Budget Glossary: ಎಕ್ಸೆಸ್ ಗ್ರಾಂಟ್, ಇನ್​ಫ್ಲೇಶನ್, ಡೆಫಿಸಿಟ್ ಇತ್ಯಾದಿ ಬಜೆಟ್ ಪದಗಳ ಅರ್ಥ ತಿಳಿಯಿರಿ

Union Budget 2024: ಜುಲೈ ಕೊನೆಯ ವಾರದಲ್ಲಿ ಯೂನಿಯನ್ ಬಜೆಟ್ ಅಥವಾ ಕೇಂದ್ರ ಮುಂಗಡಪತ್ರವನ್ನು ಸಂಸತ್ತಿನಲ್ಲಿ ಮಂಡಿಸಲಾಗುತ್ತದೆ. ಮೂರ್ನಾಲ್ಕು ಗಂಟೆ ಕಾಲ ವಿತ್ತ ಸಚಿವೆ ಭಾಷಣ ಮಾಡಲಿದ್ದಾರೆ. ಈ ವೇಳೆ ಸಾಕಷ್ಟು ಆರ್ಥಿಕ ಪದಗಳು ನಮ್ಮ ಕಿವಿಗೆ ಬೀಳುತ್ತವೆ. ಕೆಲವೊಮ್ಮೆ ಅವು ಏನೆಂದು ಅರ್ಥ ಆಗಿರುವುದಿಲ್ಲ. ಇಂಥ ಕೆಲ ಪದಗಳ ವಿವರಣೆ ಇಲ್ಲಿದೆ.

Budget Glossary: ಎಕ್ಸೆಸ್ ಗ್ರಾಂಟ್, ಇನ್​ಫ್ಲೇಶನ್, ಡೆಫಿಸಿಟ್ ಇತ್ಯಾದಿ ಬಜೆಟ್ ಪದಗಳ ಅರ್ಥ ತಿಳಿಯಿರಿ
ಕೇಂದ್ರ ಬಜೆಟ್
Follow us
| Updated By: Digi Tech Desk

Updated on:Jun 24, 2024 | 5:32 PM

Union Budget 2024: ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಜುಲೈ ಕೊನೆಯ ವಾರದಲ್ಲಿ 2024-25 ರ ಪೂರ್ಣ ವಾರ್ಷಿಕ ಬಜೆಟ್ (Full Budget 2024) ಅನ್ನು ಮಂಡಿಸಲಿದ್ದಾರೆ. ಇವರು ಮಂಡಿಸುತ್ತಿರುವ ಆರನೇ ಪೂರ್ಣ ಬಜೆಟ್ ಇದಾಗಿದೆ. ಮಧ್ಯಂತರ ಬಜೆಟ್​ನದ್ದೂ ಸೇರಿಸಿದರೆ ಏಳನೇ ಬಜೆಟ್ ಇದಾಗಿದೆ. ನರೇಂದ್ರ ಮೋದಿ ಸರ್ಕಾರವು ಸತತ ಮೂರನೇ ಅವಧಿಗೆ ಅಧಿಕಾರಕ್ಕೆ ಬಂದ ನಂತರ ಸರ್ಕಾರವು ಪರಿಚಯಿಸುತ್ತಿರುವ ಮೊದಲ ಪೂರ್ಣ ಪ್ರಮಾಣದ ಬಜೆಟ್ ಆಗಿದೆ. ಬಜೆಟ್ ಭಾಷಣದ ವೇಳೆ ಹಣಕಾಸು ಸಚಿವರ ಭಾಷಣದಲ್ಲಿ ಹಣದುಬ್ಬರ, ವಿತ್ತೀಯ ಕೊರತೆ, ಬಂಡವಾಳ ವೆಚ್ಚ, ರೆವೆನ್ಯೂ ರೆಸಿಪ್ಟ್, ಕ್ಯಾಪಿಟಲ್ ರೆಸಿಪ್ಟ್, ಎನ್​ಪಿಎ ಇತ್ಯಾದಿ ಆರ್ಥಿಕ ಅಂಶಗಳಿಗೆ ಸಂಬಂಧಿಸಿದ ಪ್ರಮುಖ ಪದಗಳನ್ನು ಉಲ್ಲೇಖಿಸಲಾಗುತ್ತದೆ. ಹಣಕಾಸು ಸಚಿವರ ಬಜೆಟ್ ಭಾಷಣದ ವಿಷಯಗಳನ್ನು ಅರ್ಥಮಾಡಿಕೊಳ್ಳಲು ಈ ಪ್ರಮುಖ ಪದಗಳನ್ನು ಅರ್ಥಮಾಡಿಕೊಳ್ಳುವುದು ಬಹಳ ಮುಖ್ಯ. ಬಜೆಟ್ ಸಮಯದಲ್ಲಿ ಹೆಚ್ಚಾಗಿ ಉಲ್ಲೇಖಿಸಲಾದ ಕೆಲವು ಪದಗಳ ಅರ್ಥವನ್ನು ನಾವು ಇಲ್ಲಿ ವಿವರಿಸಲು ಪ್ರಯತ್ನಿಸುತ್ತಿದ್ದೇವೆ.

