ಅಪ್ಪ, ಹೆಂಡತಿಯನ್ನು ನಿರ್ದಯವಾಗಿ ಹೊರಗಿಟ್ಟ ಗೌತಮ್ ಸಿಂಘಾನಿಯಾರನ್ನು ಹೊರಗಿಡಿ: ರೇಮಂಡ್ಸ್ ಷೇರುದಾರರಿಗೆ ಐಐಎಎಸ್ ಮನವಿ

Raymonds AGM on June 27th: ಮಾಲೀಕರ ಕೌಟುಂಬಿಕ ಜಗಳ ಮೂಲಕ ವಿವಾದಕ್ಕೆ ಈಡಾಗಿರುವ ರೇಮಂಡ್ಸ್ ಸಂಸ್ಥೆಯ ಎಜಿಎಂ ಅಥವಾ ವಾರ್ಷಿಕ ಮಹಾಸಭೆ ಜೂನ್ 27ರಂದು ನಡೆಯಲಿದೆ. ಛೇರ್ಮನ್ ಮತ್ತು ಎಂಡಿ ಗೌತಮ್ ಸಿಂಘಾನಿಯಾ ಅವರು ಮುಂದಿನ ಐದು ವರ್ಷ ಮಂಡಳಿ ನಿರ್ದೇಶಕರಾಗಿ ಮರು ಆಯ್ಕೆ ಬಯಸಿದ್ದಾರೆ. ಷೇರುದಾರರಿಂದ ಅಂದು ವೋಟಿಂಗ್ ನಡೆಯಲಿದೆ. ಗೌತಮ್ ಸಿಂಘಾನಿಯಾ ವಿರುದ್ಧವಾಗಿ ಮತ ಚಲಾಯಿಸುವಂತೆ ಷೇರುದಾರರಿಗೆ ಐಐಎಎಸ್ ಸಂಸ್ಥೆ ಸಲಹೆ ನೀಡಿದೆ.

ಅಪ್ಪ, ಹೆಂಡತಿಯನ್ನು ನಿರ್ದಯವಾಗಿ ಹೊರಗಿಟ್ಟ ಗೌತಮ್ ಸಿಂಘಾನಿಯಾರನ್ನು ಹೊರಗಿಡಿ: ರೇಮಂಡ್ಸ್ ಷೇರುದಾರರಿಗೆ ಐಐಎಎಸ್ ಮನವಿ
ಗೌತಮ್ ಸಿಂಘಾನಿಯಾ
Follow us
|

Updated on: Jun 19, 2024 | 10:46 AM

ನವದೆಹಲಿ, ಜೂನ್ 19: ರೇಮಂಡ್ಸ್ ಸಂಸ್ಥೆಯ ಛೇರ್ಮನ್ ಮತ್ತು ಎಂಡಿಯಾಗಿ ಮರು ಆಯ್ಕೆ ಬಯಸುತ್ತಿರುವ ಗೌತಮ್ ಸಿಂಘಾನಿಯಾ (Gautam Singhania) ವಿರುದ್ಧ ಮತ ಚಲಾಯಿಸುವಂತೆ ಐಐಎಎಸ್ ಸಂಸ್ಥೆ (IiAS) ಸಲಹೆ ನೀಡಿದೆ. ಜೂನ್ 27ರಂದು ರೇಮಂಡ್ಸ್​ನ ವಾರ್ಷಿಕ ಮಹಾಸಭೆ (Raymonds AGM) ನಡೆಯಲಿದ್ದು, ಅಲ್ಲಿ ಷೇರುದಾರರಿಂದ ವೋಟಿಂಗ್ ಆಗಲಿದೆ. ಷೇರುದಾರರಿಗೆ ಸಲಹೆ ನೀಡುವ ಸಂಸ್ಥೆಯಾಗಿರುವ ಐಐಎಎಸ್, ರೇಮಂಡ್ಸ್​ನಿಂದ ಗೌತಮ್ ಸಿಂಘಾನಿಯಾ ಹಾಗೂ ಅವರ ಪತ್ನಿ ನವಾಜ್ ಮೋದಿ ಅವರನ್ನು ಪದಚ್ಯುತಗೊಳಿಸುವಂತೆ ಕಂಪನಿಯ ನಿರ್ದೇಶಕರ ಮಂಡಳಿಗೂ ಸಲಹೆ ನೀಡಿದೆ. ಅವರಿಬ್ಬರ ಡಿವೋರ್ಸ್ ಪ್ರಕ್ರಿಯೆ ಅಂತಿಮಗೊಳ್ಳುವವರಿಗೂ ಅವರನ್ನು ಮಂಡಳಿಯಿಂದ ಹೊರಗಿಡಬೇಕು ಎಂಬುದು ಅದರ ಸಲಹೆ.

