ಎಸ್​ಬಿಐ ವೀಕೇರ್ ಸ್ಕೀಮ್; ಗರಿಷ್ಠ ಬಡ್ಡಿ ಕೊಡುವ ಈ ಯೋಜನೆ ಈ ತಿಂಗಳೇ ಕೊನೆ

|

Updated on: Sep 04, 2023 | 12:54 PM

SBI WeCare FD Scheme: ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಹಲವು ಎಫ್​ಡಿ ಸ್ಕೀಮ್​ಗಳಲ್ಲಿ ವೀಕೇರ್ ಒಂದು. ಅಮೃತ್ ಕಳಶ್ ಡೆಪಾಸಿಟ್ ಸ್ಕೀಮ್ ಬಿಟ್ಟರೆ ಎಸ್​ಬಿಐ ಅತಿಹೆಚ್ಚು ಬಡ್ಡಿ ಕೊಡುವ ಫಿಕ್ಸೆಡ್ ಡೆಪಾಸಿಟ್ ಸ್ಕೀಮ್ ವೀಕೇರ್​ನದ್ದು. ಹಿರಿಯ ನಾಗರಿಕರಿಗೆಂದು ರೂಪಿಸಲಾಗಿರುವ ವೀಕೇರ್​ನಲ್ಲಿ ಶೇ. 7.5ರಷ್ಟು ಬಡ್ಡಿ ಸಿಗುತ್ತದೆ. ಸಾಮಾನ್ಯ ಗ್ರಾಹಕರಿಗಿಂತ ಶೇ. 1ರಷ್ಟು ಹೆಚ್ಚು ಬಡ್ಡಿ ಸಿಗುತ್ತದೆ.

ಎಸ್​ಬಿಐ ವೀಕೇರ್ ಸ್ಕೀಮ್; ಗರಿಷ್ಠ ಬಡ್ಡಿ ಕೊಡುವ ಈ ಯೋಜನೆ ಈ ತಿಂಗಳೇ ಕೊನೆ
ಎಸ್​ಬಿಐ
Follow us on

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಕೆಲ ವಿಶೇಷ ನಿಶ್ಚಿತ ಠೇವಣಿ ಯೋಜನೆಗಳಲ್ಲಿ ವೀ ಕೇರ್ ಸ್ಕೀಮ್ (SBI WeCare Scheme) ಒಂದು. ಈ ಬ್ಯಾಂಕ್​ನ ಎಫ್​ಡಿಗಳ ಪೈಕಿ ಅತಿಹೆಚ್ಚು ಬಡ್ಡಿ ಕೊಡುವ ಸ್ಕೀಮ್​ಗಳಲ್ಲಿ ಇದು ಒಂದು ಎಂಬುದು ವಿಶೇಷ. ಹಿರಿಯ ನಾಗರಿಕರಿಗೆಂದೇ ತರಲಾಗಿರುವ ಎಸ್​ಬಿಐ ವೀಕೇರ್ ಎಫ್​ಡಿ ಸ್ಕೀಮ್ ಪಡೆಯಲು ಸೆಪ್ಟೆಂಬರ್ 30 ಕೊನೆಯ ದಿನವಾಗಿದೆ. ಈ ಮೊದಲು ಜೂನ್ 30ರವರೆಗೆ ಮಾತ್ರ ವೀಕೇರ್ ಯೋಜನೆಯನ್ನು ಇಡಲಾಗಿತ್ತು. ಸಾಕಷ್ಟು ಬೇಡಿಕೆ ಬಂದ ಕಾರಣ ಮೂರು ತಿಂಗಳು ಅವಧಿ ವಿಸ್ತರಿಸಲಾಗಿದೆ. 60 ವರ್ಷ ಹಾಗೂ ಮೇಲ್ಪಟ್ಟ ವಯಸ್ಸಿನ ವ್ಯಕ್ತಿಗಳು ಈ ವಿಶೇಷ ಫಿಕ್ಸೆಡ್ ಡೆಪಾಸಿಟ್ ಸ್ಕೀಮ್ ಅನ್ನು ಪಡೆಯಲು ಇನ್ನೂ 4 ವಾರ ಕಾಲಾವಕಾಶ ಇದೆ.

2022ರಲ್ಲಿ ಎಸ್​ಬಿಐ ಈ ಸ್ಪೆಷಲ್ ಎಫ್​ಡಿ ಸ್ಕೀಮ್ ಅನ್ನು ಆರಂಭಿಸಿತು. ಈ ಸ್ಕೀಮ್​ನಲ್ಲಿ ವಯೋವೃದ್ಧರು 5ರಿಂದ 10 ವರ್ಷದ ಅವಧಿಗೆ ಇರಿಸುವ ಠೇವಣಿಗೆ ಶೇ. 7.5ರಷ್ಟು ಬಡ್ಡಿಯನ್ನು ಎಸ್​ಬಿಐ ನೀಡುತ್ತದೆ. ಇದೇ ಅವಧಿಗೆ ಸಾಮಾನ್ಯ ಗ್ರಾಹಕರು ಇರಿಸುವ ಠೇವಣಿಗಳಿಗೆ ಶೇ. 6.50ರಷ್ಟು ಮಾತ್ರವೇ ಬಡ್ಡಿ ಸಿಗುವುದು. ಒಂದು ಪ್ರತಿಶತದಷ್ಟು ಹೆಚ್ಚು ಬಡ್ಡಿಯನ್ನು ವೀಕೇರ್ ಸ್ಕೀಮ್ ಅಡಿಯಲ್ಲಿ ಹಿರಿಯ ನಾಗರಿಕರು ಪಡೆಯಬಹುದು.

