ನೀವು ಹೂಡಿಕೆ ಉದ್ದೇಶದಿಂದ ಚಿನ್ನವನ್ನು ಖರೀದಿಸಬೇಕೆಂದಿದ್ದರೆ ಅದಕ್ಕೆ ಪರ್ಯಾಯ ಆಯ್ಕೆಗಳುಂಟು. ಭೌತಿಕ ಚಿನ್ನಕ್ಕೆ ಸದಾ ಕಾಲ ಬೇಡಿಕೆ ಇದ್ದೇ ಇರುತ್ತದೆ. ಈ ಚಿನ್ನ ಭೂಮಿಯಲ್ಲಿ ಸೀಮಿತ ಪ್ರಮಾಣದಲ್ಲಿ ಮಾತ್ರವೇ ಸಿಗುತ್ತದೆ. ಆಭರಣಕ್ಕೆ ಮಾತ್ರವಲ್ಲ, ಬೇರೆ ಬೇರೆ ಉದ್ದೇಶಗಳಿಗೂ ಚಿನ್ನದ ಬಳಕೆ ಆಗುತ್ತದೆ. ಮದುವೆ ಸಮಾರಂಭಕ್ಕೆ ಆಭರಣ ಖರೀದಿಸುವುದಾದರೆ ಭೌತಿಕ ಚಿನ್ನವನ್ನು ಖರೀದಿಸಬಹುದು. ಹೂಡಿಕೆಗಾಗಿ ಮಾತ್ರವೇ ಚಿನ್ನ ಬಯಸಿದರೆ ಗೋಲ್ಡ್ ಇಟಿಎಫ್, ಗೋಲ್ಡ್ ಮ್ಯೂಚುವಲ್ ಫಂಡ್, ಡಿಜಿಟಲ್ ಗೋಲ್ಡ್, ಸಾವರಿನ್ ಗೋಲ್ಡ್ ಬಾಂಡ್ ಇತ್ಯಾದಿ ಆಯ್ಕೆಗಳುಂಟು.
ಇಟಿಎಫ್ಗಳು ಈಗೀಗ ಬಹಳ ಜನಪ್ರಿಯತೆ ಪಡೆಯುತ್ತಿವೆ. ಮ್ಯೂಚುವಲ್ ಫಂಡ್ಗಳ ನಿರ್ವಹಣೆಗೆ ಆಗುವಂತೆ ಇದಕ್ಕೆ ಹೆಚ್ಚಿನ ವೆಚ್ಚ ಇರುವುದಿಲ್ಲ. ಷೇರು ವಿನಿಯಮ ಕೇಂದ್ರಗಳಲ್ಲಿ ಇವುಗಳನ್ನು ಟ್ರೇಡಿಂಗ್ ಮಾಡಬಹುದು. ಈ ಎಕ್ಸ್ಚೇಂಜ್ ಟ್ರೇಡೆಡ್ ಫಂಡ್ಗಳು ಚಿನ್ನಕ್ಕೂ ಇವೆ. ಗೋಲ್ಡ್ ಇಟಿಎಫ್ಗಳು ಇತ್ತೀಚೆಗೆ ಬಹಳ ಬೇಡಿಕೆ ಪಡೆದಿವೆ.
ಇದನ್ನೂ ಓದಿ: ಜನರಿಗೆ ಲಾಭ, ಸರ್ಕಾರಕ್ಕೆ ಬಿಸಿತುಪ್ಪವಾಗಿರುವ ಸಾವರಿನ್ ಗೋಲ್ಡ್ ಬಾಂಡ್ ಯೋಜನೆಯಿಂದ ಏನೇನು ಲಾಭ?
