LIC Jeevan Tarun: 8 ವರ್ಷ ಹೂಡಿಕೆ ಮಾಡಿದರೆ 7 ಲಕ್ಷ ರೂ ರಿಟರ್ನ್ ಕೊಡುವ ಜೀವನ್ ತರುಣ್ ಸ್ಕೀಮ್

|

Updated on: Apr 17, 2023 | 2:57 PM

Children's Policy From LIC: ಎಲ್​ಐಸಿ ಜೀವನ್ ತರುಣ್ ಪಾಲಿಸಿ ಮಾಡಿಸಲು ಮಗುವಿನ ವಯಸ್ಸು ಕನಿಷ್ಠ 3 ತಿಂಗಳು ಆಗಿರಬೇಕು. ಗರಿಷ್ಠ ವಯೋಮಿತಿ 12 ವರ್ಷ. ಅಂದರೆ 12 ವರ್ಷದೊಳಗಿನ ಮಕ್ಕಳ ಹೆಸರಿನಲ್ಲಿ ಎಲ್​ಐಸಿ ಜೀವನ್ ತರುಣ್ ಪ್ಲಾನ್ ಮಾಡಿಸಬಹುದು.

LIC Jeevan Tarun: 8 ವರ್ಷ ಹೂಡಿಕೆ ಮಾಡಿದರೆ 7 ಲಕ್ಷ ರೂ ರಿಟರ್ನ್ ಕೊಡುವ ಜೀವನ್ ತರುಣ್ ಸ್ಕೀಮ್
ಹೂಡಿಕೆ
Follow us on

ಬೆಂಗಳೂರು: ದೇಶದಲ್ಲಿ ಈಗ ತರಹಾವೇರಿ ಹೂಡಿಕೆ (Savings) ಆಯ್ಕೆಗಳಿವೆ. ರಿಸ್ಕ್ ತೆಗೆದುಕೊಳ್ಳುವವರಿಗೆ ಹೂಡಿಕೆಯ ಬೇರೆ ಲೋಕವೇ ಇದೆ. ರಿಸ್ಕ್ ಬೇಡ, ಹಣ ಸೇಫ್ ಆಗಿರುವುದು ಮುಖ್ಯ ಎನ್ನುವವರಿಗೂ ಬಹಳ ಹೂಡಿಕೆ ಯೋಜನೆಗಳಿವೆ. ಹೆಚ್ಚಿನ ಜನರು ಈಗಲೂ ಅಂಚೆ ಕಚೇರಿ, ಎಲ್​ಐಸಿ, ಬ್ಯಾಂಕ್ ಎಫ್​ಡಿ ಯೋಜನೆಗಳಲ್ಲೇ ಹೆಚ್ಚಿನ ಉಳಿತಾಯ ಹಣ ನಿಯೋಜಿಸುತ್ತಾರೆ. ಎಲ್​ಐಸಿ ಸ್ಕೀಮ್​ಗಳು (LIC Plans) ಈಗಲೂ ಜನರಿಗೆ ನೆಚ್ಚಿನ ಹೂಡಿಕೆ ಯೋಜನೆಗಳೆನಿಸಿವೆ. ಎಲ್​ಐಸಿಯಲ್ಲಿ ಬಹಳ ವ್ಯಾಪಕವಾದ ಸ್ಕೀಮ್​ಗಳಿವೆ. ಪಿಂಚಣಿ, ಮಕ್ಕಳ ಭವಿಷ್ಯ, ಜೀವ ವಿಮೆ, ಹಣ ವೃದ್ಧಿ ಇತ್ಯಾದಿ ಅಗತ್ಯಗಳಿಗೆ ತಕ್ಕಂತಹ ಸ್ಕೀಮ್​ಗಳಿವೆ. ಹೀಗಾಗಿ, ಭಾರತೀಯ ಜೀವ ವಿಮಾ ನಿಗಮದ ಪಾಲಿಸಿಗಳಿಗೆ ಹೆಚ್ಚಿನ ಬೇಡಿಕೆ ಇದೆ. ಮಕ್ಕಳ ಭವಿಷ್ಯಕ್ಕೆ ಎಲ್​ಐಸಿಯಲ್ಲಿ ಕೆಲವಾರು ಪ್ರಮುಖ ಪ್ಲಾನ್​ಗಳಿವೆ. ಇದರಲ್ಲಿ ಪ್ರಮುಖವಾಗಿ ಗಮನ ಸೆಳೆಯುವುದು ಜೀವನ್ ತರುಣ್ ಪಾಲಿಸಿ.

