AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಜಿಎಸ್​ಟಿ ನೀತಿಯಲ್ಲಿ ಬದಲಾವಣೆ ನಿರೀಕ್ಷೆಯಲ್ಲಿ ಆನ್ಲೈನ್ ಗೇಮಿಂಗ್ ಕ್ಷೇತ್ರ; ಜೂನ್ 22ರ ಸಭೆಯಲ್ಲಿ ಏನಾಗಬಹುದು?

Online gaming industry demanding for GST on GGR, instead of full face value: ಜೂನ್ 22ರಂದು ನಡೆಯಲಿರುವ ಜಿಎಸ್​ಟಿ ಕೌನ್ಸಿಲ್ ಸಭೆಯಲ್ಲಿ ಆನ್ಲೈನ್ ಗೇಮಿಂಗ್ ಕ್ಷೇತ್ರ ಜಿಎಸ್​ಟಿ ಕ್ರಮದಲ್ಲಿ ಬದಲಾವಣೆ ಆಗಬಹುದು ಎಂದು ನಿರೀಕ್ಷಿಸುತ್ತಿದೆ. ಅಕ್ಟೋಬರ್ 1ರಿಂದ ಆಟಗಾರನ ಪೂರ್ಣ ಬೆಟ್ಟಿಂಗ್ ಮೊತ್ತಕ್ಕೆ ಶೇ. 28ರಷ್ಟು ಜಿಎಸ್​ಟಿ ಜಾರಿಯಲ್ಲಿದೆ. ಆರು ತಿಂಗಳ ಬಳಿಕ ಜಿಎಸ್​ಟಿ ಮರುಪರಿಶೀಲಿಸಲಾಗುವುದು ಎನ್ನಲಾಗಿತ್ತು. ಆದರೆ, ಈ ಬಾರಿ ಜಿಎಸ್​ಟಿ ಕ್ರಮದಲ್ಲಿ ಬದಲಾವಣೆ ಮಾಡುವ ಸಾಧ್ಯತೆ ಇಲ್ಲ ಎನ್ನಲಾಗುತ್ತಿದೆ.

ಜಿಎಸ್​ಟಿ ನೀತಿಯಲ್ಲಿ ಬದಲಾವಣೆ ನಿರೀಕ್ಷೆಯಲ್ಲಿ ಆನ್ಲೈನ್ ಗೇಮಿಂಗ್ ಕ್ಷೇತ್ರ; ಜೂನ್ 22ರ ಸಭೆಯಲ್ಲಿ ಏನಾಗಬಹುದು?
ಆನ್ಲೈನ್ ಗೇಮಿಂಗ್
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Jun 19, 2024 | 3:21 PM

Share

ನವದೆಹಲಿ, ಜೂನ್ 19: ಇದೇ ಶನಿವಾರ ನಡೆಯಲಿರುವ ಜಿಎಸ್​ಟಿ ಕೌನ್ಸಿಲ್ ಸಭೆಯಲ್ಲಿ ಆನ್ಲೈನ್ ಗೇಮಿಂಗ್ ಕ್ಷೇತ್ರಕ್ಕೆ (Online gaming sector) ಬಿಗ್ ರಿಲೀಫ್ ಸಿಗುವಂತಹ ನಿರ್ಧಾರ ತೆಗೆದುಕೊಳ್ಳಬಹುದು ಎನ್ನುವಂತಹ ಮಾತುಗಳು ಕೇಳಿಬಂದಿವೆ. ಆದರೆ, ಆನ್ಲೈನ್ ಗೇಮಿಂಗ್ ಕ್ಷೇತ್ರಕ್ಕೆ ವಿಧಿಸಲಾಗಿರುವ ಜಿಎಸ್​ಟಿ ದರದಲ್ಲಿ ಮತ್ತು ಕ್ರಮದಲ್ಲಿ (GST review) ಬದಲಾವಣೆ ಮಾಡುವ ಸಾಧ್ಯತೆ ಸದ್ಯಕ್ಕೆ ಇಲ್ಲ ಎಂದು ಕೆಲ ವರದಿಗಳು ಹೇಳುತ್ತಿವೆ. ಇದೇ ಜೂನ್ 22ರಂದು ನಡೆಯಲಿರುವ ಜಿಎಸ್​ಟಿ ಸಭೆಯಲ್ಲಿ ಈ ಆನ್ಲೈನ್ ಗೇಮಿಂಗ್ ವಲಯದ ಜಿಎಸ್​ಟಿ ವಿಚಾರವೇ ಚರ್ಚೆಗೆ ಬರುವುದಿಲ್ಲ ಎನ್ನಲಾಗುತ್ತಿದೆ.

