ನವದೆಹಲಿ, ಜೂನ್ 19: ಇತ್ತೀಚಿನ ಕೆಲ ವರ್ಷಗಳಿಂದ ಪಬ್ಲಿಕ್ ಸೆಕ್ಟರ್ ಕಂಪನಿಗಳು (public sector units) ಉತ್ತಮ ಬೆಳವಣಿಗೆ ಹೊಂದಿವೆ. ಸರ್ಕಾರಿ ಸಂಸ್ಥೆಗಳೆಂದರೆ ಒಂದು ಕಾಲದಲ್ಲಿ ಬಿಳಿ ಆನೆಗಳೆಂದು ಪರಿಗಣಿತವಾಗಿದ್ದವು. ಈಗ ಇವೇ ಸಂಸ್ಥೆಗಳು ಭರ್ಜರಿ ಲಾಭ ಮಾಡುತ್ತಿವೆ. ಷೇರು ಮಾರುಕಟ್ಟೆಯಲ್ಲೂ (stock market) ಅವುಗಳು ಲಾಭದ ಕುದುರೆಗಳಾಗಿವೆ. ಎಚ್ಎಎಲ್, ಬಿಎಚ್ಇಎಲ್, ಎಸ್ಬಿಐ ಇತ್ಯಾದಿ ಸ್ಟಾಕ್ಗಳ ಮೌಲ್ಯ ಗಣನೀಯವಾಗಿ ಹೆಚ್ಚಾಗಿದೆ. ಪಿಎಸ್ಇ ವಲಯದ ಷೇರುಗಳಲ್ಲಿ ಹೂಡಿಕೆ ಮಾಡಿರುವ ಮ್ಯೂಚುವಲ್ ಫಂಡ್, ಇಟಿಎಫ್ಗಳೂ ಕೂಡ ಭರ್ಜರಿಯಾಗಿ ಬೆಳೆದಿವೆ. ಈ ಫಂಡ್ಗಳು ಒಂದು ವರ್ಷದಲ್ಲಿ ಸರಾಸರಿಯಾಗಿ ಶೇ. 100ರಷ್ಟು ಬೆಳೆದಿವೆ. ಅಂದರೆ, ಹೂಡಿಕೆದಾರರ ಹಣ ಒಂದು ವರ್ಷದಲ್ಲಿ ಡಬಲ್ ಆಗಿದೆ.
ಎರಡು ಫಂಡ್ಗಳಂತೂ ಒಂದು ವರ್ಷದಲ್ಲಿ ಶೇ. 100ಕ್ಕಿಂತಲೂ ಹೆಚ್ಚು ರಿಟರ್ನ್ಸ್ ಕೊಟ್ಟಿವೆ. ಪಿಎಸ್ಯು ಸೆಕ್ಟರ್ನ ಅತಿದೊಡ್ಡ ಫಂಡ್ ಎನಿಸಿರುವ ಸಿಪಿಎಸ್ಇ ಇಟಿಎಫ್ ಒಂದು ವರ್ಷದಲ್ಲಿ ಶೇ. 116.41ರಷ್ಟು ರಿಟರ್ನ್ ಕೊಟ್ಟಿದೆ. ಎಸ್ಬಿಐನ ಪಿಎಸ್ಯು ಫಂಡ್ ಕೂಡ ಶೇ. 101.56ರಷ್ಟು ವಾರ್ಷಿಕ ಬೆಳವಣಿಗೆ ಹೊಂದಿದೆ. ಇನ್ವೆಸ್ಕೋ ಇಂಡಿಯಾ ಪಿಎಸ್ಯು ಈಕ್ವಿಟಿ ಫಂಡ್ ಮತ್ತು ಆದಿತ್ಯ ಬಿರ್ಲಾ ಎಸ್ಎಲ್ ಪಿಎಸ್ಯು ಈಕ್ವಿಟಿ ಫಂಡ್ ಶೇ. 95ಕ್ಕಿಂತಲೂ ಹೆಚ್ಚು ರಿಟರ್ನ್ ಕೊಟ್ಟಿವೆ.