ಎಲ್​ಐಸಿ ಜೀವನ್ ತರುಣ್ ಪಾಲಿಸಿ ವಿವರ

ಇದು ನಾನ್ಲಿಂಕ್ಡ್ ಎಲ್​ಐಸಿ ಪ್ಲಾನ್. ನಾನ್ ಲಿಂಕ್ಡ್ ಎಂದರೆ ಷೇರು ಮಾರುಕಟ್ಟೆಗೆ ಜೋಡಿತವಾಗದ ನಿರ್ದಿಷ್ಟ ರಿಟರ್ನ್ ಕೊಡುವ ಸ್ಕೀಮ್, ಎಲ್​ಐಸಿ ಜೀವನ್ ತರುಣ್ ಪ್ಲಾನ್ (LIC Jeevan Tarun) ಮಕ್ಕಳಿಗೆಂದು ರೂಪಿಸಲಾಗಿರುವ ಸ್ಕೀಮ್ ಆಗಿದೆ. ಮಗುವಿನ ಭವಿಷ್ಯ, ಅವರ ಶಿಕ್ಷಣ ವೆಚ್ಚ, ಮದುವೆ ಖರ್ಚು ಇತ್ಯಾದಿ ಗಮನದಲ್ಲಿಟ್ಟುಕೊಂಡು ಈ ಸ್ಕೀಮ್ ತರಲಾಗಿದೆ.

ಇದನ್ನೂ ಓದಿGold at Home: ಚಿನ್ನ ಪ್ರಿಯರೇ ಇಲ್ನೋಡಿ..! ಮನೆಯಲ್ಲಿ ನೀವು ಎಷ್ಟು ಚಿನ್ನ ಇಟ್ಟುಕೊಳ್ಳಬಹುದು ಗೊತ್ತಾ? ಸರ್ಕಾರದ ನಿಯಮ ತಿಳಿದಿರಿ

ಎಲ್​ಐಸಿ ಜೀವನ್ ತರುಣ್ ಪಾಲಿಸಿ ಮಾಡಿಸಲು ಮಗುವಿನ ವಯಸ್ಸು ಕನಿಷ್ಠ 3 ತಿಂಗಳು ಆಗಿರಬೇಕು. ಗರಿಷ್ಠ ವಯೋಮಿತಿ 12 ವರ್ಷ. ಅಂದರೆ 12 ವರ್ಷದೊಳಗಿನ ಮಕ್ಕಳ ಹೆಸರಿನಲ್ಲಿ ಎಲ್​ಐಸಿ ಜೀವನ್ ತರುಣ್ ಪ್ಲಾನ್ ಮಾಡಿಸಬಹುದು. ಮಗು 20 ವರ್ಷ ವಯಸ್ಸು ಆಗುವವರೆಗೂ ಪ್ರತೀ ವರ್ಷ ಪ್ರೀಮಿಯಮ್ ಕಟ್ಟಬೇಕು. ಮಗುವಿನ ವಯಸ್ಸು 25 ವರ್ಷ ಆದಾಗ ಎಲ್ಲಾ ಹಣವನ್ನೂ ಹಿಂಪಡೆಯಬಹುದು. ಸರ್ವೈವಲ್ ಬೆನಿಫಿಟ್ ಆಯ್ಕೆ ಪ್ರಕಾರ ಮಗು 20ರಿಂದ 24ನೇ ವಯಸ್ಸಿನಲ್ಲಿ ಪ್ರತೀ ವರ್ಷ ನಿರ್ದಿಷ್ಟ ಮೊತ್ತದ ಹಣವನ್ನೂ ಪಡೆಯಲು ಸಾಧ್ಯ. ಸರ್ವೈವಲ್ ಬೆನಿಫಿಟ್ ಮೊತ್ತ ಎಷ್ಟು ಎಂಬುದನ್ನು ಪಾಲಿಸಿ ಮಾಡಿಸುವಾಗಲೇ ನಿರ್ದಿಷ್ಟಪಡಿಸಬೇಕು. ಶೇ. 5ರಿಂದ ಶೇ. 15ರಷ್ಟನ್ನು ಸರ್ವೈವಲ್ ಬೆನಿಫಿಟ್ ಮೊತ್ತವನ್ನು ಮಗು ಪಡೆಯಬಹುದು.

ಎಲ್​ಐಸಿ ಜೀವನ್ ತರುಣ್ ಪಾಲಿಸಿ ಉದಾಹರಣೆ

  • ಪಾಲಿಸಿ ಮಾಡಿಸುವ ಮಗುವಿನ ವಯಸ್ಸು: 5ನೇ ವರ್ಷ
  • ಪಾಲಿಸಿ ಅವಧಿ: 20 ವರ್ಷ
  • ಪ್ರೀಮಿಯಮ್ ಪಾವತಿಸುವ ವರ್ಷಗಳು: 15 ವರ್ಷ
  • ಪ್ರೀಮಿಯಮ್ ಕಟ್ಟುವುದು: ವರ್ಷಕ್ಕೆ
  • ಪ್ರೀಮಿಯಮ್ ಮೊತ್ತ: 6,375 + ತೆರಿಗೆ
  • ಪಾಲಿಸಿ ಮೊತ್ತ: 1,00,000 ರೂ

ಇದನ್ನೂ ಓದಿUnlimited Data: ಜಿಯೋದಲ್ಲಿ 599 ರೂಗೆ ಅನ್​ಲಿಮಿಟೆಡ್ ಡಾಟಾ; ವೊಡಾಫೋನ್, ಏರ್​ಟೆಲ್, ಬಿಎಸ್ಸೆನ್ನೆಲ್​ನಲ್ಲಿ ಯಾವೆಲ್ಲಾ ಬೆಸ್ಟ್ ಪ್ಲಾನ್​ಗಳಿವೆ?

