ಇಪಿಎಫ್ಒದಲ್ಲಿ ನಿಮ್ಮ ಪಿಎಫ್ ಖಾತೆಯಿಂದ ಹಣ ಹಿಂಪಡೆಯುವ ಪ್ರಕ್ರಿಯೆ (EPF claims) ಸರಳಗೊಂಡಿದೆ. ಕ್ಲೇಮ್ ಸಲ್ಲಿಸುವಾಗ ಕ್ಯಾನ್ಸಲ್ಡ್ ಚೆಕ್ (canceled cheque leaf) ಅಥವಾ ಬ್ಯಾಂಕ್ ಪಾಸ್ಬುಕ್ನ ಇಮೇಜ್ ಅನ್ನು ಅಪ್ಲೋಡ್ ಮಾಡಬೇಕಾಗುತ್ತದೆ. ಹೊಸ ಇಪಿಎಫ್ಒ ನಿಯಮ ಪ್ರಕಾರ, ಹೆಚ್ಚಿನ ಸಂದರ್ಭದಲ್ಲಿ ನೀವು ಈ ಇಮೇಜ್ ಅಪ್ಲೋಡ್ ಮಾಡುವ ಅವಶ್ಯಕತೆ ಬರುವುದಿಲ್ಲ. ಚೆಕ್ ಲೀಫ್ ಪರಿಶೀಲನೆ ಅಥವಾ ಬ್ಯಾಂಕ್ ಪಾಸ್ಬುಕ್ನ ಪರಿಶೀಲನೆ ಬದಲು ಬೇರೆ ಮಾರ್ಗಗಳ ಮೂಲಕ ಇಪಿಎಫ್ಒ ಅರ್ಜಿದಾರರ ದಾಖಲೆಗಳನ್ನು ವೆರಿಫೈ ಮಾಡುತ್ತದೆ.
ಇದನ್ನೂ ಓದಿ: ಇಪಿಎಫ್ಒ ಅಪ್ಡೇಟ್; ಸದಸ್ಯ ಸತ್ತಾಗ ಕ್ಲೇಮ್ ಮಾಡುವ ಪ್ರಕ್ರಿಯೆ ಈಗ ಸರಳ
ನೀವು ಹೇಗೂ ಬ್ಯಾಂಕಿನಲ್ಲಿ ಖಾತೆ ಮಾಡಿಸುವಾಗ ಕೆವೈಸಿ ದಾಖಲೆ ಕೊಟ್ಟಿರುತ್ತೀರಿ. ಇಲ್ಲಿ ಇಪಿಎಫ್ಒ ಸಂಸ್ಥೆ ನೀವು ನಮೂದಿಸುವ ಖಾತೆಯ ಬ್ಯಾಂಕ್ನಿಂದಲೇ ನೇರವಾಗಿ ಕೆವೈಸಿ ದಾಖಲೆಗಳನ್ನು ಪರಿಶೀಲಿಸಲಿದೆ.
ಅಥವಾ ನೀವು ಕೆಲಸ ಮಾಡುವ ಸಂಸ್ಥೆಯ ಮೂಲಕ ನಿಮ್ಮ ಬ್ಯಾಂಕ್ ಖಾತೆಯ ವಿವರ ಸರಿ ಇದೆಯಾ ಎಂದು ಪರಿಶೀಲಿಸಬಹುದು.
ನಿಮ್ಮ ಬ್ಯಾಂಕ್ ಖಾತೆಗೆ ಜೋಡಿಸಿರುವ ಆಧಾರ್ ನಂಬರ್ ಅನ್ನು ಯುಐಡಿಎಐ ಮೂಲಕ ಪರಿಶೀಲನೆ ಮಾಡಬಹುದು.
ಇದನ್ನೂ ಓದಿ: ಪಿಪಿಎಫ್ನಿಂದ ಟ್ರಿಪಲ್ ಲಾಭ; ಉಳಿತಾಯ, ದೀರ್ಘಾವಧಿ ಹೂಡಿಕೆ, ತೆರಿಗೆ ಲಾಭ
ಈ ಮೇಲಿನ ಕ್ರಮಗಳ ಮೂಲಕ ಪಿಎಫ್ ಖಾತೆದಾರರ ದಾಖಲೆಯನ್ನು ಹೆಚ್ಚು ನಿಖರವಾಗಿ ಮತ್ತು ವೇಗವಾಗಿ ಪರಿಶೀಲಿಸಲು ಸಾಧ್ಯವಾಗುತ್ತದೆ. ಬಹಳ ಜನರು ಪಿಎಫ್ ಹಣಕ್ಕೆ ಕ್ಲೇಮ್ ಸಲ್ಲಿಸುವಾಗ ಚೆಕ್ ಲೀಫ್ ಫೋಟೋ ಹಾಕಲು ಅಥವಾ ಪಾಸ್ಬುಕ್ ಫೋಟೋ ಹಾಕಲು ಮರೆತುಹೋಗುವುದುಂಟು. ಆ ಕಾರಣಕ್ಕೆ ಕ್ಲೇಮ್ ರಿಜೆಕ್ಟ್ ಆಗುತ್ತದೆ. ಹೆಚ್ಚಿನ ರಿಜೆಕ್ಟ್ ಪ್ರಕರಣಗಳು ಇಂಥವೇ ಆಗಿರುತ್ತವೆ. ಬೇರೆ ಮೂಲಗಳ ಮೂಲಕ ಈ ದಾಖಲೆಗಳನ್ನು ಇಪಿಎಫ್ಒ ಸಂಸ್ಥೆಯೇ ಪಡೆದುಕೊಂಡು ಪರಿಶೀಲನೆ ನಡೆಸುವುದರಿಂದ ರಿಜೆಕ್ಟ್ ಆಗುವ ಸಾಧ್ಯತೆ ಕಡಿಮೆ ಆಗುತ್ತದೆ.
ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