ಮೋದಿಯ ಶೇ. 95ರಷ್ಟು ವೈಯಕ್ತಿಕ ಸಂಪತ್ತು ಎಫ್​ಡಿಗಳಲ್ಲಿ; ಫಿಕ್ಸೆಡ್ ಡೆಪಾಸಿಟ್​ನ ಲಾಭಗಳೇನು, ತಿಳಿದಿರಿ

|

Updated on: May 16, 2024 | 4:50 PM

fixed deposit benefits: ಪ್ರಧಾನಿ ನರೇಂದ್ರ ಮೋದಿ ಅವರ ಶೇ. 95ರಷ್ಟು ಹೂಡಿಕೆಗಳು ಎಫ್​ಡಿಯಲ್ಲಿವೆ. ಅವರ ಬಹುಭಾಗ ಆಸ್ತಿ ಫಿಕ್ಸೆಡ್ ಡೆಪಾಸಿಟ್​ನಲ್ಲಿ ಅಡಕವಾಗಿದೆ. ಸುರಕ್ಷಿತ ಹೂಡಿಕೆ ಎಂದು ಪರಿಗಣಿಸಲಾಗಿರುವ ನಿಶ್ಚಿತ ಠೇವಣಿಗಳು ಉತ್ತಮ ಆದಾಯ ಕೂಡ ತಂದುಕೊಡುತ್ತವೆ. ಭಾರತದಲ್ಲಿ ವಿವಿಧ ಬ್ಯಾಂಕುಗಳಲ್ಲಿ ಎಫ್​ಡಿಗಳಲ್ಲಿ ಇರಿಸಲಾಗಿರುವ ಹಣ ಬರೋಬ್ಬರಿ 176 ಲಕ್ಷ ಕೋಟಿ ರೂ. ಹೀಗಾಗಿ, ಸಾಮಾನ್ಯ ಜನರಿಗೆ ಈಗಲೂ ಕೂಡ ಎಫ್​ಡಿಯೇ ಮುಖ್ಯ ಹೂಡಿಕೆ ಆಯ್ಕೆ ಆಗಿ ಮುಂದುವರಿದಿದೆ.

ಮೋದಿಯ ಶೇ. 95ರಷ್ಟು ವೈಯಕ್ತಿಕ ಸಂಪತ್ತು ಎಫ್​ಡಿಗಳಲ್ಲಿ; ಫಿಕ್ಸೆಡ್ ಡೆಪಾಸಿಟ್​ನ ಲಾಭಗಳೇನು, ತಿಳಿದಿರಿ
ನರೇಂದ್ರ ಮೋದಿ
Follow us on

ಕೆಲ ದಿನಗಳ ಹಿಂದೆ ಪ್ರಧಾನಿ ನರೇಂದ್ರ ಮೋದಿ ವಾರಾಣಸಿ ಕ್ಷೇತ್ರಕ್ಕೆ ಹೋಗಿ ನಾಮಪತ್ರ ಸಲ್ಲಿಸಿ ಬಂದಿದ್ದಾರೆ. ಈ ವೇಳೆ ಅವರು ಚುನಾವಣಾ ಆಯೋಗಕ್ಕೆ ಸಲ್ಲಿಸಿದ ಅಫಿವಿಟ್​ನಲ್ಲಿ ಸುಮಾರು ಮೂರು ಕೋಟಿ ರೂನಷ್ಟು ವೈಯಕ್ತಿಕ ಆಸ್ತಿಗಳನ್ನು ಘೋಷಿಸಿದ್ದಾರೆ. ಎರಡು ದಶಕಗಳ ಕಾಲ ಸಿಎಂ ಮತ್ತು ಪಿಎಂ ಕುರ್ಚಿಯಲ್ಲಿ ಸತತವಾಗಿ ಇರುವ ಪ್ರಧಾನಿಗಳು ಹೊಂದಿರುವ ಆಸ್ತಿ ಇಷ್ಟೆಯಾ ಎಂದನಿಸಬಹುದು. ಇನ್ನೂ ಅಚ್ಚರಿ ಎಂದರೆ ಮೋದಿ ಘೋಷಿಸಿಕೊಂಡಿರುವ ಆಸ್ತಿಯಲ್ಲಿ ಶೇ. 95ರಷ್ಟು ಹಣ ಫಿಕ್ಸೆಡ್ ಡೆಪಾಸಿಟ್​ನಲ್ಲಿ ಇದೆ. ಪ್ರಧಾನಿಗಳು ಷೇರುಗಳಲ್ಲಿ ಹೂಡಿಕೆಯನ್ನೇ ಮಾಡಿಲ್ಲ. ಅಫಿಡವಿಟ್ ಪ್ರಕಾರ ಮೋದಿ ಅವರು ಎಫ್​ಡಿಗಳಲ್ಲಿ (Fixed Deposits) ಇರಿಸಿರುವ ಹಣ 2.86 ಕೋಟಿ ರೂನಷ್ಟಿದೆ.

ಫಿಕ್ಸೆಡ್ ಡೆಪಾಸಿಟ್ ಯಾಕೆ ಜನಪ್ರಿಯ?

