Big News: ತೆರಿಗೆ ವಿನಾಯಿತಿ ಮಿತಿ 3 ಲಕ್ಷದಿಂದ 5 ಲಕ್ಷಕ್ಕೆ ಏರಿಸುವ ಸಾಧ್ಯತೆ; ಮಧ್ಯಮ ವರ್ಗದವರಿಗೆ ಸಿಗಲಿದೆ ರಿಲೀಫ್

Union Budget, tax exemption limit: ಕೇಂದ್ರ ಸರ್ಕಾರ ಈ ಬಾರಿಯ ಬಜೆಟ್​ನಲ್ಲಿ ಟ್ಯಾಕ್ಸ್ ಎಕ್ಸೆಂಪ್ಷನ್ ಲಿಮಿಟ್ ಅನ್ನು ಐದು ಲಕ್ಷ ರೂಗೆ ಏರಿಸಬಹುದು ಎಂದು ಹೇಳಲಾಗುತ್ತಿದೆ. ಸದ್ಯ ಹೊಸ ರೆಜಿಮೆಯಲ್ಲಿ ತೆರಿಗೆ ವಿನಾಯಿತಿ ಮಿತಿ 3 ಲಕ್ಷ ರೂ ಇದೆ. ಖಾಸಗಿ ಅನುಭೋಗ ಪ್ರಮಾಣವನ್ನು ಹೆಚ್ಚಿಸಲು ಸರ್ಕಾರ ಈ ಕ್ರಮ ಕೈಗೊಳ್ಳುವ ಸಾಧ್ಯತೆ ಇದೆ.

Big News: ತೆರಿಗೆ ವಿನಾಯಿತಿ ಮಿತಿ 3 ಲಕ್ಷದಿಂದ 5 ಲಕ್ಷಕ್ಕೆ ಏರಿಸುವ ಸಾಧ್ಯತೆ; ಮಧ್ಯಮ ವರ್ಗದವರಿಗೆ ಸಿಗಲಿದೆ ರಿಲೀಫ್
ಆದಾಯ ತೆರಿಗೆ ಇಲಾಖೆ
Follow us
|

Updated on:Jun 18, 2024 | 6:45 PM

ನವದೆಹಲಿ, ಜೂನ್ 18: ಈ ಬಾರಿ ಬಜೆಟ್​ನಲ್ಲಿ ಮಧ್ಯಮ ವರ್ಗದವರ ತೆರಿಗೆ ಹೊರೆ ಇಳಿಸುವ ಕ್ರಮ ಪ್ರಕಟಿಸಬಹುದು ಎಂಬ ಮಾತು ದಟ್ಟವಾಗಿ ಕೇಳಿಬರುತ್ತಿದೆ. ಅದಕ್ಕೆ ಪೂರಕವಾಗಿ ಸುದ್ದಿಯೊಂದು ಬಂದಿದ್ದು, ಆದಾಯ ತೆರಿಗೆ ಸ್ಲ್ಯಾಬ್​ನಲ್ಲಿ ಟ್ಯಾಕ್ಸ್ ಎಕ್ಸೆಂಪ್ಷನ್ ಮಿತಿಯನ್ನು (tax exemption limit) ಹೆಚ್ಚಿಸಲು ಸರ್ಕಾರ ಯೋಚಿಸುತ್ತಿದೆಯಂತೆ. ಮನಿಕಂಟ್ರೋಲ್​ನ ವರದಿಯೊಂದರ ಪ್ರಕಾರ ಆದಾಯ ತೆರಿಗೆ ವಿನಾಯಿತಿ ಮಿತಿಯನ್ನು ಈಗಿರುವ ಮೂರು ಲಕ್ಷ ರೂನಿಂದ ಐದು ಲಕ್ಷ ರೂಗೆ ಹೆಚ್ಚಿಸಬಹುದು ಎನ್ನಲಾಗುತ್ತಿದೆ. ಸರ್ಕಾರದ ಮೂಲಗಳನ್ನು ಉಲ್ಲೇಖಿಸಿ ಈ ವರದಿ ಬರೆಯಲಾಗಿದೆ.

