ಒಂದೇ ಸಣ್ಣ ತಂತ್ರ; 1 ಕೋಟಿ ಬದಲು 11 ಕೋಟಿ ರೂ ರಿಟರ್ನ್; ಇದು ಸ್ಟೆಪ್ ಅಪ್ ಹೂಡಿಕೆ ಸೂತ್ರ

|

Updated on: Oct 15, 2023 | 1:38 PM

SIP Investment Step Up Technique: ಷೇರುಮಾರುಕಟ್ಟೆಯ ಮೇಲೆ ನೇರವಾಗಿ ಹೂಡಿಕೆ ಮಾಡಿ ವ್ಯವಹರಿಸಲು ವ್ಯವಧಾನ ಇಲ್ಲದವರು ಮ್ಯೂಚುವಲ್ ಫಂಡ್ ಮೊರೆ ಹೋಗುತ್ತಾರೆ. ಬಹಳಷ್ಟು ಫಂಡ್​​ಗಳು ವರ್ಷಕ್ಕೆ ಶೇ. 10ಕ್ಕಿಂತಲೂ ಹೆಚ್ಚು ರಿಟರ್ನ್ ಕೊಟ್ಟಿವೆ. ಸರಾಸರಿಯಾಗಿ ಶೇ. 12ರಷ್ಟು ವಾರ್ಷಿಕ ರಿಟರ್ನ್ ನಿರೀಕ್ಷಿಸಬಹುದು ಎನ್ನುತ್ತಾರೆ ಕೆಲ ತಜ್ಞರು. ಈ ಎಸ್​ಐಪಿಗಳು ನಿಮ್ಮ ಉಳಿತಾಯ ಹಣದ ಮೌಲ್ಯ ಹೆಚ್ಚಿಸುತ್ತವೆ. ಕಾಂಪೌಂಡಿಂಗ್ ಎಫೆಕ್ಟ್ ಎಂಬ ಗುಣದಿಂದ ಹೂಡಿಕೆಯು ದೀರ್ಘಾವಧಿಯಲ್ಲಿ ಬಹಳ ವೇಗವಾಗಿ ಬೆಳೆಯುತ್ತದೆ. ಇದರ ಜೊತೆಗೆ ಸ್ಟೆಪ್ ಅಪ್ ತಂತ್ರ ಅನುಸರಿಸಿದರೆ ಹತ್ತು ಪಟ್ಟು ಹೆಚ್ಚು ರಿಟರ್ನ್ ನಿರೀಕ್ಷಿಸಬಹುದು.

ಒಂದೇ ಸಣ್ಣ ತಂತ್ರ; 1 ಕೋಟಿ ಬದಲು 11 ಕೋಟಿ ರೂ ರಿಟರ್ನ್; ಇದು ಸ್ಟೆಪ್ ಅಪ್ ಹೂಡಿಕೆ ಸೂತ್ರ
ಎಸ್​ಐಪಿ
Follow us on