ಆನುಯಲ್ ಫೈನಾನ್ಷಿಯಲ್ ಸ್ಟೇಟ್ಮೆಂಟ್- ವಾರ್ಷಿಕ ಹಣಕಾಸು ಹೇಳಿಕೆ (AFS)

ಮುಂಬರುವ ಹಣಕಾಸು ವರ್ಷಕ್ಕೆ ಮಂಡಿಸುವ ವಾರ್ಷಿಕ ಬಜೆಟ್ ಅನ್ನು Annual Financial Statement ಅಥವಾ ವಾರ್ಷಿಕ ಹಣಕಾಸು ಹೇಳಿಕೆ (AFS) ಎಂದೂ ಕರೆಯಲಾಗುತ್ತದೆ. ಮುಂದಿನ ಹಣಕಾಸು ವರ್ಷದ ಆದಾಯ ಮತ್ತು ವೆಚ್ಚದ ಅಂದಾಜುಗಳೊಂದಿಗೆ ಸಂಸತ್ತಿನಲ್ಲಿ ಮಂಡಿಸಲಾಗಿದೆ. ಸಂವಿಧಾನದ 112 ನೇ ವಿಧಿಯ ಪ್ರಕಾರ, ಪ್ರತಿ ವರ್ಷ ಏಪ್ರಿಲ್ 1 ರಿಂದ ಮಾರ್ಚ್ 31 ರವರೆಗಿನ ಹಣಕಾಸು ವರ್ಷದ ವಾರ್ಷಿಕ ಹಣಕಾಸು ವರದಿಯನ್ನು ಸಂಸತ್ತು ಮೊದಲು ಅನುಮೋದಿಸಬೇಕು. ಇದನ್ನು ಪ್ರತಿ ವರ್ಷ ಫೆಬ್ರವರಿ 1 ರಂದು ಸಂಸತ್ತಿನಲ್ಲಿ ಮಂಡಿಸಲಾಗುತ್ತದೆ. ಚುನಾವಣೆಯ ಕಾರಣ ಆ ದಿನಾಂಕದಂದು ಮಧ್ಯಂತರ ಬಜೆಟ್ ಮಂಡಿಸಲಾಗಿದ್ದರೆ, ಹೊಸ ಸರ್ಕಾರವು ಸಂಸತ್ತಿನಲ್ಲಿ ಪೂರ್ಣ ಬಜೆಟ್ ಅನ್ನು ಮಂಡಿಸಬೇಕಾಗುತ್ತದೆ.

