ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಫಿಕ್ಸೆಡ್ ಡೆಪಾಸಿಟ್ ಸ್ಕೀಮ್ಗಳು (FD Schemes) ತೀರಾ ಹೆಚ್ಚು ಬಡ್ಡಿ ಒದಗಿಸದೇ ಹೋದರೂ ವಿಶ್ವಾಸಾರ್ಹತೆ ಹೊಂದಿವೆ. ಬಹಳ ಗಮನ ಸೆಳೆದಿರುವ ಅದರ ಇತ್ತೀಚಿನ ಎರಡು ಎಫ್ಡಿ ಸ್ಕೀಮ್ಗಳು ಹೆಚ್ಚು ಬೇಡಿಕೆ ಹಿನ್ನೆಲೆಯಲ್ಲಿ ಅವಧಿ ವಿಸ್ತರಣೆ ಮಾಡಲಾಗಿದೆ. ಹಿರಿಯ ನಾಗರಿಕರಿಗೆಂದು ರೂಪಿಸಲಾಗಿರುವ ಎಸ್ಬಿಐ ವೀಕೇರ್ (SBI WeCare) ಹಾಗೂ ಎಸ್ಬಿಐ ಅಮೃತ್ ಕಳಶ್ (SBI Amrit Kalash FD Scheme) ಡೆಪಾಸಿಟ್ ಸ್ಕೀಮ್ಗಳಲ್ಲಿ ಹಣ ತೊಡಗಿಸಲು ಈಗ ಹೆಚ್ಚಿನ ಕಾಲಾವಕಾಶ ಕೊಡಲಾಗಿದೆ. ವೀ ಕೇರ್ ಸ್ಕೀಮ್ ಪಡೆಯಲು ಕಾಲಾವಕಾಶವನ್ನು ಸೆಪ್ಟಂಬರ್ 30ವರೆಗೂ ವಿಸ್ತರಿಸಲಾಗಿದೆ. ಇನ್ನು ಎಸ್ಬಿಐ ಅಮೃತ್ ಕಳಶ್ ಎಫ್ಡಿ ಯೋಜನೆಯ ಪಡೆಯುವ ಕಾಲಾವಕಾಶವನ್ನು ಆಗಸ್ಟ್ 15ರವರೆಗೂ ಹೆಚ್ಚಿಸಲಾಗಿದೆ. ಅಮೃತ್ ಕಲಶ್ ಸ್ಕೀಮ್ನ ಅವಧಿ ಎರಡು ಬಾರಿ ವಿಸ್ತರಣೆ ಆದಂತಾಗಿದೆ. ಮೊದಲಿಗೆ ಮಾರ್ಚ್ 31ರವರೆಗೂ ಇತ್ತು. ಅದನ್ನು ಜೂನ್ 30ಕ್ಕೆ ವಿಸ್ತರಿಸಲಾಗಿತ್ತು. ಈಗ ಆಗಸ್ಟ್ 15ರವರೆಗೂ ಕಾಲಾವಕಾಶ ಕೊಡಲಾಗಿದೆ.
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ವೀಕೇರ್ ಸ್ಕೀಮ್ ಹಿರಿಯ ನಾಗರಿಕರಿಗೆಂದು ರೂಪಿಸಲಾಗಿದೆ. ಇದಕ್ಕೆ ನೀಡಲಾಗುವ ಬಡ್ಡಿ ದರ ಶೇ. 7.50ರಷ್ಟಿದೆ. 5ರಿಂದ 10 ವರ್ಷ ಅವಧಿಯ ನಿಶ್ಚಿತ ಠೇವಣಿಯ ಈ ವೀಕೇರ್ ಸ್ಕೀಮ್ ಅನ್ನು ಪಡೆಯಲು 2023 ಸೆಪ್ಟಂಬರ್ 30ರವರೆಗೂ ಅವಕಾಶ ಕೊಡಲಾಗಿದೆ. ಈ ಮುಂಚೆ ಜುಲೈ 7ರವರೆಗೆ ಗಡುವು ಕೊಡಲಾಗಿತ್ತು. ಹೆಚ್ಚಿನ ಜನಕ್ಕೆ ಅವಕಾಶ ಸಿಗಲೆಂದು ಇನ್ನೆರಡು ತಿಂಗಳು ಹೆಚ್ಚು ಕಾಲಾವಕಾಶ ಕೊಡಲಾಗಿದೆ.
ಇದನ್ನೂ ಓದಿ: NPS Rule Change: ಪಿಂಚಣಿ ಯೋಜನೆಯಲ್ಲಿ ಮಹತ್ವದ ಬದಲಾವಣೆ ಸಾಧ್ಯತೆ; ನ್ಯಾಷನಲ್ ಪೆನ್ಷನ್ ಸ್ಕೀಮ್ ಸದಸ್ಯರಿಗೆ ಖುಷಿ ಸುದ್ದಿಯಾ?
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಜನಪ್ರಿಯವಾಗಿರುವ ಅಮೃತ್ ಕಲಶ್ ಸ್ಪೆಷಲ್ ಫಿಕ್ಸೆಡ್ ಸ್ಕೀಮ್ 2023ರ ಫೆಬ್ರುವರಿ 15ಕ್ಕೆ ಘೋಷಣೆ ಆಗಿತ್ತು. ಮಾರ್ಚ್ 31ರವರೆಗೂ ಸಮಯ ಕೊಡಲಾಗಿತ್ತು. ಬಳಿಕ ಜೂನ್ 30ಕ್ಕೆ ಅದು ವಿಸ್ತರಣೆಗೊಂಡು, ಈಗ ಆಗಸ್ಟ್ 15ಕ್ಕೆ ಹೋಗಿದೆ.
ಈ ಸ್ಪೆಷಲ್ ಫಿಕ್ಸೆಡ್ ಡೆಪಾಸಿಟ್ ಸ್ಕೀಮ್ನಲ್ಲಿ ವಾರ್ಷಿಕ ಬಡ್ಡಿ ದರ ಶೇ. 7.1ರಷ್ಟಿದೆ. ಹಿರಿಯ ನಾಗರಿಕರಿಗೆ ಶೇ. 7.6 ಬಡ್ಡಿ ಸಿಗುತ್ತದೆ. ಇದು 400 ದಿನಗಳ ಡೆಪಾಸಿಟ್ ಸ್ಕೀಮ್ ಆಗಿದ್ದು, ಬೇರೆ ಅವಧಿಗೆ ಅನ್ವಯ ಆಗುವುದಿಲ್ಲ.
ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