ಮುಂಬೈ, ಮಾರ್ಚ್ 5: ಭಾರತದ ಮೊದಲ ಪರ್ಸನಲ್ ಫೈನಾನ್ಸ್ ಸಮಾವೇಶ ಎನಿಸಿದ ಮನಿ9 ಫೈನಾನ್ಷಿಯಲ್ ಫ್ರೀಡಂ ಸಮಿಟ್ನ ಮೂರನೇ ಆವೃತ್ತಿ ಆಯೋಜನೆಯಾಗುತ್ತಿದೆ. ಮುಂಬೈ ಸಾಂತಾಕ್ರೂಜ್ನಲ್ಲಿನ ಹೋಟೆಲ್ ತಾಜ್ನಲ್ಲಿ ಬುಧವಾರ ನಡೆಯುತತಿದೆ. ಟಿವಿ9 ನೆಟ್ವರ್ಕ್ ಆಯೋಜಿಸಿರುವ ಈ ಸಮಾವೇಶದಲ್ಲಿ ಹಣಕಾಸು ಕ್ಷೇತ್ರದ ದಿಗ್ಗಜರು ಪಾಲ್ಗೊಳ್ಳುತ್ತಿದ್ದಾರೆ. ಷೇರು ಮಾರುಕಟ್ಟೆಯ ಅಸ್ಥಿರ ವರ್ತನೆಯಿಂದ ಹಿಡಿದು ಆರ್ಥಿಕ ಬೆಳವಣಿಗೆಗೆ ಸರ್ಕಾರ ಯಾವ ರೀತಿಯ ಕಾರ್ಯತಂತ್ರ ರೂಪಿಸಿದೆ ಇತ್ಯಾದಿ ವಿಚಾರಗಳ ಕುರಿತು ಈ ಶೃಂಗಸಭೆಯಲ್ಲಿ ಚರ್ಚೆಗಳು, ವಿಚಾರ ವಿನಿಮಯಗಳು ನಡೆಯಲಿವೆ.
ಈ ಶೃಂಗಸಭೆ ಮಧ್ಯಾಹ್ನ 3:30ಕ್ಕೆ ಆರಂಭವಾಗುತ್ತದೆ. ಟಿವಿ9 ನೆಟ್ವರ್ಕ್ ಎಂಡಿ ಬರುಣ್ ದಾಸ್ ಅವರಿಂದ ಉದ್ಘಾಟನಾ ಭಾಷಣ ಇರಲಿದೆ. ಇದಾದ ಬಳಿಕ ಮಹಾರಾಷ್ಟ್ರ ಸಿಎಂ ದೇವೇಂದ್ರ ಫಡ್ನವಿಸ್ ಜೊತೆ ಬರುಣ್ ದಾಸ್ ಸಂವಾದ ಕಾರ್ಯಕ್ರಮ ಇರುತ್ತದೆ.
ಮಧ್ಯಾಹ್ನ 4ಕ್ಕೆ: ಎಚ್ಡಿಎಫ್ಸಿಯ ಮಾಜಿ ವೈಸ್ ಪ್ರೆಸಿಡೆಂಟ್ ಕೇಕಿ ಮಿಸ್ತ್ರಿ ಜೊತೆ ಟಿವಿ9 ನೆಟ್ವರ್ಕ್ ಸಂಪಾದಕ ಆರ್ ಶ್ರೀಧರನ್ ಸಂವಾದ ನಡೆಸಲಿದ್ದಾರೆ.
