Loan EMI Hike: ಪಿಎನ್ಬಿ, ಐಸಿಐಸಿಐ, ಬ್ಯಾಂಕ್ ಆಫ್ ಇಂಡಿಯಾ ಬಡ್ಡಿ ದರ ಹೆಚ್ಚಳ; ದುಬಾರಿಯಾಗಲಿದೆ ಇಎಂಐ
ಪಿಎನ್ಬಿ, ಐಸಿಐಸಿಐ, ಬ್ಯಾಂಕ್ ಆಫ್ ಇಂಡಿಯಾ ಪರಿಷ್ಕೃತ ಕನಿಷ್ಠ ಬಡ್ಡಿ ದರ ವಿವರ ಇಲ್ಲಿ ನೀಡಲಾಗಿದೆ. ಪರಿಷ್ಕೃತ ಬಡ್ಡಿ ದರ ಇಂದಿನಿಂದಲೇ (December 1) ಜಾರಿಗೆ ಬರಲಿದೆ.
ನವದೆಹಲಿ: ಸಾಲದ ಮೇಲಿನ ಕನಿಷ್ಠ ಬಡ್ಡಿ ದರವನ್ನು (MCLR) ಪಿಎನ್ಬಿ (PNB), ಐಸಿಐಸಿಐ ಬ್ಯಾಂಕ್ (ICICI Bank), ಬ್ಯಾಂಕ್ ಆಫ್ ಇಂಡಿಯಾ (Bank of India) ಹೆಚ್ಚಿಸಿವೆ. ಪರಿಷ್ಕೃತ ಬಡ್ಡಿ ದರ ಇಂದಿನಿಂದಲೇ (December 1) ಜಾರಿಗೆ ಬರಲಿದೆ ಎಂದು ಬ್ಯಾಂಕ್ಗಳು ತಿಳಿಸಿವೆ. ಪರಿಣಾಮವಾಗಿ ಗೃಹ, ವಾಹನ ಸೇರಿದಂತೆ ವಿವಿಧ ಸಾಲಗಳ ಇಎಂಐ ಕಂತಿನ ಮೊತ್ತ ಹೆಚ್ಚಾಗಲಿದೆ. ಹೆಚ್ಚುತ್ತಿರುವ ಹಣದುಬ್ಬರ (Inlfation) ತಡೆಯುವ ಸಲುವಾಗಿ ವಿಶ್ವದಾದ್ಯಂತ ಬ್ಯಾಂಕ್ಗಳು ಬಡ್ಡಿ ದರ ಹೆಚ್ಚಿಸುವ ಮೊರೆ ಹೋಗಿದ್ದು, ಭಾರತದಲ್ಲಿಯೂ ಇತ್ತೀಚೆಗಷ್ಟೇ ಎಸ್ಬಿಐ (SBI) ಸೇರಿದಂತೆ ಹಲವು ಬ್ಯಾಂಕ್ಗಳು ಸಾಲದ ಹಾಗೂ ವಿವಿಧ ಠೇವಣಿಗಳ ಮೇಲಿನ ಬಡ್ಡಿ ದರಗಳನ್ನು ಹೆಚ್ಚಿಸಿವೆ.
ಪಿಎನ್ಬಿ, ಐಸಿಐಸಿಐ, ಬ್ಯಾಂಕ್ ಆಫ್ ಇಂಡಿಯಾ ಪರಿಷ್ಕೃತ ಕನಿಷ್ಠ ಬಡ್ಡಿ ದರ ವಿವರ ಇಲ್ಲಿ ನೀಡಲಾಗಿದೆ.