ಗೌತಮ್ ಸಿಂಘಾನಿಯಾ ಅವರು 1990ರ ಏಪ್ರಿಲ್ 1ರಿಂದ ರೇಮಂಡ್ಸ್ ನಿರ್ದೇಶಕ ಮಂಡಳಿಯಲ್ಲಿದ್ದಾರೆ. ತಮ್ಮ ತಂದೆ ಸ್ಥಾಪಿಸಿದ್ದ ಕಂಪನಿಯಿಂದ ಅವರನ್ನೇ ಹೊರಗೆ ಹಾಕಿದ ಅಪಖ್ಯಾತಿ ಗೌತಮ್ ಅವರಿಗಿದೆ. ಅವರ ತಂದೆ ವಿಜಯಪತ್ ಸಿಂಘಾನಿಯಾ ತಮ್ಮ ಬಹುತೇಕ ಆಸ್ತಿಯನ್ನು ಮಗನಿಗೆ ಧಾರೆ ಎರೆದುಕೊಟ್ಟು ಈಗ ಕೆಳಮಧ್ಯಮ ಮಟ್ಟದಲ್ಲಿ ಬದಕು ನೂಕುತ್ತಿದ್ದಾರೆ. ಇತ್ತೀಚೆಗೆ ಗೌತಮ್ ಸಿಂಘಾನಿಯಾ ತಮ್ಮ ಪತ್ನಿ ನವಾಜ್ ಮೋದಿಯನ್ನೂ ಮನೆಯಿಂದ ಹೊರಗಿಟ್ಟಿದ್ದಾರೆ. ಇಬ್ಬರ ಡಿವೋರ್ಸ್ ಪ್ರಕರಣ ಕೋರ್ಟ್ ಕಟಕಟೆಯಲ್ಲಿದೆ.

ಇದನ್ನೂ ಓದಿ: ತೆರಿಗೆ ವಿನಾಯಿತಿ ಮಿತಿ 3 ಲಕ್ಷದಿಂದ 5 ಲಕ್ಷಕ್ಕೆ ಏರಿಸುವ ಸಾಧ್ಯತೆ; ಮಧ್ಯಮ ವರ್ಗದವರಿಗೆ ಸಿಗಲಿದೆ ರಿಲೀಫ್

‘ಡಿವೋರ್ಸ್​ಗೆ ಸಂಬಂಧಿತ ವ್ಯಾಜ್ಯಗಳು ಅಂತಿಮಗೊಳ್ಳುವವರೆಗೂ, ಮತ್ತು ಸ್ವತಂತ್ರ ತನಿಖೆಯ ಅಂಶಗಳು ಪ್ರಕಟವಾಗುವವರೆಗೂ ಗೌತಮ್ ಸಿಂಘಾನಿಯಾ ಮತ್ತು ನವಾಜ್ ಮೋದಿ ಅವರನ್ನು ಮಂಡಳಿಯಿಂದ ಹೊರಗಿಡಬೇಕೆಂದು ನಿರೀಕ್ಷಿಸುತ್ತೇವೆ,’ ಎಂದು ಇನ್ಸ್​ಟಿಟ್ಯೂಷನಲ್ ಇನ್ವೆಸ್ಟರ್ ಅಡ್ವೈಸರಿ ಸರ್ವಿಸಸ್ (IiAS) ಸಂಸ್ಥೆ ತಿಳಿಸಿದೆ.

ಗೌತಮ್ ಸಿಂಘಾನಿಯಾ ಅವರು ಐದು ವರ್ಷ ಮಂಡಳಿ ನಿರ್ದೇಶಕ ಸ್ಥಾನಕ್ಕೆ ಮರು ಆಯ್ಕೆ ಬಯಸಿದ್ದಾರೆ. ಇದಕ್ಕೆ ರೇಮಂಡ್ಸ್ ಸಂಸ್ಥೆಯೂ ಒಪ್ಪಿದೆ. ಷೇರುದಾರರ ಅನುಮೋದನೆ ದೊರೆತರೆ ಸಿಂಘಾನಿಯಾ ರೇಮಂಡ್ಸ್ ಮುಖ್ಯಸ್ಥರಾಗಿ ಮುಂದುವರಿಯಲಿದ್ದಾರೆ.

