ಪೋಸ್ಟ್ ಆಫೀಸ್ POSCS ಸ್ಕೀಮ್: ವರ್ಷಕ್ಕೆ ಎರಡೂವರೆ ಲಕ್ಷ ರೂವರೆಗೆ ಬಡ್ಡಿ ಆದಾಯ

Post Office Senior Citizen Scheme, details: ಪೋಸ್ಟ್ ಆಫೀಸ್ ಸೀನಿಯರ್ ಸಿಟಿಜನ್ ಸ್ಕೀಮ್​ನಲ್ಲಿ ಲಂಪ್ಸಮ್ ಆಗಿ 1,000 ರೂನಿಂದ 30 ಲಕ್ಷ ರೂವರೆಗೂ ಹೂಡಿಕೆಗೆ ಅವಕಾಶ ಇದೆ. ಐದು ವರ್ಷಕ್ಕೆ ಮೆಚ್ಯೂರಿಟಿ ಆಗುವ ಈ ಸ್ಕೀಮ್​ನಲ್ಲಿ ಸದ್ಯ ವಾರ್ಷಿಕ ಶೇ. 8.2 ಬಡ್ಡಿ ದರ ಇದೆ. ವರ್ಷದಲ್ಲಿ ಸುಮಾರು ಎರಡೂವರೆ ಲಕ್ಷ ರೂ ಬಡ್ಡಿ ಆದಾಯವೇ ಇದೆ.

ಪೋಸ್ಟ್ ಆಫೀಸ್ POSCS ಸ್ಕೀಮ್: ವರ್ಷಕ್ಕೆ ಎರಡೂವರೆ ಲಕ್ಷ ರೂವರೆಗೆ ಬಡ್ಡಿ ಆದಾಯ
ಪೋಸ್ಟ್ ಆಫೀಸ್

Updated on: Oct 28, 2025 | 1:03 PM

ಪೋಸ್ಟ್ ಆಫೀಸ್​ನಲ್ಲಿ ಹಲವಾರು ಸಣ್ಣ ಉಳಿತಾಯ ಯೋಜನೆಗಳು (Small Savings Schemes) ಜಾರಿಯಲ್ಲಿವೆ. ಇವುಗಳ ಪೈಕಿ ಸುಕನ್ಯಾ ಸಮೃದ್ಧಿ, ಹಿರಿಯ ನಾಗರಿಕರ ಉಳಿತಾಯ ಯೋಜನೆಗಳು (Post Office Senior Citizens Scheme) ಅತ್ಯಧಿಕ ಬಡ್ಡಿ ನೀಡುತ್ತವೆ. ಎರಡಕ್ಕೂ ವಾರ್ಷಿಕ ಶೇ 8.2 ಬಡ್ಡಿ ನೀಡಲಾಗುತ್ತದೆ. ಸುಕನ್ಯಾ ಸಮೃದ್ಧಿ ಅಕೌಂಟ್ ಹೆಣ್ಮಕ್ಕಳಿಗಾಗಿ ದೀರ್ಘಕಾಲ ಹೂಡಿಕೆ ಹೇಳಿ ಮಾಡಿಸಿದ್ದಾಗಿದೆ. ಇನ್ನೊಂದೆಡೆ ಪೋಸ್ಟ್ ಆಫೀಸ್ ಸೀನಿಯರ್ ಸಿಟಿಜನ್ ಸ್ಕೀಮ್ (SCSSS) ಲಂಪ್ಸಮ್ ಹೂಡಿಕೆಯಿಂದ ನಿಯಮಿತ ಆದಾಯ ಪಡೆಯಲು ಸಹಾಯಕವಾಗಿದೆ.

