
ನವದೆಹಲಿ, ಮೇ 22: ಹೂಡಿಕೆ ವಿಚಾರಕ್ಕೆ ಬಂದರೆ ಎಲ್ಲರೂ ಹುಮ್ಮಸ್ಸಿನಿಂದ ಹಣ ತೊಡಗಿಸುತ್ತಾರೆ. ಆದರೆ, ಹೂಡಿಕೆಯನ್ನು ಯಾವಾಗ ಮತ್ತು ಹೇಗೆ ಹಿಂಪಡೆಯಬೇಕು (Exiting an investment) ಎಂದು ಯಾರೂ ಯೋಚಿಸುವುದಿಲ್ಲ. ಯಾವುದಕ್ಕೆ ಹೂಡಿಕೆ ಮಾಡುತ್ತಿದ್ದೀರಿ, ಆ ಉದ್ದೇಶವೇ ನೆರವೇರದಂತಾಗುತ್ತದೆ ಎಂದು ಫಿನ್ಸೇಫ್ ಇಂಡಿಯಾದ (FinSafe India) ನಿರ್ದೇಶಕಿ ಮೃಣ್ ಅಗರ್ವಾಲ್ (Mrin Agarwal) ಹೇಳುತ್ತಾರೆ. ಮಾಧ್ಯಮವೊಂದರಲ್ಲಿ ಮಾತನಾಡುತ್ತಿದ್ದ ಈ ಹೂಡಿಕೆ ತಜ್ಞೆ, ಹೂಡಿಕೆ ಹಿಂಪಡೆಯುವ ನಿರ್ಧಾರವು ಹೂಡಿಕೆ ನಿರ್ಧಾರದಷ್ಟೇ ಮುಖ್ಯ ಎಂಬುದನ್ನು ವಿವರಿಸಿದ್ದಾರೆ.
‘ಹೆಚ್ಚಿನ ಜನರಿಗೆ ಹೂಡಿಕೆಗೆ ಎಕ್ಸಿಟ್ ಸ್ಟ್ರಾಟಿಜಿಯನ್ನೇ ಹೊಂದಿರುವುದಿಲ್ಲ. ಹೂಡಿಕೆಯನ್ನು ಹೇಗೆ ಯೋಜಿತವಾಗಿ ಮಾಡುತ್ತೀರೋ, ಅದರಿಂದ ನಿರ್ಗಮನವೂ ಯೋಜಿತವಾಗಿರಬೇಕು’ ಎಂಬುದು ಫಿನ್ಸೇವ್ ಇಂಡಿಯಾದ ನಿರ್ದೆಶಕಿಯ ಅನಿಸಿಕೆ.
ಇದನ್ನೂ ಓದಿ: ದೀರ್ಘಾವಧಿ ಹೂಡಿಕೆಗೆ ಈಗ ಕಾಲ ಸನ್ನಿಹಿತ: ಬಜಾಜ್ ಫಿನ್‌ಸರ್ವ್ ಎಎಂಸಿಯ ನಿಮೇಶ್ ಚಂದನ್ ಸಲಹೆ
ಈ ಮೇಲಿನ ಒಂದು ಕಾರಣ ಕಂಡು ಬಂದಾಗ ನಿರ್ದಿಷ್ಟ ಹೂಡಿಕೆಯಿಂದ ನಿರ್ಗಮಿಸುವ ಸಮಯ ಬಂತು ಎಂದು ಅರ್ಥ ಮಾಡಿಕೊಳ್ಳಬಹುದು ಎಂಬುದು ಮೃಣ್ ಅಗರ್ವಾಲ್ ಅವರ ಸಲಹೆ.
ಒಂದು ಮ್ಯೂಚುವಲ್ ಫಂಡ್ ಎಷ್ಟು ಉತ್ತಮವಾಗಿ ರಿಟರ್ನ್ ನೀಡುತ್ತದೆ ಎಂಬುದನ್ನು ತಿಳಿಯಬೇಕೆಂದರೆ ಅದರ ಕೆಟಗರಿಯ ರಿಟರ್ನ್ನೊಂದಿಗೆ ತುಲನೆ ಮಾಡಬೇಕಾಗುತ್ತದೆ. ಯಾವುದೇ ಫಂಡ್ ಆದರೂ ಒಂದು ನಿರ್ದಿಷ್ಟ ಕೆಟಗರಿ ಅಥವಾ ಬೆಂಚ್ಮಾರ್ಕ್ ಇಂಡೆಕ್ಸ್ಗೆ ಸೇರಿದ್ದಾಗಿರುತ್ತದೆ. ಉದಾಹರಣೆಗೆ, ನಿಫ್ಟಿ50, ಸೆನ್ಸೆಕ್ಸ್, ನಿಫ್ಟಿ ಬ್ಯಾಂಕ್, ನಿಫ್ಟಿ ಐಟಿ, ನಿಫ್ಟಿ ಡಿಫೆನ್ಸ್ ಇತ್ಯಾದಿ.