ಆನ್ಲೈನ್ ಗೇಮಿಂಗ್ ಉದ್ಯಮದ ಜಿಎಸ್​ಟಿ ಬೇಡಿಕೆಗಳೇನು?

ಆನ್ಲೈನ್ ಗೇಮಿಂಗ್ ಉದ್ಯಮದಲ್ಲಿ ಬೆಟಿಂಗ್​ನ ಪೂರ್ಣ ಫೇಸ್ ವ್ಯಾಲ್ಯೂ ಮೇಲೆ ಶೇ. 28ರಷ್ಟು ಜಿಎಸ್​ಟಿ ವಿಧಿಸಲಾಗುತ್ತಿದೆ. ಆದರೆ, ಈ ಪೂರ್ಣ ಬೆಟ್ಟಿಂಗ್ ಮೊತ್ತಕ್ಕೆ ಜಿಎಸ್​ಟಿ ಬೇಡ. ಸಿಜಿಆರ್ ಅಥವಾ ಗ್ರಾಸ್ ಗೇಮಿಂಗ್ ರೆವೆನ್ಯೂ ಮೇಲೆ ಮಾತ್ರ ತೆರಿಗೆ ಹಾಕಿ ಎನ್ನುವುದು ಆನ್ಲೈನ್ ಗೇಮಿಂಗ್ ಸಂಸ್ಥೆಗಳ ಮನವಿ ಆಗಿದೆ.

ಇದನ್ನೂ ಓದಿ: ಇಂಡಸ್ ಟವರ್ಸ್​ನ ಶೇ. 20ರಷ್ಟು ಷೇರುಪಾಲು ಮಾರಿದ ವೊಡಾಫೋನ್; 17,065 ಕೋಟಿ ರೂಗೆ ಬಿಕರಿ; ಷೇರುಪಾಲು ಹೆಚ್ಚಿಸಿಕೊಂಡ ಏರ್ಟೆಲ್

ಇಲ್ಲಿ ಫುಲ್ ಫೇಸ್ ವ್ಯಾಲ್ಯೂ ಎಂದರೆ ಆಟಗಾರನೊಬ್ಬ ಬೆಟ್ಟಿಂಗ್ ಇರಿಸುವ ಮೊತ್ತ ಅಥವಾ ಸ್ಪರ್ಧೆಯ ಪ್ರವೇಶ ಮೊತ್ತವಾಗಿದೆ. ಇನ್ನು, ಗ್ರಾಸ್ ಗೇಮಿಂಗ್ ರೆವೆನ್ಯೂ ಎಂಬುದು ಬೆಟ್ಟಿಂಗ್ ಇರಿಸಿದ ಮೊತ್ತ ಮತ್ತು ಗೆಲುವಿನ ಮೊತ್ತದ ನಡುವಿನ ವ್ಯತ್ಯಾಸ ಆಗಿರುತ್ತದೆ. ಸಿಜಿಆರ್ ಮೊತ್ತಕ್ಕೆ ಜಿಎಸ್​ಟಿ ಹಾಕಿ ಎಂಬುದು ಉದ್ಯಮದ ಬೇಡಿಕೆ.

