Money: ಕೈಯಲ್ಲಿ ಹಣ ನಿಲ್ಲೊಲ್ಲವಾ? ಹಣವಂತರಾಗಲು ಈ ಸಿಂಪಲ್ ಟ್ರಿಕ್ಸ್ ಉಪಯೋಗಿಸಿ
Know the secrets to become money master: ನೀವು ಹಣ ಮಾಡಬೇಕೆಂದರೆ ಹಣ ಗಳಿಕೆ, ಹಣ ಉಳಿಕೆ ಮತ್ತು ಹಣ ಹೂಡಿಕೆ ಈ ಮೂರು ಅಂಶಗಳು ಬಹಳ ಮುಖ್ಯ. ನೀವು ಹಣ ಸಂಪಾದಿಸದೇ ಹೋದರೆ ಏನೂ ಇಲ್ಲ. ಎಷ್ಟೇ ಸಂಪಾದಿಸಿದರೂ ಅದೆಲ್ಲವನ್ನೂ ವ್ಯಯಿಸಿದರೆ ಉಪಯೋಗ ಇಲ್ಲ. ನೀವು ಎಷ್ಟೇ ಹಣ ಉಳಿಸಿದರೂ ಅದನ್ನು ಹೂಡಿಕೆ ಮಾಡದೇ ಹೋದರೆ ಅದರ ಮೌಲ್ಯ ಉಳಿಯುವುದಿಲ್ಲ. ಇದು ತಿಳಿದಿರಲಿ.

ಹಣವಂತನಾಗುವುದು (becoming rich) ಹೇಗೆ ಎಂದು ಪ್ರತಿಯೊಬ್ಬನಿಗೂ ಯಾವತ್ತಾದರೂ ಅನಿಸಿಯೇ ಅನಿಸುತ್ತದೆ. ಕೆಲವರು ಹೆಚ್ಚು ಹಣ ಸಂಪಾದಿಸುತ್ತಾರೆ, ಕೆಲವರು ಕಡಿಮೆ ಹಣ ಹೊಂದಿರುತ್ತಾರೆ. ಸಮಾನ ಸಂಬಳ ಇದ್ದರೂ ವ್ಯಕ್ತಿಗಳಿಂದ ವ್ಯಕ್ತಿಗಳಿಗೆ ಹಣಬಲ ವ್ಯತ್ಯಾಸ ಆಗಬಹುದು. ಇದೆಲ್ಲವೂ ಅವರ ಜೀವನಶೈಲಿ, ರೂಢಿ ಇತ್ಯಾದಿ ಕಾರಣಗಳಿಂದ ಇರಬಹುದು. ಅದೇನೇ ಇರಲಿ, ನೀವು ಹಣವಂತರಾಗಲು ಕೆಲ ಪ್ರಮುಖ ನಿಯಮಗಳನ್ನು ತಿಳಿದಿರುವುದು ಅವಶ್ಯಕ. ಅದರಲ್ಲೂ ಗಳಿಕೆ (earning), ಉಳಿಸುವಿಕೆ (saving) ಮತ್ತು ಹೂಡಿಕೆ (investing), ಈ ಮೂರು ಅಂಶಗಳು ಬಹಳ ಮುಖ್ಯ.
ಹಣ ಸಂಪಾದನೆ ಅಗತ್ಯ
ನೀವು ಹಣವಂತರಾಗಬೇಕಾದರೆ, ಆದಾಯ ಕೊಡಬಲ್ಲ ಉದ್ಯೋಗ ಅಥವಾ ಬ್ಯುಸಿನೆಸ್ ಇರಬೇಕು. ಅದಿಲ್ಲದೇ ನೀವು ಹಣ ಕೂಡಿಡುವುದು ಆಗದ ಮಾತು. ನಿಮ್ಮ ಸಂಪಾದನೆಯು ಹಣವಂತರಾಗಲು ಮುಖ್ಯ ತಳಹದಿ. ಅದರ ಮೇಲೆ ನೀವು ಶ್ರೀಮಂತಿಕೆಯನ್ನು ಕಟ್ಟುತ್ತಾ ಹೋಗಬಹುದು.