ಇದನ್ನೂ ಓದಿ: FD Rates: ಎಫ್ಡಿ ಬಡ್ಡಿ ದರ ಹೆಚ್ಚಿಸಿದ ಕೋಟಕ್ ಮಹೀಂದ್ರಾ ಬ್ಯಾಂಕ್; ಇಲ್ಲಿದೆ ವಿವರ
ಪಂಜಾಬ್ ನ್ಯಾಷನಲ್ ಬ್ಯಾಂಕ್ ಬಡ್ಡಿ ದರ (PNB)
ಸರ್ಕಾರಿ ಸ್ವಾಮ್ಯದ ಪಂಜಾನ್ ನ್ಯಾಷನಲ್ ಬ್ಯಾಂಕ್ ಸಾಲದ ಮೇಲಿನ ಕನಿಷ್ಠ ಬಡ್ಡಿ ದರ ಅಥವಾ ಎಂಸಿಎಲ್ಆರ್ ಅನ್ನು 5 ಮೂಲಾಂಶ ಹೆಚ್ಚಿಸಿದೆ. ಇದರೊಂದಿಗೆ ಬ್ಯಾಂಕ್ನ ಒಂದು ವರ್ಷದ ಎಂಸಿಎಲ್ಆರ್ ಈಗ ಶೇಕಡಾ 8.10 ಆಗಿದೆ. ಈ ಹಿಂದೆ ಇದು ಶೇಕಡಾ 8.05 ಇತ್ತು. ಆರು ತಿಂಗಳ ಎಂಸಿಎಲ್ಆರ್ ಶೇಕಡಾ 7.75ರಿಂದ ಶೇಕಡಾ 7.80ಗೆ ತಲುಪಿದೆ.
ಐಸಿಐಸಿಐ ಬ್ಯಾಂಕ್ (ICICI Bank)
ಐಸಿಐಸಿಐ ಬ್ಯಾಂಕ್ ಎಂಸಿಎಲ್ಆರ್ 10 ಮೂಲಾಂಶದಷ್ಟು ಹೆಚ್ಚಳವಾಗಿದೆ. ಒಂದು ತಿಂಗಳವರೆಗಿನ ಎಂಸಿಎಲ್ಆರ್ ಶೇಕಡಾ 8.05ರಿಂದ 8.15ಕ್ಕೆ ಹೆಚ್ಚಳವಾಗಿದೆ. ಆರು ತಿಂಗಳು ಮತ್ತು 1 ವರ್ಷ ಅವಧಿಯ ಎಂಸಿಎಲ್ಆರ್ ಕ್ರಮವಾಗಿ ಶೇಕಡಾ 8.35 ಶೇಕಡಾ 8.40ಕ್ಕೆ ಹೆಚ್ಚಿಸಲಾಗಿದೆ. ಮೂರು ತಿಂಗಳ ಎಂಸಿಎಲ್ಆರ್ ಅನ್ನು ಶೇಕಡಾ 8.25ರಿಂದ 8.35ಕ್ಕೆ ಹೆಚ್ಚಿಸಲಾಗಿದೆ.
ಬ್ಯಾಂಕ್ ಆಫ್ ಇಂಡಿಯಾ (Bank of India)
ಬ್ಯಾಂಕ್ ಆಫ್ ಇಂಡಿಯಾ ಎಂಸಿಎಲ್ಆರ್ ಅನ್ನು 25 ಮೂಲಾಂಶ ಹೆಚ್ಚಿಸಿದೆ. ಒಂದು ವರ್ಷ ಅವಧಿಯ ಎಂಸಿಎಲ್ಆರ್ ಇದೀಗ ಶೇಕಡಾ 7.95ರಿಂದ 8.15ಕ್ಕೆ ಹೆಚ್ಚಳವಾಗಿದೆ. ಒಂದು ತಿಂಗಳ, ಮೂರು ತಿಂಗಳ ಮತ್ತು ಮೂರು ವರ್ಷಗಳ ಅವಧಿಯ ಎಂಸಿಎಲ್ಆರ್ ಅನ್ನು ಕ್ರಮವಾಗಿ ಶೇಕಡಾ 7.30, ಶೇಕಡಾ 7.65 ಹಾಗೂ ಶೇಕಡಾ 7.70ಕ್ಕೆ ಹೆಚ್ಚಿಸಲಾಗಿದೆ.
ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್ಬಿಐ) ಮೇ ನಂತರ ಈವರೆಗೆ 190 ಮೂಲಾಂಶದಷ್ಟು ರೆಪೊ ದರ ಹೆಚ್ಚಳ ಮಾಡಿದೆ. ಇದಕ್ಕನುಗುಣವಾಗಿ ಬ್ಯಾಂಕ್ಗಳು ಮತ್ತು ಹಣಕಾಸು ಸಂಸ್ಥೆಗಳು ಸಾಲ ಹಾಗೂ ಠೇವಣಿಗಳ ಮೇಲಿನ ಬಡ್ಡಿ ದರ ಪರಿಷ್ಕರಿಸುತ್ತವೆ.
ಇನ್ನಷ್ಟು ವಾಣಿಜ್ಯ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ
Published On - 3:05 pm, Thu, 1 December 22