ಮ್ಯೂಚುವಲ್ ಫಂಡ್​ನ ಎಸ್​ಐಪಿ ಸ್ಕೀಮ್​ಗಳ ಜನಪ್ರಿಯತೆ ಇತ್ತೀಚೆಗೆ ಹೆಚ್ಚುತ್ತಿದೆ. ಷೇರುಮಾರುಕಟ್ಟೆ ಬೆಳೆದಂತೆ ಈ ಸಿಸ್ಟಮ್ಯಾಟಿಕ್ ಇನ್ವೆಸ್ಟ್​​ಮೆಂಟ್ ಪ್ಲಾನ್​ಗಳು (SIP- systematic investment plan) ಹೆಚ್ಚೆಚ್ಚು ಜನರನ್ನು ಆಕರ್ಷಿಸುತ್ತಿವೆ. 2023ರ ಸೆಪ್ಟೆಂಬರ್​ನಲ್ಲಿ ಎಸ್​ಐಪಿಗಳಲ್ಲಿ ಹೂಡಿಕೆಯಾದ ಮೊತ್ತ 16,000 ಕೋಟಿ ರೂಗೂ ಹೆಚ್ಚು ಎಂಬ ಮಾಹಿತಿ ಇದೆ. ಷೇರುಮಾರುಕಟ್ಟೆಯ ಮೇಲೆ ನೇರವಾಗಿ ಹೂಡಿಕೆ ಮಾಡಿ ವ್ಯವಹರಿಸಲು ವ್ಯವಧಾನ ಇಲ್ಲದವರು ಮ್ಯೂಚುವಲ್ ಫಂಡ್ ಮೊರೆ ಹೋಗುತ್ತಾರೆ. ಬಹಳಷ್ಟು ಫಂಡ್​​ಗಳು ವರ್ಷಕ್ಕೆ ಶೇ. 10ಕ್ಕಿಂತಲೂ ಹೆಚ್ಚು ರಿಟರ್ನ್ ಕೊಟ್ಟಿವೆ. ಸರಾಸರಿಯಾಗಿ ಶೇ. 12ರಷ್ಟು ವಾರ್ಷಿಕ ರಿಟರ್ನ್ ನಿರೀಕ್ಷಿಸಬಹುದು ಎನ್ನುತ್ತಾರೆ ಕೆಲ ತಜ್ಞರು. ಈ ಎಸ್​ಐಪಿಗಳು ನಿಮ್ಮ ಉಳಿತಾಯ ಹಣದ ಮೌಲ್ಯ ಹೆಚ್ಚಿಸುತ್ತವೆ. ಕಾಂಪೌಂಡಿಂಗ್ ಎಫೆಕ್ಟ್ ಎಂಬ ಗುಣದಿಂದ ಹೂಡಿಕೆಯು ದೀರ್ಘಾವಧಿಯಲ್ಲಿ ಬಹಳ ವೇಗವಾಗಿ ಬೆಳೆಯುತ್ತದೆ. ಇದರ ಜೊತೆಗೆ ನಿಯಮಿತವಾಗಿ ಹೂಡಿಕೆ ಹೆಚ್ಚಿಸುತ್ತಾ ಹೋದರೆ ನಿಜಕ್ಕೂ ಮ್ಯಾಜಿಕ್ ನಿರೀಕ್ಷಿಸಬಹುದು.

ಸ್ಟೆಪ್ ಅಪ್ ಹೂಡಿಕೆ ತಂತ್ರ

ಸ್ಟೆಪ್ ಅಪ್ ಇನ್ವೆಸ್ಟ್​ಮೆಂಟ್ ಎಂಬ ಹೂಡಿಕೆ ತಂತ್ರದ ಬಗ್ಗೆ ಕೇಳಿರಬಹುದು. ಇದು ನಿಮ್ಮ ಹೂಡಿಕೆಯನ್ನು ವರ್ಷಕ್ಕೊಮ್ಮೆ ಹೆಚ್ಚಿಸುತ್ತಾ ಹೋಗುವುದು. ಇದನ್ನು ಜಾರಿಗೆ ತರಲು ಹಣಕಾಸು ಶಿಸ್ತು ಮತ್ತು ಸಹನೆ ಬಹಳ ಮುಖ್ಯ.

ಇದನ್ನೂ ಓದಿ: ದಿನಕ್ಕೆ 210 ರೂ ಕಟ್ಟಿರಿ; ತಿಂಗಳಿಗೆ 5,000 ರೂ ಪಿಂಚಣಿ ಪಡೆಯಿರಿ; ಇದು ಎಪಿವೈ ಸ್ಕೀಮ್ ಅನುಕೂಲ

