AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

March Deadlines: ಮಾರ್ಚ್​ನಲ್ಲಿ ಡೆಡ್​ಲೈನ್ ಇರುವ ಎಂಟು ಹಣಕಾಸು ಕಾರ್ಯಗಳು; ಮರೆಯದಿರಿ

Money Matters: 2024ರ ಮಾರ್ಚ್ ತಿಂಗಳಲ್ಲಿ ಕೆಲ ಪ್ರಮುಖ ಹಣಕಾಸು ಯೋಜನೆಗಳಿಗೆ ಡೆಡ್​ಲೈನ್ ಇದೆ. ಉಚಿತ ಆಧಾರ್ ಅಪ್​ಡೇಶನ್​ಗೆ ಮಾರ್ಚ್ 14ರವರೆಗೂ ಅವಕಾಶ ಇದೆ. ಎಸ್​ಬಿಐನ ಕೆಲ ವಿಶೇಷ ನಿಶ್ಚಿತ ಠೇವಣಿಗಳಿಗೂ ಗಡುವು ಮಾರ್ಚ್ 31ಕ್ಕೆ ಅಂತ್ಯಗೊಳ್ಳುತ್ತದೆ. ಸಂಬಳದಲ್ಲಿ ಟಿಡಿಎಸ್ ಕಡಿತ ತಪ್ಪಿಸಲು ಅಥವಾ ಕಡಿಮೆ ಮಾಡಲು ತೆರಿಗೆ ಉಳಿತಾಯ ಹೂಡಿಕೆಗಳನ್ನು ಸಲ್ಲಿಸಲು ಮಾರ್ಚ್ 31 ಕೊನೆಯ ದಿನವಾಗಿದೆ.

March Deadlines: ಮಾರ್ಚ್​ನಲ್ಲಿ ಡೆಡ್​ಲೈನ್ ಇರುವ ಎಂಟು ಹಣಕಾಸು ಕಾರ್ಯಗಳು; ಮರೆಯದಿರಿ
ಹಣ
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Feb 29, 2024 | 3:01 PM

Share

ಭಾರತದ ಹಣಕಾಸು ವರ್ಷದಲ್ಲಿ (fiscal year) ಮಾರ್ಚ್ ಮತ್ತು ಏಪ್ರಿಲ್ ಬಹಳ ಮುಖ್ಯ. ಮಾರ್ಚ್ ವರ್ಷಾಂತ್ಯದ ತಿಂಗಳಾದರೆ, ಏಪ್ರಿಲ್ ವರ್ಷಾರಂಭದ ತಿಂಗಳು. ಹೀಗಾಗಿ, ಎರಡೂ ತಿಂಗಳು ಹಣಕಾಸು ದೃಷ್ಟಿಯಿಂದ ಮಹತ್ವ ಪಡೆಯುತ್ತವೆ. ಮಾರ್ಚ್ ತಿಂಗಳಲ್ಲಿ ಹಲವು ಹಣಕಾಸು ಕಾರ್ಯಗಳಿಗೆ ಗಡುವು ಇರುತ್ತವೆ. ಈ ಮಾರ್ಚ್ ತಿಂಗಳಲ್ಲೂ ಕೆಲ ಪ್ರಮುಖ ಹಣಕಾಸು ಯೋಜನೆಗಳು ಕೊನೆಗೊಳ್ಳಲಿವೆ. ಇದರಲ್ಲಿ ಪೇಟಿಎಂ ಪೇಮೆಂಟ್ಸ್ ಬ್ಯಾಂಕ್, ಆಧಾರ್ ಅಪ್​ಡೇಶನ್, ವಿಶೇಷ ಎಫ್​ಡಿ ಇತ್ಯಾದಿ ಯೋಜನೆಗಳು ಸೇರಿವೆ. ಕೆಲ ಆಯ್ದ ಸ್ಕೀಮ್​ಗಳ ವಿವರ ಇಲ್ಲಿದೆ…

ಉಚಿತವಾಗಿ ಆಧಾರ್ ಅಪ್​ಡೇಶನ್ ಮಾಡಲು ಮಾರ್ಚ್ 14 ಡೆಡ್​ಲೈನ್

ಆಧಾರ್​ನಲ್ಲಿ ವಿಳಾಸ ಮತ್ತಿತರ ಮಾಹಿತಿ ಅಪ್​ಡೇಟ್ ಮಾಡಲು ಅವಕಾಶ ಇದೆ. ಆಧಾರ್ ಕೇಂದ್ರಕ್ಕೆ ಹೋಗಿ ನಿರ್ದಿಷ್ಟ ಮೊತ್ತದ ಶುಲ್ಕ ಪಾವತಿಸಿ ಈ ಕಾರ್ಯ ಮಾಡಬಹುದು. ಆನ್​ಲೈನ್​ನಲ್ಲಿ ಉಚಿತವಾಗಿ ಈ ಕೆಲಸ ಮಾಡಬಹುದು. ಈ ಅವಕಾಶ ಮಾರ್ಚ್ 14ರವರೆಗೆ ಮಾತ್ರ ಇದೆ. ಅದಾದ ಬಳಿಕ ಆನ್​ಲೈನ್​ನಲ್ಲೂ ಶುಲ್ಕ ತೆತ್ತೇ ಆಧಾರ್ ಅಪ್​ಡೇಟ್ ಮಾಡಬೇಕಾಗುತ್ತದೆ.

