ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಹಲವು ಉಳಿತಾಯ ಯೋಜನೆಗಳಲ್ಲಿ ನ್ಯಾಷನಲ್ ಸೇವಿಂಗ್ಸ್ ಸರ್ಟಿಫಿಕೇಟ್ ಒಂದು. ಅಂಚೆ ಕಚೇರಿಯಲ್ಲಿ ಎನ್ಎಸ್ಸಿ ತೆರೆಯಬಹುದಾಗಿದ್ದು, ಇದು 5 ವರ್ಷದ ಅವಧಿಯ ಯೋಜನೆಯಾಗಿದೆ. ಫಿಕ್ಸೆಡ್ ಡೆಪಾಸಿಟ್ನಂತೆ ನ್ಯಾಷನಲ್ ಸೇವಿಂಗ್ಸ್ ಸರ್ಟಿಫಿಕೇಟ್ ಯೋಜನೆಯಲ್ಲಿ ಒಮ್ಮೆ ಮಾತ್ರ ಠೇವಣಿ ಇಡಬಹುದು. ಐದು ವರ್ಷದ ಬಳಿಕ ಇದು ಮೆಚ್ಯೂರ್ ಆಗುತ್ತದೆ. ರಾಷ್ಟ್ರೀಯ ಉಳಿತಾಯ ಪತ್ರ ಯೋಜನೆಯಲ್ಲಿ ನಿಮ್ಮ ಠೇವಣಿಗೆ ಶೇ. 7.7ರಷ್ಟು ಬಡ್ಡಿ ಸಿಗುತ್ತದೆ.
ಸರ್ಕಾರಿ ಉಳಿತಾಯ ಪ್ರಚಾರ ಕಾಯ್ದೆ ಅಡಿ ಸರ್ಕಾರದಿಂದಲೇ ನೇರವಾಗಿ ಈ ಸ್ಕೀಮ್ ನಡೆಸಲಾಗುತ್ತದಾದ್ದರಿಂದ ದುಡ್ಡು ಹೆಚ್ಚುಕಡಿಮೆ ಆಗಿಹೋದೀತೆಂದು ಭಯ ಪಡಬೇಕಿಲ್ಲ. ಈ ಸ್ಕೀಮ್ನಲ್ಲಿ ತೊಡಗಿಸುವ ಹೂಡಿಕೆಗೆ ಟ್ಯಾಕ್ಸ್ ಲಾಭ ಇರುತ್ತದೆ. ಐಟಿ ಕಾಯ್ದೆ ಸೆಕ್ಷನ್ 80ಸಿ ಅಡಿಯಲ್ಲಿ 1.5 ಲಕ್ಷ ರೂವರೆಗಿನ ಟ್ಯಾಕ್ಸ್ ಡಿಡಕ್ಷನ್ ಸೌಲಭ್ಯದ ವ್ಯಾಪ್ತಿಗೆ ಎನ್ಎಸ್ಸಿ ಬರುತ್ತದೆ.
ಇದನ್ನೂ ಓದಿ: High Risk: ಸೇವಿಂಗ್ಸ್ ಸ್ಕೀಮ್ಗೆ 10 ಲಕ್ಷಕ್ಕೂ ಹೆಚ್ಚು ಹಣ ಹೂಡಿಕೆ ಮಾಡುತ್ತೀರಾ? ಈ ಹೊಸ ನಿಯಮಗಳು ತಿಳಿದಿರಲಿ
1 ಲಕ್ಷ ರೂ: ನೀವು ಎನ್ಎಸ್ಸಿಯಲ್ಲಿ 1 ಲಕ್ಷ ರೂ ಡೆಪಾಸಿಟ್ ಇಟ್ಟರೆ 5 ವರ್ಷದ ಬಳಿಕ 1.44 ಲಕ್ಷ ರೂ ಹಣ ನಿಮಗೆ ಸೇರುತ್ತದೆ. ಈ 5 ವರ್ಷದಲ್ಲಿ 44,903 ರೂನಷ್ಟು ಮೊತ್ತದ ಬಡ್ಡಿ ಜಮೆಯಾಗುತ್ತದೆ.
3 ಲಕ್ಷ ರೂ: ಐದು ವರ್ಷದಲ್ಲಿ 4.34 ಲಕ್ಷ ರೂ ರಿಟರ್ನ್ ಸಿಗುತ್ತದೆ. ಒಟ್ಟು ಬಡ್ಡಿ ಹಣ 1.34 ಲಕ್ಷದಷ್ಟು ನಿಮ್ಮದಾಗುತ್ತದೆ.
5 ಲಕ್ಷ ರೂ: ಐದು ಲಕ್ಷ ರೂ ಹಣವನ್ನು ಎನ್ಎಸ್ಸಿಯಲ್ಲಿ ಹೂಡಿಕೆ ಮಾಡಿದರೆ ಐದು ವರ್ಷದ ಬಳಿಕ ಬಡ್ಡಿಯೂ ಸೇರಿ 7.24 ಲಕ್ಷ ರೂ ಹಣ ಸೇರುತ್ತದೆ. ಒಟ್ಟು ಬಡ್ಡಿ 2.24 ಲಕ್ಷ ರೂ ಸಿಗುತ್ತದೆ.
ಇದನ್ನೂ ಓದಿ: Students and Money: ವಿದ್ಯಾರ್ಥಿಗಳು ಹಣ ಉಳಿಸುವ ಟ್ರಿಕ್; ಭವಿಷ್ಯಕ್ಕೆ ಬುನಾದಿ ಇದು; ತಪ್ಪದೇ ಓದಿ
10 ಲಕ್ಷ ರೂ: ಐದು ವರ್ಷದಲ್ಲಿ ಬಡ್ಡಿ ಸೇರಿ 14.49 ಲಕ್ಷ ರೂ ರಿಟರ್ನ್ ಸಿಗುತ್ತದೆ.
50 ಲಕ್ಷ ರೂ: ಇಷ್ಟು ಮೊತ್ತದ ಹೂಡಿಕೆ ಮಾಡಿದರೆ ಐದು ವರ್ಷದಲ್ಲಿ 22.45 ಲಕ್ಷ ರೂ ಬಡ್ಡಿ ಸೇರಿ ಒಟ್ಟು 72.45 ಲಕ್ಷ ರೂ ನಿಮ್ಮ ಕೈಸೇರುತ್ತದೆ.
1 ಕೋಟಿ ರೂ: ನ್ಯಾಷನಲ್ ಸೇವಿಂಗ್ಸ್ ಸರ್ಟಿಫಿಕೇಟ್ ಸ್ಕೀಮ್ನಲ್ಲಿ ನೀವು 1ಕೋಟಿ ರೂನಷ್ಟು ಹೂಡಿಕೆ ಮಾಡಿದರೆ 5 ವರ್ಷಕ್ಕೆ ನಿಮ್ಮ ಸಂಪತ್ತು 1.44ಕೋಟಿ ರೂ ಆಗುತ್ತದೆ.
(ಗಮನಿಸಿ: ಇಲ್ಲಿ ನೀವು 10 ಲಕ್ಷ ರೂಗಿಂತ ಹೆಚ್ಚು ಮೊತ್ತದ ಹೂಡಿಕೆ ಮಾಡುವುದಾದರೆ ಅ ಹಣಕ್ಕೆ ಮೂಲ ಯಾವುದು ಎಂದು ದಾಖಲೆ ನೀಡಬೇಕಾಗಬಹುದು.)