ಗೌತಮ್ ಸಿಂಘಾನಿಯಾ ವಿರುದ್ಧ ತನಿಖೆ ಏನು?

ಗೌತಮ್ ಸಿಂಘಾನಿಯಾ ಅವರು ಕಂಪನಿಯ ಹಣವನ್ನು ವೈಯಕ್ತಿಕ ಕಾರ್ಯಗಳಿಗೆ ದುರ್ಬಳಕೆ ಮಾಡಿಕೊಂಡಿದ್ದಾರೆ ಎಂಬ ಆರೋಪವನ್ನು ಅವರ ಪತ್ನಿ ನವಾಜ್ ಮೋದಿ ಮಾಡಿದ್ದಾರೆ. ಈ ಬಗ್ಗೆ ಸ್ವತಂತ್ರ ತನಿಖೆ ಆರಂಭಗೊಂಡು ಪೂರ್ಣಗೊಳ್ಳುವವರೆಗೂ ಇಬ್ಬರನ್ನೂ ಮಂಡಳಿಯಿಂದ ಹೊರಗಿಡುವ ಜವಾಬ್ದಾರಿ ಷೇರುದಾರರಿಗಿದೆ ಎಂಬುದು ಐಐಎಎಸ್​ನ ಅನಿಸಿಕೆ.

ಇದನ್ನೂ ಓದಿ: ರಿಫೆಕ್ಸ್ ಇಂಡಸ್ಟ್ರೀಸ್, 65 ಪೈಸೆ ಇದ್ದ ಷೇರುಬೆಲೆ 10 ವರ್ಷದಲ್ಲಿ ಅದ್ಭುತ ಹೆಚ್ಚಳ; ಹೂಡಿಕೆದಾರರಿಗೆ ಎಷ್ಟು ಲಾಭ ಆಗಿರಬಹುದು ನೋಡಿ…