ಹೂಡಿಕೆಗಾಗಿ ನೀವು ಭೌತಿಕ ಚಿನ್ನವನ್ನು ಖರೀದಿಸಿದರೆ ಅದನ್ನು ಇಟ್ಟುಕೊಳ್ಳುವುದು ದೊಡ್ಡ ರಿಸ್ಕ್. ಒಡವೆ ಖರೀದಿಸಿದರೆ ಮೇಕಿಂಗ್ ಚಾರ್ಜಸ್, ವೇಸ್ಟೇಜ್ ಚಾರ್ಜಸ್ ಇತ್ಯಾದಿ ಕಳೆಯಲಾಗುತ್ತದೆ. ಚಿನ್ನದ ಗಟ್ಟಿಗಳನ್ನು ಬ್ಯಾಂಕ್ನ ಲಾಕರ್ನಲ್ಲಿಟ್ಟರೆ ಅದರ ನಿರ್ಹಣೆಗೆ ಹಣ ಕೊಡಬೇಕಾಗುತ್ತದೆ. ಮನೆಯಲ್ಲಿಟ್ಟರೆ ಕಳ್ಳತನದ ಭಯ ಇರುತ್ತದೆ. ಹೀಗಾಗಿ, ಭೌತಿಕ ಚಿನ್ನ ಅಷ್ಟು ಸುರಕ್ಷಿತವಲ್ಲ.
ಗೋಲ್ಡ್ ಇಟಿಎಫ್ಗಳು ಭಾರತದೊಳಗಿನ ಚಿನ್ನದ ಬೆಲೆಯನ್ನು ಅನುಸರಿಸುತ್ತವೆ. ಈ ಇಟಿಎಫ್ಗಳನ್ನು ಖರೀದಿಸಿದರೆ ಚಿನ್ನವನ್ನು ಎಲೆಕ್ಟ್ರಾನಿಕ್ ರೂಪದಲ್ಲಿ ಖರೀದಿಸಿದಂತಾಗುತ್ತದೆ. ಆದರೆ, ನೀವು ಇಟಿಎಫ್ ರಿಡೀಮ್ ಮಾಡಿದಾಗ ಭೌತಿಕ ಚಿನ್ನದ ಬದಲು ಹಣ ಸಿಗುತ್ತದೆ.
ಇದನ್ನೂ ಓದಿ: ಮುದ್ರಾ ಸ್ಕೀಮ್: 20 ಲಕ್ಷ ರೂವರೆಗೂ ಸಾಲ ನೀಡುವ ಪಿಎಂಎಂವೈ ಬಗ್ಗೆ ಪೂರ್ಣ ಮಾಹಿತಿ
ಮ್ಯುಚುವಲ್ ಫಂಡ್ ಅನ್ನು ಖರೀದಿಸಲು ನೀವು ಡೀಮ್ಯಾಟ್ ಖಾತೆ ತೆರೆಯಲೇಬೇಕೆಂದಿಲ್ಲ. ಆದರೆ, ಇಟಿಎಫ್ನಲ್ಲಿ ಹೂಡಿಕೆ ಮಾಡಲು ಡೀಮ್ಯಾಟ್ ಅಕೌಂಟ್ ಬೇಕಾಗುತ್ತದೆ. ಯಾಕೆಂದರೆ ಇಟಿಎಫ್ಗಳನ್ನು ಡೀಮ್ಯಾಟ್ ರೂಪದಲ್ಲಿ ಸಂಗ್ರಹಿಸಲು ಪ್ರತ್ಯೇಕ ಖಾತೆ ಬೇಕಾಗುತ್ತದೆ. ಷೇರು ವಹಿವಾಟಿನಲ್ಲಿ ಇರುವ ದರಗಳು ಇಟಿಎಫ್ಗೂ ಅನ್ವಯ ಆಗುತ್ತದೆ. ಕ್ಯಾಪಿಟಲ್ ಗೇಯ್ನ್ ಟ್ಯಾಕ್ಸ್ ಇತ್ಯಾದಿ ಇರುತ್ತದೆ. ಇದು ಬಿಟ್ಟರೆ ಬೇರೆ ಶುಲ್ಕವಾಗಲೀ, ತೆರಿಗೆಯಾಗಲೀ ಇರುವುದಿಲ್ಲ.
ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