ಮನಿ9 ಫೈನಾನ್ಷಿಯಲ್ ಫ್ರೀಡಂ ಸಮಿಟ್ 2025, ಕಾರ್ಯಕ್ರಮ ಲೈವ್ ವೀಕ್ಷಿಸಿ

Money9 Financial Freedom Summit 2025: ಮನಿ9 ಫೈನಾನ್ಷಿಯಲ್ ಫ್ರೀಡಂ ಸಮಿಟ್​ನ ಮೂರನೇ ಆವೃತ್ತಿ ಇವತ್ತು ಆಯೋಜನೆಯಾಗುತ್ತಿದೆ. ಮುಂಬೈನ ಸಂತಾಕ್ರೂಜ್​ನಲ್ಲಿನ ತಾಜ್ ಹೋಟೆಲ್​ನಲ್ಲಿ ಕಾರ್ಯಕ್ರಮ ನಡೆಯುತ್ತಿದ್ದು, ಅದರ ನೇರ ಪ್ರಸಾರವನ್ನು ಡಿಜಿಟಲ್ ಪ್ಲಾಟ್​ಫಾರ್ಮ್​​ಗಳಲ್ಲಿ ಕಾಣಬಹುದು. ಕಾರ್ಯಕ್ರಮದ ಪ್ರಮುಖ ದೃಶ್ಯ ತುಣುಕುಗಳನ್ನು ಟಿವಿ9 ಕನ್ನಡ ವೆಬ್​ಸೈಟ್​ನಲ್ಲೂ ನೋಡಬಹುದು.

ಮನಿ9 ಫೈನಾನ್ಷಿಯಲ್ ಫ್ರೀಡಂ ಸಮಿಟ್ 2025, ಕಾರ್ಯಕ್ರಮ ಲೈವ್ ವೀಕ್ಷಿಸಿ
ಮನಿ9 ಫೈನಾನ್ಷಿಯಲ್ ಫ್ರೀಡಂ ಸಮಿಟ್ 2025

Updated on: Mar 06, 2025 | 10:57 AM

ಮುಂಬೈ, ಮಾರ್ಚ್ 5: ಟಿವಿ9 ನೆಟ್ವರ್ಕ್​ಗೆ ಸೇರಿದ ಮನಿ9 ವತಿಯಿಂದ ಮೂರನೇ ಆವೃತ್ತಿಯ ಫೈನಾನ್ಷಿಯಲ್ ಫ್ರೀಡಂ ಸಮಿಟ್ ಇಂದು ನಡೆಯುತ್ತಿದೆ. ಮಧ್ಯಾಹ್ನ ಮೂರು ಗಂಟೆಗೆ ಇದರ ಪ್ರಸಾರ ಶುರುವಾಗುತ್ತಿದ್ದು ರಾತ್ರಿ 11 ಗಂಟೆಯವರೆಗೂ ವಿವಿಧ ಕಾರ್ಯಕ್ರಮಗಳಿವೆ. ಮನಿ9 ಫೈನಾನ್ಷಿಯಲ್ ಫ್ರೀಡಂ ಸಮಿಟ್ ಭಾರತದ ಮೊತ್ತಮೊದಲ ಪರ್ಸನಲ್ ಫೈನಾನ್ಸ್ ಸಮಾವೇಶ ಎನಿಸಿದೆ. ಹಿಂದಿನ ಎರಡು ವರ್ಷ ನಡೆದ ಸಮಿಟ್ ಯಶಸ್ವಿಯಾಗಿತ್ತು. ಈಗ ಮೂರನೇ ಆವೃತ್ತಿ ನಡೆಯುತ್ತಿದೆ. ಮುಂಬೈನ ಸಾಂತಾಕ್ರೂಜ್​ನ ತಾಜ್ ಹೋಟೆಲ್​ನಲ್ಲಿ ಈ ಕಾರ್ಯಕ್ರಮ ಆಯೋಜನೆಯಾಗಿದ್ದು, ಟಿವಿ9 ನೆಟ್ವರ್ಕ್​ನ ಎಲ್ಲಾ ಡಿಜಿಟಲ್ ಪ್ಲಾಟ್​ಫಾರ್ಮ್​​ಗಳಲ್ಲೂ ಈ ಕಾರ್ಯಕ್ರಮದ ಲೈವ್ ವೀಕ್ಷಿಸಬಹುದು.

