Students and Money: ವಿದ್ಯಾರ್ಥಿಗಳು ಹಣ ಉಳಿಸುವ ಟ್ರಿಕ್; ಭವಿಷ್ಯಕ್ಕೆ ಬುನಾದಿ ಇದು; ತಪ್ಪದೇ ಓದಿ

|

Updated on: May 28, 2023 | 12:23 PM

Money Guide For Students: ಭವಿಷ್ಯದಲ್ಲಿ ಹಣ ಸಂಪಾದಿಸುವ ಮಕ್ಕಳಿಗೆ ಈಗಲೇ ಹಣದ ಮಹತ್ವ ಗೊತ್ತಿರುವುದು ಉತ್ತಮ. ಹಣಸಂಪಾದನೆ ಮಾಡದಿದ್ದರೂ ತಮಗೆ ಸಿಗುವ ಪಾಕೆಟ್ ಮನಿಯನ್ನು ಹೇಗೆ ವಿನಿಯೋಗಿಸಿಕೊಳ್ಳಬೇಕು ಎಂಬುದು ಮಕ್ಕಳಿಗೆ ಗೊತ್ತಿರಬೇಕು.

Students and Money: ವಿದ್ಯಾರ್ಥಿಗಳು ಹಣ ಉಳಿಸುವ ಟ್ರಿಕ್; ಭವಿಷ್ಯಕ್ಕೆ ಬುನಾದಿ ಇದು; ತಪ್ಪದೇ ಓದಿ
ವಿದ್ಯಾರ್ಥಿ
Follow us on

ಇಂದಿನ ಮಕ್ಕಳೇ ನಾಳೆಯ ಪ್ರಜೆಗಳು ಎಂಬ ಮಾತಿದೆ. ಇವತ್ತು ವಿದ್ಯಾರ್ಥಿಗಳಾದವರು ಏನು ಕಲಿಯುತ್ತಾರೋ ಅದು ಭವಿಷ್ಯಕ್ಕೆ ಬುನಾದಿಯಂತೆ. ಶಿಕ್ಷಣ ಹಂತದಿಂದಲೇ ಹಣಕಾಸು ವಿಚಾರದಲ್ಲಿ ಮಕ್ಕಳಲ್ಲಿ ತಿಳಿವಳಿಕೆ (Financial Awareness) ನೀಡುವುದು ಉತ್ತಮ ಎಂದು ಹಲವು ಆರ್ಥಿಕ ತಜ್ಞರು ಸಲಹೆ ನೀಡುತ್ತಾರೆ. ಚಿಕ್ಕಂದಿನಿಂದಲೇ ಮಕ್ಕಳಿಗೆ ಹಣ, ಸಂಪಾದನೆ, ಉಳಿತಾಯ, ಹೂಡಿಕೆ ಇತ್ಯಾದಿಗಳ ಮಹತ್ವದ ಅರಿವಾಗಬೇಕು. ಆಗ ಅನಿರೀಕ್ಷಿತ ಸಂದರ್ಭಗಳನ್ನು ಎದುರಿಸಲು ಮಕ್ಕಳು ಸಿದ್ಧವಾಗಲು ಸಾಧ್ಯವಾಗುತ್ತದೆ.

ಓದುವ ವಯಸ್ಸಿನಲ್ಲಿ ಮಕ್ಕಳಿಗೆ ಹಣದ ಹುಚ್ಚು ಹಿಡಿಸುವುದು ಸರಿ ಅಲ್ಲ ಎಂಬ ವಾದವೂ ಇದೆ. ಅದು ಒಂದು ಹಂತಕ್ಕೆ ಹೌದು. ಆದರೆ, ಓದು ಎಂಬುದು ಕೇವಲ ಜ್ಞಾನಕ್ಕಾಗಿ ಸೀಮಿತ ಎಂದು ಯಾರೂ ಧೈರ್ಯವಾಗಿ ಹೇಳಲು ಆಗುವುದಿಲ್ಲ. ಓದು ಎಂಬುದು ದುಡಿಮೆಯ ಮಾರ್ಗ ಕಂಡುಕೊಳ್ಳುವುದಕ್ಕೆ ಎಂಬುದು ಹೌದು. ಹೀಗಾಗಿ, ಓದಿನ ಹಿಂದೆ ಹಣ ಸಂಪಾದನೆಯ ಗುರಿ ಇದ್ದೇ ಇರುತ್ತದೆ. ಭವಿಷ್ಯದಲ್ಲಿ ಹಣ ಸಂಪಾದಿಸುವ ಮಕ್ಕಳಿಗೆ ಈಗಲೇ ಹಣದ ಮಹತ್ವ ಗೊತ್ತಿರುವುದು ಉತ್ತಮ. ಹಣಸಂಪಾದನೆ ಮಾಡದಿದ್ದರೂ ತಮಗೆ ಸಿಗುವ ಪಾಕೆಟ್ ಮನಿಯನ್ನು ಹೇಗೆ ವಿನಿಯೋಗಿಸಿಕೊಳ್ಳಬೇಕು ಎಂಬುದು ಮಕ್ಕಳಿಗೆ ಗೊತ್ತಿರಬೇಕು. ಸೀಮಿತ ಹಣವನ್ನು ಅತ್ಯುತ್ತಮವಾಗಿ ಉಪಯೋಗಿಸಿಕೊಳ್ಳುವುದನ್ನು ಒಂದು ಕಲಿತುಕೊಂಡಿತೆಂದರೆ ಅದರ ಭವಿಷ್ಯದ ದಿನಗಳು ಉಜ್ವಲಗೊಂಡಂತೆಯೇ.

