ನ್ಯಾಷನಲ್ ಪೆನ್ಷನ್ ಸ್ಕೀಮ್ ಮೂಲಕ ಲಕ್ಷ ರೂ ಪಿಂಚಣಿ ಸೃಷ್ಟಿಸುವುದು ಹೇಗೆ? ಇಲ್ಲಿದೆ ಡೀಟೇಲ್ಸ್

|

Updated on: Oct 13, 2024 | 6:14 PM

National Pension System calculation: ನ್ಯಾಷನಲ್ ಪೆನ್ಷನ್ ಸಿಸ್ಟಂ ಅನ್ನು ರಿಟೈರ್ಮೆಂಟ್​ಗೆ ಅನುಕೂಲವಾಗಲೆಂದು ರೂಪಿಸಲಾಗಿದೆ. ಇದರಲ್ಲಿರುವ ಫಂಡ್ ಅನ್ನು ಷೇರು ಮತ್ತು ಬಾಂಡ್ ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಲಾಗುತ್ತದೆ. ದೀರ್ಘಾವಧಿಯಲ್ಲಿ ವರ್ಷಕ್ಕೆ ಶೇ. 10ರಿಂದ 12ರಷ್ಟು ದರದಲ್ಲಿ ಬೆಳೆಯಲು ನಿರೀಕ್ಷಿಸಬಹುದು. ರಿಟೈರ್ ಆದಾಗ ಮಾಸಿಕ ಒಂದು ಲಕ್ಷ ರೂ ಪಿಂಚಣಿ ಬರುವಂತೆ ಮಾಡಲು ಎಷ್ಟು ಹೂಡಿಕೆ ಬೇಕು ಎನ್ನುವ ಲೆಕ್ಕಾಚಾರ ಇಲ್ಲಿದೆ...

ನ್ಯಾಷನಲ್ ಪೆನ್ಷನ್ ಸ್ಕೀಮ್ ಮೂಲಕ ಲಕ್ಷ ರೂ ಪಿಂಚಣಿ ಸೃಷ್ಟಿಸುವುದು ಹೇಗೆ? ಇಲ್ಲಿದೆ ಡೀಟೇಲ್ಸ್
ಹಣ
Follow us on

ಭವಿಷ್ಯದಲ್ಲಿ ನಿವೃತ್ತಿಗೆಂದು ಇರುವ ಒಂದು ಪ್ರಮುಖ ಯೋಜನೆ ನ್ಯಾಷನಲ್ ಪೆನ್ಷನ್ ಸ್ಕೀಮ್. ಇದು ರಿಟೈರ್ಮೆಂಟ್ ಪ್ಲಾನ್ ಜೊತೆಗೆ ಸೇವಿಂಗ್ಸ್ ಪ್ಲಾನ್ ಕೂಡ ಹೌದು. ನೀವು ನಿವೃತ್ತರಾದ ಬಳಿಕ ನಿಮಗೆ ಲಂಪ್ಸಮ್ ಹಣ ಸಿಗುವುದರ ಜೊತೆಗೆ ಮಾಸಿಕ ಪಿಂಚಣಿ ಸೌಲಭ್ಯವೂ ದೊರೆಯುತ್ತದೆ. ಇನ್ನೂ ಚಿಕ್ಕ ವಯಸ್ಸಿದ್ದಾಗಲೇ ಭವಿಷ್ಯಕ್ಕೆ ಪ್ಲಾನ್ ಮಾಡಿ ಎನ್​ಪಿಎಸ್​ನಲ್ಲಿ ಹೂಡಿಕೆ ಮಾಡುವುದು ಉತ್ತಮ. ಈ ಎನ್​ಪಿಎಸ್ ಮೂಲಕ ಮಾಸಿಕ ಒಂದು ಲಕ್ಷ ರೂ ಪಿಂಚಣಿ ಬರುವಂತೆ ಹೇಗೆ ಮಾಡುವುದು ಎನ್ನುವ ಮಾಹಿತಿ ಈ ಲೇಖನದಲ್ಲಿದೆ.