ಪೋಸ್ಟ್ ಆಫೀಸ್ ಸೀನಿಯರ್ ಸಿಟಿಜನ್ ಸ್ಕೀಮ್ ಬಗ್ಗೆ

  • ಯಾರು ಅರ್ಹರು: 60 ವರ್ಷ ವಯಸ್ಸು ದಾಟಿದವರು
  • ಹೂಡಿಕೆ ಮೊತ್ತ: 1,000 ರೂನಿಂದ ಹಿಡಿದು 30,00,000 (ಮೂವತ್ತು ಲಕ್ಷ) ರೂವರೆಗೂ ಲಂಪ್ಸಮ್ ಆಗಿ ಹೂಡಿಕೆ.
  • ಹೂಡಿಕೆ ಅವಧಿ: 5 ವರ್ಷಕ್ಕೆ ಮೆಚ್ಯೂರಿಟಿ. ಬೇಕೆಂದರೆ ಪ್ರತೀ 3 ವರ್ಷಕ್ಕೊಮ್ಮೆ ನವೀಕರಿಸಬಹುದು.
  • ಬಡ್ಡಿ: ಸದ್ಯಕ್ಕೆ ಶೇ. 8.2 ಬಡ್ಡಿ ನಿಗದಿ ಮಾಡಲಾಗಿದೆ. ಮೂರು ತಿಂಗಳಿಗೊಮ್ಮೆ ಬಡ್ಡಿದರ ಪರಿಷ್ಕರಣೆ ಆಗುತ್ತದೆ.
  • ಆದಾಯ ಹೇಗೆ?: ಪ್ರತೀ ತ್ರೈಮಾಸಿಕಕ್ಕೊಮ್ಮೆ ಬಡ್ಡಿಯನ್ನು ನೀಡಲಾಗುತ್ತದೆ.

ಇದನ್ನೂ ಓದಿ: ಪೋಸ್ಟ್ ಆಫೀಸ್ ರಾಷ್ಟ್ರೀಯ ಉಳಿತಾಯ ಪತ್ರದಲ್ಲಿ ಹೂಡಿಕೆ; ಲಕ್ಷ ರೂಗೆ 44,800 ರೂ ಲಾಭ

ಪೋಸ್ಟ್ ಆಫೀಸ್ ಎಸ್​ಸಿಎಸ್​ನಲ್ಲಿ 30 ಲಕ್ಷ ರೂ ಹೂಡಿಕೆಗೆ ಎಷ್ಟು ಆದಾಯ?

ಪೋಸ್ಟ್ ಆಫೀಸ್ ಸೀನಿಯರ್ ಸಿಟಿಜನ್ ಸ್ಕೀಮ್​ನಲ್ಲಿ ನೀವು 30 ಲಕ್ಷ ರೂವರೆಗೂ ಹೂಡಿಕೆ ಮಾಡಲು ಅವಕಾಶ ಇರುತ್ತದೆ. ಒಂದು ವೇಳೆ ನೀವು 30 ಲಕ್ಷ ರೂ ಅನ್ನು ಲಂಪ್ಸಮ್ ಆಗಿ ಡೆಪಾಸಿಟ್ ಮಾಡಿದರೆ ವರ್ಷಕ್ಕೆ ಬಡ್ಡಿ 2.46 ಲಕ್ಷ ರೂ ಆಗುತ್ತದೆ. ಪ್ರತೀ ಮೂರು ತಿಂಗಳಿಗೆ ಬಡ್ಡಿ ಆದಾಯವನ್ನು ಹಂಚಲಾಗುತ್ತದೆ. ಇದನ್ನು ಮಾಸಿಕವಾಗಿ ನೀವು ವಿಭಜಿಸಿದಾಗ ತಿಂಗಳಿಗೆ 20,500 ರೂ ಆಗುತ್ತದೆ. ಹೆಚ್ಚೂಕಡಿಮೆ 20,000 ರೂ ಮಾಸಿಕ ಆದಾಯ ಸೃಷ್ಟಿಯಾಗುತ್ತದೆ.

ನಿಮಗೆ ಮಾಸಿಕವಾಗಿ ಕೈಗೆ ಆದಾಯ ಕೊಡುವಂತಹ ಸ್ಕೀಮ್ ಬೇಕಿದ್ದರೆ ಪೋಸ್ಟ್ ಆಫೀಸ್​ನಲ್ಲೇ ಮಂತ್ಲಿ ಇನ್ಕಮ್ ಸ್ಕೀಮ್ ಇದೆ. ಇದರಲ್ಲಿ ಸೀನಿಯರ್ ಸಿಟಿಜನ್ ಸ್ಕೀಮ್​ನಷ್ಟು ಬಡ್ಡಿ ಸಿಗುವುದಿಲ್ಲವಾದರೂ ಫಿಕ್ಸೆಡ್ ಡೆಪಾಸಿಟ್​ಗಿಂತ ಉತ್ತಮ ಬಡ್ಡಿ ಇರುತ್ತದೆ.