ನೀವು ಸ್ಟೆಪ್ ಇಲ್ಲದೇ ಸಾಧಾರಣವಾದ ಎಸ್​ಐಪಿ ಸ್ಕೀಮ್​ನಲ್ಲಿ ಹೂಡಿಕೆ ಮಾಡಿದರೆ ಎಷ್ಟು ರಿಟರ್ನ್ ಸಿಗಬಹುದು? ನೀವು ಪ್ರತೀ ತಿಂಗಳೂ 10,000 ರೂನಂತೆ 20 ವರ್ಷ ಕಾಲ ಎಸ್​ಐಪಿಯಲ್ಲಿ ಹೂಡಿಕೆ ಮಾಡುತ್ತೀರಿ ಎಂದಿಟ್ಟುಕೊಳ್ಳಿ. ನಿಮ್ಮ ಎಸ್​ಐಟಿ ವಾರ್ಷಿವಾಗಿ ಶೇ. 12ರಷ್ಟು ವೃದ್ಧಿ ಕಾಣುತ್ತದೆ ಎಂದಿಟ್ಟುಕೊಳ್ಳಿ. 20 ವರ್ಷದಲ್ಲಿ ನಿಮ್ಮ ಹೂಡಿಕೆ ಒಂದು ಕೋಟಿ ರೂ ಆಗುತ್ತದೆ. ಇದರಲ್ಲಿ ನೀವು ಕಟ್ಟಿದ್ದು 24 ಲಕ್ಷವಾದರೆ ಅದರಿಂದ ಬಂದ ಲಾಭ 76 ಲಕ್ಷ ಇರುತ್ತದೆ.

ಅದೇ ನೀವು ಮಾಸಿಕವಾಗಿ 15,000 ರೂ ಹೂಡಿಕೆ ಮಾಡುತ್ತಾ ಹೋದರೆ 20 ವರ್ಷದಲ್ಲಿ ನಿಮ್ಮ ಹೂಡಿಕೆ 1.5 ಕೋಟಿ ರೂ ಆಗಿ ಬೆಳೆದಿರುತ್ತದೆ. ನಿಮಗೆ ಬಂದ ಲಾಭ 1.14 ಕೋಟಿಯಷ್ಟಿರುತ್ತದೆ.

ಇದನ್ನೂ ಓದಿ: Home Loan Tricks: ಗೃಹಸಾಲ ಕಟ್ಟಿಕಟ್ಟಿ ಸಾಕಾಗಿದೆಯಾ? ಹೋಲ್ ಲೋನ್ ಬೇಗ ತೀರಿಸುವ ಟ್ರಿಕ್ಸ್ ಇಲ್ಲಿದೆ

ಸ್ಟೆಪ್ ಅಪ್ ತಂತ್ರ ಅನುಸರಿಸಿದರೆ?

ನೀವು ಇದೇ ಎಸ್​ಐಪಿಯಲ್ಲಿ ನಿಮ್ಮ ಹೂಡಿಕೆಯನ್ನು ವರ್ಷಕ್ಕೊಮ್ಮೆ ಹೆಚ್ಚಿಸುತ್ತಾ ಹೋದರೆ ಆಗುವ ಮ್ಯಾಜಿಕ್ ನೋಡಿ… ಮಾಸಿಕವಾಗಿ 10,000 ರೂನಂತೆ ನೀವು ಹೂಡಿಕೆ ಆರಂಭಿಸುತ್ತೀರಿ. ವರ್ಷಕ್ಕೊಮ್ಮೆ ಶೇ. 5ರಷ್ಟು ಹೂಡಿಕೆ ಹೆಚ್ಚಿಸಿದರೆ 20 ವರ್ಷದಲ್ಲಿ 1.29 ಲಕ್ಷ ರೂ ಸಂಪತ್ತು ನಿಮ್ಮದಾಗಿರುತ್ತದೆ.

ಅದೇ ನೀವು 15,000 ರೂನಂತೆ ಹೂಡಿಕೆ ಆರಂಭಿಸಿ ವರ್ಷಕ್ಕೊಮ್ಮೆ ಶೇ. 25ರಷ್ಟು ಹೂಡಿಕೆ ಹೆಚ್ಚಿಸಿದರೆ? 20 ವರ್ಷದಲ್ಲಿ ನಿಮ್ಮ ಹೂಡಿಕೆ 11 ಕೋಟಿ ರೂ ಆಗುತ್ತದೆ.

ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