ನೀವು ನಿವೃತ್ತರಾಗಲು ಎಷ್ಟು ಸಮಯ ಇದೆ, ಅಷ್ಟು ಅವಧಿಯಲ್ಲಿ ಹಣ ಮೌಲ್ಯ ಎಷ್ಟು ಕ್ಷೀಣಿಸುತ್ತದೆ ಎಂಬುದನ್ನು ಮೊದಲು ಗಮನಿಸಬೇಕು. ಇವತ್ತು ನಿಮಗೆ ಮಾಸಿಕ ವೆಚ್ಚ 50,000 ರೂ ಆದರೆ ಸಾಕು ಎನಿಸಬಹುದು. ಶೇ. 6ರ ಹಣದುಬ್ಬರ ಪರಿಗಣಿಸಿದರೆ 1.40 ಲಕ್ಷ ರೂ ಆಗುತ್ತದೆ. ಹೀಗಾಗಿ, ಈ ಬೆಲೆ ಏರಿಕೆಯ ಸಾಧ್ಯತೆಯನ್ನು ಪರಿಗಣಿಸಿ ಭವಿಷ್ಯದಲ್ಲಿ ನಿಮಗೆ ಅಗತ್ಯ ಇರುವ ಖರ್ಚು ಎಷ್ಟು ಎಂಬುದನ್ನು ಅಂದಾಜಿಸಿ, ಅದಕ್ಕೆ ತಕ್ಕಂತೆ ಹೂಡಿಕೆಗೆ ಪ್ಲಾನ್ ಮಾಡಿ.

ಇದನ್ನೂ ಓದಿ: ಡಿಸೆಂಬರ್​ನಲ್ಲಿ ಬಡ್ಡಿ ಇಳಿಕೆ ಸಾಧ್ಯತೆ; ಈಗಲೇ ಎಫ್​ಡಿ ಇಡಲು ತ್ವರೆ ಮಾಡಿ

ನಿಮ್ಮ ವಯಸ್ಸು ಈಗ 25 ವರ್ಷ ಎಂದಿದ್ದರೆ ನೀವು 60 ವರ್ಷಕ್ಕೆ ಕೆಲಸದಿಂದ ನಿವೃತ್ತರಾಗುತ್ತೀರಿ ಎಂದಾದಲ್ಲಿ 35 ವರ್ಷ ಹೂಡಿಕೆಗೆ ಅವಕಾಶ ಇರುತ್ತದೆ. ನಿವೃತ್ತರಾದಾಗ ಮಾಸಿಕವಾಗಿ ಒಂದು ಲಕ್ಷ ರೂ ಪಿಂಚಣಿ ಬೇಕೆಂದು ನೀವು ಬಯಸಿದರೆ, ಈಗಿನಿಂದಲೇ ನೀವು ಎನ್​ಪಿಎಸ್​ನಲ್ಲಿ ಮಾಸಿಕವಾಗಿ 13,100 ರೂ ಹೂಡಿಕೆ ಮಾಡಬೇಕಾಗುತ್ತದೆ.

ಇಲ್ಲಿ ಎನ್​ಪಿಎಸ್​ನ ಹೂಡಿಕೆ ವಾರ್ಷಿಕ ಶೇ. 10ರ ದರದಲ್ಲಿ ಬೆಳವಣಿಗೆ ಹೊಂದಬಹುದು ಎಂಬ ಅಂದಾಜಿನಲ್ಲಿ ಮಾಡಿರುವ ಲೆಕ್ಕಾಚಾರ. ನೀವು ಮಾಸಿಕವಾಗಿ 13,100 ರೂನಂತೆ 35 ವರ್ಷ ಹೂಡಿಕೆ ಮಾಡಿದರೆ, ನಿಮ್ಮ ಒಟ್ಟು ಹೂಡಿಕೆ 55 ಲಕ್ಷ ರೂ ಆಗುತ್ತದೆ. ಇದು ಶೇ. 10ರ ದರದಲ್ಲಿ ರಿಟರ್ನ್ ಕೊಡುತ್ತಾ ಹೋದಲ್ಲಿ ನಿಮ್ಮ ಹೂಡಿಕೆಯು 5 ಕೋಟಿ ರೂಗಿಂತಲೂ ಅಧಿಕವಾಗಿರುತ್ತದೆ. ನಿಮ್ಮ ಅದೃಷ್ಟಕ್ಕೆ ಎನ್​ಪಿಎಸ್ ಹೂಡಿಕೆ ಶೇ. 10ಕ್ಕಿಂತಲೂ ಹೆಚ್ಚು ದರದಲ್ಲಿ ಬೆಳೆದರೆ ನಿಮ್ಮ ಸಂಪತ್ತು ಇನ್ನೂ ಹೆಚ್ಚಾಗುತ್ತದೆ.