ಷೇರು ಮಾರುಕಟ್ಟೆ ಅಚ್ಚರಿ ರೀತಿಯಲ್ಲಿ ಬೆಳೆಯುತ್ತಿದ್ದರೂ ಜನಸಾಮಾನ್ಯರಿಗೆ ಈಗಲೂ ಫೇವರಿಟ್ ಇನ್ವೆಸ್ಟ್​ಮೆಂಟ್ ಮಾರ್ಗ ಎಂದರೆ ಅದು ನಿಶ್ಚಿತ ಠೇವಣಿಯೇ. ಷೇರು ಮಾರುಕಟ್ಟೆ ಹೇಗೆ ಬೇಕಾದರೂ ವ್ಯತ್ಯಾಸವಾಗಬಹುದು. ಆದರೆ, ನಿಶ್ಚಿತ ಠೇವಣಿ ಅಕ್ಷರಶಃ ನಿಶ್ಚಿತವಾದ ಆದಾಯ ಸೃಷ್ಟಿಸುತ್ತದೆ.

ಇಂತಿಷ್ಟು ರಿಟರ್ನ್ ಬರುತ್ತದೆ ಎಂಬುದು ಪೂರ್ವದಲ್ಲೇ ನಿಶ್ಚಿತವಾಗಿರುವುದರಿಂದ ಎಫ್​ಡಿ ಹೂಡಿಕೆದಾರರು ನಿಶ್ಚಿಂತೆಯಿಂದ ಇರಬಹುದು.

ಇದನ್ನೂ ಓದಿ: ಬರೋಬ್ಬರಿ 75 ಮೂಲಾಂಕಗಳಷ್ಟು ಎಫ್​ಡಿ ದರ ಹೆಚ್ಚಿಸಿದ ಎಸ್​ಬಿಐ; ಇಲ್ಲಿದೆ ಠೇವಣಿ ದರಗಳ ಪಟ್ಟಿ

ಎಫ್​ಡಿಯಿಂದ ಲಾಭಗಳೇನು?

  • ನಿಶ್ಚಿತವಾದ ಬಡ್ಡಿ ಸಿಗುತ್ತದೆ
  • ಎಫ್​ಡಿ ತೆರೆಯುವುದು ಮತ್ತು ಮುಚ್ಚುವುದು ಬಹಳ ಸುಲಭ
  • ಹಿರಿಯ ನಾಗರಿಕರಿಗೆ ಹೆಚ್ಚಿನ ಬಡ್ಡಿ
  • ಹೂಡಿಕೆಯಲ್ಲಿ ವೈವಿಧ್ಯತೆ ತರಲು ಸಹಕಾರಿ

ಫಿಕ್ಸೆಡ್ ಡೆಪಾಸಿಟ್ ತೆರೆಯುವುದು ಹೇಗೆ?

ಮುಂಚೆಯಾದರೆ ಬ್ಯಾಂಕ್ ಕಚೇರಿಗೆ ಹೋಗಿ ಫಿಕ್ಸೆಡ್ ಡೆಪಾಸಿಟ್ ತೆರೆಯಬೇಕಿತ್ತು. ಈಗ ನೆಟ್ ಬ್ಯಾಂಕಿಂಗ್​ಗೆ ಲಾಗಿನ್ ಆದರೆ ನಿಮಿಷ ಮಾತ್ರದಲ್ಲಿ ನಿಶ್ಚಿತ ಠೇವಣಿ ಪ್ಲಾನ್​ಗಳನ್ನು ಆರಂಭಿಸಬಹುದು. ನೀವೇ ನಿಮಗೆ ಬೇಕಾದ ಅವಧಿಗೆ ಬೇಕಷ್ಟು ಹಣವನ್ನು ಠೇವಣಿಯಾಗಿ ಇಡಬಹುದು.

ಇದನ್ನೂ ಓದಿ: ಗೋಲ್ಡ್ ಇಟಿಎಫ್​ಗಳಿಂದ ವರ್ಷದಲ್ಲಿ ಶೇ. 20ರಷ್ಟು ರಿಟರ್ನ್; ಗೋಲ್ಡ್ ಬಾಂಡ್​ಗೂ ಇದಕ್ಕೂ ಏನು ವ್ಯತ್ಯಾಸ

ಫಿಕ್ಸೆಡ್ ಡೆಪಾಸಿಟ್ ಅನ್ನು ಮುಚ್ಚುವುದಿದ್ದರೂ ಆನ್​ಲೈನ್​ನಲ್ಲಿಯೇ ಅದು ಸಾಧ್ಯ. ಪೋಸ್ಟ್ ಆಫೀಸ್​ನಲ್ಲಿ ಎಫ್​ಡಿಗಳನ್ನು ಆರಂಭಿಸಬಹುದು. ತುಸು ಹೆಚ್ಚು ರಿಸ್ಕ್ ಇರುವ ಸಹಕಾರಿ ಬ್ಯಾಂಕುಗಳಲ್ಲಿ ಎಫ್​ಡಿ ದರ ಹೆಚ್ಚಿರುತ್ತದೆ. ಕೆಲ ಕೋ ಆಪರೇಟಿವ್ ಬ್ಯಾಂಕುಗಳಲ್ಲಿ ಶೇ. 9ರ ಆಸುಪಾಸಿನಲ್ಲಿ ಬಡ್ಡಿ ನೀಡಲಾಗುತ್ತದೆ.

ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