ಕಳೆದ ವರ್ಷ ಫುಲ್ ಫೇಸ್ ವ್ಯಾಲ್ಯೂ ಅಥವಾ ಪೂರ್ಣ ಬೆಟ್ಟಿಂಗ್ ಮೊತ್ತಕ್ಕೆ 28 ಪ್ರತಿಶತದಷ್ಟು ಜಿಎಸ್​ಟಿ ಹಾಕಲಾಗಿತ್ತು. ಅಕ್ಟೋಬರ್ 1ರಿಂದ ಆರು ತಿಂಗಳವರೆಗೆ ಈ ತೆರಿಗೆಯನ್ನು ಪ್ರಾಯೋಗಿಕವಾಗಿ ಜಾರಿಗೊಳಿಸಲಾಗುವುದು, ಆ ಬಳಿಕ ಮರುಪರಿಶೀಲಿಸಲಾಗುವುದು ಎಂದು ಹೇಳಲಾಗಿತ್ತು. ಈಗ ಆರು ತಿಂಗಳು ದಾಟಿರುವುದರಿಂದ ಜಿಎಸ್​ಟಿ ಕ್ರಮವನ್ನು ಬದಲಿಸಲಾಗಬಹುದು ಎಂಬ ನಿರೀಕ್ಷೆ ಹುಟ್ಟಿದೆ. ಈ ರೀತಿಯ ವರದಿಗಳು ಬರುತ್ತಲೇ ಗೇಮಿಂಗ್ ಕಂಪನಿಗಳ ಷೇರುಬೆಲೆ ಇಂದು ಏರಿಕೆ ಆಗಿತ್ತು.

ಇದನ್ನೂ ಓದಿ: ಅಪ್ಪ, ಹೆಂಡತಿಯನ್ನು ನಿರ್ದಯವಾಗಿ ಹೊರಗಿಟ್ಟ ಗೌತಮ್ ಸಿಂಘಾನಿಯಾರನ್ನು ಹೊರಗಿಡಿ: ರೇಮಂಡ್ಸ್ ಷೇರುದಾರರಿಗೆ ಐಐಎಎಸ್ ಮನವಿ

ಪುನರಾವರ್ತಿತ ಬೆಟ್ಟಿಂಗ್​ಗಳಿಗೆ ಜಿಎಸ್​ಟಿ ಇರೋದಿಲ್ಲ…

ಬೆಟ್ಟಿಂಗ್​ನ ಫುಲ್ ಫೇಸ್ ವ್ಯಾಲ್ಯೂ ಮೇಲೆ 28 ಪ್ರತಿಶತದಷ್ಟು ಜಿಎಸ್​ಟಿ ಹಾಕುವ ನಿರ್ಧಾರ ಮಾಡಿದಾಗ ಉದ್ಯಮ ಶಾಕ್ ಆಗಿದ್ದು ಹೌದು. ಆಟಗಾರ ಪ್ರತೀ ಬಾರಿ ಬೆಟ್ಟಿಂಗ್ ಇಟ್ಟಾಗಲೂ ಶೇ. 28ರಷ್ಟು ತೆರಿಗೆ ಕಟ್ಟಬೇಕಾದೀತು ಎಂದು ಹೇಳಲಾಗಿತ್ತು. ಆದರೆ, ಜಿಎಸ್​ಟಿ ಮಂಡಳಿ ಈ ಬಗ್ಗೆ ಸ್ಪಷ್ಟನೆ ನೀಡಿದ್ದು, ಬೆಟ್ಟಿಂಗ್ ಇರಿಸುವ ಅಟಗಾರ ತಾನು ಗೆದ್ದ ಹಣವನ್ನು ಹಿಂಪಡೆದುಕೊಳ್ಳದೇ ಮತ್ತೆ ಬೆಟ್ಟಿಂಗ್ ಇಟ್ಟರೆ ಆ ಹಣಕ್ಕೆ ಜಿಎಸ್​ಟಿ ವಿಧಿಸಲಾಗುವುದಿಲ್ಲ ಎಂದು ಹೇಳಿತ್ತು. ಆದರೂ ಕೂಡ ಪೂರ್ಣ ಬೆಟ್ಟಿಂಗ್ ಮೊತ್ತದ ಬದಲು ಜಿಜಿಆರ್​ಗೆ ಮಾತ್ರವೇ ಜಿಎಸ್​ಟಿ ಹಾಕಿ ಎಂಬುದು ಉದ್ಯಮದ ಮನವಿಯಾಗಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