ಇದನ್ನೂ ಓದಿEducation Loan: ಕೋರ್ಸ್ ಫೀಸ್ ಮೊತ್ತವಷ್ಟೇ ಸಾಲ ಸಿಗುತ್ತಾ? ಎಜುಕೇಶನ್ ಲೋನ್ ಪಡೆಯುವ ಮುನ್ನ ಈ ವಿಚಾರಗಳು ತಿಳಿದಿರಲಿ

ಮಕ್ಕಳು ಪಾಕೆಟ್ ಮನಿ ಹೇಗೆ ನಿಭಾಯಿಸಬಹುದು? ಇಲ್ಲಿದೆ ಟಿಪ್ಸ್

ಬಜೆಟ್ ಹಾಕಿಕೊಳ್ಳಿ: ಪೋಷಕರಿಂದ ಅಥವಾ ಇನ್ಯಾವುದಾದರೂ ಮೂಲದಿಂದ ನಿಯಮಿತವಾಗಿ ನಿರ್ದಿಷ್ಟ ಮೊತ್ತದ ಹಣ ಬರುತ್ತದೆ ಎಂದಾದರೆ, ಅಥವಾ ಒಂದು ತಿಂಗಳಿಗೆ ಇಂತಿಷ್ಟು ಹಣ ಮಾತ್ರವೇ ಇರುವುದು ಎಂದಾದರೆ ಆಗ ಬಜೆಟ್ ಹಾಕಿಕೊಳ್ಳುವುದು ಉತ್ತಮ. ಆದ್ಯತೆಯ ಖರ್ಚುಗಳ ಪಟ್ಟಿ ಮಾಡಿಕೊಳ್ಳಿ. ನೀವು ಮಾಡುವ ಪ್ರತಿಯೊಂದು ವೆಚ್ಚವನ್ನೂ ಲೆಕ್ಕ ಮಾಡಿಡಿ. ಇದರಿಂದ ಅನಗತ್ಯವಾಗಿ ಮಾಡುವ ಖರ್ಚು ತಗ್ಗುತ್ತದೆ.

ಗೆಳೆಯರ ಜೊತೆ ಮಾಡುವ ಖರ್ಚು ಸಮಾನವಾಗಿ ಹಂಚಿಕೊಳ್ಳಿ

ವಿದ್ಯಾರ್ಥಿ ದೆಸೆಯಲ್ಲಿ, ಸ್ನೇಹಿತರ ಬಳಗದಲ್ಲಿ ಗ್ರೂಪ್ ಆಗಿ ಹೋಟೆಲ್​ಗೆ ಹೋಗುವುದು, ಸಿನಿಮಾಕ್ಕೆ ಹೋಗುವುದು, ಪ್ರವಾಸಕ್ಕೆ ಹೋಗುವುದು ಸಹಜ. ಈ ಸಂದರ್ಭದಲ್ಲಿ ಎಲ್ಲರೂ ಮೊದಲೇ ಮಾತನಾಡಿಕೊಂಡು, ಎಲ್ಲಾ ಖರ್ಚನ್ನು ಎಲ್ಲರೂ ಸಮಾನವಾಗಿ ಹಂಚಿಕೊಳ್ಳುವ ನಿಯಮ ಹಾಕಿಕೊಳ್ಳಿ. ಇದರಿಂದ ಒಬ್ಬಿಬ್ಬರಿಗೆ ಅನಗತ್ಯ ಹೊರೆ ತಪ್ಪುತ್ತದೆ. ಈ ಹೊರೆ ನಿಮಗೂ ಬಂದು ಬೀಳಬಹುದು.