ಪೇಟಿಎಂ ಪೇಮೆಂಟ್ಸ್ ಬ್ಯಾಂಕ್ ಡೆಡ್​ಲೈನ್: ಮಾರ್ಚ್ 15ಕ್ಕೆ

ಪೇಟಿಎಂ ಪೇಮೆಂಟ್ಸ್ ಬ್ಯಾಂಕ್​ಗೆ ಆರ್​ಬಿಐ ವಿಧಿಸಿರುವ ನಿರ್ಬಂಧ ಮಾರ್ಚ್ 15ರ ಬಳಿಕ ಜಾರಿಗೆ ಬರಲಿದೆ. ಮೊದಲಿಗೆ ಫೆಬ್ರುವರಿ 29ಕ್ಕೆ ಡೆಡ್​ಲೈನ್ ನಿಗದಿ ಮಾಡಲಾಗಿತ್ತು. ಕಳೆದ ವಾರ, ಆರ್​ಬಿಐ ಈ ಗಡುವನ್ನು ಮಾರ್ಚ್ 15ಕ್ಕೆ ವಿಸ್ತರಿಸಿದೆ. ಮಾರ್ಚ್ 16ರಿಂದ ಪೇಟಿಎಂ ಪೇಮೆಂಟ್ಸ್ ಬ್ಯಾಂಕ್​ನ ಬಹುತೇಕ ವ್ಯವಹಾರ ನಿಂತುಹೋಗುತ್ತದೆ. ಯಾವುದೇ ಹೊಸ ಡೆಪಾಸಿಟ್ ಪಡೆಯುವಂತಿಲ್ಲ. ವ್ಯಾಲಟ್​ಗೆ ಹಣ ಸೇರಿಸುವಂತಿಲ್ಲ.

ಇದನ್ನೂ ಓದಿ: ಎಸ್​ಬಿಎಂನಲ್ಲಿ ಕೇವಲ 2,000 ರೂಗೆ ಎಫ್​ಡಿ ಇಡಿ; ಸ್ಟೆಪಪ್ ಕ್ರೆಡಿಟ್ ಕಾರ್ಡ್ ಪಡೆಯಿರಿ

ತೆರಿಗೆ ಉಳಿತಾಯ: ಮಾರ್ಚ್ 31ಕ್ಕೆ ಡೆಡ್​ಲೈನ್

ಕೆಲ ಹೂಡಿಕೆ ಅಥವಾ ಹಣಕಾಸು ಯೋಜನೆಗಳಿಗೆ ತೆರಿಗೆ ವಿನಾಯಿತಿ ಸಿಗುತ್ತದೆ. ನೀವು ಸಂಬಳದಾರರಾಗಿದ್ದರೆ ನಿಮ್ಮ ಆದಾಯಕ್ಕನುಗುಣವಾಗಿ ಸಂಬಳದ ಹಣಕ್ಕೆ ಟಿಡಿಎಸ್ ಕಡಿತ ಮಾಡಲಾಗುತ್ತದೆ. ನೀವು ತೆರಿಗೆ ಉಳಿಸುವಂತಹ ಸ್ಕೀಮ್​ಗಳಲ್ಲಿ ಹಣ ತೊಡಗಿಸಿಕೊಂಡಿದ್ದರೆ ಅದನ್ನು ತೋರಿಸಬೇಕು. ಅದಕ್ಕೆ ಮಾರ್ಚ್ 31 ಡೆಡ್​ಲೈನ್ ಇದೆ. ಇಲ್ಲವಾದರೆ ಇಡೀ ಸಂಬಳಕ್ಕೆ ಟಿಡಿಎಸ್ ಅನ್ವಯ ಆಗುತ್ತದೆ.

ಐಡಿಬಿಐ ಬ್ಯಾಂಕ್ ಸ್ಪೆಷಲ್ ಕಾಲಬಲ್ ಎಫ್​ಡಿ: ಮಾರ್ಚ್ 31ಕ್ಕೆ ಡೆಡ್​ಲೈನ್

ಐಡಿಬಿಐ ಬ್ಯಾಂಕ್ ಉತ್ಸವ್ ಹೆಸರಿನ ಕಾಲಬಲ್ ಎಫ್​ಡಿ ಸ್ಕೀಮ್ ಬಿಟ್ಟಿದೆ. ಇದಕ್ಕೆ ವಾರ್ಷಿಕವಾಗಿ ಶೇ. 7.55ರವರೆಗೂ ಬಡ್ಡಿ ನೀಡಲಾಗುತ್ತದೆ. ಈ ಉತ್ಸವ್ ವಿಶೇಷ ಕಾಲಬಲ್ ಎಫ್​ಡಿ ಪ್ಲಾನ್​ಗೆ ಮಾರ್ಚ್ 31 ಡೆಡ್​ಲೈನ್ ಇದೆ. ಇಲ್ಲಿ ಕಾಲಬಲ್ ಎಫ್​ಡಿ ಎಂದರೆ ಅವಧಿಗಿಂತ ಮುಂಚಿತವಾಗಿ ಠೇವಣಿ ಹಿಂಪಡೆಯಲು ಅವಕಾಶ ಇರುತ್ತದೆ.

