ಅದಾಯ ತೆರಿಗೆ ಪಾವತಿದಾರರು ಐಟಿ ರಿಟರ್ನ್ಸ್ ಫೈಲ್ ಮಾಡುವ ಮುನ್ನ ಅಡ್ವಾನ್ಸ್ ಟ್ಯಾಕ್ಸ್ (ಮುಂಗಡ ತೆರಿಗೆ) ಮತ್ತು ಸೆಲ್ಫ್ ಅಸೆಸ್ಮೆಂಟ್ ಟ್ಯಾಕ್ಸ್ (ಸ್ವ ಮೌಲ್ಯಮಾಪನ ತೆರಿಗೆ) ಪಾವತಿಸಬೇಕಾಗುತ್ತದೆ. ಇವುಗಳನ್ನು ಪಾವತಿಸದಿದ್ದಲ್ಲಿ ದಂಡ ತೆರಬೇಕಾದೀತು. ಮುಂಗಡ ತೆರಿಗೆ ಪಾವತಿಸದ ವ್ಯಕ್ತಿ ದಂಡವಾಗಿ ನಿರ್ದಿಷ್ಟ ಬಡ್ಡಿ ಸೇರಿಸಿ ಕಟ್ಟಬೇಕಾಗುತ್ತದೆ. ಆದಾಯ ತೆರಿಗೆ ಸೆಕ್ಷನ್ 234ಬಿ ಮತ್ತು 243ಸಿ ಅಡಿಯಲ್ಲಿ ಪಾವತಿಯಾಗದೇ ಉಳಿದ ಮುಂಗಡ ತೆರಿಗೆ ಬಾಕಿ ಮೊತ್ತಕ್ಕೆ ಶೇ. 1ರಷ್ಟು ಬಡ್ಡಿಯ ಹಣವನ್ನು ದಂಡವಾಗಿ ಕಟ್ಟಬೇಕು. ಇನ್ನು ವ್ಯಕ್ತಿಯು ಬೇರೆ ಮೂಲಗಳಿಂದ ಆದಾಯ ಗಳಿಸುತ್ತಿದ್ದರೆ ಅದಕ್ಕೆ ಸೆಲ್ಫ್ ಅಸೆಸ್ಮೆಂಟ್ ಟ್ಯಾಕ್ಸ್ (SAT- Self Assessment Tax)) ಕಟ್ಟಬೇಕಾಗುತ್ತದೆ.
ಆದಾಯ ತೆರಿಗೆಯ ಒಂದು ಭಾಗವಾಗಿರುವ ಅಡ್ವಾನ್ಸ್ ಟ್ಯಾಕ್ಸ್ ಒಬ್ಬ ವ್ಯಕ್ತಿ ಒಂದು ಹಣಕಾಸು ವರ್ಷದ ತನ್ನ ಒಟ್ಟು ಆದಾಯಕ್ಕೆ ಮುಂಗಡವಾಗಿ ಪಾವತಿಸುವ ತೆರಿಗೆಯಾಗಿದೆ. ವ್ಯವಹಾರ ಅಥವಾ ವೃತ್ತಿಪರ ಉದ್ಯೋಗದಿಂದ ಗಳಿಸಿದ ಆದಾಯಕ್ಕೆ ಮುಂಗಡವಾಗಿ ಕಟ್ಟುವ ತೆರಿಗೆ ಇದು. ವ್ಯಕ್ತಿಯ ಆದಾಯಕ್ಕೆ ಪಾವತಿಸಬೇಕಾದ ತೆರಿಗೆ ಮೊತ್ತ ಮತ್ತು ನಿಜವಾಗಿ ಆತ ಪಾವತಿಸುವ ಮೊತ್ತದ ನಡುವಿನ ವ್ಯತ್ಯಾಸ 10 ಸಾವಿರ ರೂ ಮೀರಿದಾಗ ಅದನ್ನು ತೆರಿಗೆ ಬಾಕಿ (Tax Liabilities) ಎಂದು ಪರಿಗಣಿಸಲಾಗುತ್ತದೆ.
ಅಗಲೆ ಹೇಳಿದಂತೆ ಇದು ಒಬ್ಬ ವ್ಯಕ್ತಿಯ ಇತರ ಮೂಲದ ಆದಾಯಗಳಿಗೆ ಕಟ್ಟುವ ತೆರಿಗೆಯಾಗಿದೆ. ಹಣಕಾಸು ವರ್ಷದಲ್ಲಿ ಒಬ್ಬ ವ್ಯಕ್ತಿಯ ಅದಾಯ ಮೂಲದಿಂದ ಟಿಡಿಎಸ್ ಕಡಿತಗೊಂಡ ಬಳಿಕ ಉಳಿಯುವ ಅದಾಯ ತೆರಿಗೆ ಬಾಕಿ ಮೊತ್ತ ಹಾಗು ಅಡ್ವಾನ್ಸ್ ಟ್ಯಾಕ್ಸ್ ಇವುಗಳ ಲೆಕ್ಕಾಚಾರದಲ್ಲಿ ಎಸ್ಎಟಿ ನಿರ್ಧರಿಸಲಾಗುತ್ತದೆ. ಐಟಿ ರಿಟರ್ನ್ ಸಲ್ಲಿಸುವ ಮುನ್ನ ಯಾವುದಾದರೂ ತೆರಿಗೆ ಬಾಕಿ ಉಳಿದಿದೆಯಾ ಎಂದು ಗಣಿಸಬೇಕಾಗುತ್ತದೆ.