ಎಕನಾಮಿಕ್ ಸರ್ವೆ – ಆರ್ಥಿಕ ಸಮೀಕ್ಷೆ

ಆರ್ಥಿಕ ಸಮೀಕ್ಷೆಯು ಹಣಕಾಸು ಸಚಿವಾಲಯದ ಮುಖ್ಯ ದಾಖಲೆಯಾಗಿದೆ. ಪ್ರತಿ ವರ್ಷ ಕೇಂದ್ರ ಬಜೆಟ್‌ಗೆ ಮೊದಲು ಮಂಡಿಸಲಾಗುತ್ತದೆ. ಆರ್ಥಿಕ ಸಮೀಕ್ಷೆಯು ಹಿಂದಿನ ಹಣಕಾಸು ವರ್ಷದಲ್ಲಿ ಭಾರತದ ಆರ್ಥಿಕತೆಯ ಬಗ್ಗೆ ವಿವರವಾದ ಮಾಹಿತಿಯನ್ನು ಒದಗಿಸುತ್ತದೆ. ಎಕನಾಮಿಕ್ ಸರ್ವೆ ಆರ್ಥಿಕತೆಯ ಪ್ರಸ್ತುತ ಸ್ಥಿತಿ ಮತ್ತು ಆರ್ಥಿಕ ದೃಷ್ಟಿಕೋನವನ್ನು ಬಹಿರಂಗಪಡಿಸುತ್ತದೆ. ಮುಖ್ಯ ಆರ್ಥಿಕ ಸಲಹೆಗಾರರ ​​ನೇತೃತ್ವದ ತಂಡವು ಈ ಆರ್ಥಿಕ ಸಮೀಕ್ಷೆಯ ದಾಖಲೆಯನ್ನು ಸಿದ್ಧಪಡಿಸುತ್ತದೆ. ಕೇಂದ್ರ ಬಜೆಟ್ ಮಂಡನೆಗೆ ಒಂದು ದಿನ ಮುಂಚಿತವಾಗಿ ಸಂಸತ್ತಿನ ಉಭಯ ಸದನಗಳಲ್ಲಿ ದಾಖಲೆಯನ್ನು ಮಂಡಿಸಲಾಗುತ್ತದೆ. ಮೊದಲ ಆರ್ಥಿಕ ಸಮೀಕ್ಷೆಯನ್ನು 1950-51ರಲ್ಲಿ ಮಂಡಿಸಲಾಯಿತು. 1964 ರವರೆಗೆ ಇದನ್ನು ಕೇಂದ್ರ ಬಜೆಟ್‌ನಲ್ಲೇ ಒಳಗೊಂಡಿರಲಾಗುತ್ತಿತ್ತು.

ಇನ್​ಫ್ಲೇಶನ್- ಹಣದುಬ್ಬರ

ಹಣದುಬ್ಬರದ ದರವನ್ನು ಸಾಮಾನ್ಯವಾಗಿ ಶೇಕಡಾವಾರುಗಳಲ್ಲಿ ವ್ಯಕ್ತಪಡಿಸಲಾಗುತ್ತದೆ. ಆಂತರಿಕ ಅಥವಾ ಬಾಹ್ಯ ಆರ್ಥಿಕ ಅಂಶಗಳಿಂದ ಒಂದು ನಿರ್ದಿಷ್ಟ ಅವಧಿಯಲ್ಲಿ ಅಗತ್ಯ ವಸ್ತುಗಳ ಬೆಲೆಗಳು ಏರಿದಾಗ, ಅದನ್ನು ಹಣದುಬ್ಬರ ಎಂದು ಕರೆಯಬಹುದು. ಹಣದುಬ್ಬರದ ಹೆಚ್ಚಳವು ದೇಶದ ಕರೆನ್ಸಿಯ ಕೊಳ್ಳುವ ಸಾಮರ್ಥ್ಯದಲ್ಲಿನ ಇಳಿಕೆಯನ್ನು ಸೂಚಿಸುತ್ತದೆ. ಹಣದುಬ್ಬರವನ್ನು ತಡೆಯಲು RBI ಪ್ರಮುಖ ಬಡ್ಡಿದರಗಳನ್ನು ಪರಿಷ್ಕರಿಸುತ್ತಲೇ ಇರುತ್ತದೆ. ಬಜೆಟ್ ಭಾಷಣದಲ್ಲಿ ಹಣಕಾಸು ಸಚಿವರು ಈ ಪದವನ್ನು ಪ್ರಸ್ತಾಪಿಸುತ್ತಾರೆ. ಹಣದುಬ್ಬರದ ಪರಿಸ್ಥಿತಿ ಹೇಗಿರಬಹುದು ಎಂದು ಅವರು ಉಲ್ಲೇಖಿಸಬಹುದು.

