ಬೆಲೆ ಏರಿಕೆ, ಹಣದುಬ್ಬರ (Inflation) ಮಿತಿ ಮೀರಿರುವ ಈ ಕಾಲಘಟ್ಟದಲ್ಲಿ ಎಷ್ಟು ಹಣ ಗಳಿಸಿದರೂ ಉಳಿತಾಯ (Savings) ಮಾಡುವುದು ಕಷ್ಟವೆಂಬ ಪರಿಸ್ಥಿತಿ ಇದೆ. ಅದೇ ರೀತಿ ಸಣ್ಣ-ಪುಟ್ಟ ಉದ್ದಿಮೆಗಳನ್ನು ಸ್ಥಾಪಿಸಿ ಉತ್ತಮ ಆದಾಯ ಗಳಿಸುವುದೂ ಸುಲಭವಲ್ಲ. ಆದರೆ, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ (SBI) ಎಟಿಎಂ ಫ್ರಾಂಚೈಸ್ ಯೋಜನೆಯಲ್ಲಿ ಹೂಡಿಕೆ ಮಾಡಿದರೆ ಬರೋಬ್ಬರಿ ಆದಾಯ ಗಳಿಸಬಹುದು. ಸುಮಾರು 5 ಲಕ್ಷ ರೂ. ಹೂಡಿಕೆ ಮಾಡಿ ತಿಂಗಳಿಗೆ 70,000 ರೂ.ವರೆಗೆ ಗಳಿಸಲೂ ಅವಕಾಶವಿದೆ. ಹಾಗಿದ್ದರೆ ಈ ಯೋಜನೆಯಲ್ಲಿ ಹೂಡಿಕೆ ಮಾಡಲು ಏನೇನು ಮಾನದಂಡಗಳನ್ನು ಅನುಸರಿಸಬೇಕು? ಹೂಡಿಕೆ ನಂತರ ಏನೆಲ್ಲ ಕ್ರಮಗಳನ್ನು ಕೈಗೊಳ್ಳಬೇಕಾಗುತ್ತದೆ? ಇಲ್ಲಿದೆ ಮಾಹಿತಿ;
ಗುತ್ತಿಗೆದಾರರ ಮೂಲಕ ಎಸ್ಬಿಐ ಎಟಿಎಂ ಫ್ರಾಂಚೈಸ್
ಎಟಿಎಂ ಅನ್ನು ಬ್ಯಾಂಕ್ಗಳೇ ಅಳವಡಿಸುತ್ತವೆ ಹಾಗೂ ಅದಕ್ಕೆ ಬೇಕಾದ ಸೌಲಭ್ಯಗಳನ್ನು ಒದಗಿಸುತ್ತವೆ ಎಂದು ನೀವಂದುಕೊಂಡಿದ್ದರೆ ಅದು ನಿಜವಲ್ಲ. ಬ್ಯಾಂಕ್ಗಳು ಎಟಿಎಂ ಇನ್ಸ್ಟಾಲ್ ಮತ್ತು ನಿರ್ವಹಣೆಯ ಜವಾಬ್ದಾರಿಯನ್ನು ಗುತ್ತಿಗೆದಾರರಿಗೆ ನೀಡುತ್ತವೆ. ಎಸ್ಬಿಐ ಬ್ಯಾಂಕ್ ಎಟಿಎಂ ಸ್ಥಾಪನೆಗಾಗಿ ಟಾಟಾ ಇಂಡಿಕ್ಯಾಷ್, ಮುತೂಟ್ ಎಟಿಎಂ ಹಾಗೂ ಇಂಡಿಯಾ ವನ್ ಎಟಿಎಂ ಕಂಪನಿಗಳಿಗೆ ಗುತ್ತಿಗೆ ನೀಡಿದೆ. ಹೀಗಾಗಿ ನೀವು ಎಟಿಎಂ ಕೇಂದ್ರ ಸ್ಥಾಪಿಸುವ, ಆ ಕ್ಷೇತ್ರದಲ್ಲಿ ಹೂಡಿಕೆ ಮಾಡುವ ಒಲವು ಹೊಂದಿದ್ದರೆ ಈ ಕಂಪನಿಗಳ ವೆಬ್ಸೈಟ್ ಮೂಲಕ ಅರ್ಜಿ ಸಲ್ಲಿಸಬಹುದು. ಎಟಿಎಂ ಫ್ರಾಂಚೈಸ್ ಹೆಸರಿನಲ್ಲಿ ಅನೇಕ ಅಕ್ರಮಗಳೂ ನಡೆಯುವ ಸಾಧ್ಯತೆ ಇರುವುದರಿಂದ ಕಂಪನಿಗಳ ಅಧಿಕೃತ ವೆಬ್ಸೈಟ್ ಮತ್ತು ವ್ಯಕ್ತಿಗಳ ಮೂಲಕವೇ ವ್ಯವಹರಿಸುವುದು ಒಳ್ಳೆಯದು.
ಎಸ್ಬಿಐ ಎಟಿಎಂ ಫ್ರಾಂಚೈಸ್ ಪಡೆದುಕೊಳ್ಳಲು ಇರುವ ಷರತ್ತುಗಳು
ಏನೆಲ್ಲ ದಾಖಲೆಗಳು ಬೇಕಾಗುತ್ತವೆ?
ಹೂಡಿಕೆ ಮತ್ತು ಆದಾಯದ ವಿವರ
ಎಟಿಎಂ ಫ್ರಾಂಚೈಸ್ಗಾಗಿ ಅರ್ಜಿ ಸಲ್ಲಿಸುವಾಗ ಭದ್ರತಾ ಠೇವಣಿಯಾಗಿ 2 ಲಕ್ಷ ರೂ. ನೀಡಬೇಕಾಗುತ್ತದೆ. ಬಳಿಕ 3 ಲಕ್ಷ ರೂ. ಕೆಲಸದ ಬಂಡವಾಳ (working capital) ನೀಡಬೇಕಾಗುತ್ತದೆ. ಹೀಗೆ ಒಟ್ಟು 5 ಲಕ್ಷ ರೂ. ಹೂಡಿಕೆ ಮಾಡಬೇಕಾಗುತ್ತದೆ. ಎಟಿಎಂ ಇನ್ಸ್ಟಾಲ್ ಆಗಿ ಜನರು ಹಣ ವಿತ್ಡ್ರಾ ಮಾಡಲು ಆರಂಭವಾದ ಬಳಿಕ ಪ್ರತಿ ನಗದು ವಿತ್ಡ್ರಾ ವಹಿವಾಟಿಗೆ 8 ರೂ.ನಂತೆ ನೀವು ಆದಾಯ ಗಳಿಸಬಹುದು. ನಗದಿಗೆ ಸಂಬಂಧಿಸಿರದ, ಅಂದರೆ ಬ್ಯಾಲೆನ್ಸ್ ಪರಿಶೀಲನೆ, ಫಂಡ್ ಟ್ರಾನ್ಸ್ಫರ್ ಇತ್ಯಾದಿ ವಹಿವಾಟಿಗೆ ಪ್ರತಿ ಬಾರಿ 2. ರೂ.ನಂತೆ ಆದಾಯ ಗಳಿಸಬಹುದಾಗಿದೆ.
ಇನ್ನಷ್ಟು ವಾಣಿಜ್ಯ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ
Published On - 10:49 am, Fri, 4 November 22