Mahila Samman Savings scheme: ಮಹಿಳಾ ಸಮ್ಮಾನ್ ಸೇವಿಂಗ್ ಸ್ಕೀಮ್: 2 ವರ್ಷಕ್ಕೆ ಮೆಚ್ಯೂರಿಟಿ; ಬಡ್ಡಿ ಎಷ್ಟು? ತೆರಿಗೆ ಬೀಳುತ್ತಾ?

|

Updated on: Jun 16, 2023 | 6:35 PM

Post Office Scheme For Women: ಯಾವುದೇ ವಯಸ್ಸಿನ ಮಹಿಳೆಯರ ಹೆಸರಿನಲ್ಲಿ ಆರಂಭಿಸಬಹುದಾದ ಸ್ಕೀಮ್ ಮಹಿಳಾ ಸಮ್ಮಾನ್ ಸೇವಿಂಗ್ ಸರ್ಟಿಫಿಕೇಟ್. ಎರಡು ವರ್ಷಕ್ಕೆ ಮೆಚ್ಯೂರ್ ಆಗುವ ಈ ಸ್ಕೀಮ್​ನಲ್ಲಿ 2 ಲಕ್ಷ ರೂವರೆಗೂ ಹೂಡಿಕೆ ಮಾಡಬಹುದು.

Mahila Samman Savings scheme: ಮಹಿಳಾ ಸಮ್ಮಾನ್ ಸೇವಿಂಗ್ ಸ್ಕೀಮ್: 2 ವರ್ಷಕ್ಕೆ ಮೆಚ್ಯೂರಿಟಿ; ಬಡ್ಡಿ ಎಷ್ಟು? ತೆರಿಗೆ ಬೀಳುತ್ತಾ?
ಮಹಿಳಾ ಸಮ್ಮಾನ್ ಸೇವಿಂಗ್ಸ್ ಸ್ಕೀಮ್
Follow us on

ಜನಸಾಮಾನ್ಯರಿಗಾಗಿ ಸರ್ಕಾರ ನಾನಾ ರೀತಿಯ ಉಳಿತಾಯ ಯೋಜನೆ, ಹೂಡಿಕೆ ಯೋಜನೆ ಇತ್ಯಾದಿ ಕೈಗೊಳ್ಳುತ್ತದೆ. ಹೆಣ್ಮಕ್ಕಳಿಗೆಂದೇ ಕೆಲ ಸ್ಕೀಮ್​ಗಳಿವೆ. ಇವು ತೀರಾ ಹೆಚ್ಚು ಬಡ್ಡಿ ಕೊಡುತ್ತವೆ ಎಂದಲ್ಲವಾದರೂ ಮಹಿಳೆರ ಜೀವನಕ್ಕೆ ಉಪಯುಕ್ತ ಎನಿಸುವ ಫೀಚರ್​ಗಳು ಈ ಯೋಜನೆಗಳಲ್ಲಿ ಇರುತ್ತವೆ. ಇಂಥ ಸ್ಕೀಮ್​ಗಳಲ್ಲಿ ಮಹಿಳಾ ಸಮ್ಮಾನ್ (Mahila Samman Saving Scheme) ಕೂಡ ಒಂದು. ಕಿಸಾನ್ ಸಮ್ಮಾನ್ ನಿಧಿ ಯೋಜನೆಯಲ್ಲಿ ರೈತರಿಗೆ ಉಚಿತವಾಗಿ ಹಣ ಕೊಡುವ ರೀತಿಯದ್ದಲ್ಲ ಮಹಿಳಾ ಸಮ್ಮಾನ್ ಸೇವಿಂಗ್ಸ್ ಸ್ಕೀಮ್. ಯಾವುದೇ ವಯಸ್ಸಿನ ಮಹಿಳೆಯ ಹೆಸರಿನಲ್ಲಿ ಈ ಸ್ಕೀಮ್ ಪಡೆಯಬಹುದು. ಸರ್ಕಾರಿ ಪ್ರಾಯೋಜಿತ ಸ್ಕೀಮ್ ಆದ್ದರಿಂದ ರಿಟನ್ಸ್ ಹಣಕ್ಕೆ ಭಯಪಡಬೇಕಿಲ್ಲ. ಇದು ಎರಡು ವರ್ಷಕ್ಕೆ ಮೆಚ್ಯೂರ್ ಆಗುವ ಸ್ಕೀಮ್. ಕಂತುಗಳಿಲ್ಲ, ಏಕಕಾಲಕ್ಕೆ ಪಾವತಿಸುವ ಸ್ಕೀಮ್. ಒಂದು ರೀತಿಯಲ್ಲಿ 2 ವರ್ಷಕ್ಕೆ ನೀವು ಬ್ಯಾಂಕ್​ನಲ್ಲಿ ನಿಶ್ಚಿತ ಠೇವಣಿ ಇಟ್ಟಂತೆ.

