AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ರಿಫೆಕ್ಸ್ ಇಂಡಸ್ಟ್ರೀಸ್, 65 ಪೈಸೆ ಇದ್ದ ಷೇರುಬೆಲೆ 10 ವರ್ಷದಲ್ಲಿ ಅದ್ಭುತ ಹೆಚ್ಚಳ; ಹೂಡಿಕೆದಾರರಿಗೆ ಎಷ್ಟು ಲಾಭ ಆಗಿರಬಹುದು ನೋಡಿ…

Refex Industries share price updates: ರೆಫ್ರಿಜರೇಟರ್ ಉದ್ಯಮದಲ್ಲಿರುವ ರಿಫೆಕ್ಸ್ ಇಂಡಸ್ಟ್ರೀಸ್ ಸಂಸ್ಥೆಯ ಷೇರು ಭರ್ಜರಿಯಾಗಿ ಬೆಳೆದಿದೆ. 2019ರಿಂದ ಅದರ ಷೇರುಬೆಲೆ ಗಣನೀಯವಾಗಿ ಹೆಚ್ಚಾಗಿದೆ. 2013ರಲ್ಲಿ ಕೇವಲ 65 ಪೈಸೆ ಇದ್ದ ಅದರ ಬೆಲೆ ಈಗ 166 ರೂ ಗಡಿ ದಾಟಿದೆ. ಹನ್ನೊಂದು ವರ್ಷದ ಹಿಂದೆ ಅದರ ಮೇಲೆ ಒಂದು ಲಕ್ಷ ರೂ ಹೂಡಿಕೆ ಮಾಡಿದ್ದರೆ ಇವತ್ತು ಸಿಗುತ್ತಿದ್ದ ಲಾಭ ಎರಡೂವರೆ ಕೋಟಿ ರೂ ಆಗಿರುತ್ತಿತ್ತು.

ರಿಫೆಕ್ಸ್ ಇಂಡಸ್ಟ್ರೀಸ್, 65 ಪೈಸೆ ಇದ್ದ ಷೇರುಬೆಲೆ 10 ವರ್ಷದಲ್ಲಿ ಅದ್ಭುತ ಹೆಚ್ಚಳ; ಹೂಡಿಕೆದಾರರಿಗೆ ಎಷ್ಟು ಲಾಭ ಆಗಿರಬಹುದು ನೋಡಿ...
ರಿಫೆಕ್ಸ್ ಇಂಡಸ್ಟ್ರೀಸ್
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Jun 18, 2024 | 5:08 PM

Share

ಮುಂಬೈ, ಜೂನ್ 18: ಷೇರು ಮಾರುಕಟ್ಟೆಯಲ್ಲಿ ಬಹಳಷ್ಟು ಹೂಡಿಕೆದಾರರು ಪೆನ್ನಿ ಸ್ಟಾಕ್​​ಗಳಿಗಾಗಿ (Penny stock) ಹುಡುಕುತ್ತಿರುತ್ತಾರೆ. ಬಹಳ ಕಡಿಮೆ ಬೆಲೆಯಲ್ಲಿರುವ ಈ ಷೇರುಗಳು ಬೇಗ ಬೆಳೆಯುವ ಸಾಧ್ಯತೆ ಇರುತ್ತದೆ. ಉತ್ತಮವಾಗಿ ಬೆಳೆಯಬಲ್ಲಂತಹ ಪೆನ್ನಿ ಸ್ಟಾಕ್​ಗಳನ್ನು ಗುರುತಿಸಿ ಅದರ ಮೇಲೆ ಹೂಡಿಕೆ ಮಾಡಿದರೆ ಅದು ಅದ್ಭುತ ಧನಲಾಭ ತಂದುಕೊಡಬಲ್ಲುದು. ಇಂಥ ಪೆನ್ನಿ ಸ್ಟಾಕ್​ಗಳಲ್ಲಿ ರಿಫೆಕ್ಸ್ ಇಂಡಸ್ಟ್ರೀಸ್ (Refex Industries) ಒಂದು. ಇವತ್ತು ಇದು ಪೆನ್ನಿ ಸ್ಟಾಕ್ ಆಗಿ ಉಳಿದಿಲ್ಲವಾದರೂ ಒಂದು ಕಾಲದಲ್ಲಿ ಕೇವಲ 65 ಪೈಸೆ ಇದ್ದ ಇದರ ಷೇರುಬೆಲೆ ಇವತ್ತು 166 ರೂ ಆಗಿದೆ.