Cess- ಸೆಸ್

ಸೆಸ್ ಎನ್ನುವುದು ನಿರ್ದಿಷ್ಟ ಉದ್ದೇಶಗಳಿಗೆ ಸರ್ಕಾರ ವಿಧಿಸುವ ಹೆಚ್ಚುವರಿ ತೆರಿಗೆಯಾಗಿದೆ. ಸೆಸ್‌ನಿಂದ ಬರುವ ಆದಾಯವನ್ನು ಭಾರತದ ಕನ್ಸಾಲಿಡೇಟೆಡ್ ಫಂಡ್‌ನಲ್ಲಿ ಠೇವಣಿ ಮಾಡಲಾಗುತ್ತದೆ. ದೇಶದಲ್ಲಿ ಕೆಲವು ವಿಧದ ಸೆಸ್‌ಗಳಲ್ಲಿ ಶಿಕ್ಷಣ ಸೆಸ್, ಮಾಧ್ಯಮಿಕ, ಉನ್ನತ ಶಿಕ್ಷಣ ಸೆಸ್, ಕೃಷಿ ಕಲ್ಯಾಣ ಸೆಸ್, ಸ್ವಚ್ಛ ಭಾರತ್ ಸೆಸ್ ಸೇರಿವೆ.

ಇದನ್ನೂ ಓದಿ: ಬಜೆಟ್ 2024: ಎಂಎಸ್​ಎಂಇ, ಮ್ಯೂಚುವಲ್ ಫಂಡ್, ಆರೋಗ್ಯ, ರಿಯಲ್ ಎಸ್ಟೇಟ್ ವಲಯಗಳ ನಿರೀಕ್ಷೆಗಳಿವು

ಎಕ್ಸೆಸ್ ಗ್ರ್ಯಾಂಟ್ – ಹೆಚ್ಚುವರಿ ಅನುದಾನ

ಎಕ್ಸೆಸ್ ಗ್ರಾಂಟ್ (Excess Grant) ಅಥವಾ ಅಡಿಶನಲ್ ಫಂಡ್ ಎಂಬುದು ಹೆಚ್ಚುವರಿ ವೆಚ್ಚದ ಬೇಡಿಕೆಗಳನ್ನು ಪೂರೈಸಲು ಸಂಸತ್ ಅನುಮೋದಿಸುವ ಫಂಡ್ ಆಗಿರುತ್ತದೆ. ಬಜೆಟ್ ಹಂಚಿಕೆಗಳು ಸರ್ಕಾರದ ವೆಚ್ಚದ ಬೇಡಿಕೆಗಳನ್ನು ಪೂರೈಸಲು ವಿಫಲವಾದಾಗ, ಹೆಚ್ಚುವರಿ ಬಜೆಟ್‌ಗೆ ಅಂದಾಜು ಸಂಸತ್ತಿನಲ್ಲಿ ಮಂಡಿಸಲಾಗುತ್ತದೆ. ಪ್ರತಿ ಹಣಕಾಸು ವರ್ಷದ ಕೊನೆಯಲ್ಲಿ ಹೆಚ್ಚುವರಿ ಅನುದಾನವನ್ನು ಸಂಸತ್ತು ಅನುಮೋದಿಸುತ್ತದೆ.

