NPS: ಎನ್​ಪಿಎಸ್​ನಲ್ಲಿ ನಿಮ್ಮ ಹಣ ತೊಡಗಿಸಿದರೆ ಎಷ್ಟು ರಿಟರ್ನ್ ಸಿಗುತ್ತದೆ? ಆನ್​ಲೈನ್​ನಲ್ಲಿ ಈ ಸ್ಕೀಮ್ ಪಡೆಯುವುದು ಹೇಗೆ?

|

Updated on: Jan 18, 2024 | 3:52 PM

National Pension Scheme Details: ನ್ಯಾಷನಲ್ ಪೆನ್ಷನ್ ಸ್ಕೀಮ್ ಅನ್ನು ಉದ್ಯೋಗಿಗಳ ನಿವೃತ್ತಿ ಜೀವನದ ಭದ್ರತೆಗೆಂದು ರೂಪಿಸಲಾಗಿದೆ. ಎನ್​ಪಿಎಸ್​ನಲ್ಲಿರುವ ಫಂಡ್ ಅನ್ನು ಈಕ್ವಿಟಿ ಮತ್ತು ಡೆಟ್​ಗಳಲ್ಲಿ ಹೂಡಿಕೆ ಮಾಡಲಾಗುವುದರಿಂದ ಹಣ ಸುರಕ್ಷಿತವಾಗಿರುತ್ತದೆ. ಎನ್​ಪಿಎಸ್​ನಲ್ಲಿ ಮಾಡಲಾಗುವ ಹೂಡಿಕೆಯಲ್ಲಿ ವರ್ಷಕ್ಕೆ ಒಂದೂವರೆ ಲಕ್ಷ ರೂ ಹಣಕ್ಕೆ ತೆರಿಗೆ ವಿನಾಯಿತಿ ಪಡೆಯಬಹುದು.

NPS: ಎನ್​ಪಿಎಸ್​ನಲ್ಲಿ ನಿಮ್ಮ ಹಣ ತೊಡಗಿಸಿದರೆ ಎಷ್ಟು ರಿಟರ್ನ್ ಸಿಗುತ್ತದೆ? ಆನ್​ಲೈನ್​ನಲ್ಲಿ ಈ ಸ್ಕೀಮ್ ಪಡೆಯುವುದು ಹೇಗೆ?
ಎನ್​ಪಿಎಸ್
Follow us on

ನ್ಯಾಷನಲ್ ಪೆನ್ಷನ್ ಸ್ಕೀಮ್ (NPS- National Pension Scheme) ಜನಪ್ರಿಯತೆ ಹೆಚ್ಚುತ್ತಿದೆ. ಇದು ಪಿಎಫ್ ರೀತಿಯಲ್ಲಿ ಉದ್ಯೋಗಿಯ ರಿಟೈರ್ಮೆಂಟ್​ಗೆಂದು ಮಾಡಲಾಗಿರುವ ಸ್ಕೀಮ್. ಇದರ ಜನಪ್ರಿಯತೆ ಹೆಚ್ಚಲು ಪ್ರಮುಖ ಕಾರಣ ಇದು ಕಲ್ಪಿಸುವ ತೆರಿಗೆ ಉಳಿತಾಯ ಅವಕಾಶ. ನ್ಯಾಷನಲ್ ಪೆನ್ಷನ್ ಸ್ಕೀಮ್​ನ ಫಂಡ್​ನಲ್ಲಿರುವ ಹಣವನ್ನು ಈಕ್ವಿಟಿ ಮತ್ತು ಡೆಟ್ ಸೆಕ್ಯೂರಿಟಿಗಳಲ್ಲಿ ಹೂಡಿಕೆ ಮಾಡಲಾಗುತ್ತದೆ. ಹೀಗಾಗಿ, ಪಿಎಫ್, ಎಫ್​ಡಿ ಇತ್ಯಾದಿಗಿಂತಲೂ ಹೆಚ್ಚು ವಾರ್ಷಿಕ ರಿಟರ್ನ್ ಅನ್ನು ಎನ್​ಪಿಎಸ್​ನಲ್ಲಿ ನಿರೀಕ್ಷಿಸಬಹುದು. ಡೆಟ್ ಸೆಕ್ಯೂರಿಟಿಗಳಲ್ಲೂ ಹೂಡಿಕೆ ಮಾಡುವುದರಿಂದ ಈಕ್ವಿಟಿಗಳಲ್ಲಿ ಅಕಸ್ಮಾತ್ ಹಿನ್ನಡೆಯಾದರೂ ಒಂದು ಮಟ್ಟಕ್ಕೆ ನಷ್ಟವನ್ನು ತಡೆದುಕೊಳ್ಳಬಹುದು.

