New FD Rates: ಆ್ಯಕ್ಸಿಸ್, ಎಚ್​ಡಿಎಫ್​ಸಿ, ಐಸಿಐಸಿಐ, ಎಸ್​ಬಿಐ ಬ್ಯಾಂಕ್​ ಪರಿಷ್ಕೃತ ಎಫ್​ಡಿ ಬಡ್ಡಿ ದರ ವಿವರ ಇಲ್ಲಿದೆ

| Updated By: Ganapathi Sharma

Updated on: Oct 26, 2022 | 5:00 PM

ಆ್ಯಕ್ಸಿಸ್, ಎಚ್​ಡಿಎಫ್​ಸಿ, ಐಸಿಐಸಿಐ, ಎಸ್​ಬಿಐ ಬ್ಯಾಂಕ್​ಗಳು ಇತ್ತೀಚೆಗಷ್ಟೇ ಸ್ಥಿರ ಠೇವಣಿ ಮೇಲಿನ ಬಡ್ಡಿ ದರವನ್ನು ಪರಿಷ್ಕರಣೆ ಮಾಡಿದ್ದು, ತುಸು ಹೆಚ್ಚಳ ಮಾಡಿವೆ.

New FD Rates: ಆ್ಯಕ್ಸಿಸ್, ಎಚ್​ಡಿಎಫ್​ಸಿ, ಐಸಿಐಸಿಐ, ಎಸ್​ಬಿಐ ಬ್ಯಾಂಕ್​ ಪರಿಷ್ಕೃತ ಎಫ್​ಡಿ ಬಡ್ಡಿ ದರ ವಿವರ ಇಲ್ಲಿದೆ
ಸಾಂದರ್ಭಿಕ ಚಿತ್ರ
Image Credit source: PTI
Follow us on

ನವದೆಹಲಿ: ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (RBI) ರೆಪೊ ದರ (repo rate) ಹೆಚ್ಚಿಸಿದ ಬೆನ್ನಲ್ಲೇ ವಿವಿಧ ಬ್ಯಾಂಕ್​ಗಳು ಹಲವು ವಿಧದ ಠೇವಣಿಗಳ ಬಡ್ಡಿ ದರವನ್ನೂ ಹೆಚ್ಚಿಸಿವೆ. ಆ್ಯಕ್ಸಿಸ್, ಎಚ್​ಡಿಎಫ್​ಸಿ, ಐಸಿಐಸಿಐ, ಎಸ್​ಬಿಐ ಬ್ಯಾಂಕ್​ಗಳು ಇತ್ತೀಚೆಗಷ್ಟೇ ಸ್ಥಿರ ಠೇವಣಿ (Fixed deposits) ಮೇಲಿನ ಬಡ್ಡಿ ದರವನ್ನು ಪರಿಷ್ಕರಣೆ ಮಾಡಿದ್ದು, ತುಸು ಹೆಚ್ಚಳ ಮಾಡಿವೆ. ಎಫ್​ಡಿ ಹೂಡಿಕೆ ಮಾಡುವವರಿಗೆ ಇದರಿಂದ ಅನುಕೂಲವಾಗಲಿದೆ. ಈ ಬ್ಯಾಂಕ್​ಗಳ ಎಫ್​ಡಿ ಬಡ್ಡಿ ದರ ವಿವರ ಇಲ್ಲಿ ನೀಡಲಾಗಿದೆ.