ಮಹಿಳಾ ಸಮ್ಮಾನ್ ಸೇವಿಂಗ್ಸ್ ಸ್ಕೀಮ್​ನಲ್ಲಿ ಒಳ್ಳೆಯ ಬಡ್ಡಿ ದರ

ಮಹಿಳಾ ಸಮ್ಮಾನ್ ಸೇವಿಂಗ್ಸ್ ಸ್ಕೀಮ್​ನಲ್ಲಿ ವಾರ್ಷಿಕ ಬಡ್ಡಿ ದರ ಶೇ. 7.5ರಷ್ಟು ಇದೆ. ಬೇರೆ ಹಲವು ಬ್ಯಾಂಕ್ ಎಫ್​ಡಿಗಿಂತ ಹೆಚ್ಚು ಬಡ್ಡಿ ಇಲ್ಲಿ ಸಿಗುತ್ತದೆ. ಮೂರು ತಿಂಗಳಿಗೊಮ್ಮೆ ಬಡ್ಡಿ ಅದೇ ಠೇವಣಿಗೆ ಜಮೆ ಆಗುತ್ತಾ ಹೋಗುತ್ತದೆ. ಚಕ್ರಬಡ್ಡಿಯಂತೆ ಬೆಳೆಯುತ್ತಾ ಹೋಗುತ್ತದೆ.

ಇದನ್ನೂ ಓದಿPAN-Aadhaar Link: ಪಾನ್ ಆಧಾರ್ ಲಿಂಕ್ ಮಾಡಿಲ್ಲವಾ? ಹೊಸ ಡೆಡ್​ಲೈನ್ ಕೂಡ ಹತ್ತಿರ ಬರ್ತಿದೆ; ತಪ್ಪಿಸಿಕೊಂಡರೆ ಏನಾಗುತ್ತೆ ಪರಿಣಾಮ? ನೋಡಿ ಡೀಟೇಲ್ಸ್

ಉದಾಹರಣೆಗೆ ನೀವು 2 ಲಕ್ಷ ರೂ ಹಣವನ್ನು ಈ ಸ್ಕೀಮ್​ನಲ್ಲಿ ಡೆಪಾಸಿಟ್ ಮಾಡಿದರೆ, ಒಂದು ಕ್ವಾರ್ಟರ್ ಅವಧಿಗೆ ನಿಮಗೆ 3,750 ರೂ ಬಡ್ಡಿ ಸಿಗುತ್ತದೆ. ಇದು ಮೂಲ ಮೊತ್ತವಾದ 2 ಲಕ್ಷಕ್ಕೆ ಸೇರ್ಪಡೆಯಾಗುತ್ತದೆ. 2,03,750 ರುಪಾಯಿಯಷ್ಟಾದ ನಿಮ್ಮ ಪ್ರಿನ್ಸಿಪಾಲ್ ಮೊತ್ತಕ್ಕೆ ಮುಂದಿನ 3 ತಿಂಗಳು ಬಡ್ಡಿ ಸಿಗುತ್ತದೆ. ಮುಂದಿನ ಕ್ವಾರ್ಟರ್​ನಲ್ಲಿ ಬರುವ ಬಡ್ಡಿ 3,820 ರೂ ಆಗುತ್ತದೆ. ಹೀಗೆ ಚಕ್ರಬಡ್ಡಿ ಬೆಳೆಯುತ್ತಾ ಹೋಗುತ್ತದೆ. ಎರಡು ವರ್ಷದ ಬಳಿಕ ನಿಮ್ಮ 2,00,000 ರೂ ಹಣವು 2,32,044 ರೂ ರಿಟರ್ನ್ ಸಿಗುತ್ತದೆ.