ತೆರಿಗೆ ಉಳಿತಾಯ ತರುವ ಎನ್​ಪಿಎಸ್

ಎನ್​ಪಿಎಸ್​ನಲ್ಲಿ ಒಂದು ವರ್ಷದಲ್ಲಿ ಒಂದೂವರೆಗಿನ ಲಕ್ಷ ರೂವರೆಗಿನ ಹೂಡಿಕೆಗೆ ಇನ್ಕಮ್ ಟ್ಯಾಕ್ಸ್ ಡಿಡಕ್ಷನ್ ಕ್ಲೈಮ್ ಮಾಡಬಹುದು. ಈಗಾಗಲೇ ಸ್ಟ್ಯಾಂಡರ್ಡ್ ಡಿಡಕ್ಷನ್​ಗೆ 50,000 ರೂ ಹಣ ಇರುತ್ತದೆ. ಒಟ್ಟು 2,00,000 ರೂನಷ್ಟು ಹಣಕ್ಕೆ ಡಿಡಕ್ಷನ್ ಕ್ಲೈಮ್ ಮಾಡಬಹುದು. ಅಂದರೆ ತೆರಿಗೆ ವಿನಾಯಿತಿ ಪಡೆಯಬಹುದು.

ಎನ್​ಪಿಎಸ್​ನಲ್ಲಿ ಎಷ್ಟು ಹೂಡಿಕೆಗೆ ಎಷ್ಟು ಲಾಭ ಸಿಗಬಹುದು?

ಈಗ ನಿಮ್ಮ ವಯಸ್ಸು 40 ವರ್ಷ ಎಂದಿಟ್ಟುಕೊಳ್ಳಿ. ಇಲ್ಲಿಂದ ನೀವು ಎನ್​ಪಿಎಸ್ ಆರಂಭಿಸುತ್ತೀರಿ. ತಿಂಗಳಿಗೆ 3,000 ರೂನಂತೆ ಕಟ್ಟುತ್ತಾ ಹೋಗುತ್ತೀರಿ. 60 ವರ್ಷ ವಯಸ್ಸಿನವರೆಗೆ ಕಟ್ಟಲು ಅವಕಾಶ ಇರುತ್ತದೆ. ಅಂದರೆ 20 ವರ್ಷ ನೀವು ತಿಂಗಳಿಗೆ 3,000 ರೂ ಕಟ್ಟುತ್ತೀರಿ. ಅಂದರೆ 20 ವರ್ಷದಲ್ಲಿ ನೀವು ಮಾಡುವ ಒಟ್ಟು ಹೂಡಿಕೆ 7.20 ಲಕ್ಷ ರೂ ಆಗುತ್ತದೆ.

ಇದನ್ನೂ ಓದಿ: Investment Ideas: 2024ರಲ್ಲಿ ಎಲ್ಲೆಲ್ಲಿ ಹೂಡಿಕೆ ಮಾಡುವುದು ಹೆಚ್ಚು ಸುರಕ್ಷಿತ ಮತ್ತು ಲಾಭಕಾರಿ? ಇಲ್ಲಿದೆ ಡೀಟೇಲ್ಸ್

ಈ ವೇಳೆ ಟ್ಯಾಕ್ಸ್ ಡಿಡಕ್ಷನ್ ಮೂಲಕ ನೀವು ಶೇ. 33ರಷ್ಟು ತೆರಿಗೆ ಉಳಿಸುತ್ತೀರಿ. ಅಂದರೆ ಒಟ್ಟು 2,37,600 ರೂನಷ್ಟು ತೆರಿಗೆ ಉಳಿತಾಯ ಮಾಡಿರುತ್ತೀರಿ. ನಿಮ್ಮ ಹೂಡಿಕೆಯು ವರ್ಷಕ್ಕೆ ಶೇ. 10ರಷ್ಟು ಆದಾಯ ತಂದುಕೊಟ್ಟರೆ 15.77 ಲಕ್ಷ ರೂ ಲಾಭ ಸಿಗುತ್ತದೆ. ಒಟ್ಟು ಮೆಚ್ಯೂರಿಟಿ ಮೊತ್ತ 22.97 ಲಕ್ಷ ರೂ ಆಗುತ್ತದೆ.