ಡಿಸ್​ಇನ್ವೆಸ್ಟ್​ಮೆಂಟ್ – ಬಂಡವಾಳ ಹಿಂತೆಗೆತ

ಕೇಂದ್ರ ಸರ್ಕಾರವು ಪಿಎಸ್‌ಯುನಲ್ಲಿ ತನ್ನ ಪಾಲನ್ನು ಸಂಪೂರ್ಣವಾಗಿ ಅಥವಾ ಭಾಗಶಃ ಮಾರಾಟ ಮಾಡುವ ಪ್ರಕ್ರಿಯೆಯೇ ಡಿಸ್ ಇನ್ವೆಸ್ಟ್​ಮೆಂಟ್ ಎನಿಸುತ್ತದೆ. ಈಗ ಸರ್ಕಾರಿ ಸ್ವಾಮ್ಯದ ಸಂಸ್ಥೆಗಳು ಉತ್ತಮ ಲಾಭ ತೋರುತ್ತಿರುವುದರಿಂದ ಬಂಡವಾಳ ಹಿಂತೆಗೆತ ಪ್ರಸ್ತಾಪವನ್ನು ಈ ಬಾರಿಯ ಬಜೆಟ್​ನಲ್ಲಿ ಮಾಡುವುದು ಅನುಮಾನ ಎನ್ನಲಾಗುತ್ತಿದೆ.

ಸರ್ಚಾರ್ಜ್- ಹೆಚ್ಚುವರಿ ಶುಲ್ಕ

ಸರ್‌ಚಾರ್ಜ್ ಎನ್ನುವುದು ಒಂದು ಸರಕು ಅಥವಾ ಸೇವೆಗೆ ನಿಗದಿತ ಬೆಲೆಗಿಂತ ಹೆಚ್ಚುವರಿ ಶುಲ್ಕವಾಗಿದೆ. ಸಮಾಜದಲ್ಲಿ ಸಮಾನತೆಯನ್ನು ತರುವ ಉದ್ದೇಶದಿಂದ ಇದನ್ನು ಸಾಮಾನ್ಯವಾಗಿ ಶ್ರೀಮಂತರಿಂದ ಸಂಗ್ರಹಿಸಲಾಗುತ್ತದೆ.

ಕಸ್ಟಮ್ಸ್ ಡ್ಯೂಟಿ – ಆಮದು ಸುಂಕ

ಕಸ್ಟಮ್ಸ್ ಡ್ಯೂಟಿ ಎಂಬುದು ಕೆಲವು ಸರಕುಗಳನ್ನು ಇತರ ದೇಶಗಳಿಂದ ಆಮದು/ರಫ್ತು ಮಾಡಿದಾಗ ವಿಧಿಸುವ ಒಂದು ರೀತಿಯ ತೆರಿಗೆಯಾಗಿದೆ. ಈ ಆಮದು ಸುಂಕದ ಹೊರೆ ಅಂತಿಮವಾಗಿ ಗ್ರಾಹಕರಿಗೆ ವರ್ಗಾಯಿಸಲ್ಪಡುತ್ತದೆ. ಕಸ್ಟಮ್ಸ್ ಸುಂಕವು ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ವ್ಯಾಪ್ತಿಯಿಂದ ಹೊರಗಿರುವುದರಿಂದ, ಸರ್ಕಾರವು ತನ್ನ ಬಜೆಟ್‌ನಲ್ಲಿ ಅದಕ್ಕೆ ಬದಲಾವಣೆಗಳನ್ನು ಘೋಷಿಸುವ ಸಾಧ್ಯತೆಯಿದೆ. ಬಜೆಟ್​​ನಲ್ಲಿ ಪ್ರಮುಖ ಅಂಶವಾಗಿರುವ ಕಸ್ಟಮ್ಸ್ ಡ್ಯುಟಿ ಕುರಿತು ಕೇಂದ್ರ ಸರ್ಕಾರದ ನಿರ್ಧಾರವನ್ನು ಹಲವು ವಲಯಗಳು ಕಾತರದಿಂದ ಕಾಯುತ್ತಿವೆ.