ತಮಿಳುನಾಡು ಮೂಲದ ರಿಫೆಕ್ಸ್ ಇಂಡಸ್ಟ್ರೀಸ್ ಸಂಸ್ಥೆ ರೆಫ್ರಿಜರೆಂಟ್ ಗ್ಯಾಸ್​ಗಳನ್ನು ತಯಾರಿಸುತ್ತದೆ. ಸಾಂಪ್ರದಾಯಿಕವಾಗಿ ಬಳಸಲಾಗುವ ಕ್ಲೋರೋ ಫ್ಲೋರೋ ಕಾರ್ಬನ್​ಗಳಿಗೆ ಪರ್ಯಾಯವಾದ ಮತ್ತು ಪರಿಸರಸ್ನೇಹಿ ಎಂದು ಪರಿಗಣಿಸಲಾದ ರೆಫ್ರಿಜರೆಂಟ್ ಗ್ಯಾಸ್​ಗಳನ್ನು ಇದು ತಯಾರಿಸುತ್ತದೆ.

ಇದನ್ನೂ ಓದಿ: ಐಪಿಒದಲ್ಲಿ ಷೇರು ಖರೀದಿಸಿ ಲಿಸ್ಟಿಂಗ್​ನಲ್ಲಿ ಮಾರಿದಾಗ ಎಷ್ಟು ತೆರಿಗೆ ಕಟ್ಟಬೇಕು?

ರಿಫೆಕ್ಸ್ ಇಂಡಸ್ಟ್ರೀಸ್ 2009ರಲ್ಲಿ ಷೇರು ಮಾರುಕಟ್ಟೆಗೆ ಬಂದಾಗಿನಿಂದ ಶೇ. 2,389ರಷ್ಟು ಏರಿಕೆ ಆಗಿದೆ. 2019ರಿಂದ ಇದರ ಗಮನಾರ್ಹ ಪ್ರಗತಿಯನ್ನು ಕಾಣಬಹುದು. ನಾಲ್ಕು ಹಂತಗಳಲ್ಲಿ ಇದು ಜಿಗಿತ ಕಂಡಿದೆ. 2019ರಲ್ಲಿ, 2022ರಲ್ಲಿ, 2023ರ ಮಾರ್ಚ್​ನಲ್ಲಿ ಮತ್ತು 2023ರ ನವೆಂಬರ್ ತಿಂಗಳಲ್ಲಿ ಇದು ಸೂಪರ್ ಜಿಗಿತ ಕಂಡಿದೆ.

2013ರಲ್ಲಿ ಒಮ್ಮೆ ಇದರ ಷೇರು ಬೆಲೆ ಕೇವಲ 65 ಪೈಸೆಗೆ ಇಳಿದಿತ್ತು. ಇವತ್ತು ಮಂಗಳವಾರದ ಕೊನೆಯಲ್ಲಿ 166.28 ಬೆಲೆ ಪಡೆದಿದೆ. 65 ಪೈಸೆ ಬೆಲೆ ಇದ್ದ 2013ರಲ್ಲಿ ಇದರ ಮೇಲೆ ಯಾರಾದರೂ ಒಂದು ಲಕ್ಷ ರೂ ಹೂಡಿಕೆ ಮಾಡಿದ್ದರೆಂದಿಟ್ಟುಕೊಳ್ಳಿ. ಈ ಹನ್ನೊಂದು ವರ್ಷದಲ್ಲಿ ಅವರಿಗೆ ಬರುತ್ತಿದ್ದ ಲಾಭ ಬರೋಬ್ಬರಿ ಎರಡೂವರೆ ಕೋಟಿ ರೂಗಿಂತಲೂ ಹೆಚ್ಚು. ಒಂದು ಲಕ್ಷಕ್ಕೆ ಎರಡೂವರೆ ಕೋಟಿ ರೂ ಲಾಭ ಎಂದರೆ ಸಾಮಾನ್ಯದ ಮಾತಲ್ಲ. ಶೇ. 75ರ ವಾರ್ಷಿಕ ದರದಲ್ಲಿ ಈ ಷೇರುಬೆಲೆ ಬೆಳೆದಂತಾಗಿದೆ.

ಇದನ್ನೂ ಓದಿ: 2023-24ರಲ್ಲಿ ಸರ್ಕಾರಿ ಉದ್ದಿಮೆಗಳ ಒಟ್ಟು ಲಾಭ 5 ಲಕ್ಷ ಕೋಟಿ ರೂ; ಹೊಸ ಮೈಲಿಗಲ್ಲು

ದೀರ್ಘಾವಧಿ ಹೂಡಿಕೆ ಮಾಡುವವರಿಗೆ….