ಇದನ್ನೂ ಓದಿ: ಎಲ್ಟಿವಿ ಏರಿಕೆಯಿಂದ ಹಿಡಿದು ಚಿನ್ನದ ಹರಾಜುವರೆಗೆ, ಆರ್ಬಿಐನ ಹೊಸ ಗೋಲ್ಡ್ ಲೋನ್ ನಿಯಮಗಳನ್ನು ತಿಳಿದಿರಿ
ಹಣ ಉಳಿತಾಯ
ನೀವು ಉಳಿಸುವ ಒಂದೊಂದು ಹಣವೂ ಅದನ್ನು ಗಳಿಸುವುದಕ್ಕೆ ಸಮ ಎಂದು ಜಾಣರು ಹೇಳುತ್ತಾರೆ. ಅದು ನಿಜ. ನಿಮ್ಮ ಜೀವನ ನಿರ್ವಹಣೆಗೆ ಮೂಲಭೂತವಾಗಿ ಎಷ್ಟು ಅವಶ್ಯಕತೆ ಇದೆಯೋ ಅಷ್ಟು ಮಾತ್ರವೇ ಖರ್ಚು ಮಾಡಿ. ನಿಮ್ಮ ಅನವಶ್ಯಕ ವೆಚ್ಚ ತಪ್ಪಿಸಿ. ಉಳಿದ ಹಣವನ್ನು ತಪ್ಪದೇ ಉಳಿಸಿ. ನಿಮಗೆ ಸಂಬಳ 20,000 ರೂ ಬರುತ್ತಿದ್ದರೆ ಮೊದಲಿಗೆ ಶೇ. 10ರಷ್ಟನ್ನಾದರೂ ಉಳಿಸಲು ಯತ್ನಿಸಿ. ನಿಮಗದು ಸುಲಭವಾದರೆ ನಂತರ ಹೆಚ್ಚಿನ ಮೊತ್ತ ಉಳಿಸಲು ಪ್ರಯತ್ನಿಸಬಹುದು.
ಹಣ ಹೂಡಿಕೆ ಮಾಡಿರಿ
ನೀವು ಹಣ ಸಂಪಾದನೆ ಮಾಡಿ, ಹಣ ಉಳಿಸಿ ಹಾಗೇ ಇಟ್ಟುಕೊಂಡರೆ ಹೆಚ್ಚಿನ ಪ್ರಯೋಜನವಾಗದು. ಆ ಉಳಿಸಿಟ್ಟ ಹಣ ಬೆಳೆಯಬೇಕು. ಹಾಗೆ ಆಗಬೇಕೆಂದರೆ ನೀವು ಹೂಡಿಕೆ ಮಾಡಬೇಕು. ಷೇರು, ಮ್ಯುಚುವಲ್ ಫಂಡ್, ಇಟಿಎಫ್, ಚಿನ್ನ, ರಿಯಲ್ ಎಸ್ಟೇಟ್, ಎಫ್ಡಿ ಹೀಗೆ ವಿವಿಧ ಮಾರ್ಗಗಳಿವೆ. ಅಲ್ಪಾವಧಿ ಅಗತ್ಯ, ದೀರ್ಘಾವಧಿ ಅಗತ್ಯ ಇತ್ಯಾದಿಗೆ ತಕ್ಕಂತೆ ನೀವು ಎಲ್ಲಿ ಹೂಡಿಕೆ ಮಾಡಬೇಕು ಎಂಬುದನ್ನು ನಿರ್ಧರಿಸಬಹುದು.
ಇದನ್ನೂ ಓದಿ: ದೇಶಭ್ರಷ್ಟ ಅನ್ನಿ ಒಪ್ತೀನಿ, ಆದ್ರೆ ಕಳ್ಳ ಅನ್ನೋಕೆ ನಾನೇನು ಕದ್ದಿದ್ದೀನಿ? ಹೊಟ್ಟೆಯೊಳಗಿನ ಸಂಕಟವೆಲ್ಲಾ ಬಿಚ್ಚಿಟ್ಟ ವಿಜಯ್ ಮಲ್ಯ
ಹೂಡಿಕೆಯ ಕಾಂಪೌಂಡಿಂಗ್ ಗುಣ ತಿಳಿದಿರಲಿ
ನಿಮ್ಮ ಹೂಡಿಕೆ ಹೆಚ್ಚು ಅವಧಿ ಇದ್ದಷ್ಟೂ ಅದು ದ್ವಿಗುಣಗೊಳ್ಳುವ ವೇಗ ಹೆಚ್ಚುತ್ತಲೇ ಹೋಗುತ್ತದೆ. ಉದಾಹರಣೆಗೆ, ನೀವು ಶೇ. 8ರಷ್ಟು ರಿಟರ್ನ್ ಕೊಡುವ ಹೂಡಿಕೆಯಲ್ಲಿ ತಿಂಗಳಿಗೆ 10,000 ರೂ ಹೂಡಿಕೆ ಮಾಡುತ್ತಾ ಹೋದರೆ 10 ವರ್ಷದಲ್ಲಿ 18.29 ಲಕ್ಷ ರೂ ಆಗುತ್ತದೆ. 20 ವರ್ಷ ಹಾಗೂ ಮುಂದುವರಿಸಿದರೆ ನಿಮ್ಮ ಹೂಡಿಕೆಯು 59.31 ಲಕ್ಷ ರೂಗೆ ಏರುತ್ತದೆ. 30 ವರ್ಷಕ್ಕೆ ವಿಸ್ತರಿಸಿದರೆ 1.5 ಕೋಟಿ ರೂ ಆಗುತ್ತದೆ. ವರ್ಷದಿಂದ ವರ್ಷಕ್ಕೆ ನಿಮ್ಮ ಹಣ ಹೇಗೆ ಬೆಳೆಯುತ್ತಾ ಹೋಗುತ್ತದೆ ನೀವೇ ನೋಡಿ.
ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