ಎಸ್​ಬಿಐ ಅಮೃತ್ ಕಳಶ್ ಎಫ್​ಡಿ: ಮಾರ್ಚ್ 31ಕ್ಕೆ ಡೆಡ್​ಲೈನ್

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಹಲವು ವಿಶೇಷ ಪ್ಲಾನ್​ಗಳಲ್ಲಿ ಅಮೃತ್ ಕಳಶ್ ಎಫ್​ಡಿ ಸ್ಕೀಮ್ ಒಂದು. 400 ದಿನಗಳ ಅವಧಿಯ ಈ ಫಿಕ್ಸೆಡ್ ಡೆಪಾಸಿಟ್​ನಲ್ಲಿ ಶೇ. 7.10ರಷ್ಟು ವಾರ್ಷಿಕ ಬಡ್ಡಿ ಸಿಗುತ್ತದೆ. ಹಿರಿಯ ನಾಗರಿಕರಿಗೆ ಶೇ. 7.60 ಬಡ್ಡಿ ಬರುತ್ತದೆ.

ಇದನ್ನೂ ಓದಿ: ಜೀವನ ಭದ್ರತೆಗೆ ಎಷ್ಟು ಹಣ ಉಳಿಸಬೇಕು, ಎಷ್ಟು ಹೂಡಿಕೆ ಮಾಡಬೇಕು? ಇಲ್ಲಿದೆ ಟಿಪ್ಸ್

ಎಸ್​ಬಿಐ ವೀಕೇರ್ ಸೀನಿಯರ್ ಸಿಟಿಜನ್ ಎಫ್​ಡಿ: ಮಾರ್ಚ್ 31ಕ್ಕೆ ಡೆಡ್​ಲೈನ್

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ವೀಕೇರ್ ಫಿಕ್ಸೆಡ್ ಡೆಪಾಸಿಟ್ ಹಿರಿಯ ನಾಗರಿಕರಿಗೆಂದು ರೂಪಿಸಲಾಗಿದೆ. ಇದಕ್ಕೆ ವಾರ್ಷಿಕ ಬಡ್ಡಿದರ ಶೇ. 7.50ರಷ್ಟಿದೆ. ಮಾರ್ಚ್ 31ರವರೆಗೂ ಇದಕ್ಕೆ ಅವಕಾಶ ಇದೆ.

ಎಸ್​ಬಿಐ ಗೃಹಸಾಲಕ್ಕೆ ಬಡ್ಡಿದರದಲ್ಲಿ ರಿಯಾಯಿತಿ: ಮಾರ್ಚ್ 31ಕ್ಕೆ ಡೆಡ್​ಲೈನ್

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಗೃಹಸಾಲಗಳಿಗೆ ಡಿಸ್ಕೌಂಟ್ ನೀಡಲಾಗುತ್ತಿದೆ. ಗ್ರಾಹಕರ ಕ್ರೆಡಿಟ್ ಸ್ಕೋರ್​ಗೆ ಅನುಗುಣವಾಗಿ ಬಡ್ಡಿಯಲ್ಲಿ ರಿಯಾಯಿತಿ ಕೊಡಲಾಗುತ್ತದೆ. ಈ ಸೌಲಭ್ಯಕ್ಕೆ ಅರ್ಜಿ ಹಾಕಲು ಮಾರ್ಚ್ 31ರವರೆಗೆ ಮಾತ್ರ ಅವಕಾಶ ಇದೆ.

ಸಿಬಿಲ್ ಸ್ಕೋರ್ 750ಕ್ಕೂ ಮೇಲ್ಪಟ್ಟಿದ್ದರೆ ಗೃಹಸಾಲಕ್ಕೆ ಬಡ್ಡಿದರ ಶೇ. 9.15ರಷ್ಟು ಇದ್ದದ್ದು ಶೇ. 8.60ಕ್ಕೆ ಇಳಿಸಲಾಗುತ್ತದೆ. ಕ್ರೆಡಿಟ್ ಸ್ಕೋರ್ 700ರಿಂದ 749ರ ನಡುವೆ ಇದ್ದರೆ ಬಡ್ಡಿದರ ಶೇ. 9.35ರಿಂದ ಶೇ. 8.70ಕ್ಕೆ ಇಳಿಸಲಾಗುತ್ತದೆ.

ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