ಮನೆ ಊಟಕ್ಕೆ ಹೆಚ್ಚು ಆದ್ಯತೆ

ಹೋಟೆಲ್​ನಲ್ಲಿ ದಿನವೂ ಊಟ ಮಾಡಿದರೆ ಬಹಳ ಖರ್ಚಾಗುತ್ತದೆ. ತಿಂಗಳಿಗೆ 1ರಿಂದ 4 ಸಾವಿರ ರೂ ಆದರೂ ಖರ್ಚಾದೀತು. ಇದನ್ನು ತಪ್ಪಿಸಲು ಸಾಧ್ಯವಾದಷ್ಟೂ ಮನೆಯ ಆಹಾರವನ್ನೇ ಸೇವಿಸಿ. ಮಧ್ಯಾಹ್ನಕ್ಕೂ ಕ್ಯಾರಿಯರ್ ಕಟ್ಟಿಕೊಂಡು ಹೋಗಿ. ನೀವು ಪಿಜಿಯಲ್ಲಿದ್ದರೆ ಅಲ್ಲಿಯೂ ಊಟ ಲಭ್ಯ ಇರುತ್ತದೆ. ಅಥವಾ ನೀವು ಬಾಡಿಗೆ ಮನೆ ಮಾಡಿದ್ದರೆ ಅಡುಗೆ ವಿದ್ಯೆ ಕಲಿತುಕೊಳ್ಳುವುದು ಉತ್ತಮ. ಇದರಿಂದ ಹೋಟೆಲ್​ಗೆ ಅನಗತ್ಯವಾಗಿ ದುಡ್ಡು ಸುರಿಯುವುದು ತಪ್ಪುತ್ತದೆ.

ಇದನ್ನೂ ಓದಿVidya Lakshmi Scheme: ‘ವಿದ್ಯಾಲಕ್ಷ್ಮೀ’ ಯೋಜನೆ; ಸರ್ಕಾರದಿಂದ ವಿದ್ಯಾರ್ಥಿಗಳಿಗೆ ಶಿಕ್ಷಣ ಸಾಲ; ಇದಕ್ಕೆ ಬಡ್ಡಿ, ಅರ್ಹತೆ ಇತ್ಯಾದಿ ಬಗ್ಗೆ ಮಾಹಿತಿ

ಭವಿಷ್ಯಕ್ಕೆ ಹಣ ಎತ್ತಿಹಿಡಿ

ಇದು ಬಹಳ ಮುಖ್ಯ. ನೀವು ಉಳಿಸುವ ಪ್ರತಿಯೊಂದು ಹಣವೂ ಗಳಿಕೆಗೆ ಸಮ. ನಿಮಗೆ ಸೀಮಿತವಾಗಿ ಸಿಗುವ ಹಣದಲ್ಲೇ ಸಾಧ್ಯವಾದಷ್ಟೂ ಹಣವನ್ನು ಉಳಿಸಿ. ಕೆಲವರಿಗೆ ನೀವು ಜುಗ್ಗ ಎನಿಸಬಹುದು. ಆದರೆ, ನೀವು ಹಣಕಾಸು ಕಷ್ಟಕ್ಕೆ ಸಿಲುಕಿದಾಗ ಜುಗ್ಗ ಎಂದು ಹಂಗಿಸುವವರು ಸಹಾಯಕ್ಕೆ ಬರುವುದಿಲ್ಲ. ಸರಳ ಬದುಕು ನಿಮ್ಮದಾದರೆ ಉಳಿತಾಯ ಸಾಧ್ಯ. ತಿಂಗಳಿಗೆ ನೀವು ಉಳಿಸುವ ಹಣದ ಪ್ರಮಾಣವನ್ನು ಹೆಚ್ಚಿಸುತ್ತಾ ಹೋಗಿ.

ಹೂಡಿಕೆಗೆ ಯತ್ನಿಸಿ:

ನೀವು ಉಳಿಸಿದ ಹಣ ಬ್ಯಾಂಕ್ ಖಾತೆಯಲ್ಲೋ ಅಥವಾ ಕ್ಯಾಷ್ ರೂಪದಲ್ಲಿ ಮನೆಯಲ್ಲೋ ಇದ್ದರೆ ಬೆಳೆಯುವುದು ಕಷ್ಟ. ಉಳಿತಾಯದ ಹಣವನ್ನು ಬೆಳೆಸುವ ಮಾರ್ಗ ತಿಳಿಯಿರಿ. ವಿದ್ಯಾರ್ಥಿಗಳಾದವರು ಎಫ್​ಡಿಯಲ್ಲಿ ಇಟ್ಟು ಹಣ ಬೆಳೆಸಬಹುದು.

ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