ಇದೇ ವೇಳೆ, ಟ್ಯಾಕ್ಸ್ ಸ್ಲ್ಯಾಬ್​ನಲ್ಲಿ ಇರುವ ಗರಿಷ್ಠ ತೆರಿಗೆಯನ್ನು ಶೇ. 30ರಿಂದ ಶೇ. 25ಕ್ಕೆ ಇಳಿಸಬೇಕೆಂಬ ಬೇಡಿಕೆ ಇದೆ. ಹಣಕಾಸು ಸಚಿವಾಲಯ ಈ ಬೇಡಿಕೆಯನ್ನು ಪರಿಗಣಿಸುವ ಸಾಧ್ಯತೆ ಕಡಿಮೆ ಎಂದೂ ಹೇಳಲಾಗುತ್ತಿದೆ.

ಇದನ್ನೂ ಓದಿ: ನಿಮ್ಮದು ವರ್ಷಕ್ಕೆ 12 ಲಕ್ಷ ರೂ ಆದಾಯ ಇದ್ದರೆ ಎಷ್ಟು ತೆರಿಗೆ ಕಟ್ಟಬೇಕು? ಟ್ಯಾಕ್ಸ್ ಸ್ಲ್ಯಾಬ್ ಹೇಗೆ ಅನ್ವಯ ಆಗುತ್ತೆ ನೋಡಿ

ಅನುಭೋಗ ಅಥವಾ ಖರೀದಿ ಪ್ರಮಾಣ ಇಳಿಕೆಯಾಗುತ್ತಿರುವುದು ಕಾರಣ

ಭಾರತದಲ್ಲಿ ಖಾಸಗಿ ಅನುಭೋಗ ಪ್ರಮಾಣ ದರದಲ್ಲಿ ಇಳಿಕೆ ಆಗಿದೆ. ಒಂದು ವರ್ಷದಲ್ಲಿ ಶೇ. 4ರಷ್ಟು ಮಾತ್ರ ಹೆಚ್ಚಾಗಿದೆ. ಕೋವಿಡ್ ವರ್ಷ ಹೊರತುಪಡಿಸಿದರೆ ಕಳೆದ 20 ವರ್ಷದಲ್ಲಿ ಇದು ಅತ್ಯಂತ ಕಡಿಮೆ ಮಟ್ಟ ಎನ್ನಲಾಗಿದೆ. ವಿಪರ್ಯಾಸ ಎಂದರೆ ಜಿಡಿಪಿ ಶೇ. 8.2ರಷ್ಟು ಬೆಳೆದರೂ ಅನುಭೋಗದಲ್ಲಿ ನಿರೀಕ್ಷಿತ ಏರಿಕೆ ಆಗಿಲ್ಲ. ಇದು ಹಣಕಾಸು ಸಚಿವರನ್ನು ತಲೆ ಕಡಿಸಿಕೊಳ್ಳುವಂತೆ ಮಾಡಿರಬಹುದು. ಈ ಅನುಭೋಗ ಪ್ರಮಾಣವನ್ನು ಹೆಚ್ಚಿಸುವ ಸಲುವಾಗಿ ಟ್ಯಾಕ್ಸ್ ಎಕ್ಸೆಂಪ್ಷನ್ ಲಿಮಿಟ್ ಅನ್ನು ಹೆಚ್ಚಿಸಲು ಸರ್ಕಾರ ಮುಂದಾಗಬಹುದು. ಅನುಭೋಗ ಎಂದರೆ ಇಲ್ಲಿ ಜನರು ಮಾಡುವ ಖರೀದಿ.

ಶೇ. 30ರಷ್ಟಿರುವ ಗರಿಷ್ಠ ತೆರಿಗೆಯನ್ನು ಶೇ 25ಕ್ಕೆ ಇಳಿಸಲು ಸರ್ಕಾರ ನಿರಾಕರಿಸಲು ಕಾರಣ ಇದೆ. ಕೆಳಗಿನ ಸ್ತರದಲ್ಲಿ ಅನುಭೋಗ ಹೆಚ್ಚಾಗುವುದು ಸದ್ಯಕ್ಕೆ ಆರ್ಥಿಕತೆಗೆ ಪೂರಕವಾಗಿರುತ್ತದೆ ಎನ್ನುವುದು ಸರ್ಕಾರದ ಭಾವನೆ. ಟ್ಯಾಕ್ಸ್ ಎಕ್ಸೆಂಪ್ಷನ್ ಕೊಟ್ಟರೆ ಜನರಿಗೆ ಹೆಚ್ಚು ಹಣ ಉಳಿತಾಯ ಆಗುತ್ತದೆ. ಆ ಹಣವನ್ನು ಜನರು ವೆಚ್ಚಕ್ಕೆ ಬಳಸುತ್ತಾರೆ ಎನ್ನುವ ನಂಬಿಕೆ.