ಆ್ಯಕ್ಸಿಸ್ ಬ್ಯಾಂಕ್ ಎಫ್​ಡಿ ಬಡ್ಡಿ ದರ

ಆ್ಯಕ್ಸಿಸ್ ಬ್ಯಾಂಕ್ ಎಫ್​ಡಿ ಬಡ್ಡಿ ದರವನ್ನು ಇತ್ತೀಚೆಗೆ ಪರಿಷ್ಕರಿಸಿದ್ದು, ಅಕ್ಟೋಬರ್ 14ರಿಂದ ಜಾರಿಗೆ ಬಂದಿದೆ. 7 ದಿನಗಳಿಂದ 10 ವರ್ಷದ ಅವಧಿಯ ವರೆಗಿನ ಎಫ್​ಡಿಗೆ ವಿವಿಧ ಅವಧಿಗೆ ಕನಿಷ್ಠ ಶೇಕಡಾ 3.50 ಯಿಂದ ಗರಿಷ್ಠ ಶೇಕಡಾ 6.10ರ ವರೆಗೂ ಎಫ್​ಡಿ ಬಡ್ಡಿ ದರ ಪಡೆಯಬಹುದಾಗಿದೆ. ಹಿರಿಯ ನಾಗರಿಕರಿಗೆ ಕನಿಷ್ಠ ಶೇಕಡಾ 3.50 ಯಿಂದ ಗರಿಷ್ಠ ಶೇಕಡಾ 6.85ರ ವರೆಗೂ ಬಡ್ಡಿ ದೊರೆಯಲಿದೆ.

ಇದನ್ನೂ ಓದಿ
Banking Frauds: ಆನ್​ಲೈನ್ ಮಾರುಕಟ್ಟೆಯಲ್ಲಿ ವ್ಯವಹರಿಸುವಾಗ ಹೀಗೆ ಮೋಸ ಹೋಗಬೇಡಿ
CCI Fine on Google: ಬಳಕೆದಾರರು, ಡೆವಲಪರ್​ಗಳಿಗೆ ಬದ್ಧರಾಗಿದ್ದೇವೆ; ಸಿಸಿಐ ದಂಡಕ್ಕೆ ಗೂಗಲ್ ಪ್ರತಿಕ್ರಿಯೆ
Tech Stocks: ಗೂಗಲ್, ಮೈಕ್ರೋಸಾಫ್ಟ್ ನಿರಾಶಾದಾಯಕ ಫಲಿತಾಂಶ; ಐಟಿ ಷೇರುಗಳಲ್ಲಿ ಕುಸಿತ
Pre-approved Personal Loan: ಪ್ರಿ ಅಪ್ರೂವ್ಡ್ ಪರ್ಸನಲ್ ಲೋನ್, ಅನಿವಾರ್ಯವಿದ್ದರಷ್ಟೇ ಪಡೆಯಿರಿ

ಎಚ್​ಡಿಎಫ್​ಸಿ ಬ್ಯಾಂಕ್ ಎಫ್​ಡಿ ಬಡ್ಡಿ ದರ

ಎಚ್​ಡಿಎಫ್​ಸಿ ಬ್ಯಾಂಕ್ ಎಫ್​ಡಿ ಬಡ್ಡಿ ದರವನ್ನು 75 ಮೂಲಾಂಶಗಳ ವರೆಗೆ ಹೆಚ್ಚಿಸಿದೆ. ಇದು ಅಕ್ಟೋಬರ್ 11ರಿಂದ ಜಾರಿಗೆ ಬರಲಿದೆ. ವಿವಿಧ ಅವಧಿಯ ಎಫ್​ಡಿಗಳಿಗೆ ಗರಿಷ್ಠ ಶೇಕಡಾ 6ರ ವರೆಗೂ ಬಡ್ಡಿ ಸಿಗಲಿದೆ. ಹಿರಿಯ ನಾಗರಿಕರಿಗೆ ಗರಿಷ್ಠ ಶೇಕಡಾ 6.75ರ ಬಡ್ಡಿ ಸಿಗಲಿದೆ. 7ದಿನಗಳಿಂದ 10 ವರ್ಷಗಳ ವರೆಗಿನ ವಿವಿಧ ಅವಧಿಯ ಎಫ್​ಡಿ ಹೂಡಿಕೆ ಅವಕಾಶವನ್ನು ಬ್ಯಾಂಕ್ ನೀಡಿದೆ.

