ಭಾರತೀಯರಿಗೆ ಚಿನ್ನದ ಮೇಲೆ ಮೊದಲಿನಿಂದಲೂ ಹೆಚ್ಚಿನ ಮೋಹ. ಸೌಂದರ್ಯ ಇಮ್ಮಡಿಗೊಳಿಸುವ ಚಿನ್ನ ಮುಂದಿನ ಭವಿಷ್ಯ ರೂಪಿಸುವ ಕೆಲಸವನ್ನು ರೂಪಿಸಿಕೊಳ್ಳಲು ಇದು ಅತ್ಯಂತ ಉಪಯುಕ್ತವಾಗಿದೆ. ಭಾರತೀಯ ಕುಟುಂಬಗಳು ಯಾವಾಗಲೂ ತಮ್ಮ ಉಳಿತಾಯವನ್ನು ಚಿನ್ನದ ಮೇಲೆ ಹೂಡಿಕೆ ಮಾಡುತ್ತಿವೆ. ಆದರೆ ಕಳೆದ ಒಂದು ವರ್ಷದಲ್ಲಿ ಗಮನಾರ್ಹ ಏರಿಕೆ ಕಂಡುಬಂದಿದೆ. Money9 ನ ಭಾರತದ ಪಲ್ಸ್ ಪರ್ಸನಲ್ ಫೈನಾನ್ಸ್ ಸಮೀಕ್ಷೆಯು (Money9 Pulse Personal Finance Survey 2023) 2022 ರಲ್ಲಿ ಶೇ. 15 ರಷ್ಟು ಕುಟುಂಬಗಳು ಚಿನ್ನದ ಮೇಲೆ ಉಳಿತಾಯ ಮಾಡುತ್ತಿದ್ದರೆ 2023 ರಲ್ಲಿಈ ಪ್ರಮಾಣ ಶೇ. 21ಕ್ಕೆ ಏರಿದೆ. ಚಿನ್ನದ ದರ ನಿರಂತರವಾಗಿ ಏರುತ್ತಿರುವುದು ಈ ಆಕರ್ಷಣೆಗೆ ಒಂದು ಪ್ರಮುಖ ಕಾರಣ. ಕಳೆದ ಒಂದು ವರ್ಷದಲ್ಲಿ ಚಿನ್ನ ಅತ್ಯುತ್ತಮ ಆದಾಯವನ್ನು ನೀಡಿದೆ. ಸರ್ಕಾರ ಸಾವರಿನ್ ಗೋಲ್ಡ್ ಬಾಂಡ್ ಪರಿಚಯಿಸಿದ್ದು ಚಿನ್ನದತ್ತ ಒಲವು ಹೆಚ್ಚಲು ಇನ್ನೊಂದು ಕಾರಣವಾಗಿದೆ.
ಚಿನ್ನದ ಖರೀದಿ ಟ್ರೆಂಡ್ ಗಮನಿಸಿದರೆ ಉತ್ತರ ಭಾರತ ಮತ್ತು ದಕ್ಷಿಣ ಭಾರತದ ನಡುವಿನ ವ್ಯತ್ಯಾಸ ಸ್ಪಷ್ಟವಾಗಿ ಗೋಚರಿಸುತ್ತದೆ. ಆದರೆ ಕಳೆದ ವರ್ಷ ಪಶ್ಚಿಮ ಭಾರತದ ಪ್ರಾಬಲ್ಯ ಚಿನ್ನ ಖರೀದಿಯಲ್ಲಿತ್ತು. 2022 ರ ಸಮೀಕ್ಷೆಯಲ್ಲಿ, ಸೂರತ್ ನಂಬರ್ 1 ನಗರವಾಗಿತ್ತು. ಶೇ. 51ರಷ್ಟು ಕುಟುಂಬಗಳು ಚಿನ್ನದ ಮೇಲೆ ಉಳಿತಾಯ ಮಾಡುತ್ತಿದ್ದವು ಎನ್ನುವ ಅಂಶ ಗೊತ್ತಾಗಿತ್ತು. ಕೃಷ್ಣಾ ಮತ್ತು ಥಾಣೆ ಹೆಸರುಗಳು ಎರಡು ಮತ್ತು ಮೂರನೇ ಸ್ಥಾನದಲ್ಲಿದ್ದವು. ಆದರೆ ಈ ವರ್ಷ ಟಾಪ್ 3 ನಗರಗಳು ಬದಲಾಗಿವೆ.
ಇದನ್ನೂ ಓದಿ: PF Survey: ಯಾವ ಕಾರಣಕ್ಕೆ ಭಾರತೀಯರು ತಮ್ಮ ಉಳಿತಾಯ ಹಣ ಹಿಂಪಡೆಯುತ್ತಿದ್ದಾರೆ?