ಷೇರು ಮಾರುಕಟ್ಟೆಯಲ್ಲಿ ಎಲ್ಲವನ್ನೂ ಖಚಿತವಾಗಿ ಹೇಳಲು ಆಗುವುದಿಲ್ಲ. ರೀಫೆಕ್ಸ್ ಇಂಡಸ್ಟ್ರೀಸ್​ನ ಷೇರಿನಲ್ಲಿ 2009ರಲ್ಲಿ ಯಾರಾದರೂ ಹೂಡಿಕೆ ಮಾಡಿದ್ದರೆ ಹತ್ತು ವರ್ಷ ಕಾಲ ಅವರಿಗೆ ಲಾಭವೇ ಬಂದಿರಲಿಲ್ಲ. ಅಲ್ಲಿಯವರೆಗೆ ಅವರು ಸಂಯಮದಿಂದ ಕಾದಿದ್ದರೆ ಪರವಾಗಿಲ್ಲ. ಇಲ್ಲದಿದ್ದರೆ ಮಿಂಚಿನ ಓಟವನ್ನು ಕಾಣುವ ಸೌಭಾಗ್ಯ ತಪ್ಪಿ ಹೋಗಿರುತ್ತಿತ್ತು.

ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Follow Us
ಸುಗ್ಗನಹಳ್ಳಿ ವಿಜಯಸಾರಥಿ
ಸುಗ್ಗನಹಳ್ಳಿ ವಿಜಯಸಾರಥಿ

ಹುಟ್ಟೂರು ಹಾಸನ ಜಿಲ್ಲೆಯ ಶ್ರವಣಬೆಳಗೊಳ ಸಮೀಪದ ಒಂದು ಪುಟ್ಟ ಹಳ್ಳಿ. ಬೆಳದದ್ದು ಬೆಂಗಳೂರು ನಗರದಲ್ಲಿ. ಹಲವು ವರ್ಷಗಳಿಂದ ಪತ್ರಿಕಾ ರಂಗದಲ್ಲಿ ನೆಲೆ. ಬರವಣಿಗೆಯ ಆಸಕ್ತಿ ಮತ್ತು ಪರಿಣಿತಿಯ ಕ್ಷೇತ್ರಗಳು ಆರ್ಥಿಕತೆ, ಹಣಕಾಸು, ಅಂತರರಾಷ್ಟ್ರೀಯ ವಿದ್ಯಮಾನ, ಜನಕ್ರಾಂತಿ, ರಾಷ್ಟ್ರೀಯತೆ, ಸಂಸ್ಕೃತಿ, ಮಾನವ ಸಂಬಂಧ, ಕ್ರೀಡೆ ಮೊದಲಾದವು ಇವೆ. ಓದುಗರಿಗೆ ಸುಲಭವಾಗಿ ಅರ್ಥವಾಗುವಂತೆ ಸಾಧ್ಯವಾದಷ್ಟೂ ಸ್ಫುಟವಾಗಿ, ಸರಳವಾಗಿ ಬರೆಯುವ ಇಚ್ಛೆ.