ವರ್ಷಕ್ಕೆ ಒಂದು ಬಾರಿ ನೀವು ನಿಮ್ಮ ಫಂಡ್ನ ರಿವ್ಯೂ ಮಾಡಬೇಕು. ಕೆಟಗರಿಯ ಸಾಧನೆ ಜೊತೆ ನಿಮ್ಮ ಫಂಡ್ ಸಾಧನೆಯನ್ನು ತುಲನೆ ಮಾಡಬೇಕು. ತೀರಾ ಹೆಚ್ಚಿನ ವ್ಯತ್ಯಾಸ ಕಂಡು ಬಂದರೆ ಆ ಫಂಡ್ನಿಂದ ನಿರ್ಗಮಿಸುವ ನಿರ್ಧಾರ ಮಾಡಬಹುದು ಎನ್ನುತ್ತಾರೆ ಮೃಣ್ ಅಗರ್ವಾಲ್. ಅಂದರೆ, ಒಟ್ಟಾರೆ ಮಾರುಕಟ್ಟೆ ಚೆನ್ನಾಗಿ ಓಡುತ್ತಿದ್ದು, ನಿಮ್ಮ ಫಂಡ್ ಮಾತ್ರ ಕುಸಿದಾಗ ಅದು ವಾರ್ನಿಂಗ್ ಬೆಲ್. ಹಾಗೆಯೇ, ನಿಮ್ಮ ಫಂಡ್ ಕೆಟಗರಿ ಚೆನ್ನಾಗಿದ್ದು, ನಿಮ್ಮ ಫಂಡ್ ಹಿಂದುಳಿದಿದ್ದರೆ ಅದೂ ಕೂಡ ವಾರ್ನಿಂಗ್ ಬೆಲ್.
ಇದನ್ನೂ ಓದಿ: ಮಾರುಕಟ್ಟೆಯನ್ನು ನಂಬಿ ಕೆಟ್ಟವರಿಲ್ಲವೋ…! ಇಲ್ಲಿವೆ ಹೂಡಿಕೆ ಮಾಡುವ ಸರಳ ತಂತ್ರಗಳು
ನಿಮ್ಮ ಹಣಕಾಸು ಗುರಿಗೆ ಒಂದು ವರ್ಷ ಇರುವಂತೆಯೇ ಫಂಡ್ನಿಂದ ನಿರ್ಗಮಿಸುವ ವಿಚಾರ ತಲೆಯಲ್ಲಿರಬೇಕು. ಉದಾಹರಣೆಗೆ, ನೀವು 2026ರಲ್ಲಿ ಮನೆ ಕಟ್ಟುವ ಉದ್ದೇಶದಿಂದ 10 ವರ್ಷಗಳಿಂದ ಹೂಡಿಕೆ ಮಾಡುತ್ತಿದ್ದೀರಿ ಎಂದಿಟ್ಟುಕೊಳ್ಳಿ. ನೀವು ಈಗಿನಿಂದಲೇ ಎಕ್ಸಿಟ್ ಆಲೋಚನೆ ಮಾಡುತ್ತಿರಬೇಕು. ಮಾರುಕಟ್ಟೆ ಅಲುಗಾಟ ಆಗಬಹುದು ಎಂದನಿಸಿದಾಗ ನೀವು ಹೂಡಿಕೆಯನ್ನು ಡೆಟ್ ಫಂಡ್ನಂತಹ ಸುರಕ್ಷಿತ ಸಾಧನಗಳತ್ತ ವರ್ಗಾಯಿಸಬೇಕು. ಇದು ಫಿನ್ಸೇಫ್ ಇಂಡಿಯಾ ಸಂಸ್ಥೆಯ ನಿರ್ದೇಶಕಿ ಕೊಡುವ ಸಲಹೆಯಾಗಿದೆ.
ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