ಇದನ್ನೂ ಓದಿ: ಇನ್ಕಮ್ ಟ್ಯಾಕ್ಸ್​ನ ಕೆಳಗಿನ ಸ್ಲ್ಯಾಬ್​ನಲ್ಲಿ ಬದಲಾವಣೆ ಆಗಬಹುದು: ಬಜೆಟ್​ನಿಂದ ಸಂಜೀವ್ ಪುರಿ ನಿರೀಕ್ಷೆ

ಜಿಎಸ್​ಟಿ- ಸರಕು ಮತ್ತು ಸೇವಾ ತೆರಿಗೆ

ಸರಕು ಮತ್ತು ಸೇವಾ ತೆರಿಗೆಯಲ್ಲಿ (ಜಿಎಸ್‌ಟಿ) ಯಾವುದೇ ಬದಲಾವಣೆಗಳನ್ನು ಬಜೆಟ್‌ನಲ್ಲಿ ಘೋಷಿಸಲಾಗುವುದಿಲ್ಲ. ಜಿಎಸ್‌ಟಿ ಸ್ಲ್ಯಾಬ್‌ಗಳಲ್ಲಿನ ಬದಲಾವಣೆಗಳನ್ನು ಜಿಎಸ್‌ಟಿ ಕೌನ್ಸಿಲ್ ನಿರ್ಧರಿಸುತ್ತದೆ. ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ತಮ್ಮ ಬಜೆಟ್ ಭಾಷಣದಲ್ಲಿ ಜಿಎಸ್‌ಟಿಯನ್ನು ಪ್ರಸ್ತಾಪಿಸಿದರೂ, ಅದರಲ್ಲಿ ಯಾವುದೇ ಬದಲಾವಣೆಗಳನ್ನು ಅವರು ಮಾಡುವುದಿಲ್ಲ.

ರೆವೆನ್ಯೂ ಡೆಫಿಸಿಟ್ – ಆದಾಯ ಕೊರತೆ

ಆದಾಯ ಮತ್ತು ವೆಚ್ಚದ ನಡುವಿನ ಅಂತರವನ್ನು ಸೂಚಿಸುತ್ತದೆ. ಸರ್ಕಾರವು ತನ್ನ ಸಾಮಾನ್ಯ ಆದಾಯಕ್ಕಿಂತ ಹೆಚ್ಚು ಖರ್ಚು ಮಾಡುತ್ತಿದೆಯೇ ಎಂಬುದರ ಸೂಚಕ ಇದು.

ರೆವೆನ್ಯೂ ಸರ್​ಪ್ಲಸ್- ಆದಾಯ ಹೆಚ್ಚುವರಿ

ಇದು ರೆವೆನ್ಯೂ ಡೆಫಿಸಿಟ್​ಗೆ ತದ್ವಿರುದ್ಧವಾದುದು. ವೆಚ್ಚಕ್ಕಿಂತ ಆದಾಯ ಹೆಚ್ಚಿದ್ದರೆ ಆ ಸ್ಥಿತಿಯನ್ನು ರೆವೆನ್ಯೂ ಸರ್​ಪ್ಲಸ್ ಎನ್ನಲಾಗುವುದು.