ಇದನ್ನೂ ಓದಿ: ಅಬ್ಬಬ್ಬಾ..! ಈ ಬ್ಯಾಂಕ್ನ ಎಫ್ಡಿಗಳಿಗೆ ಸಿಗುತ್ತದೆ ಬರೋಬ್ಬರಿ ಶೇ. 9.50 ರವರೆಗೆ ಬಡ್ಡಿ; ಇದರ ಮುಂದೆ ಯಾವ ಸ್ಕೀಮೂ ಡಮ್ಮಿ
ಹಣಕಾಸು ವರ್ಷದಲ್ಲಿ ಒಬ್ಬ ವ್ಯಕ್ತಿಯ ಒಟ್ಟು ಅಂದಾಜು ಆದಾಯ ಮತ್ತು ಅ ವ್ಯಕ್ತಿಯ ಆದಾಯಕ್ಕೆ ಅನ್ವಯ ಆಗುವ ಸ್ಲ್ಯಾಬ್ ರೇಟ್ಗಳನ್ನು ಗಣಿಸಿ ಅಡ್ವಾನ್ಸ್ ಟ್ಯಾಕ್ಸ್ ಮೊತ್ತ ನಿರ್ಧಾರ ಆಗುತ್ತದೆ. ಇದನ್ನು ಆನ್ಲೈನ್ ಮತ್ತು ಆಫ್ಲೈನ್ ಎರಡು ವಿಧಾನದಲ್ಲಿ ಮಾಡಲು ಸಾಧ್ಯ.
ಅನ್ಲೈನ್ ಮೂಲಕ ಅಡ್ವಾನ್ಸ್ ಟ್ಯಾಕ್ಸ್ ಕಟ್ಟುವ ವಿಧಾನ:
ತೆರಿಗೆ ಮಾಹಿತಿ ಪೋರ್ಟಲ್ ಆದ protean-tinpan.com/index.html ಗೆ ಹೋಗಿ ಅಲ್ಲಿ ಸರ್ವಿಸಸ್, ನಂತರ ಇ–ಪೇಮೆಂಟ್ ಕ್ಲಿಕ್ ಮಾಡಿ
ಬಳಿಕ ಚಲನ್ ಐಟಿಎನ್ಎಸ್280 ಅನ್ನು ಆರಿಸಿ
ಅಡ್ವಾನ್ಸ್ ಟ್ಯಾಕ್ಸ್ ಚೆಕ್ ಬಾಕ್ಸ್ ಆಯ್ಕೆ ಮಾಡಿಕೊಂಡು ಚಲನ್ನಲ್ಲಿ ಅಗತ್ಯ ಮಾಹಿತಿ ಭರ್ತಿ ಮಾಡಿ
ಇದಾದ ನಂತರ ನಿಮ್ಮ ಬ್ಯಾಂಕ್ನ ನೆಟ್ಬ್ಯಾಂಕಿಂಗ್ ಸೈಟ್ ತೆರೆದುಕೊಳ್ಳುತ್ತದೆ. ಅಲ್ಲಿ ನೀವು ಹಣ ಪಾವತಿಸಬಹುದು. ಇದರ ಚಲನ್ ಅನ್ನು ನೀವು ರಸೀದಿಯಾಗಿ ಇಟ್ಟುಕೊಳ್ಳಬಹುದು.
ಆಫ್ಲೈನ್ ಮೂಲಕ ಅಡ್ವಾನ್ಸ್ ಟ್ಯಾಕ್ಸ್ ಕಟ್ಟುವ ವಿಧಾನ:
ಈ ಕೆಳಗಿನ ಪಿಡಿಎಫ್ ಫೈಲ್ ಅನ್ನು ಓಪನ್ ಮಾಡಿ ಪ್ರಿಂಟೌಟ್ ಪಡೆಯಿರಿ.
https://incometaxindia.gov.in/forms/107010000000345598.pdf
ಚಲನ್ ಮಾಹಿತಿ ತುಂಬಿರಿ (ಅಡ್ವಾನ್ಸ್ ಟ್ಯಾಕ್ಸ್ ಚೆಕ್ ಬಾಕ್ಸ್ ಟಿಕ್ ಮಾಡಬೇಕು)
ಇನ್ಕಮ್ ಟ್ಯಾಕ್ಸ್ ಪೇಮೆಂಟ್ ಸ್ವೀಕರಿಸುವ ಯಾವುದಾದರೂ ಬ್ಯಾಂಕ್ಗೆ ಹೋಗಿ ಹಣ ಪಾವತಿಸಿಯೂ, ಚೆಕ್ ನೀಡಿಯೋ ಚಲನ್ ಅನ್ನು ಸಲ್ಲಿಸಬೇಕು.
ಇದನ್ನೂ ಓದಿ: Aadhaar-PAN Linking: ಡೆಡ್ಲೈನ್ಗೆ ಕೆಲವೇ ದಿನ ಬಾಕಿ; ಆಧಾರ್-ಪಾನ್ ಲಿಂಕ್ ಆಗಿದೆಯಾ ತಿಳಿಯುವುದು ಹೇಗೆ? ಇಲ್ಲಿದೆ ಡೀಟೇಲ್ಸ್
Published On - 2:23 pm, Mon, 20 March 23