ಇದನ್ನೂ ಓದಿ: ಜಿಎಸ್ಟಿ ನೀತಿಯಲ್ಲಿ ಬದಲಾವಣೆ ನಿರೀಕ್ಷೆಯಲ್ಲಿ ಆನ್ಲೈನ್ ಗೇಮಿಂಗ್ ಕ್ಷೇತ್ರ; ಜೂನ್ 22ರ ಸಭೆಯಲ್ಲಿ ಏನಾಗಬಹುದು?
ಬಿಎಸ್ಇ ಮತ್ತು ಎನ್ಎಸ್ಇನಲ್ಲಿರುವ ಪಿಎಸ್ಯು ಇಂಡೆಕ್ಸ್ಗಳು ಕ್ರಮವಾಗಿ ಶೇ. 107.49 ಮತ್ತು ಶೇ. 117.18ರಷ್ಟು ಬೆಳೆದಿರುವುದು ಗಮನಾರ್ಹ. ಕಳೆದ ಐದು ವರ್ಷದಲ್ಲಿ ಈ ಇಂಡೆಕ್ಸ್ಗಳು ವಾರ್ಷಿಕವಾಗಿ ಶೇ. 27ರಷ್ಟು ಲಾಭ ತೋರಿವೆ.
ಇದನ್ನೂ ಓದಿ: ‘996’ ವಿರುದ್ಧ ತಿರುಗಿಬಿದ್ಧ ಚೀನೀ ಯುವಕರು, ಯುವತಿಯರು; ಕಾರ್ಪೊರೇಟ್ ವ್ಯವಸ್ಥೆ ವಿರುದ್ಧ ‘ಹಕ್ಕಿ’ಗಳ ಟ್ರೆಂಡ್
ಪಿಎಸ್ಯು ಸೆಕ್ಟರ್ನ ಕಂಪನಿಗಳಲ್ಲಿ ಅಥವಾ ಆ ವಲಯದ ಮ್ಯೂಚುವಲ್ ಫಂಡ್ಗಳಲ್ಲಿ ಹೂಡಿಕೆ ಮಾಡುವ ಮುನ್ನ ಕೆಲ ಅಂಶಗಳು ಗಮನದಲ್ಲಿರಬೇಕು. ಸರ್ಕಾರಿ ಸಂಸ್ಥೆಗಳ ಬೆಳವಣಿಗೆಯ ಗತಿಯು ಸರ್ಕಾರದ ನೀತಿಗಳ ಮೇಲೆ ಅವಲಂಬಿತವಾಗಿರುತ್ತದೆ. ಹೀಗಾಗಿ, ಮಾರುಕಟ್ಟೆಯ ಸ್ಥಿತಿಯ ಮೇಲೆ ಸದಾ ಎಚ್ಚರಿಕೆ ಇರಬೇಕು.
ರಿಸ್ಕ್ ಕಡಿಮೆ ಹೊಂದಿರಬಯಸುವವರು ಸೆಕ್ಟರ್ ಫಂಡ್ಗಳ ಬದಲು ಫ್ಲೆಕ್ಸಿ ಫಂಡ್ಗಳತ್ತ ಹೂಡಿಕೆ ಮಾಡಬಹುದು ಎನ್ನುವುದು ತಜ್ಞರ ಸಲಹೆ. ಯಾಕೆಂದರೆ, ಫ್ಲೆಕ್ಸಿ ಫಂಡ್ಗಳಲ್ಲಿರುವ ಮ್ಯಾನೇಜರ್ಗಳು ಮಾರುಕಟ್ಟೆಯ ಟ್ರೆಂಡ್ಗೆ ಅನುಗುಣವಾಗಿ ಹೂಡಿಕೆಗಳನ್ನು ಹಂಚುತ್ತಾರೆ. ಇದರಿಂದ ರಿಸ್ಕ್ ಸಾಧ್ಯತೆ ಕಡಿಮೆಗೊಳ್ಳುತ್ತದೆ.
ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