ಭಾರತದ ನಂಬರ್ ಒನ್ ವಿಮಾ ಸಂಸ್ಥೆ ಎಲ್ಐಸಿ (LIC) ವಿವಿಧ ರೀತಿಯ ಇನ್ಷೂರೆನ್ಸ್ ಸ್ಕೀಮ್ಗಳನ್ನು ಬಿಡುಗಡೆ ಮಾಡುತ್ತಿರುತ್ತದೆ. ಮಾರುಕಟ್ಟೆಯ ಅಗತ್ಯಗಳಿಗೆ ಮತ್ತು ವಿವಿಧ ಸ್ತರಗಳ ಜನರ ಅಗತ್ಯಗಳಿಗೆ ತಕ್ಕಂತೆ ಹೊಸ ಪಾಲಿಸಿ ಬಿಡುಗಡೆ ಮಾಡುತ್ತದೆ. ಎಲ್ಐಸಿ ಇತ್ತೀಚೆಗೆ ಬಿಡುಗಡೆ ಮಾಡಿದ ಧನ್ ವೃದ್ಧಿ (LIC Dhan Vriddhi) ಎಂಬ ಹೊಸ ಸ್ಕೀಮ್ ಬಹಳ ಮಂದಿಯ ಗಮನ ಸೆಳೆದಿದೆ. ಇದು ಮಾಮೂಲಿಯ ಎಲ್ಐಸಿ ಸ್ಕೀಮ್ಗಿಂತ ತುಸು ಭಿನ್ನ. ಹೂಡಿಕೆದಾರರಿಗೆ ಹೆಚ್ಚಿನ ಹಣಕಾಸು ಸ್ವಾತಂತ್ರ್ಯ ಕೊಡುವ ಸ್ಕೀಮ್ ಇದು. 2023, ಸೆಪ್ಟಂಬರ್ 30ರವರೆಗೂ ಈ ಪಾಲಿಸಿ ಲಭ್ಯ ಇರುತ್ತದೆ. ಎಲ್ಐಸಿ ಧನ್ ವೃದ್ಧಿ ಸ್ಕೀಮ್ನಲ್ಲಿ ಕೆಲ ವಿಶೇಷ ಫೀಚರ್ಗಳಿದ್ದು, ಅದರ ವಿವರ ಇಲ್ಲಿದೆ…
ಎಲ್ಐಸಿ ಧನ್ ವೃದ್ಧಿ ಪಾಲಿಸಿಯ ವಿಶೇಷತೆಗಳಲ್ಲಿ ಒಂದೆಂದರೆ ಅದು ಪಾಲಿಸಿಯನ್ನು ಯಾವಾಗ ಬೇಕಾದರೂ ಸರೆಂಡರ್ ಮಾಡುವ ಅವಕಾಶ ಇರುವುದು. ಪಾಲಿಸಿದಾರರು ತಮ್ಮ ಅಗತ್ಯತೆ ಮತ್ತು ಸಂದರ್ಭಗಳಿಗೆ ತಕ್ಕಂತೆ ಪ್ಲಾನ್ನಲ್ಲಿ ಬದಲಾವಣೆ ಮಾಡಿಕೊಳ್ಳುವ ಅವಕಾಶ ಇರುತ್ತದೆ.
ಹಾಗೆಯೇ, ಪಾಲಿಸಿ ಅವಧಿಯಲ್ಲೂ ಫ್ಲೆಕ್ಸಿಬಿಲಿಟಿ ಇದೆ. ಅಲ್ಪ ಅವಧಿಯಿಂದ ಹಿಡಿದು ದೀರ್ಘ ಅವಧಿಯವರೆಗೆ ವಿವಿಧ ಕಾಲಗಳಿಗೆ ಪಾಲಿಸಿ ಪಡೆಯಬಹುದು. 10, 15 ಮತ್ತು 18 ವರ್ಷಗಳ ಅವಧಿಗೆ ಈ ಪಾಲಿಸಿ ಲಭ್ಯ ಇದೆ.
ಇದನ್ನೂ ಓದಿ: Health Insurance: ತೂಕ ಕಡಿಮೆ ಮಾಡಿಕೊಂಡ್ರೆ ಸಿಗುತ್ತೆ ಅಗ್ಗದ ಆರೋಗ್ಯ ವಿಮೆ!
