ಇನ್ಕಮ್ ಟ್ಯಾಕ್ಸ್​ನ ಕೆಳಗಿನ ಸ್ಲ್ಯಾಬ್​ನಲ್ಲಿ ಬದಲಾವಣೆ ಆಗಬಹುದು: ಬಜೆಟ್​ನಿಂದ ಸಂಜೀವ್ ಪುರಿ ನಿರೀಕ್ಷೆ

Union budget 2024 expectations: ಈ ಬಾರಿಯ ಬಜೆಟ್​ನಲ್ಲಿ ಆದಾಯ ತೆರಿಗೆಯ ಕೆಳಗಿನ ಸ್ಲ್ಯಾಬ್​ನಲ್ಲಿ ಬದಲಾವಣೆ ತರಬಹುದು ಎಂದು ಸಿಐಐ ಅಧ್ಯಕ್ಷ ಸಂಜೀವ್ ಪುರಿ ಅಭಿಪ್ರಾಯಪಟ್ಟಿದ್ದಾರೆ. ಹಳೆಯ ಟ್ಯಾಕ್ಸ್ ರೆಜಿಮೆಯಲ್ಲಿ ಎರಡೂವರೆ ಲಕ್ಷ ರೂನಿಂದ ಐದು ಲಕ್ಷ ರೂವರೆಗಿನ ಆದಾಯಕ್ಕೆ ಶೇ. 5ರಷ್ಟು ತೆರಿಗೆ ಇದೆ. ಹೊಸ ರೆಜಿಮೆಯಲ್ಲಿ ಮೂರರಿಂದ ಆರು ಲಕ್ಷ ರೂವರೆಗಿನ ಆದಾಯಕ್ಕೆ ಶೇ. 5ರಷ್ಟು ತೆರಿಗೆ ಇದೆ.

ಇನ್ಕಮ್ ಟ್ಯಾಕ್ಸ್​ನ ಕೆಳಗಿನ ಸ್ಲ್ಯಾಬ್​ನಲ್ಲಿ ಬದಲಾವಣೆ ಆಗಬಹುದು: ಬಜೆಟ್​ನಿಂದ ಸಂಜೀವ್ ಪುರಿ ನಿರೀಕ್ಷೆ
ಸಂಜೀವ್ ಪುರಿ
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Jun 17, 2024 | 1:51 PM

ನವದೆಹಲಿ, ಜೂನ್ 17: ಮುಂದಿನ ತಿಂಗಳು ಪ್ರಸ್ತುತಪಡಿಸಲಾಗುವ ಹೊಸ ಸರ್ಕಾರದ ಮೊದಲ ಬಜೆಟ್​ನಲ್ಲಿ ಜನಸಾಮಾನ್ಯರಿಗೆ ಖುಷಿಯಾಗುವ ಕೆಲ ಅಂಶಗಳು ಅಡಕವಾಗಿರಬಹುದು ಎಂದು ಹಲವರು ಅಂದಾಜು ಮಾಡುತ್ತಿದ್ದಾರೆ. ಆದಾಯ ತೆರಿಗೆಯ ಸ್ಲ್ಯಾಬ್​ನಲ್ಲಿ ಈ ಬಾರಿ ಬದಲಾವಣೆ ಆಗುವ ನಿರೀಕ್ಷೆ ಇದೆ. ಭಾರತೀಯ ಉದ್ಯಮ ಮಹಾಒಕ್ಕೂಟದ (CII) ನೂತನ ಅಧ್ಯಕ್ಷರಾಗಿರುವ ಸಂಜೀವ್ ಪುರಿ (Sanjiv Puri) ಪ್ರಕಾರ ಇನ್ಕಮ್ ಟ್ಯಾಕ್ಸ್​ನ ಕೆಳ ಸ್ತರದ ಸ್ಲ್ಯಾಬ್​ನಲ್ಲಿ ಟ್ಯಾಕ್ಸ್ ರಿಲೀಫ್ ಕೊಡಬಹುದು.

ಈಗ ಪ್ರಸಕ್ತ ಇರುವ ಆದಾಯ ತೆರಿಗೆ ಸ್ಲ್ಯಾಬ್​ (ಹೊಸ ವ್ಯವಸ್ಥೆ)

  • ಮೂರು ಲಕ್ಷ ರೂವರೆಗೆ ತೆರಿಗೆ ಇಲ್ಲ
  • 3,00,001ರಿಂದ 6,00,000 ರೂ: ಶೇ. 5
  • 6,00,001ರಿಂದ 9,00,000 ರೂ: ಶೇ. 10
  • 9,00,001ರಿಂದ 12,00,000 ರೂ: ಶೇ. 15
  • 12,00,001ರಿಂದ 15,00,000 ರೂ: ಶೇ. 20
  • 15 ಲಕ್ಷ ರೂ ಮೇಲ್ಪಟ್ಟು: ಶೇ. 30

ಇದನ್ನೂ ಓದಿ: ಇನ್ಕಮ್ ಟ್ಯಾಕ್ಸ್ ರಿಟರ್ನ್ ಫೈಲ್ ಮಾಡುವುದು ಹೇಗೆ? ಇಲ್ಲಿದೆ ಕ್ರಮ

ಹಳೆಯ ಟ್ಯಾಕ್ಸ್ ರೆಜಿಮೆಯಲ್ಲಿರುವ ಸ್ಲ್ಯಾಬ್​ಗಳು

  • 2,50,000 ರೂವರೆಗೆ ತೆರಿಗೆ ಇಲ್ಲ
  • 2,50,001ರಿಂದ 3,00,000 ರೂ: ಶೇ. 5
  • 3,00,001ರಿಂದ 5,00,000 ರೂ: ಶೇ. 5
  • 5,00,001ರಿಂದ 10,00,000 ರೂ: ಶೇ. 20
  • 10 ಲಕ್ಷ ರೂ ಮೇಲ್ಪಟ್ಟು: ಶೇ. 30

ಹಳೆಯ ಟ್ಯಾಕ್ಸ್ ರೆಜಿಮೆಯಲ್ಲಿ ಹಿರಿಯ ನಾಗರಿಕರ ಐದು ಲಕ್ಷ ರೂವರೆಗಿನ ಆದಾಯಕ್ಕೆ ತೆರಿಗೆ ಇರುವುದಿಲ್ಲ.