ಈ ಕಾರ್ಯಕ್ರಮದ ಲೈವ್ ವೀಕ್ಷಣೆಗೆ ಈ ಕೆಳಗಿನ ಲಿಂಕ್ ಕ್ಲಿಕ್ ಮಾಡಿ:

ಮನಿ9 ಫೈನಾನ್ಷಿಯಲ್ ಫ್ರೀಡಂ ಸಮಿಟ್ ಕಾರ್ಯಕ್ರವ ವಿವರ….

ಈ ಶೃಂಗಸಭೆ ಮಧ್ಯಾಹ್ನ 3ಕ್ಕೆ ಆರಂಭವಾಗುತ್ತದೆ. ಟಿವಿ9 ನೆಟ್ವರ್ಕ್ ಎಂಡಿ ಬರುಣ್ ದಾಸ್ ಅವರಿಂದ ಉದ್ಘಾಟನಾ ಭಾಷಣ ಇರಲಿದೆ. ಇದಾದ ಬಳಿಕ ಮಹಾರಾಷ್ಟ್ರ ಸಿಎಂ ದೇವೇಂದ್ರ ಫಡ್ನವಿಸ್ ಜೊತೆ ಬರುಣ್ ದಾಸ್ ಸಂವಾದ ಕಾರ್ಯಕ್ರಮ ಇರುತ್ತದೆ.

ಮಧ್ಯಾಹ್ನ 4ಕ್ಕೆ: ಎಚ್​​ಡಿಎಫ್​​ಸಿಯ ಮಾಜಿ ವೈಸ್ ಪ್ರೆಸಿಡೆಂಟ್ ಕೇಕಿ ಮಿಸ್ತ್ರಿ ಜೊತೆ ಟಿವಿ9 ನೆಟ್ವರ್ಕ್ ಸಂಪಾದಕ ಆರ್ ಶ್ರೀಧರನ್ ಸಂವಾದ ನಡೆಸಲಿದ್ದಾರೆ.

ನಂತರ ರಾತ್ರಿ 8:40ರವರೆಗೂ ವಿವಿಧ ಸಂವಾದ ಮತ್ತು ಚರ್ಚಾ ಕಾರ್ಯಕ್ರಮಗಳು ನಡೆಯಲಿವೆ. ಆಮದು ಸುಂಕದ ಅಡೆತಡೆಗಳನ್ನು ದಾಟುವುದು ಹೇಗೆ, ಮಾರುಕಟ್ಟೆ ಪುಟಿದೇಳುತ್ತದಾ, ಭಾರತದ ಎಸ್​​ಐಪಿ ಮಂತ್ರ, ಮಾರುಕಟ್ಟೆ ಕುಸಿತದಲ್ಲೂ ವಿಶ್ವಾಸ ಇಟ್ಟುಕೊಳ್ಳುವುದು ಹೇಗೆ, ಸರ್ವರಿಗೂ ವಿಮೆ ಇವೇ ಮುಂತಾದ ವಿಚಾರಗಳ ಬಗ್ಗೆ ಚರ್ಚೆಗಳು ನಡೆಯಲಿವೆ.

ಎನ್​ಎಸ್​ಇ, ಎಂಎಂಎಫ್​ಐ, ಆದಿತ್ಯ ಬಿರ್ಲಾ ಸನ್ ಲೈಫ್ ಎಎಂಸಿ, ಡಿಎಸ್​​ಪಿ ಮ್ಯೂಚುವಲ್ ಫಂಡ್, ನಿರ್ಮಲ್ ಬಾಂಗ್ ಸೆಕ್ಯೂರಿಟೀಸ್, ಆನಂದ್ ರಾಠಿ ವೆಲ್ತ್ ಮ್ಯಾನೇಜ್ಮೆಂಟ್, ಬಂಧನ್ ಲೈಫ್, ಕೋಟಕ್ ಲೈಫ್ ಇನ್ಷೂರೆನ್ಸ್ ಇತ್ಯಾದಿ ವಿವಿಧ ಕಂಪನಿಗಳ ಸಿಇಒ, ಪ್ರೆಸಿಡೆಂಟ್, ಸಂಸ್ಥಾಪಕರು ಪಾಲ್ಗೊಳ್ಳಲಿದ್ದಾರೆ. ವಿಜಯ್ ಕೇದಿಯಾ ಅವರಂಥ ಅಗ್ರಗಣ್ಯ ಹೂಡಿಕೆದಾರರೂ ಕೂಡ ತಮ್ಮ ಜಾಣ ನುಡಿಗಳನ್ನು ಹಂಚಿಕೊಳ್ಳಲಿದ್ದಾರೆ.