ಪೋಸ್ಟ್ ಆಫೀಸ್ ಸೀನಿಯರ್ ಸಿಟಿಜನ್ ಸ್ಕೀಮ್​ನಲ್ಲಿ ಟ್ಯಾಕ್ಸ್ ಬೆನಿಫಿಟ್ ಮತ್ತಿತರ ಅಂಶಗಳು

ಪೋಸ್ಟ್ ಆಫೀಸ್ ಸೀನಿಯರ್ ಸಿಟಿಜನ್ ಸ್ಕೀಮ್​ ಐದು ವರ್ಷದ ಅವಧಿಯದ್ದಾಗಿದೆ. ಅವಧಿಗೆ ಮುನ್ನ ಠೇವಣಿ ಹಿಂಪಡೆಯಲು ನಿರ್ಬಂಧಗಳಿವೆ. ಅಕೌಂಟ್ ತೆರೆದು ಒಂದು ವರ್ಷದೊಳಗೆ ಕ್ಲೋಸ್ ಮಾಡಿದರೆ ಬಡ್ಡಿ ಸಿಗುವುದಿಲ್ಲ. ಕೇವಲ ಅಸಲು ಹಣವನ್ನು ಮರಳಿಸಲಾಗುತ್ತದೆ.

ಇದನ್ನೂ ಓದಿ: ಪೋಸ್ಟ್ ಆಫೀಸ್ ಪಿಪಿಎಫ್ ಸ್ಕೀಮ್ ಮೂಲಕ 15 ವರ್ಷದಲ್ಲಿ 40 ಲಕ್ಷ ರೂವರೆಗೆ ಆದಾಯ

1-2 ವರ್ಷದಲ್ಲಿ ಅಕೌಂಟ್ ನಿಲ್ಲಿಸಿದರೆ ಬಡ್ಡಿ ಮೊತ್ತದಿಂದ ಶೇ. 1.5ರಷ್ಟನ್ನು ಮುರಿದುಕೊಳ್ಳಲಾಗುತ್ತದೆ. 2-5 ವರ್ಷದಲ್ಲಿ ನಿಲ್ಲಿಸಿದರೆ ಶೇ. 1ರಷ್ಟು ಬಡ್ಡಿ ಹಣ ಮುರಿದುಕೊಳ್ಳಲಾಗುತ್ತದೆ.

ಪೋಸ್ಟ್ ಆಫೀಸ್ ಸೀನಿಯರ್ ಸಿಟಿಜನ್ ಸ್ಕೀಮ್​ನಲ್ಲಿ ಮಾಡಿದ ಹೂಡಿಕೆಗೆ ಟ್ಯಾಕ್ಸ್ ಬೆನಿಫಿಟ್ ಸಿಗುತ್ತದೆ. ಸೆಕ್ಷನ್ 80ಸಿ ಅಡಿಯಲ್ಲಿ ಒಂದೂವರೆ ಲಕ್ಷ ರೂವರೆಗೂ ಹೂಡಿಕೆಗೆ ಟ್ಯಾಕ್ಸ್ ಡಿಡಕ್ಷನ್ (tax deduction) ಪಡೆಯಬಹುದು.

ಹಾಗೆಯೇ, ಈ ಸ್ಕೀಮ್​ನಲ್ಲಿ ನಿಮಗೆ ಒಂದು ಹಣಕಾಸು ವರ್ಷದಲ್ಲಿ ಬಡ್ಡಿ ಆದಾಯ ಒಂದು ಲಕ್ಷ ರೂ ದಾಟಿದರೆ, ಆ ಹೆಚ್ಚುವರಿ ಮೊತ್ತಕ್ಕೆ ಟಿಡಿಎಸ್ ಅನ್ವಯ ಆಗುತ್ತದೆ.

ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