ಆದಾಯ ತೆರಿಗೆ ವಿಚಾರದಲ್ಲಿ ಉದ್ಯಮದ ನಿರೀಕ್ಷೆ

ಐಟಿಸಿ ಸಂಸ್ಥೆಯ ಛೇರ್ಮನ್ ಮತ್ತು ಎಂಡಿ ಕೂಡ ಆಗಿರುವ ಸಂಜೀವ್ ಪುರಿ ಅವರು ಸರ್ಕಾರದಿಂದ ಆದಾಯ ತೆರಿಗೆ ವ್ಯವಸ್ಥೆಯಲ್ಲಿ ಸುಧಾರಣೆ ಆಗಬೇಕೆನ್ನವುದು ಉದ್ಯಮದ ಅಪೇಕ್ಷೆ ಎನ್ನುವ ಅಭಿಪ್ರಾಯಪಟ್ಟಿದ್ದಾರೆ.

‘ತೆರಿಗೆ ವ್ಯವಸ್ಥೆಯ ಸರಳೀಕರಣದ ಪ್ರಕ್ರಿಯೆ ಮುಂದುವರಿಯಬೇಕೆಂಬುದು ನಮ್ಮ ಸಲಹೆ. ಕ್ಯಾಟಿಪಲ್ ಗೇಯ್ನ್ ಟ್ಯಾಕ್ಸ್​ನಲ್ಲೂ ಬದಲಾವಣೆ ಮಾಡಬೇಕೆನ್ನುವ ನಿರೀಕ್ಷೆ ಇದೆ. ಟಿಡಿಎಸ್ ಅನ್ವಯ ಮಾಡುವ ಪ್ರಕ್ರಿಯೆ ಕೂಡ ಸರಳಗೊಳ್ಳಬೇಕು,’ ಎಂದು ಪುರಿ ಸಲಹೆ ನೀಡಿದ್ದಾರೆ.

ಇದನ್ನೂ ಓದಿ: Union Budget 2024: ಮೋದಿ 3.0 ಸರ್ಕಾರದ ಚೊಚ್ಚಲ ಬಜೆಟ್ ಯಾವಾಗ? ಇಲ್ಲಿದೆ ಡೀಟೇಲ್ಸ್

ಹಣದುಬ್ಬರ ಶೇ. 4.5ರಷ್ಟಿರಬಹುದು

ಪಿಟಿಐ ಸುದ್ದಿಸಂಸ್ಥೆಗೆ ನೀಡಿದ ಸಂದರ್ಶನದಲ್ಲಿ ಸಿಐಐ ಅಧ್ಯಕ್ಷ ಸಂಜೀವ್ ಪುರಿ ಅವರು ಮಾತನಾಡುತ್ತಾ, ಈ ಬಾರಿ ಉತ್ತಮ ಮುಂಗಾರು ಮಳೆ ಇರುವುದರಿಂದ ಬೆಲೆ ಏರಿಕೆ ಸಮಸ್ಯೆ ಹೆಚ್ಚು ಕಾಡದು ಎಂದಿದ್ದಾರೆ. ಅವರ ಪ್ರಕಾರ ಈ ವರ್ಷ ಹಣದುಬ್ಬರ ಶೇ. 4.5ರ ಆಸುಪಾಸಿನಷ್ಟು ಇರಬಹುದು.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ಪ್ರದೇಶ ಬಿಜೆಪಿ ಅಧ್ಯಕ್ಷರ ಆಯ್ಕೆಗೆ ಪ್ರಕ್ರಿಯೆ ಶುರುವಾಗಲಿದೆ: ಚೌಹಾನ್
ಪ್ರದೇಶ ಬಿಜೆಪಿ ಅಧ್ಯಕ್ಷರ ಆಯ್ಕೆಗೆ ಪ್ರಕ್ರಿಯೆ ಶುರುವಾಗಲಿದೆ: ಚೌಹಾನ್
ಕೇಂದ್ರದಲ್ಲಿ ಮಂತ್ರಿಯಾಗುವ ಮೊದಲು ಚೌಹಾನ್ ಮಧ್ಯ ಪ್ರದೇಶ ಸಿಎಂ ಅಗಿದ್ದರು
ಕೇಂದ್ರದಲ್ಲಿ ಮಂತ್ರಿಯಾಗುವ ಮೊದಲು ಚೌಹಾನ್ ಮಧ್ಯ ಪ್ರದೇಶ ಸಿಎಂ ಅಗಿದ್ದರು
ಜನಪ್ರತಿನಿಧಿಗಳಿಗೆ ಚುನಾವಣೆಯಲ್ಲಿಲ್ಲದ ಭದ್ರತೆ ಗೆದ್ದಮೇಲೆ ಯಾಕೆ ಬೇಕು?
ಜನಪ್ರತಿನಿಧಿಗಳಿಗೆ ಚುನಾವಣೆಯಲ್ಲಿಲ್ಲದ ಭದ್ರತೆ ಗೆದ್ದಮೇಲೆ ಯಾಕೆ ಬೇಕು?