ಬೆಂಗಳೂರಿನ ಶೇ. 69 ರಷ್ಟು ಕುಟುಂಬಗಳು ತಮ್ಮ ಉಳಿತಾಯ ಹಣವನ್ನು ಚಿನ್ನದ ಮೇಲೆ ಹಾಕುತ್ತಿವೆ. ತಿರುವನಂತಪುರಂ ಎರಡನೇ ಸ್ಥಾನದಲ್ಲಿದೆ. ಇಲ್ಲಿ ಶೇ. 66ರಷ್ಟು ಕುಟುಂಬಗಳು ಚಿನ್ನದ ಮೇಲೆ ಉಳಿತಾಯ ಮಾಡಿಕೊಂಡು ಬಂದಿವೆ. ಮೂರನೇ ಸ್ಥಾನದಲ್ಲಿ ಡಾರ್ಜಿಲಿಂಗ್ ಬಂದಿದ್ದು ಅಚ್ಚರಿ ಮೂಡಿಸಿದೆ. ಇದು ಡಾರ್ಜಿಲಿಂಗ್‌ನ ಜನರ ಆದಾಯದಲ್ಲಿ ಹೇಗೆ ಏರಿಕೆಯಾಗಿದೆ ಎನ್ನುವ ಅಂಶವನ್ನು ಎತ್ತಿ ತೋರಿಸಿದೆ.
ಚಿನ್ನದಲ್ಲಿ ಹೂಡಿಕೆ ಮಾಡುವ ನಗರಗಳ ಪಟ್ಟಿ ನೋಡಿದಾಗ ಪೂರ್ವ ಮತ್ತು ದಕ್ಷಿಣ ಭಾರತದ ಸ್ಪಷ್ಟ ಪ್ರಾಬಲ್ಯ ಸ್ಪಷ್ಟವಾಗಿ ಗೋಚರಿಸುತ್ತದೆ. ಶೇ. 57 ಪ್ರತಿಶತ ಕುಟುಂಬಗಳು ಚಿನ್ನದ ಮೇಲೆ ಹೂಡಿಕೆ ಮಾಡುವ ಮೂಲಕ ಜಲ್ಪಾಗುರಿ ನಾಲ್ಕನೇ ನಗರವಾಗಿ ಹೊರಹೊಮ್ಮಿದೆ. ಕರ್ನಾಟಕದ ಶಿವಮೊಗ್ಗ ಮತ್ತು ಬಂಗಾಳದ ಪಶ್ಚಿಮ ಮೇದಿನಿಪುರ ನಂತರದ ಸ್ಥಾನ ಆಕ್ರಮಿಸಿಕೊಂಡಿವೆ. ಚಿನ್ನದ ಮೇಲೆ ಹೂಡಿಕೆ ಮಾಡುವ ಟಾಪ್ 10 ನಗರಗಳಲ್ಲಿ ಉತ್ತರ ಪ್ರದೇಶದ ರಾಜಧಾನಿ ಲಕ್ನೋ ಕೂಡ ಸೇರಿದೆ. ಅಗ್ರ 10ರಲ್ಲಿ ರಾಜ್‌ಕೋಟ್, ಕೊಯಮತ್ತೂರು, ಫರಿದಾಬಾದ್ ಸಹ ಸ್ಥಾನ ಪಡೆದುಕೊಂಡಿವೆ.
ಇದನ್ನೂ ಓದಿ: Indians and Loans: ಭಾರತದ ಸಾಲಗಾರರ ಸಂಖ್ಯೆ ದ್ವಿಗುಣ! ಭಾರತೀಯರು ಅತಿ ಹೆಚ್ಚು ಸಾಲ ಮಾಡುತ್ತಿರೋದೇಕೆ?
ಪ್ರತಿಷ್ಠಿತ ಜಾಗತಿಕ ಏಜೆನ್ಸಿ ಆರ್‌ಟಿಐ ಇಂಟರ್‌ನ್ಯಾಷನಲ್ ಈ ಸಮೀಕ್ಷೆ ಮಾಡಿದೆ. ವಿಶ್ವಬ್ಯಾಂಕ್‌ನಂತಹ ದೊಡ್ಡ ಸಂಸ್ಥೆಗಳಿಗಾಗಿ ಈ ಸಂಸ್ಥೆ ಇಂತಹ ಸಮೀಕ್ಷೆಗಳನ್ನು ನಡೆಸಿಕೊಂಡು ಬಂದಿದ್ದು ಈಗ ಮನಿ9 ಜತೆಗೂಡಿ ಸಮೀಕ್ಷೆ ನಡೆಸಿದೆ.
ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