Read More
ವಿದ್ಯುತ್ ದೀಪಾಲಂಕಾರದಿಂದ ಝಗಮಗಿಸಿದ ಮೈಸೂರು: ನೋಡ ನೋಡ ಎಷ್ಟು ಚಂದ ಅಲಾ
ವಿದ್ಯುತ್ ದೀಪಾಲಂಕಾರದಿಂದ ಝಗಮಗಿಸಿದ ಮೈಸೂರು: ನೋಡ ನೋಡ ಎಷ್ಟು ಚಂದ ಅಲಾ
ಸ್ಟಿಂಗ್​ ಆಪರೇಷನ್​ ಯಾರು ಮಾಡುತ್ತಿದ್ದಾರೆಂದು ಗೊತ್ತಿದೆ ಎಂದ ಸಿದ್ದರಾಮಯ್ಯ
ಸ್ಟಿಂಗ್​ ಆಪರೇಷನ್​ ಯಾರು ಮಾಡುತ್ತಿದ್ದಾರೆಂದು ಗೊತ್ತಿದೆ ಎಂದ ಸಿದ್ದರಾಮಯ್ಯ
ಸ್ಟಿಂಗ್ ಆಪರೇಷನ್ ಮಾಂತ್ರಿಕ ಯಾರು? ಹೋಟೆಲ್ ಸೀಕ್ರೆಟ್ ಬಿಚ್ಚಿಟ್ಟ ಕುಮಾರಣ್ಣ
ಸ್ಟಿಂಗ್ ಆಪರೇಷನ್ ಮಾಂತ್ರಿಕ ಯಾರು? ಹೋಟೆಲ್ ಸೀಕ್ರೆಟ್ ಬಿಚ್ಚಿಟ್ಟ ಕುಮಾರಣ್ಣ
‘ಪ್ರೇಮದ ಊರಲಿ’ ಸಿನಿಮಾಕ್ಕೆ ನಟಿ ರಮಿಕಾ ಡಬ್ಬಿಂಗ್: ವಿಡಿಯೋ ನೋಡಿ
‘ಪ್ರೇಮದ ಊರಲಿ’ ಸಿನಿಮಾಕ್ಕೆ ನಟಿ ರಮಿಕಾ ಡಬ್ಬಿಂಗ್: ವಿಡಿಯೋ ನೋಡಿ
‘ಪ್ರೇಮದ ಊರಲಿ’ ಸಿನಿಮಾ ಗಳಿಸಿರುವುದೆಷ್ಟು? ನಟ ಶ್ರೀರಾಮ್ ಹೇಳಿದ್ದೇನು?
‘ಪ್ರೇಮದ ಊರಲಿ’ ಸಿನಿಮಾ ಗಳಿಸಿರುವುದೆಷ್ಟು? ನಟ ಶ್ರೀರಾಮ್ ಹೇಳಿದ್ದೇನು?
11 ದಿನ ದಸರಾ ವಿಶೇಷತೆ ಬಗ್ಗೆ ಇತಿಹಾಸ ತಜ್ಞ ಡಾ.ಶೆಲ್ವಪಿಳೈ ಹೇಳಿದ್ದಿಷ್ಟು
11 ದಿನ ದಸರಾ ವಿಶೇಷತೆ ಬಗ್ಗೆ ಇತಿಹಾಸ ತಜ್ಞ ಡಾ.ಶೆಲ್ವಪಿಳೈ ಹೇಳಿದ್ದಿಷ್ಟು
ಅಜ್ಜಿ ಸಾವಿನ ಸುದ್ದಿ ತಿಳಿದರೂ ಮನೆಗೆ ತೆರಳಲು ನಿರಾಕರಿಸಿದ ಅಭಿಜೀತ್ ದಿಪ್ಕೆ
ಅಜ್ಜಿ ಸಾವಿನ ಸುದ್ದಿ ತಿಳಿದರೂ ಮನೆಗೆ ತೆರಳಲು ನಿರಾಕರಿಸಿದ ಅಭಿಜೀತ್ ದಿಪ್ಕೆ
ರೇವಣ್ಣ ಬೆನ್ನಲ್ಲೇ ಹಾಸನ ಜಿಲ್ಲಾಧಿಕಾರಿ ವಿರುದ್ಧ ಸಮರಕ್ಕಿಳಿದ ಕುಮಾರಸ್ವಾಮಿ
ರೇವಣ್ಣ ಬೆನ್ನಲ್ಲೇ ಹಾಸನ ಜಿಲ್ಲಾಧಿಕಾರಿ ವಿರುದ್ಧ ಸಮರಕ್ಕಿಳಿದ ಕುಮಾರಸ್ವಾಮಿ
ರಾಜಕಾರಣದಲ್ಲಿ ಸಂಚಲನ ಮೂಡಿಸಿದ ಕುಮಾರಸ್ವಾಮಿಯ ಸ್ಟಿಂಗ್ ಆಪರೇಷನ್ ಮಾತು
ರಾಜಕಾರಣದಲ್ಲಿ ಸಂಚಲನ ಮೂಡಿಸಿದ ಕುಮಾರಸ್ವಾಮಿಯ ಸ್ಟಿಂಗ್ ಆಪರೇಷನ್ ಮಾತು
'ನನ್ನನ್ನು ಬಂಧಿಸಿರಲಿಲ್ಲ, ಅಪಹರಿಸಿದ್ದರು'; ಯೂಟ್ಯೂಬರ್ ಧ್ರುವ್ ರಾಠೀ
'ನನ್ನನ್ನು ಬಂಧಿಸಿರಲಿಲ್ಲ, ಅಪಹರಿಸಿದ್ದರು'; ಯೂಟ್ಯೂಬರ್ ಧ್ರುವ್ ರಾಠೀ