ಕರೆಂಟ್ ಅಕೌಂಟ್ ಡೆಫಿಸಿಟ್- ಚಾಲ್ತಿ ಖಾತೆ ಕೊರತೆ

ಚಾಲ್ತಿ ಖಾತೆ ಕೊರತೆ (ಸಿಎಡಿ) ಎಂಬುದು ದೇಶದ ವ್ಯಾಪಾರ ವಹಿವಾಟಿನ ಅಳತೆಯಾಗಿದೆ. ಆಮದು ಮಾಡಿದ ಸರಕು ಮತ್ತು ಸೇವೆಗಳ ಮೌಲ್ಯವು ರಫ್ತು ಮೌಲ್ಯವನ್ನು ಮೀರಿದಾಗ ಚಾಲ್ತಿ ಖಾತೆ ಕೊರತೆ ಉಂಟಾಗುತ್ತದೆ.

ಯೂನಿಯನ್ ಬಜೆಟ್ – ಕೇಂದ್ರ ಬಜೆಟ್

ಯೂನಿಯನ್ ಬಜೆಟ್ ಎನ್ನುವುದು ಮುಂಬರುವ ಆರ್ಥಿಕ ವರ್ಷಕ್ಕೆ ದೇಶದ ಆದಾಯ ಮತ್ತು ವೆಚ್ಚದ ಅಂದಾಜುಗಳನ್ನು ವಿವರಿಸುವ ದಾಖಲೆಯಾಗಿದೆ. ಯೂನಿಯನ್ ಬಜೆಟ್ ಅನ್ನು ದೇಶದ ಹಣಕಾಸು ಯೋಜನೆ ಎಂದು ಪರಿಗಣಿಸಲಾಗುತ್ತದೆ. ಸರ್ಕಾರದ ವಿವಿಧ ಯೋಜನೆಗಳು ಮತ್ತು ಇಲಾಖೆಗಳಿಗೆ ನಿರ್ದಿಷ್ಟ ಮೊತ್ತವನ್ನು ನಿಗದಿಪಡಿಸಲಾಗಿದೆ ಮತ್ತು ಹಂಚಲಾಗುತ್ತದೆ. ಕೇಂದ್ರ ಬಜೆಟ್ 2024 ಅನ್ನು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಜುಲೈ 22 ರಂದು ಮಂಡಿಸಲಿದ್ದಾರೆ.

ಇನ್ನಷ್ಟು ಬಜೆಟ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 6:10 pm, Wed, 19 June 24