ಐಸಿಐಸಿಐ ಬ್ಯಾಂಕ್​ ಎಫ್​ಡಿ ಬಡ್ಡಿ ದರ

ಐಸಿಐಸಿಐ ಬ್ಯಾಂಕ್ ಕೂಡ ಇತ್ತೀಚೆಗೆ ಎಫ್​ಡಿ ಬಡ್ಡಿ ದರವನ್ನು ಪರಿಷ್ಕರಿಸಿದ್ದು, ಸಾಮಾನ್ಯ ಗ್ರಾಹಕರ ವಿವಿಧ ಅವಧಿಯ ಎಫ್​ಡಿಗಳಿಗೆ ಕನಿಷ್ಠ ಶೇಕಡಾ 3ರಿಂದ ಗರಿಷ್ಠ ಶೇಕಡಾ 6.20ರ ವರೆಗೂ ಬಡ್ಡಿ ನೀಡುತ್ತಿದೆ. ಹಿರಿಯ ನಾಗರಿಕರ ವಿವಿಧ ಅವಧಿಯ ಎಫ್​ಡಿಗಳಿಗೆ ಕನಿಷ್ಠ ಶೇಕಡಾ 3.50 ಯಿಂದ ಗರಿಷ್ಠ ಶೇಕಡಾ 6.75ರ ವರೆಗೂ ಬಡ್ಡಿ ನೀಡುತ್ತಿದೆ. 7 ದಿನಗಳಿಂದ 10 ವರ್ಷಗಳ ಅವಧಿಯ ಎಫ್​ಡಿಗಳು ಇದರಲ್ಲಿ ಸೇರಿವೆ.

ಎಸ್​ಬಿಐ ಎಫ್​ಡಿ ಬಡ್ಡಿ ದರ

ಎಸ್​ಬಿಐ ಇತ್ತೀಚೆಗೆ ಎಫ್​ಡಿ ಬಡ್ಡಿ ದರವನ್ನು 20 ಮೂಲಾಂಶದಷ್ಟು ಹೆಚ್ಚಿಸಿದೆ. ಸಾಮಾನ್ಯ ಗ್ರಾಹಕರ ವಿವಿಧ ಅವಧಿಯ ಎಫ್​ಡಿಗೆ ಕನಿಷ್ಠ ಶೇಕಡಾ 3ರಿಂದ ಗರಿಷ್ಠ ಶೇಕಡಾ 5.85ರ ವರೆಗೆ ಬಡ್ಡಿ ನೀಡುತ್ತಿದೆ. ಹಿರಿಯ ನಾಗರಿಕರಿಗೆ ಕನಿಷ್ಠ ಶೇಕಡಾ 3.50 ರಿಂದ ಗರಿಷ್ಠ ಶೇಕಡಾ 6.65ರ ವರೆಗೆ ಬಡ್ಡಿ ನೀಡುತ್ತಿದೆ. 7 ದಿನಗಳಿಂದ 10 ವರ್ಷಗಳ ಅವಧಿಯ ಎಫ್​ಡಿಗಳು ಇದರಲ್ಲಿ ಸೇರಿವೆ.

ಆರ್​ಬಿಐ ಮೇ ತಿಂಗಳ ಬಳಿಕ ಒಟ್ಟಾರೆಯಾಗಿ ರೆಪೊ ದರವನ್ನು 190 ಮೂಲಾಂಶಗಳಷ್ಟು ಹೆಚ್ಚಳ ಮಾಡಿದೆ. ಹೀಗಾಗಿ ವಿವಿಧ ಬ್ಯಾಂಕ್​ಗಳು ಸಹ ಅನೇಕ ವಿಧದ ಠೇವಣಿ ಮತ್ತು ಸಾಲದ ಮೇಲಿನ ಬಡ್ಡಿ ದರವನ್ನು ಪರಿಷ್ಕರಿಸಿವೆ.

ಇನ್ನಷ್ಟು ವಾಣಿಜ್ಯ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