ನಿವೃತ್ತಿ ಬಳಿಕ ನಿಮ್ಮ ಕೈಗೆ 9.19 ಲಕ್ಷ ರೂ ಲಂಪ್ಸಮ್ ಹಣ ಸಿಗುತ್ತದೆ. 6,891 ರೂನಷ್ಟು ಮಾಸಿಕ ಪಿಂಚಣಿ ಸಿಗಬಹುದು.

ಇನ್ನು, ಎನ್​ಪಿಎಸ್​ನ ವಾರ್ಷಿಕ ರಿಟರ್ನ್ ಶೇ. 12 ರಂತೆ ಬೆಳೆಯುತ್ತದೆ ಎಂದಿಟ್ಟುಕೊಳ್ಳಿ. ಆಗ ಮೆಚ್ಯೂರಿಟಿ ಮೊತ್ತ 30 ಲಕ್ಷ ರೂ ಸಮೀಪಿಸುತ್ತದೆ. ಕೈಗೆ ಬರುವ ಲಂಪ್ಸಮ್ ಹಣ 12 ಲಕ್ಷ ಇದ್ದರೆ, 8,992 ರೂ ಮಾಸಿಕ ಪಿಂಚಣಿ ಬರಬಹುದು.

ಇದನ್ನೂ ಓದಿ: Costly Loan: ರಿಸ್ಕ್ ವೇಟ್ ರೂಲ್; ದುಬಾರಿಯಾಗಲಿದೆ ಪರ್ಸನಲ್ ಲೋನ್; ಏನು ಹೇಳುತ್ತದೆ ಆರ್​ಬಿಐನ ಹೊಸ ನಿಯಮ?

ಎನ್​ಪಿಎಸ್ ಹೇಗೆ ಆರಂಭಿಸುವುದು?

ಸೆಂಟ್ರಲ್ ರೆಕಾರ್ಡ್ ಕೀಪಿಂಗ್ ಏಜೆನ್ಸಿಗಳ (ಸಿಆರ್​ಎ) ವೆಬ್​ಸೈಟ್​ನಲ್ಲಿ ಎನ್​ಪಿಎಸ್ ಹೂಡಿಕೆ ಆರಂಭಿಸಬಹುದು. ಕಂಪ್ಯೂಟರ್ ಏಜ್ ಮ್ಯಾನೇಜ್ಮೆಂಟ್ ಸರ್ವಿಸಸ್, ಕೆಫಿನ್ ಟೆಕ್ನಾಲಜೀಸ್, ಪ್ರೋಟಿಯನ್ ಇಗವ್ ಟೆಕ್ನಾಲಜೀಸ್ ಇವು ಸಿಆರ್​ಎಗಳಾಗಿವೆ.

ಸಿಎಎಂಎಸ್​ನ ಎನ್​ಪಿಎಸ್ ಲಿಂಕ್ ಇಲ್ಲಿದೆ: www.camsnps.com

ಇಲ್ಲಿ ನೀವು ಮೊಬೈಲ್ ನಂಬರ್, ಪ್ಯಾನ್ ನಂಬರ್ ಮತ್ತು ಇಮೇಲ್ ಐಡಿ, ಒಟಿಪಿ ನೀಡಿ ಅರ್ಜಿ ಭರ್ತಿ ಮಾಡಬಹುದು. ಇದಾದ ಬಳಿಕ ನಿಮಗೆ ಪರ್ಮನೆಂಟ್ ರಿಟೈರ್ಮೆಂಟ್ ಅಕೌಂಟ್ ನಂಬರ್ (ಪ್ರಾನ್) ಸಿಗುತ್ತದೆ. ಈ ಪ್ರಾನ್ ನಂಬರ್ ಅನ್ನು ಎನ್​ಪಿಎಸ್ ಖಾತೆಗೆ ಲಾಗಿನ್ ಆಗಲು ಬಳಸಬಹುದು.

ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