ಕೆಲವೊಮ್ಮೆ ತುರ್ತಾಗಿ ಹಣದ ಅಗತ್ಯ ಬಂದು ಬಿಡುತ್ತದೆ. ಕೈಸಾಲ ದುಬಾರಿಯಾಗಿರುತ್ತದೆ. ಚಿನ್ನ ಒತ್ತೆ ಇಟ್ಟು ಸಾಲ ಪಡೆಯಬಹುದು. ಇನ್ಷೂರೆನ್ಸ್ ಒತ್ತೆ ಇಟ್ಟು ಸಾಲ ಪಡೆಯಬಹುದು. ನೀವು ಷೇರುದಾರರಾಗಿದ್ದರೆ ಷೇರುಗಳನ್ನೇ ಅಡ ಇಟ್ಟು ಸಾಲ ಪಡೆಯುವ ಅವಕಾಶ ಇದೆ. ಕೈಸಾಲ ಅಥವಾ ಪರ್ಸನಲ್ ಲೋನ್ಗೆ ಹೋಲಿಸಿದರೆ ಎಲ್ಎಎಸ್ ಅಥವಾ ಷೇರಿನ ಮೇಲಿನ ಸಾಲಕ್ಕೆ ಬಡ್ಡಿದರ ಬಹಳ ಕಡಿಮೆ. ಹೀಗಾಗಿ, ಎಮರ್ಜೆನ್ಸಿ ಹಣಕ್ಕೆ ವೈಯಕ್ತಿಕ ಸಾಲ ಪಡೆಯುವುದಕ್ಕಿಂತ, ಅಥವಾ ಷೇರುಗಳನ್ನು ಮಾರುವುದಕ್ಕಿಂತ ಈ ರೀತಿಯ ಸಾಲ ಪಡೆಯುವುದು ಉತ್ತಮ ಆಯ್ಕೆ ಎನಿಸಬಹುದು.
ಒಂದು ಆಸ್ತಿಯನ್ನು ಅಡವಾಗಿ ಇಟ್ಟುಕೊಂಡು ಸಾಲ ನೀಡುವಾಗ ಬ್ಯಾಂಕುಗಳು ಆ ಆಸ್ತಿಯ ಭವಿಷ್ಯದ ಮೌಲ್ಯ ಮತ್ತು ಒಂದು ವರ್ಷದ ಬಡ್ಡಿಯ ಹಣವನ್ನು ಪರಿಗಣಿಸುತ್ತವೆ. ಚಿನ್ನದ ಸಾಲ ಕೊಡುವಾಗ ಚಿನ್ನದ ಮೌಲ್ಯದಷ್ಟು ಮೊತ್ತವನ್ನು ಕೊಡಲಾಗುವುದಿಲ್ಲ. ಶೇ. 70ರಿಂದ 80ರಷ್ಟು ಮೊತ್ತವನ್ನು ಮಾತ್ರವೇ ಸಾಲವಾಗಿ ಕೊಡಲಾಗುತ್ತದೆ. ಅಂತೆಯೇ ಷೇರಿನ ಮೇಲೆ ಸಾಲ ಕೊಡುವಾಗ ಷೇರುಗಳ ಇವತ್ತಿನ ಮಾರುಕಟ್ಟೆ ಮೌಲ್ಯದ ಶೇ. 50ರಷ್ಟು ಹಣವನ್ನು ಮಾತ್ರವೇ ಸಾಲವಾಗಿ ಕೊಡಬಹುದು.
ಇದನ್ನೂ ಓದಿ: ಹಣದ ಮೌಲ್ಯ ಇವತ್ತೇ ಬೇರೆ ನಾಳೆಯೇ ಬೇರೆ; ಭವಿಷ್ಯಕ್ಕೆ ಎಷ್ಟು ಹಣ ಬೇಕಾಗಬಹುದು? ಇಲ್ಲಿದೆ ಸಿಂಪಲ್ ಸೂತ್ರ
ಉದಾಹರಣೆಗೆ ನಿಮ್ಮ ಬಳಿ ಇರುವ ಷೇರುಗಳ ಒಟ್ಟು ಮೌಲ್ಯ 5 ಲಕ್ಷ ರೂ ಆಗಿದ್ದರೆ ಎರಡೂವರೆ ಲಕ್ಷ ರೂ ಹಣವನ್ನು ಸಾಲವಾಗಿ ಕೊಡಬಹುದು. ಇಲ್ಲಿ ಎಲ್ಲಾ ಷೇರುಗಳಿಗೂ ಸಾಲ ಸಿಗುತ್ತೆ ಎನ್ನಲಾಗುವುದಿಲ್ಲ. ಮಾರಾಟಕ್ಕೆ ಅರ್ಹವಾದ ಷೇರುಗಳನ್ನು ಮಾತ್ರವೇ ಪರಿಗಣಿಸಲಾಗುತ್ತದೆ. ಎಕ್ಸಿಕ್ಯೂಟಿವ್ಗಳಿಗೆ ನೀಡಲಾಗುವ ಇಸಾಪ್ ಇತ್ಯಾದಿ ಷೇರು ಆಸ್ತಿಗಳನ್ನು ಒತ್ತೆ ಇಟ್ಟುಕೊಳ್ಳಲಾಗುವುದಿಲ್ಲ.
ಹಾಗೆಯೇ, ಷೇರುಬೆಲೆ ಏರಿಳಿತದ ತೀವ್ರತೆ ಹೆಚ್ಚಿರುತ್ತದೆಯಾದ್ದರಿಂದ ಬ್ಯಾಂಕುಗಳು ಶೇ. 50ರಷ್ಟು ಮಾತ್ರವೇ ಹಣವನ್ನು ಸಾಲವಾಗಿ ಕೊಡುತ್ತವೆ.
ನೀವು ಷೇರು ಮಾರುವ ಸಂದರ್ಭದಲ್ಲಿ ಅದರ ಬೆಲೆ ಕಡಿಮೆಗೊಂಡಿದ್ದಿರಬಹುದು. ಭವಿಷ್ಯದಲ್ಲಿ ಅದು ರಿಕವರ್ ಆಗುವ ಸಾಧ್ಯತೆ ಹೆಚ್ಚಿರಬಹುದು. ಈ ಹಂತದಲ್ಲಿ ಷೇರು ಮಾರುವುದರಿಂದ ನಿಮಗೆ ನಷ್ಟವೇ ಹೆಚ್ಚು. ಜೊತೆಗೆ ಕ್ಯಾಪಿಟಲ್ ಗೇಯ್ನ್ ಟ್ಯಾಕ್ಸ್ ಪಾವತಿಸಬೇಕಾಗುತ್ತದೆ. ಷೇರು ಬೆಲೆ ಉಚ್ಛ್ರಾಯ ಸ್ಥಿತಿಯಲ್ಲಿದ್ದಾಗ ಮಾರಿದರೆ ನಷ್ಟವೇನಿಲ್ಲ. ಆದರೆ, ಮಾರುಕಟ್ಟೆ ಕುಸಿತದಲ್ಲಿರುವಾಗ ಮಾರುವ ಬದಲು ಒತ್ತೆ ಇಟ್ಟು ಸಾಲ ಪಡೆಯುಬಹುದು.
ಇದನ್ನೂ ಓದಿ: ಇನ್ಷೂರೆನ್ಸ್ ಪಾಲಿಸಿ ಮೇಲೆ ಸಾಲ ಪಡೆಯುವುದು ಹೇಗೆ? ಅದರ ಪ್ರಯೋಜನಗಳೇನು ತಿಳಿದಿರಿ
ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