ಬೆಂಗಳೂರಿನಲ್ಲಿ ಎರಡು ದಿನ ‘Sci560 ಫಿಲ್ಮ್ ಫೆಸ್ಟಿವಲ್’; ಉಚಿತ ಎಂಟ್ರಿ
ಬೆಂಗಳೂರಿನ ಸೈನ್ಸ್ ಗ್ಯಾಲರಿ ಬೆಂಗಳೂರು (ಎಸ್ಜಿಬಿ) ಫೆಬ್ರವರಿ 1 ಮತ್ತು 2 ರಂದು Sci560 ಚಲನಚಿತ್ರೋತ್ಸವವನ್ನು ಆಯೋಜಿಸುತ್ತಿದೆ. 20 ಚಲನಚಿತ್ರಗಳು, ಡಾಕ್ಯುಮೆಂಟರಿಗಳು ಬೆಂಗಳೂರಿನ ವಿಜ್ಞಾನ ಮತ್ತು ಸಂಸ್ಕೃತಿಯನ್ನು ಎತ್ತಿ ಹಿಡಿಯಲಿವೆ. ನೀರಿನ ಕೊರತೆ, ಕೋಲಾರದ ಚಿನ್ನದ ಗಣಿ ಇತ್ಯಾದಿ ವಿಷಯಗಳನ್ನು ಒಳಗೊಂಡ ಚಲನಚಿತ್ರಗಳು ಪ್ರದರ್ಶನಗೊಳ್ಳಲಿವೆ.

ಸೈನ್ಸ್ ಗ್ಯಾಲರಿ ಬೆಂಗಳೂರು (ಎಸ್ಜಿಬಿ) ‘Sci560 ಫಿಲ್ಮ್ ಫೆಸ್ಟಿವಲ್’ ಆರಂಭಕ್ಕೆ ಕ್ಷಣಗಣನೆ ಆರಂಭ ಆಗಿದೆ. ಫೆಬ್ರವರಿ 1 ಹಾಗೂ 2ರಂದು ದೊಮ್ಮಲೂರಿನ ‘ಬೆಂಗಳೂರು ಇಂಟರ್ನ್ಯಾಷನಲ್ ಸೆಂಟರ್’ನಲ್ಲಿ ಈ ಉತ್ಸವ ನಡೆಯಲಿದೆ. ಬೆಳಿಗ್ಗೆ 11 ಗಂಟೆಯಿಂದ ಸಂಜೆ 6 ಗಂಟೆವರೆಗೆ ಸಿನಿಮಾ ವೀಕ್ಷಣೆಗೆ ಅವಕಾಶ ಇದೆ. ನಾಲ್ಕು ಭಾಷೆಯ 20 ಸಿನಿಮಾಗಳು ಪ್ರದರ್ಶನ ಕಾಣಲಿದೆ.
‘Sci560 ಫಿಲ್ಮ್ ಫೆಸ್ಟಿವಲ್’ಗೆ ಯಾರು ಬೇಕಾದರೂ ಸಿನಿಮಾ ಸಲ್ಲಿಕೆ ಮಾಡಬಹುದಿತ್ತು. ಈ ರೀತಿ ಸಲ್ಲಿಕೆ ಆದ ಚಿತ್ರಗಳನ್ನು ಬೆಂಗಳೂರು ಫಿಲ್ಮ್ ಫೋರಂ ಸದಸ್ಯರು ಹಾಗೂ ಎಸ್ಜಿಬಿ ತಂಡ ಆಯ್ಕೆ ಮಾಡಿದೆ. ಈ ರೀತಿ ಆಯ್ಕೆ ಆದ 20 ಸಿನಿಮಾಗಳು ಸಿನಿಮೋತ್ಸವದಲ್ಲಿ ಪ್ರಸಾರ ಕಾಣಲಿವೆ. ಈ ಚಿತ್ರಗಳು ಬೆಂಗಳೂರಿನ ವೈಜ್ಞಾನಿಕ ಮತ್ತು ಸಾಂಸ್ಕೃತಿಕ ಪರಂಪರೆಯನ್ನು ಪ್ರತಿನಿಧಿಸಲಿದೆ.
View this post on Instagram
ನಿತ್ಯ ಮಿಶ್ರಾ ಅವರು ನಿರ್ದೇಶನ ಮಾಡಿದ ‘ಡೌನ್ ದಿ ಡ್ರೇನ್’ ಚಿತ್ರದ ಮೂಲಕ ಸಿನಿಮೋತ್ಸವ ಆರಂಭ ಆಗಲಿದೆ. ಸದ್ಯ ಬೆಂಗಳೂರು ಎದುರಿಸುತ್ತಿರುವ ನೀರಿನ ಕೊರತೆಯ ಬಗ್ಗೆ ಈ ಸಿನಿಮಾ ಬೆಳಕು ಚೆಲ್ಲಿದೆ. ಮೊದಲ ದಿನ ಈ ರೀತಿಯ ಹಲವು ಸಿನಿಮಾಗಳು ಪ್ರದರ್ಶನ ಕಾಣಲಿವೆ.
ಇದನ್ನೂ ಓದಿ: ಬೆಳ್ಳಿ ತೆರೆಯಲ್ಲಿ 29ರ ಸಂಭ್ರಮ, ಸಾಧನೆಗೆ ಸಾಥ್ ಕೊಟ್ಟವರಿಗೆ ಕಿಚ್ಚನ ಥ್ಯಾಂಕ್ಸ್
ಎರಡನೇ ದಿನ ಮುಖ್ಯವಾಗಿ ಬಸವ ಬೀರಾದಾರ್ ಅವರು ಮಾಡಿದ ‘ಇನ್ ಸರ್ಚ್ ಆಫ್ ಗೋಲ್ಡ್’ ಡಾಕ್ಯುಮೆಂಟರಿ ಪ್ರದರ್ಶನ ಕಾಣಲಿದೆ. ಕೋಲಾರದ ಚಿನ್ನದ ಗಣಿಯ ಇತಿಹಾಸವನ್ನು ಇದು ತೆರೆದಿಡಲಿದೆ. ಈ ರೀತಿಯ ಹಲವು ಸಿನಿಮಾಗಳು, ಡಾಕ್ಯುಮೆಂಟರಿಗಳು ಪ್ರಸಾರ ಕಾಣಲಿವೆ. ಸಿನಿಮಾ ನಿರ್ದೇಶಕರ ಜೊತೆ ಸಂವಾದ ಕೂಡ ಇರಲಿದ್ದು, ಇದರಲ್ಲಿ ಭಾಗವಹಿಸಿ ಜ್ಞಾನಾಭಿವೃದ್ಧಿ ಮಾಡಿಕೊಳ್ಳಬಹುದು. ಸಿನಿಮಾ ನೋಡಿದ ಬಳಿಕ ಮೂಡುವ ಪ್ರಶ್ನೆಗೆ ಉತ್ತರ ಕಂಡುಕೊಳ್ಳಬಹುದು. ಉಚಿತವಾಗಿ ನೀವು ಈ ಸಿನಿಮೋತ್ಸವನ್ನು ವೀಕ್ಷಿಸಬಹುದಾಗಿದೆ.
Science Gallery Bengaluru ವೆಬ್ಸೈಟ್ಗೆ ಭೇಟಿ ನೀಡಿ ನೋಂದಣಿ ಮಾಡಿಕೊಳ್ಳಬೇಕು. ಆಗ ಸಿನಿಮೋತ್ಸವಕ್ಕೆ ಉಚಿತವಾಗಿ ಎಂಟ್ರಿ ಪಡೆಯಬಹುದಾಗಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.