
ಈ ಬಾರಿಯ ಬಜೆಟ್ನಲ್ಲಿ ಹೊಸ ಟ್ಯಾಕ್ಸ್ ರಿಜೈಮ್ ಅನ್ನು ಮತ್ತಷ್ಟು ಆಕರ್ಷಕಗೊಳಿಸಲಾಗಿದೆ. ಹಳೆಯ ಟ್ಯಾಕ್ಸ್ ರಿಜೈಮ್ಗಿಂತ ಹೊಸ ಟ್ಯಾಕ್ಸ್ ರಿಜೈಮ್ ಹೆಚ್ಚು ತೆರಿಗೆ ಉಳಿತಾಯ ನೀಡುವ ಮಟ್ಟಕ್ಕೆ ವಿನಾಯಿತಿ, ರಿಯಾಯಿತಿಗಳನ್ನು ನೀಡಲಾಗಿದೆ. ವರ್ಷಕ್ಕೆ 12 ಲಕ್ಷ ರೂ ಆದಾಯ ಇರುವವರಿಗೆ ತೆರಿಗೆ ಬಾಧ್ಯತೆಯೇ ಇಲ್ಲದಂತೆ ಮಾಡಲಾಗಿದೆ. ಈ ಆದಾಯಕ್ಕೆ ಟ್ಯಾಕ್ಸ್ ರಿಬೇಟ್ ಸಿಗುತ್ತದೆ. ಇದಕ್ಕೂ ಮೇಲ್ಪಟ್ಟ ಆದಾಯ ಇದ್ದರೆ ಟೆಕ್ನಿಕಲ್ ಆಗಿ ಟ್ಯಾಕ್ಸ್ ಸ್ಲ್ಯಾಬ್ ದರಗಳು ಅನ್ವಯ ಆಗುತ್ತವೆ. ಆದರೆ, ಕೆಲ ಟ್ಯಾಕ್ಸ್ ಡಿಡಕ್ಷನ್ಗಳು ಹೊಸ ಟ್ಯಾಕ್ಸ್ ರಿಜೈಮ್ನಲ್ಲೂ ಇದ್ದು, ಅದನ್ನು ಬಳಸಿದರೆ ಹೆಚ್ಚಿನ ಆದಾಯಕ್ಕೂ ತೆರಿಗೆ ವಿನಾಯಿತಿ (tax exemptions) ಪಡೆಯಲು ಸಾಧ್ಯ.
ಓಲ್ಡ್ ಟ್ಯಾಕ್ಸ್ ರಿಜೈಮ್ನಲ್ಲಿ ಇರುವಷ್ಟು ಅಲ್ಲವಾದರೂ ಹೊಸ ಟ್ಯಾಕ್ಸ್ ರಿಜೈಮ್ನಲ್ಲೂ ಕೆಲ ಪ್ರಮುಖ ಟ್ಯಾಕ್ಸ್ ಡಿಡಕ್ಷನ್ ಅವಕಾಶಗಳಿವೆ. ಸಂಬಳದಾರರಿಗೆ ತುಸು ಹೆಚ್ಚೇ ಡಿಡಕ್ಷನ್ಗಳಿವೆ. ಸಂಬಳ ಆದಾಯದವರಿಗೆ 75,000 ರೂಗಳ ಸ್ಟ್ಯಾಂಡರ್ಡ್ ಡಿಡಕ್ಷನ್ ಇರುತ್ತದೆ. ಅಂದರೆ, ನಿಮ್ಮ ಟ್ಯಾಕ್ಸಬಲ್ ಇನ್ಕಮ್ ಇಷ್ಟು ಮೊತ್ತದಷ್ಟು ಕಡಿಮೆ ಆಗುತ್ತದೆ. ಎನ್ಪಿಎಸ್ ಅಥವಾ ಇಪಿಎಫ್ ಇದ್ದರೆ ಅದರಿಂದಲೂ ಒಂದಷ್ಟು ಡಿಡಕ್ಷನ್ ಪಡೆಯಬಹುದು. ಆಫೀಸ್ ವತಿಯಿಂದ ಅಧಿಕೃತ ಪ್ರವಾಸಕ್ಕೆ ಕಳುಹಿಸಿದಾಗ ಅದರ ಕಂಪನಿ ವೆಚ್ಚದ ಹಣಕ್ಕೆ ಟ್ಯಾಕ್ಸ್ ಡಿಡಕ್ಷನ್ ಪಡೆಯಬಹುದು.
ನಿಮ್ಮಲ್ಲಿ ಬಾಡಿಗೆಯಿಂದ ಆದಾಯ ಬರುತ್ತಿದ್ದರೆ, ಆಗ ಗೃಹ ಸಾಲಕ್ಕೆ ನೀವು ಕಟ್ಟುವ ಬಡ್ಡಿಯ ಹಣವನ್ನು ಬಳಸಿ ಟ್ಯಾಕ್ಸ್ ಸರಿದೂಗಿಸಬಹುದು, ಅಥವಾ ಕಡಿಮೆ ಮಾಡಬಹುದು. ಲೀವ್ ಎನ್ಕ್ಯಾಷ್ಮೆಂಟ್, ಗ್ರಾಚುಟಿ ಹಣಕ್ಕೆ ಡಿಡಕ್ಷನ್ ಪಡೆಯಬಹುದು.
ಇದನ್ನೂ ಓದಿ: ನಿಮ್ಮ ವಾರ್ಷಿಕ ಆದಾಯ 12 ಲಕ್ಷ ರೂಗಿಂತ ತುಸು ಹೆಚ್ಚಿದ್ದರೆ ಏನಾಗುತ್ತೆ? ಮಾರ್ಜಿನಲ್ ರಿಲೀಫ್ ಲೆಕ್ಕಾಚಾರ
ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