ನಂತರ ರಾತ್ರಿ 8:40ರವರೆಗೂ ವಿವಿಧ ಸಂವಾದ ಮತ್ತು ಚರ್ಚಾ ಕಾರ್ಯಕ್ರಮಗಳು ನಡೆಯಲಿವೆ. ಆಮದು ಸುಂಕದ ಅಡೆತಡೆಗಳನ್ನು ದಾಟುವುದು ಹೇಗೆ, ಮಾರುಕಟ್ಟೆ ಪುಟಿದೇಳುತ್ತದಾ, ಭಾರತದ ಎಸ್ಐಪಿ ಮಂತ್ರ, ಮಾರುಕಟ್ಟೆ ಕುಸಿತದಲ್ಲೂ ವಿಶ್ವಾಸ ಇಟ್ಟುಕೊಳ್ಳುವುದು ಹೇಗೆ, ಸರ್ವರಿಗೂ ವಿಮೆ ಇವೇ ಮುಂತಾದ ವಿಚಾರಗಳ ಬಗ್ಗೆ ಚರ್ಚೆಗಳು ನಡೆಯಲಿವೆ.
ಎನ್ಎಸ್ಇ, ಎಂಎಂಎಫ್ಐ, ಆದಿತ್ಯ ಬಿರ್ಲಾ ಸನ್ ಲೈಫ್ ಎಎಂಸಿ, ಡಿಎಸ್ಪಿ ಮ್ಯೂಚುವಲ್ ಫಂಡ್, ನಿರ್ಮಲ್ ಬಾಂಗ್ ಸೆಕ್ಯೂರಿಟೀಸ್, ಆನಂದ್ ರಾಠಿ ವೆಲ್ತ್ ಮ್ಯಾನೇಜ್ಮೆಂಟ್, ಬಂಧನ್ ಲೈಫ್, ಕೋಟಕ್ ಲೈಫ್ ಇನ್ಷೂರೆನ್ಸ್ ಇತ್ಯಾದಿ ವಿವಿಧ ಕಂಪನಿಗಳ ಸಿಇಒ, ಪ್ರೆಸಿಡೆಂಟ್, ಸಂಸ್ಥಾಪಕರು ಪಾಲ್ಗೊಳ್ಳಲಿದ್ದಾರೆ. ವಿಜಯ್ ಕೇದಿಯಾ ಅವರಂಥ ಅಗ್ರಗಣ್ಯ ಹೂಡಿಕೆದಾರರೂ ಕೂಡ ತಮ್ಮ ಜಾಣ ನುಡಿಗಳನ್ನು ಹಂಚಿಕೊಳ್ಳಲಿದ್ದಾರೆ.
ಟಿವಿ9 ನೆಟ್ವರ್ಕ್ನ ಭಾಗವಾದ ಮನಿ9 ಕಳೆದ ನಾಲ್ಕು ವರ್ಷಗಳಿಂದ ವೈಯಕ್ತಿಕ ಹಣಕಾಸು, ಷೇರು ಮಾರುಕಟ್ಟೆ, ಉದ್ಯಮಗಳ ಸುದ್ದಿ ಮತ್ತು ವಿಶ್ಲೇಷಣೆಗೆ ದೇಶದಲ್ಲಿ ಪ್ರಮುಖ ಪ್ಲಾಟ್ಫಾರ್ಮ್ ಎನಿಸಿದೆ. ದೇಶದ ಆರ್ಥಿಕತೆ, ಹಣಕಾಸು, ಮಾರುಕಟ್ಟೆ ವಿಚಾರಗಳ ಬಗ್ಗೆ ಜನರಿಗೆ ಅರಿವು ಮೂಡಿಸಲು ಕಳೆದ ಎರಡು ವರ್ಷಗಳಿಂದ ಫೈನಾನ್ಷಿಯಲ್ ಫ್ರೀಡಂ ಶೃಂಗಸಭೆ ಆಯೋಜಿಸಿಕೊಂಡು ಬರಲಾಗುತ್ತಿದೆ. ಈ ಬಾರಿಯದ್ದು ಮೂರನೇ ಆವೃತ್ತಿ. ಈ ಕಾರ್ಯಕ್ರಮದ ನೇರ ವೀಕ್ಷಣೆಗೆ ಈ ಲಿಂಕ್ ಕ್ಲಿಕ್ ಮಾಡಿ: www.youtube.com/live/DdlRFolG_tA
ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
Published On - 5:30 am, Wed, 5 March 25