ತಾಜಾ ಸುದ್ದಿ
Daily Devotional: ಮನೆ, ಆಸ್ತಿ ಖರೀದಿಸುವ ಮುನ್ನ ಈ ವಿಡಿಯೋ ನೋಡಿ
Daily Devotional: ಮನೆ, ಆಸ್ತಿ ಖರೀದಿಸುವ ಮುನ್ನ ಈ ವಿಡಿಯೋ ನೋಡಿ
ಕಳೆದುಕೊಂಡಿದ್ದರ ಕುರಿತು ಚಿಂತಿಸುತ್ತ ಭವಿಷ್ಯವನ್ನು ಹಾಳುಮಾಡಿಕೊಳ್ಳಬೇಡಿ
ಕಳೆದುಕೊಂಡಿದ್ದರ ಕುರಿತು ಚಿಂತಿಸುತ್ತ ಭವಿಷ್ಯವನ್ನು ಹಾಳುಮಾಡಿಕೊಳ್ಳಬೇಡಿ
ದರ್ಶನ್​ ಪ್ರಕರಣದ ಬಗ್ಗೆ ಮೊದಲ ಬಾರಿಗೆ ಪ್ರತಿಕ್ರಿಯೆ ನೀಡಿದ ನಟಿ ಭಾವನಾ
ದರ್ಶನ್​ ಪ್ರಕರಣದ ಬಗ್ಗೆ ಮೊದಲ ಬಾರಿಗೆ ಪ್ರತಿಕ್ರಿಯೆ ನೀಡಿದ ನಟಿ ಭಾವನಾ
ಆಟೋರಿಕ್ಷಾ ದರವೂ ಹೆಚ್ಚಳವಾಗಲಿದೆಯೇ? ರಾಮಲಿಂಗಾರೆಡ್ಡಿ ಹೇಳುವಂತೆ ಹೌದು!
ಆಟೋರಿಕ್ಷಾ ದರವೂ ಹೆಚ್ಚಳವಾಗಲಿದೆಯೇ? ರಾಮಲಿಂಗಾರೆಡ್ಡಿ ಹೇಳುವಂತೆ ಹೌದು!
ಹೈಕಮಾಂಡ್ ಹೇಳಿದ್ದನ್ನು ರಾಜ್ಯದ ನಾಯಕರಿಗೆ ಜ್ಞಾಪಿಸುತ್ತಿದ್ದೇನೆ: ರಾಜಣ್ಣ
ಹೈಕಮಾಂಡ್ ಹೇಳಿದ್ದನ್ನು ರಾಜ್ಯದ ನಾಯಕರಿಗೆ ಜ್ಞಾಪಿಸುತ್ತಿದ್ದೇನೆ: ರಾಜಣ್ಣ
ಹಾಲಿನ ದರ ಏರಿಕೆ ಹಣ ರೈತರಿಗೆ ಹೋಗೋದು ಬಿಜೆಪಿ ನಾಯಕರಿಗೆ ಇಷ್ಟವಿಲ್ಲ:ಡಿಕೆಶಿ
ಹಾಲಿನ ದರ ಏರಿಕೆ ಹಣ ರೈತರಿಗೆ ಹೋಗೋದು ಬಿಜೆಪಿ ನಾಯಕರಿಗೆ ಇಷ್ಟವಿಲ್ಲ:ಡಿಕೆಶಿ
ಕೆಂಪೇಗೌಡ ಜಯಂತಿ; ನಮ್ಮ ಹೆಸರಿಲ್ಲದಿರುವುದು ದೊಡ್ಡ ವಿಷಯವಲ್ಲ: ಕುಮಾರಸ್ವಾಮಿ
ಕೆಂಪೇಗೌಡ ಜಯಂತಿ; ನಮ್ಮ ಹೆಸರಿಲ್ಲದಿರುವುದು ದೊಡ್ಡ ವಿಷಯವಲ್ಲ: ಕುಮಾರಸ್ವಾಮಿ
ಮುಸ್ಲಿಂ ವೋಟು ವನ್-ಸೈಡೆಡ್ ಆಗಿ ಸಾಗರ್ ಸಿಕ್ಕಿದ್ದು ಅಂತ ಹೇಳಿದ್ದು: ಜಮೀರ್
ಮುಸ್ಲಿಂ ವೋಟು ವನ್-ಸೈಡೆಡ್ ಆಗಿ ಸಾಗರ್ ಸಿಕ್ಕಿದ್ದು ಅಂತ ಹೇಳಿದ್ದು: ಜಮೀರ್
ಉಡುಪಿ: ಬಿರುಸುಗೊಂಡ ಮುಂಗಾರು ಮಳೆ; ಕಾಪು, ಮಲ್ಪೆ ಕಡಲ ಕಿನಾರೆ ಪ್ರಕ್ಷುಬ್ಧ
ಉಡುಪಿ: ಬಿರುಸುಗೊಂಡ ಮುಂಗಾರು ಮಳೆ; ಕಾಪು, ಮಲ್ಪೆ ಕಡಲ ಕಿನಾರೆ ಪ್ರಕ್ಷುಬ್ಧ
ಸಂಸತ್ ಭವನದಲ್ಲಿ ಪರಸ್ಪರ ಕೈ ಕುಲುಕಿದ ಪ್ರಧಾನಿ ಮೋದಿ ಮತ್ತು ರಾಹುಲ್ ಗಾಂಧಿ
ಸಂಸತ್ ಭವನದಲ್ಲಿ ಪರಸ್ಪರ ಕೈ ಕುಲುಕಿದ ಪ್ರಧಾನಿ ಮೋದಿ ಮತ್ತು ರಾಹುಲ್ ಗಾಂಧಿ