ಗೌತಮ್ ಸಿಂಘಾನಿಯಾ ಸಂಬಳವೂ ವಿವಾದದಲ್ಲಿ…

ರೇಮಂಡ್ಸ್ ಛೇರ್ಮನ್ ಮತ್ತು ಎಂಡಿಯಾಗಿ ಅವರು ಪಡೆಯುತ್ತಿರುವ ಸಂಬಳ ವಿಚಾರವೂ ಚರ್ಚಾಸ್ಪದವಾಗಿದೆ. 2023-24ರಲ್ಲಿ ಗೌತಮ್ ಸಿಂಘಾನಿಯಾ ಸಂಬಳ 20 ಕೋಟಿ ರೂ ಇದೆ. ಇದು ಇತರ ರೇಮಂಡ್ಸ್ ಉದ್ಯೋಗಿಗಳ ಸರಾಸರಿ ಸಂಬಳಕ್ಕಿಂತ 500 ಪಟ್ಟು ಹೆಚ್ಚು. ಇದು ನಿಯಮಕ್ಕೆ ವಿರುದ್ದವಾಗಿದೆ. ಈಗ 35 ಕೋಟಿ ರೂಗೆ ಸಂಬಳ ಹೆಚ್ಚಿಸಿಕೊಳ್ಳಲು ಹೊರಟಿದ್ದಾರೆ. ನಿಯಮದ ಪ್ರಕಾರ ಇದು ರೆಗ್ಯುಲೇಟರಿ ಲಿಮಿಟ್​ಗಿಂತ ಐದು ಪರ್ಸೆಂಟ್ ಹೆಚ್ಚು ಎಂಬುದು ಪ್ರಾಕ್ಸಿ ಅಡ್ವೈಸರಿ ಸಂಸ್ಥೆಯಾಗಿರುವ ಐಐಎಎಸ್​ನ ಆರೋಪ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಹೆಚ್​ಡಿ ಕುಮಾರಸ್ವಾಮಿ ಸುದ್ದಿಗೋಷ್ಠಿ ಲೈವ್​
ಹೆಚ್​ಡಿ ಕುಮಾರಸ್ವಾಮಿ ಸುದ್ದಿಗೋಷ್ಠಿ ಲೈವ್​
ಕೊಪ್ಪಳ: ಕೆಸರುಮಯವಾದ ರಸ್ತೆ, ಭತ್ತ ನಾಟಿ ಮಾಡಿ ಗ್ರಾಮಸ್ಥರ ಆಕ್ರೋಶ
ಕೊಪ್ಪಳ: ಕೆಸರುಮಯವಾದ ರಸ್ತೆ, ಭತ್ತ ನಾಟಿ ಮಾಡಿ ಗ್ರಾಮಸ್ಥರ ಆಕ್ರೋಶ
ದೇವರಿಗೆ ಯಾವ ದಿನ ಯಾವ ನೈವೇದ್ಯ ಅರ್ಪಿಸಬೇಕು? ವಿಡಿಯೋ ನೋಡಿ
ದೇವರಿಗೆ ಯಾವ ದಿನ ಯಾವ ನೈವೇದ್ಯ ಅರ್ಪಿಸಬೇಕು? ವಿಡಿಯೋ ನೋಡಿ
ಈ ರಾಶಿಯವರಿಗೆ ಆಗಬೇಕಾದ ವಿವಾಹವು ಕಾರಾಣಾಂತರದಿಂದ ಮುಂದೆ ಹೋಗಲಿದೆ
ಈ ರಾಶಿಯವರಿಗೆ ಆಗಬೇಕಾದ ವಿವಾಹವು ಕಾರಾಣಾಂತರದಿಂದ ಮುಂದೆ ಹೋಗಲಿದೆ
FIR ದಾಖಲಾಗಿದ್ದರೂ ಸುದೀರ್ಘ 8 ವರೆ ಗಂಟೆ ಪ್ರಗತಿ ಪರಿಶೀಲನಾ ಸಭೆ ನಡೆಸಿದ CM
FIR ದಾಖಲಾಗಿದ್ದರೂ ಸುದೀರ್ಘ 8 ವರೆ ಗಂಟೆ ಪ್ರಗತಿ ಪರಿಶೀಲನಾ ಸಭೆ ನಡೆಸಿದ CM
ಉಜ್ಜಯಿನಿ ಮಹಾಕಾಳೇಶ್ವರ ದೇವಸ್ಥಾನದ ಗೋಡೆ ಕುಸಿದು ಇಬ್ಬರು ಸಾವು
ಉಜ್ಜಯಿನಿ ಮಹಾಕಾಳೇಶ್ವರ ದೇವಸ್ಥಾನದ ಗೋಡೆ ಕುಸಿದು ಇಬ್ಬರು ಸಾವು
ಈ ಪ್ರಕರಣದಲ್ಲಿ ನಂಗೆ ಗಂಡಾಂತರ ಇಲ್ಲ: ಲೋಕಾಯುಕ್ತ ವಿಚಾರಣೆ ಬಳಿಕ HDK ಮಾತು
ಈ ಪ್ರಕರಣದಲ್ಲಿ ನಂಗೆ ಗಂಡಾಂತರ ಇಲ್ಲ: ಲೋಕಾಯುಕ್ತ ವಿಚಾರಣೆ ಬಳಿಕ HDK ಮಾತು
ಸಿಎಂ ವಿರುದ್ಧ FIR: ಪಂಜು ಹಿಡಿದು ಪ್ರತಿಭಟನೆ ನಡೆಸಿದ ಸಿದ್ದು ಬೆಂಬಲಿಗರು
ಸಿಎಂ ವಿರುದ್ಧ FIR: ಪಂಜು ಹಿಡಿದು ಪ್ರತಿಭಟನೆ ನಡೆಸಿದ ಸಿದ್ದು ಬೆಂಬಲಿಗರು
ದಿಲ್ಲಿಯಿಂದ ನೇರವಾಗಿ ಬೆಂಗಳೂರಿನ ಲೋಕಾಯುಕ್ತ ಕಚೇರಿಗೆ ಬಂದ ಕುಮಾರಸ್ವಾಮಿ
ದಿಲ್ಲಿಯಿಂದ ನೇರವಾಗಿ ಬೆಂಗಳೂರಿನ ಲೋಕಾಯುಕ್ತ ಕಚೇರಿಗೆ ಬಂದ ಕುಮಾರಸ್ವಾಮಿ
ಅರಮನೆ ಆವರಣದಲ್ಲಿ ಸಿದ್ದುಗೆ ದಸರಾ ಆನೆಗಳು ಸೆಲ್ಯೂಟ್
ಅರಮನೆ ಆವರಣದಲ್ಲಿ ಸಿದ್ದುಗೆ ದಸರಾ ಆನೆಗಳು ಸೆಲ್ಯೂಟ್