ಹೊಸ ಟ್ಯಾಕ್ಸ್ ರೆಜಿಮೆಯಲ್ಲಿ ಪ್ರಸಕ್ತ ಟ್ಯಾಕ್ಸ್ ಸ್ಲ್ಯಾಬ್ ಹೀಗಿದೆ

  • 3 ಲಕ್ಷ ರೂವರೆಗೆ ತೆರಿಗೆ ಇಲ್ಲ
  • 3,00,001ರಿಂದ 6,00,000 ರೂವರೆಗೆ: ಶೇ.5
  • 6,00,001ರಿಂದ 9,00,000 ರೂವರೆಗೆ: ಶೇ. 10
  • 9,00,001ರಿಂದ 12,00,000 ರೂವರೆಗೆ: ಶೇ. 15
  • 12,00,001ರಿಂದ 15,00,000 ರೂವರೆಗೆ: ಶೇ. 20
  • 15,00,000 ರೂ ಮೇಲ್ಪಟ್ಟ ಆದಾಯ: ಶೇ. 30ರಷ್ಟು ತೆರಿಗೆ

ಇದನ್ನೂ ಓದಿ: ಟರ್ಮ್ ಇನ್ಷೂರೆನ್ಸ್ ಮತ್ತು ಲೈಫ್ ಇನ್ಷೂರೆನ್ಸ್ ಮಧ್ಯೆ ವ್ಯತ್ಯಾಸ ಏನು? ಯಾವುದು ಬೆಟರ್? ಎರಡರ ಹೋಲಿಕೆ ಇಲ್ಲಿದೆ…

ಓಲ್ಡ್ ಟ್ಯಾಕ್ಸ್ ರೆಜಿಮೆಯಲ್ಲಿನ ಸ್ಲ್ಯಾಬ್​ಗಳು ಹೀಗಿವೆ:

  • ಎರಡೂವರೆ ಲಕ್ಷ ರೂವರೆಗಿನ ಆದಾಯಕ್ಕೆ ತೆರಿಗೆ ಇಲ್ಲ
  • 2,50,001ರಿಂದ 3,00,000 ರೂವರೆಗೆ: ಶೇ. 5 ತೆರಿಗೆ
  • 3,00,001ರಿಂದ 5,00,000 ರೂವರೆಗೆ: ಶೇ.5
  • 5,00,001ರಿಂದ 10,00,000 ರೂವರೆಗೆ: ಶೇ. 20
  • 10,00,000 ರೂ ಮೇಲ್ಪಟ್ಟ ಆದಾಯ: ಶೇ. 30ರಷ್ಟು ತೆರಿಗೆ