ಮನಿ9 ಬಗ್ಗೆ

ಟಿವಿ9 ನೆಟ್ವರ್ಕ್​ನ ಭಾಗವಾದ ಮನಿ9 ಕಳೆದ ನಾಲ್ಕು ವರ್ಷಗಳಿಂದ ವೈಯಕ್ತಿಕ ಹಣಕಾಸು, ಷೇರು ಮಾರುಕಟ್ಟೆ, ಉದ್ಯಮಗಳ ಸುದ್ದಿ ಮತ್ತು ವಿಶ್ಲೇಷಣೆಗೆ ದೇಶದಲ್ಲಿ ಪ್ರಮುಖ ಪ್ಲಾಟ್​​ಫಾರ್ಮ್ ಎನಿಸಿದೆ. ದೇಶದ ಆರ್ಥಿಕತೆ, ಹಣಕಾಸು, ಮಾರುಕಟ್ಟೆ ವಿಚಾರಗಳ ಬಗ್ಗೆ ಜನರಿಗೆ ಅರಿವು ಮೂಡಿಸಲು ಕಳೆದ ಎರಡು ವರ್ಷಗಳಿಂದ ಫೈನಾನ್ಷಿಯಲ್ ಫ್ರೀಡಂ ಶೃಂಗಸಭೆ ಆಯೋಜಿಸಿಕೊಂಡು ಬರಲಾಗುತ್ತಿದೆ. ಈ ಬಾರಿಯದ್ದು ಮೂರನೇ ಆವೃತ್ತಿ. ಈ ಕಾರ್ಯಕ್ರಮದ ನೇರ ವೀಕ್ಷಣೆಗೆ ಈ ಲಿಂಕ್ ಕ್ಲಿಕ್ ಮಾಡಿ: www.youtube.com/live/DdlRFolG_tA

ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 2:42 pm, Wed, 5 March 25

Vijaya Sarathy SN

ಹುಟ್ಟೂರು ಹಾಸನ ಜಿಲ್ಲೆಯ ಶ್ರವಣಬೆಳಗೊಳ ಸಮೀಪದ ಒಂದು ಪುಟ್ಟ ಹಳ್ಳಿ. ಬೆಳದದ್ದು ಬೆಂಗಳೂರು ನಗರದಲ್ಲಿ. ಹಲವು ವರ್ಷಗಳಿಂದ ಪತ್ರಿಕಾ ರಂಗದಲ್ಲಿ ನೆಲೆ. ಬರವಣಿಗೆಯ ಆಸಕ್ತಿ ಮತ್ತು ಪರಿಣಿತಿಯ ಕ್ಷೇತ್ರಗಳು ಆರ್ಥಿಕತೆ, ಹಣಕಾಸು, ಅಂತರರಾಷ್ಟ್ರೀಯ ವಿದ್ಯಮಾನ, ಜನಕ್ರಾಂತಿ, ರಾಷ್ಟ್ರೀಯತೆ, ಸಂಸ್ಕೃತಿ, ಮಾನವ ಸಂಬಂಧ, ಕ್ರೀಡೆ ಮೊದಲಾದವು ಇವೆ. ಓದುಗರಿಗೆ ಸುಲಭವಾಗಿ ಅರ್ಥವಾಗುವಂತೆ ಸಾಧ್ಯವಾದಷ್ಟೂ ಸ್ಫುಟವಾಗಿ, ಸರಳವಾಗಿ ಬರೆಯುವ ಇಚ್ಛೆ.

Read More
Follow Us