ಇದನ್ನೂ ಓದಿ: ಒಂದೆಡೆ ಸಾಲ ಇದೆ, ಈಕ್ವಿಟಿ ಮೇಲೆ ಎಸ್​ಐಪಿ ಇದೆ; ಇನ್ನೊಂದೆಡೆ ಪಿಎಫ್ ಹಣ ಇದೆ; ಮುಂದೇನು ಮಾಡಬಹುದು?

ಎಸ್​ಬಿಐನಲ್ಲಿ ವೀಕೇರ್ ಸ್ಕೀಮ್​ಗಿಂತ ಹೆಚ್ಚು ಬಡ್ಡಿ ಕೊಡುವುದು 400 ದಿನಗಳ ಅಮೃತ್ ಕಳಶ್ ಎಫ್​ಡಿ ಸ್ಕೀಮ್ ಮಾತ್ರವೇ. ಅಮೃತ್ ಕಳಶ್ ಸ್ಕೀಮ್​ನಲ್ಲಿ ಸಾಮಾನ್ಯ ಗ್ರಾಹಕರಿಗೆ ಶೇ. 7.1ರಷ್ಟು ಬಡ್ಡಿ ಸಿಕ್ಕರೆ, ಹಿರಿಯ ನಾಗರಿಕರು ಶೇ. 7.6ರಷ್ಟು ಬಡ್ಡಿ ಪಡೆಯಬಹುದು.

ಇದು ಬಿಟ್ಟರೆ ವೀಕೇರ್ ಸ್ಕೀಮ್​ಗೆ ಸರಿಸಮಾನವಾಗಿ ಬಡ್ಡಿ ಕೊಡುವ ಇನ್ನೊಂದು ಎಫ್​ಡಿ 2ರಿಂದ 3 ವರ್ಷದ ಅವಧಿಯದ್ದು. ಎರಡರಿಂದ ಮೂರು ವರ್ಷದ ಅವಧಿಯ ಎಸ್​ಬಿಐ ಫಿಕ್ಸೆಡ್ ಡೆಪಾಸಿಟ್ ಸ್ಕೀಮ್​ನಲ್ಲಿ ಸಾಮಾನ್ಯ ಗ್ರಾಹಕರಿಗೆ ಶೇ. 7ರಷ್ಟು ಬಡ್ಡಿ ಸಿಕ್ಕರೆ, ಹಿರಿಯ ನಾಗರಿಕರಿಗೆ ಸಿಗುವ ಬಡ್ಡಿ ಶೇ. 7.5 ಎನ್ನಲಾಗಿದೆ.

ಇದನ್ನೂ ಓದಿ: ಗಂಡ ಆದಾಯ ಸರ್ಟಿಫಿಕೇಟ್ ಇಲ್ಲದೇ ಗೃಹಿಣಿಯರಿಗೆ ಇನ್ಷೂರೆನ್ಸ್ ಪಾಲಿಸಿ ಸಿಗುತ್ತಾ? ವಾಸ್ತವ ಸ್ಥಿತಿ ಏನಿದೆ?

ಎಸ್​ಬಿಐನ ಯಾವುದೇ ಫಿಕ್ಸೆಡ್ ಡೆಪಾಸಿಟ್​ನಲ್ಲಿ ಬಡ್ಡಿ ಹಣವನ್ನು ಮೂರು ತಿಂಗಳಿಗೊಮ್ಮೆ ಜಮೆ ಮಾಡಲಾಗುತ್ತದೆ. ಬಡ್ಡಿ ಜಮೆ ಆದ ಬಳಿಕ ಪ್ರೀಮಿಯಮ್ ಹೆಚ್ಚಳವಾಗಿ ಅದಕ್ಕೂ ಬಡ್ಡಿ ಬೆಳೆಯುತ್ತಾ ಹೋಗುತ್ತದೆ. ಈ ಲೆಕ್ಕದಲ್ಲಿ ಎಸ್​ಬಿಐ ವೀಕೇರ್ ಎಫ್​ಡಿಯಲ್ಲಿರುವ ಹಣ ವರ್ಷಕ್ಕೆ ಶೇ. 7.71ರ ದರದಲ್ಲಿ ಬೆಳೆಯುತ್ತಾ ಹೋಗುತ್ತದೆ.

ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