ನವದೆಹಲಿ, ಡಿಸೆಂಬರ್ 8: ಭಾರತೀಯ ರಿಸರ್ವ್ ಬ್ಯಾಂಕ್ ಇಂದು ಶುಕ್ರವಾರ (ಡಿ. 8) ಯುಪಿಐ ಇ-ಮ್ಯಾಂಡೇಟ್ನ (e-Mandate) ಮಿತಿಯನ್ನು 1 ಲಕ್ಷ ರುಪಾಯಿಗೆ ಹೆಚ್ಚಿಸಿದೆ. ಸ್ವಯಂಚಾಲಿತವಾಗಿ ಹಣ ಮುರಿದುಕೊಳ್ಳುವ ಈ ಆಟೊ ಡೆಬಿಟ್ (Auto debit) ವ್ಯವಸ್ಥೆಯನ್ನು ಮ್ಯುಚುವಲ್ ಫಂಡ್ ಎಸ್ಐಪಿ, ಇನ್ಷೂರೆನ್ಸ್ ಪ್ರೀಮಿಯಮ್ ಪಾವತಿ ಇತ್ಯಾದಿಗೆ ಬಳಸಬಹುದು. ಕ್ರೆಡಿಟ್ ಕಾರ್ಡ್ ಪಾವತಿಗೂ ಈ ಆಟೊ ಡೆಬಿಟ್ ಬಳಸಬಹುದು.
ಈ ಮುಂಚೆ ಪ್ರತೀ ವಹಿವಾಟಿಗೆ ಆಟೊ ಡೆಬಿಟ್ ಮಿತಿ 15,000 ರೂ ಇತ್ತು. ಅಂದರೆ, ಒಮ್ಮೆಗೆ 15,000 ರೂವರೆಗಿನ ಮೊತ್ತವನ್ನು ಮಾತ್ರ ಸ್ವಯಂಚಾಲಿತವಾಗಿ ಹಣ ಕಡಿತಗೊಳ್ಳಲು ಮಿತಿ ಇತ್ತು. ಅದಕ್ಕಿಂತ ಹೆಚ್ಚಿನ ಮೊತ್ತ ಆಟೊ ಡೆಬಿಟ್ ಆಗಲು ಸಾಧ್ಯವಿರಲಿಲ್ಲ. ಹಾಗೊಂದು ವೇಳೆ ಆಟೊ ಡೆಬಿಟ್ ಮಾಡಬೇಕೆಂದರೂ ಒಟಿಪಿ ಮೂಲಕ ದೃಢೀಕರಿಸಬೇಕಿತ್ತು. ಈಗ ಆಟೊ ಡೆಬಿಟ್ ಮಿತಿಯನ್ನು 15,000 ರೂನಿಂದ ಒಂದು ಲಕ್ಷ ರೂಪಾಯಿಗೆ ಹೆಚ್ಚಿಸಲಾಗಿದೆ.
ಇದನ್ನೂ ಓದಿ: Jeevan Utsav: ಎಲ್ಐಸಿಯಿಂದ ಇಂದು ಹೊಸ ಜೀವನ್ ಉತ್ಸವ್ ಪಾಲಿಸಿ ಬಿಡುಗಡೆ; ಇದರ ವಿಶೇಷತೆಗಳೇನು?
ಮ್ಯೂಚುವಲ್ ಫಂಡ್ನ ಸಿಸ್ಟಮ್ಯಾಟಿಕ್ ಇನ್ವೆಸ್ಟ್ಮೆಂಟ್ ಪ್ಲಾನ್, ಇನ್ಷೂರೆನ್ಸ್ ಪ್ರೀಮಿಯಮ್, ಕ್ರೆಡಿಟ್ ಕಾರ್ಡ್ ಬಿಲ್ ಇತ್ಯಾದಿಯಲ್ಲಿ 15,000 ರೂಗಿಂತ ಹೆಚ್ಚಿನ ಮೊತ್ತದ ವಹಿವಾಟು ಆಗುವ ಸಾಧ್ಯತೆ ಹೆಚ್ಚಿರುವುದರಿಂದ ಗ್ರಾಹಕರಿಗೆ ಅನುಕೂಲ ಕಲ್ಪಿಸುವ ದೃಷ್ಟಿಯಿಂದ ಈ ಮಿತಿಯನ್ನು ಆರ್ಬಿಐ ಹೆಚ್ಚಿಸಿದೆ.
ಯುಪಿಐ ಆಟೊಪೇ ಎಂದೇ ಇದು ಜನಪ್ರಿಯವಾಗಿದೆ. ಪೇಟಿಎಂ, ಫೋನ್ ಪೇ, ಗೂಗಲ್ ಪೇ ಮೊದಲಾದ ಪ್ಲಾಟ್ಫಾರ್ಮ್ನಲ್ಲಿ ನಿಮ್ಮ ಮೊಬೈಲ್ ಬಿಲ್, ಕ್ರೆಡಿಟ್ ಕಾರ್ಡ್ ಬಿಲ್ ಇತ್ಯಾದಿ ಸ್ವಯಂ ಚಾಲಿತವಾಗಿ ಪಾವತಿಯಾಗುವಂತೆ ಮಾಡಬಹುದು. ಮೊಬೈಲ್ ಬಿಲ್ ಬಂದಾಗ ನಿಮ್ಮ ಬ್ಯಾಂಕ್ ಖಾತೆಯಿಂದ ಅಷ್ಟು ಹಣ ಸ್ವಯಂಚಾಲಿವಾಗಿ ಕಡಿತಗೊಳ್ಳುತ್ತದೆ.
ಇದನ್ನೂ ಓದಿ: Post Office Fixed Deposit: ಪೋಸ್ಟ್ ಆಫೀಸ್ ಎಫ್ಡಿ ಹಣ ಹಿಂಪಡೆಯುವ ಮುನ್ನ ಈ ಮಹತ್ವದ ನಿಯಮ ಬದಲಾವಣೆ ತಿಳಿದಿರಿ
ಭಾರತದಲ್ಲಿ ಈ ರೀತಿ ಆಟೊ ಡೆಬಿಟ್ಗೆ ನೊಂದಣಿಯಾದ ಸರ್ವಿಸ್ ಸಂಖ್ಯೆ 8.5 ಕೋಟಿಯಷ್ಟಿದೆ. ಇವುಗಳಿಂದ ತಿಂಗಳಿಗೆ ಒಟ್ಟು 2,800 ಕೋಟಿ ರೂನಷ್ಟು ವಹಿವಾಟು ಆಗುತ್ತದೆ.
ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