ಪ್ರೀಮಿಯಮ್ ಅನ್ನು ನೀವು ವರ್ಷಕ್ಕೆ ಬೇಕಾದರೂ ಕಟ್ಟಬಹುದು. ತಿಂಗಳಿಗೆ, ಮೂರು ತಿಂಗಳಿಗೆ ಅಥವಾ ಆರು ತಿಂಗಳಿಗೊಮ್ಮೆಯೂ ಕಟ್ಟಡಬಹುದು. ಪ್ರೀಮಿಯಮ್ ಮೊತ್ತ ಹೆಚ್ಚಿದಷ್ಟೂ ಪಾಲಿಸಿ ಮೊತ್ತವೂ ಹೆಚ್ಚುತ್ತದೆ.

ಎಂಟು ವರ್ಷ ಕಟ್ಟಿದರೆ 7 ಲಕ್ಷ ರೂ ಪಡೆಯುವುದು ಹೇಗೆ?

ಇನ್ನು, ಮಗು 12ನೇ ವರ್ಷದ ವಯಸ್ಸಿಗೆ ಬಂದಾಗ ನೀವು ಎಲ್​ಐಸಿ ಜೀವನ್ ತರುಣ್ ಪಾಲಿಸಿ ಮಾಡಿಸುತ್ತಿದ್ದೀರೆಂದು ಇಟ್ಟುಕೊಳ್ಳಿ. ಆಗ ನೀವು ಪ್ರೀಮಿಯಮ್ ಕಟ್ಟುವ ಅವಧಿ 8 ವರ್ಷದ್ದಾಗಿರುತ್ತದೆ. ವರ್ಷಕ್ಕೆ 54,000 ರೂನಷ್ಟು ವಾರ್ಷಿಕ ಪ್ರೀಮಿಯಮ್ ಇರುತ್ತದೆ. ಅಂದರೆ ಪ್ರತೀ ದಿನ 150 ರೂ ಸೇರಿಸುತ್ತಾ ಹೋದರೆ ವರ್ಷಕ್ಕೆ 54,000 ರೂ ಆಗುತ್ತದೆ. ಈ ರೀತಿ ಮಗುವಿನ ವಯಸ್ಸು 20 ಆಗುವವರೆಗೂ, ಅಂದರೆ 8 ವರ್ಷದವರೆಗೂ ಕಟ್ಟಬೇಕು. ಒಟ್ಟು 4.32 ಲಕ್ಷ ರುಪಾಯಿ ಜಮೆ ಆಗುತ್ತದೆ. ಇಲ್ಲಿಗೆ ಪ್ರೀಮಿಯಮ್ ಕಟ್ಟುವುದನ್ನು ನಿಲ್ಲಿಸಬೇಕು. ಇದಾಗಿ ಐದು ವರ್ಷದ ಬಳಿಕ 2.47 ಲಕ್ಷ ರೂ ಹೆಚ್ಚುವರಿ ಅಥವಾ ಬೋನಸ್ ಹಣ ಜಮೆ ಆಗುತ್ತದೆ. ಮಗುವಿನ ವಯಸ್ಸು 25 ವರ್ಷ ಆದಾಗ ಪಾಲಿಸಿಯಿಂದ ಒಟ್ಟು 7 ಲಕ್ಷ ರೂನಷ್ಟು ಪಾಲಿಸಿ ಹಣ ರಿಟರ್ನ್ ಬರುತ್ತದೆ.

ಬಹುತೇಕ ಎಲ್​ಐಸಿ ಸ್ಕೀಮ್​ಗಳಲ್ಲಿರುವಂತೆ ಇದರಲ್ಲೂ ಕೂಡ ಸಾಲ ಸೌಲಭ್ಯ ಇರುತ್ತದೆ. ಪಾಲಿಸಿ ಸರ್ಟಿಫಿಕೇಟ್ ಅಡವಿಟ್ಟು ಸಾಲ ಪಡೆಯಬಹುದು. ಈ ಸೌಲಭ್ಯ ಪಡೆಯಲು ಕನಿಷ್ಠ 2 ವರ್ಷಗಳಾದರೂ ಪ್ರೀಮಿಯಮ್ ಕಟ್ಟಿದ್ದಿರಬೇಕು. ಆವರೆಗೂ ಕಟ್ಟಲಾದ ಪ್ರೀಮಿಯಮ್ ಮೊತ್ತಕ್ಕೆ ಸಮೀಪದಷ್ಟು ಹಣವನ್ನು ಸಾಲವಾಗಿ ಪಡೆಯಬಹುದು.

ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 2:57 pm, Mon, 17 April 23