ಎಷ್ಟು ಹೂಡಿಕೆ ಮಾಡಬಹುದು? ತೆರಿಗೆ ಕಡಿತ ಆಗುತ್ತದಾ?

ಈ ಸ್ಕೀಮ್​ನಲ್ಲಿ ಗರಿಷ್ಠ 2,00,000 ರೂವರೆಗೂ ಹೂಡಿಕೆ ಮಾಡಬಹುದು. ಅದೃಷ್ಟಕ್ಕೆ ಈ ಸ್ಕೀಮ್​ನಿಂದ ದೊರಕುವ ಬಡ್ಡಿ ಹಣಕ್ಕೆ ಟಿಡಿಎಸ್ ಅನ್ವಯ ಆಗುವುದಿಲ್ಲ. ಯಾಕೆಂದರೆ ಐಟಿ ಸೆಕ್ಷನ್ 194ಎ ಪ್ರಕಾರ ಒಂದು ಹಣಕಾಸು ವರ್ಷದಲ್ಲಿ 40,000 ರೂಗಿಂತ ಹೆಚ್ಚು ಮೊತ್ತದ ಬಡ್ಡಿ ಸಿಕ್ಕರೆ ಅದಕ್ಕೆ ಟಿಡಿಎಸ್ ಕಡಿತ ಆಗುತ್ತದೆ. ಇಲ್ಲಿ ಮಹಿಳಅ ಸಮ್ಮಾನ್ ಸ್ಕೀಮ್​ನಲ್ಲಿ ಸಿಗುವ ಬಡ್ಡಿ 40,000 ರೂ ಗಡಿಯೊಳಗೆಯೇ ಇರುತ್ತದೆ. ಹೀಗಾಗಿ, ಟಿಡಿಎಸ್ ಕಡಿತ ಆಗುವುದಿಲ್ಲ.

ಇದನ್ನೂ ಓದಿSovereign Gold Bond: ಸಾವರಿನ್ ಗೋಲ್ಡ್ ಬಾಂಡ್ ಜೂನ್ 17ರಿಂದ: ಅಮೋಘ ಹೂಡಿಕೆ ಅವಕಾಶ ಕಳೆದುಕೊಳ್ಳದಿರಿ; ಏನಿದು ಸ್ಕೀಮ್, ಹೆಚ್ಚಿನ ಮಾಹಿತಿ ತಿಳಿಯಿರಿ

ಮಹಿಳಾ ಸಮ್ಮಾನ್ ಸೇವಿಂಗ್ ಸರ್ಟಿಫಿಕೇಟ್ ಎಲ್ಲಿ ಪಡೆಯುವುದು?

ಇದು ಪೋಸ್ಟ್ ಆಫೀಸ್​ನಲ್ಲಿ ಸಿಗುವ ಯೋಜನೆ. ಪೋಸ್ಟ್ ಆಫೀಸ್​ನ ವೆಬ್​ಸೈಟ್​ಗೆ ಹೋದರೆ ಅಲ್ಲಿ ಇದರ ಅರ್ಜಿ ಸಿಗುತ್ತದೆ. ಅದನ್ನು ಡೌನ್​ಲೋಡ್ ಮಾಡಿ. ಅಂಚೆ ಕಚೇರಿಯಲ್ಲೂ ಅರ್ಜಿ ಸಿಗುತ್ತದೆ. ಈ ಅರ್ಜಿಯನ್ನು ಅಗತ್ಯ ಮಾಹಿತಿಯೊಂದಿಗೆ ಭರ್ತಿ ಮಾಡಿ. ಬಳಿಕ ಸೂಕ್ತ ದಾಖಲೆಗಳೊಂದಿಗೆ ಅರ್ಜಿಯನ್ನು ಯಾವುದಾದರೂ ಅಂಚೆ ಕಚೇರಿಗೆ ಹೋಗಿ ಸಲ್ಲಿಸಿ. ನಗದು ಹಣ ಅಥವಾ ಚೆಕ್ ಮೂಲಕ ಠೇವಣಿ ಪಾವತಿಸಿ.

ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