ಆಸುಪಾಸಿನಲ್ಲಿತ್ತು. ಆಗ ಪಡೆದ ಸಾಲಕ್ಕೆ ಇಎಂಐ 240 ತಿಂಗಳದ್ದಾಗಿತ್ತೆಂದು ಪರಿಗಣಿಸೋಣ. ಆರ್ಬಿಐ ರೆಪೋ ದರ ಏರಿಸಿದಾಗ ಬ್ಯಾಂಕ್ ಕೂಡ ಬಡ್ಡಿದರವನ್ನು 9.35 ಪ್ರತಿಶತಕ್ಕೆ ಏರಿಸುತ್ತದೆ. ಆಗ ಬ್ಯಾಂಕು ಇಎಂಐ ಮೊತ್ತವನ್ನು ಏರಿಸುವ ಬದಲು ಇಎಂಐ ಸಂಖ್ಯೆ ಹೆಚ್ಚಿಸುತ್ತದೆ. 240 ತಿಂಗಳ ಕಂತು 370 ತಿಂಗಳಿಗೆ ಹೆಚ್ಚಾಗುತ್ತದೆ.
ಇದನ್ನೂ ಓದಿ: ಭವಿಷ್ಯದ ಭದ್ರತೆಗೆ ನಿಮಗೆ ಎಷ್ಟು ಹಣ ಬೇಕು? ನಿವೃತ್ತಿ ನಂತರದ ಬದುಕಿಗೆ ಈಗಲೇ ಲೆಕ್ಕ ಹಾಕುವುದು ಹೇಗೆ?
ಈ ಸಂದರ್ಭದಲ್ಲಿ, ಉದಾಹರಣೆಗೆ ಹೇಳುವುದಾದರೆ ನೀವು 36 ತಿಂಗಳ ಕಂತುಗಳ ಹಣವನ್ನು ಮುಂಗಡವಾಗಿ ಪಾವತಿಸಿದಾಗ ಆಗುವ ಮ್ಯಾಜಿಕ್ ಅಚ್ಚರಿ ಮೂಡಿಸುತ್ತದೆ. ಕಂತುಗಳ ಸಂಖ್ಯೆ 120 ತಿಂಗಳಿಗೆ ಬಂದುಬಿಡುತ್ತದೆ. ಇದನ್ನು ಸಾಲದ ಆರಂಭಿಕ ಹಂತಗಳಲ್ಲಿ ಮಾಡಿದರೆ ಹೆಚ್ಚು ಫಲ ಸಿಗುತ್ತದೆ. ನೀವು ಮುಂಗಡವಾಗಿ ಹಣ ಪಾವತಿಸಿದಾಗ ಅಸಲು ಹಣ ಕಡಿಮೆ ಆಗುತ್ತದೆ. ಆಗ ಇಎಂಐ ಕಂತುಗಳ ಸಂಖ್ಯೆ ಕಡಿಮೆ ಆಗುತ್ತದೆ. ಹೆಚ್ಚು ಬಡ್ಡಿ ಕಟ್ಟುವ ಪ್ರಮೇಯ ತಪ್ಪುತ್ತದೆ.
ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