ಎನ್​ಪಿಎಸ್ ಸ್ಕೀಮ್​ನ ನಿಯಮದ ಪ್ರಕಾರ ನಿವೃತ್ತರಾದ ಬಳಿಕ ಎನ್​ಪಿಎಸ್ ಹೂಡಿಕೆ ಎರಡು ಭಾಗವಾಗುತ್ತದೆ. ಹೂಡಿಕೆದಾರರು ಎನ್​ಪಿಎಸ್ ಮೆಚ್ಯೂರಿಟಿ ಹಣದಲ್ಲಿ ಒಂದು ಭಾಗವನ್ನು ಆ್ಯನ್ಯುಟಿ ಪ್ಲಾನ್ ಖರೀದಿಗೆ ಉಪಯೋಗಿಸಬೇಕು. ಉಳಿದ ಮೊತ್ತವನ್ನು ಲಂಪ್ಸಮ್ ಆಗಿ ಪಡೆಯಬಹುದು.

ಇದನ್ನೂ ಓದಿ: ವಿದೇಶೀ ಹೂಡಿಕೆಗಳಲ್ಲೇ ವಿವಿಧ ಬಗೆ; ಎಫ್​ಡಿಐ, ಎಫ್​ಪಿಐ ಮತ್ತು ಎಫ್​ಐಐ ಮಧ್ಯೆ ವ್ಯತ್ಯಾಸಗಳೇನು?

ಶೇ. 40ರಷ್ಟು ಮೊತ್ತವನ್ನು ಆ್ಯನುಟಿ ಪ್ಲಾನ್ ಖರೀದಿಗೆ ಬಳಸಲು ಅವಕಾಶ ಇದೆ. 5 ಕೋಟಿ ರೂನಲ್ಲಿ ಶೇ. 40 ಆದ 2 ಕೋಟಿ ರೂ ಹಣವನ್ನು ನೀವು ಆ್ಯನುಟಿ ಪ್ಲಾನ್​ಗೆ ವಿನಿಯೋಗಿಸಿದರೆ ಆಗ ಮಾಸಿಕವಾಗಿ ಒಂದು ಲಕ್ಷ ರೂ ಪಿಂಚಣಿ ಸಿಗುತ್ತದೆ. ಇದು ಶೇ. 6ರ ಆ್ಯನುಟಿ ದರಕ್ಕೆ ಸಿಗುವ ಪಿಂಚಣಿ. ಈ ದರ ಇನ್ನೂ ಹೆಚ್ಚಿದ್ದಲ್ಲಿ ಇನ್ನೂ ಹೆಚ್ಚಿನ ಮೊತ್ತದ ಪಿಂಚಣಿ ಸಿಗುತ್ತದೆ.

ನೀವು ಆ್ಯನುಟಿ ಪ್ಲಾನ್​ಗೆ ಇನ್ನೂ ಹೆಚ್ಚಿನ ಮೊತ್ತವನ್ನು ವಿನಿಯೋಗಿಸಿದರೂ ಹೆಚ್ಚಿನ ಪಿಂಚಣಿ ಪಡೆಯಬಹುದು.

ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