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 6:42 pm, Tue, 18 June 24

FIR ದಾಖಲಾಗಿದ್ದರೂ ಸುದೀರ್ಘ 8 ವರೆ ಗಂಟೆ ಪ್ರಗತಿ ಪರಿಶೀಲನಾ ಸಭೆ ನಡೆಸಿದ CM
FIR ದಾಖಲಾಗಿದ್ದರೂ ಸುದೀರ್ಘ 8 ವರೆ ಗಂಟೆ ಪ್ರಗತಿ ಪರಿಶೀಲನಾ ಸಭೆ ನಡೆಸಿದ CM
ಉಜ್ಜಯಿನಿ ಮಹಾಕಾಳೇಶ್ವರ ದೇವಸ್ಥಾನದ ಗೋಡೆ ಕುಸಿದು ಇಬ್ಬರು ಸಾವು
ಉಜ್ಜಯಿನಿ ಮಹಾಕಾಳೇಶ್ವರ ದೇವಸ್ಥಾನದ ಗೋಡೆ ಕುಸಿದು ಇಬ್ಬರು ಸಾವು
ಈ ಪ್ರಕರಣದಲ್ಲಿ ನಂಗೆ ಗಂಡಾಂತರ ಇಲ್ಲ: ಲೋಕಾಯುಕ್ತ ವಿಚಾರಣೆ ಬಳಿಕ HDK ಮಾತು
ಈ ಪ್ರಕರಣದಲ್ಲಿ ನಂಗೆ ಗಂಡಾಂತರ ಇಲ್ಲ: ಲೋಕಾಯುಕ್ತ ವಿಚಾರಣೆ ಬಳಿಕ HDK ಮಾತು
ಸಿಎಂ ವಿರುದ್ಧ FIR: ಪಂಜು ಹಿಡಿದು ಪ್ರತಿಭಟನೆ ನಡೆಸಿದ ಸಿದ್ದು ಬೆಂಬಲಿಗರು
ಸಿಎಂ ವಿರುದ್ಧ FIR: ಪಂಜು ಹಿಡಿದು ಪ್ರತಿಭಟನೆ ನಡೆಸಿದ ಸಿದ್ದು ಬೆಂಬಲಿಗರು
ದಿಲ್ಲಿಯಿಂದ ನೇರವಾಗಿ ಬೆಂಗಳೂರಿನ ಲೋಕಾಯುಕ್ತ ಕಚೇರಿಗೆ ಬಂದ ಕುಮಾರಸ್ವಾಮಿ
ದಿಲ್ಲಿಯಿಂದ ನೇರವಾಗಿ ಬೆಂಗಳೂರಿನ ಲೋಕಾಯುಕ್ತ ಕಚೇರಿಗೆ ಬಂದ ಕುಮಾರಸ್ವಾಮಿ
ಅರಮನೆ ಆವರಣದಲ್ಲಿ ಸಿದ್ದುಗೆ ದಸರಾ ಆನೆಗಳು ಸೆಲ್ಯೂಟ್
ಅರಮನೆ ಆವರಣದಲ್ಲಿ ಸಿದ್ದುಗೆ ದಸರಾ ಆನೆಗಳು ಸೆಲ್ಯೂಟ್
‘ದೇವರ’ ಬಿಡುಗಡೆ, ಜೂ ಎನ್​ಟಿಆರ್ ಬೃಹತ್ ಕಟೌಟ್​ಗೆ ಬೆಂಕಿ: ವಿಡಿಯೋ ನೋಡಿ
‘ದೇವರ’ ಬಿಡುಗಡೆ, ಜೂ ಎನ್​ಟಿಆರ್ ಬೃಹತ್ ಕಟೌಟ್​ಗೆ ಬೆಂಕಿ: ವಿಡಿಯೋ ನೋಡಿ
ರೋಹಿತ್​ಗೂ ಅಚ್ಚರಿ ತರಿಸಿದ ಆಕಾಶ್ ಉರುಳಿಸಿದ ವಿಕೆಟ್; ವಿಡಿಯೋ ನೋಡಿ
ರೋಹಿತ್​ಗೂ ಅಚ್ಚರಿ ತರಿಸಿದ ಆಕಾಶ್ ಉರುಳಿಸಿದ ವಿಕೆಟ್; ವಿಡಿಯೋ ನೋಡಿ
ತುಮಕೂರು-ಯಶವಂತಪುರ ಮೆಮು ರೈಲು ಸೇವೆಗೆ ಚಾಲನೆ, ಇಲ್ಲಿದೆ ಟ್ರೈನ್​ ಸಮಯ
ತುಮಕೂರು-ಯಶವಂತಪುರ ಮೆಮು ರೈಲು ಸೇವೆಗೆ ಚಾಲನೆ, ಇಲ್ಲಿದೆ ಟ್ರೈನ್​ ಸಮಯ
ಕುರುಬ ಸಮಾಜದವನಿಗೆ ಅನ್ಯಾಯ ಮಾಡ್ತಾವ್ರೆ, ಕಾಂಗ್ರೆಸ್ ಮುಖಂಡನ ಬೀದಿ ರಂಪಾಟ
ಕುರುಬ ಸಮಾಜದವನಿಗೆ ಅನ್ಯಾಯ ಮಾಡ್ತಾವ್ರೆ, ಕಾಂಗ್ರೆಸ್ ಮುಖಂಡನ ಬೀದಿ ರಂಪಾಟ