ನೀವು ಮಧ್ಯದಲ್ಲಿ ಯಾವಾಗ ಬೇಕಾದರೂ ಪಾಲಿಸಿ ಕೈಬಿಡಬಹುದು. ಪಾಲಿಸಿ ಆರಂಭಿಸಿ 3 ವರ್ಷದೊಳಗೆ ನೀವು ಹಿಂಪಡೆಯುವುದಾದರೆ, ನೀವು ಅಲ್ಲಿಯವರೆಗೆ ಕಟ್ಟಿದ ಪ್ರೀಮಿಯಮ್ನ ಶೇ. 75ರಷ್ಟು ಮೊತ್ತವನ್ನು ಪಡೆಯಬಹುದು. 3 ವರ್ಷ ಮೇಲ್ಪಟ್ಟಿದ್ದರೆ ಶೇ. 90ರಷ್ಟು ಪ್ರೀಮಿಯಮ್ ಸಿಗುತ್ತದೆ.
ಎಲ್ಐಸಿ ಧನ್ ವೃದ್ಧಿ ಪಾಲಿಸಿಯಲ್ಲಿ ಕನಿಷ್ಠ ವಯಸ್ಸು 90ದಿನದಿಂದ ಹಿಡಿದು 8 ವರ್ಷದವರೆಗೂ ಇದೆ. ಗರಿಷ್ಠ ವಯಸ್ಸು 32 ವರ್ಷದಿಂದ 60 ವರ್ಷದವರೆಗೂ ಇದೆ.
ಈ ಪಾಲಿಸಿಯಲ್ಲಿ ಕನಿಷ್ಠ ಭರವಸೆಯ ಮೊತ್ತ (ಬೇಸಿಕ್ ಸಮ್ ಅಶೂರ್ಡ್) 1,25,000 ರೂ ಇದೆ. ಇದರ ಜೊತೆಗೆ ಪ್ರತೀ 1,000 ರೂಗೆ 25ರಿಂದ 75 ರೂವರೆಗೆ ಪ್ರತೀ ವರ್ಷವೂ ಹೆಚ್ಚುವರಿ ಹಣ ಜಮೆಯಾಗುತ್ತಾ ಹೋಗುತ್ತದೆ.
ಇದನ್ನೂ ಓದಿ: LIC Saral Pension: ಲಕ್ಷ ರೂ ಆದಾಯ ಬರುವಂತಾಗಬೇಕಾ? ಇಲ್ಲಿದೆ ಎಲ್ಐಸಿ ಸರಳ್ ಪೆನ್ಷನ್ ಪ್ಲಾನ್
ಪಾಲಿಸಿ ಮೆಚ್ಯೂರ್ ಆದಾಗ ಬೇಸಿಕ್ ಸಮ್ ಅಶೂರ್ಡ್ನಲ್ಲಿರುವ ಮೊತ್ತದ ಜೊತೆಗೆ ಹೆಚ್ಚುವರಿ ಹಣವೂ ಸೇರಿ ಸಿಗುತ್ತದೆ. ಬೇರೆ ಸ್ಕೀಮ್ಗಳಂತೆ ಇದರಲ್ಲೂ ಸಾಲ ಪಡೆಯುವ ಅವಕಾಶ ಇರುತ್ತದೆ. ಬಡ್ಡಿ ದರ ಬಹಳ ಕಡಿಮೆ ಇರುತ್ತದೆ.
ಎಲ್ಐಸಿ ಧನ್ ವೃದ್ಧಿ ಪಾಲಿಸಿಯು ಎಲ್ಐಸಿಯ ಅಧಿಕೃತ ವೆಬ್ಸೈಟ್ನಲ್ಲಿ ಲಭ್ಯ ಇದೆ. ಯಾರಾದರೂ ಇನ್ಷೂರೆನ್ಸ್ ಏಜೆಂಟ್ ಮೂಲಕ ಪಾಲಿಸಿ ಪಡೆಯಬಹುದು. ಅಥವಾ ವಿಮಾ ಕೇಂದ್ರವೊಂದಕ್ಕೆ ಹೋಗಿ ಅಲ್ಲಿಯೂ ಪಡೆಯಬಹುದು.
ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