AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Small Business Idea: ಕೇವಲ 5 ಸಾವಿರ ಹೂಡಿಕೆ ಮಾಡಿ ಭರ್ಜರಿ ಆದಾಯ ಗಳಿಸಿ; ಅಂಚೆ ಇಲಾಖೆ ನೀಡಿದೆ ಅವಕಾಶ

ಕಡಿಮೆ ಹೂಡಿಕೆಯೊಂದಿಗೆ ಭರ್ಜರಿ ಆದಾಯ ಗಳಿಸಬಲ್ಲ ಕಿರು ಉದ್ಯಮ ಸ್ಥಾಪಿಸಲು ಭಾರತೀಯ ಅಂಚೆ ಇಲಾಖೆ ಒಂದು ಅವಕಾಶ ಒದಗಿಸಿದೆ. ಅಂಚೆ ಇಲಾಖೆಯ ಫ್ರಾಂಚೈಸ್​ ಸ್ಕೀಮ್​ನ ಸಂಪೂರ್ಣ ವಿವರ ಇಲ್ಲಿದೆ.

Small Business Idea: ಕೇವಲ 5 ಸಾವಿರ ಹೂಡಿಕೆ ಮಾಡಿ ಭರ್ಜರಿ ಆದಾಯ ಗಳಿಸಿ; ಅಂಚೆ ಇಲಾಖೆ ನೀಡಿದೆ ಅವಕಾಶ
ಸಾಂದರ್ಭಿಕ ಚಿತ್ರ
ಗಣಪತಿ ಶರ್ಮಾ
|

Updated on:Jan 26, 2023 | 12:04 PM

Share

ಸ್ವ ಉದ್ಯೋಗ (Self Employment) ಮಾಡಬೇಕೆಂಬುದು ಬಹಳಷ್ಟು ಮಂದಿಯ ಕನಸಾಗಿರುತ್ತದೆ. ಆದರೆ ದೊಡ್ಡ ಮೊತ್ತದ ಹೂಡಿಕೆ, ಉದ್ಯೋಗಿಗಳ ನಿರ್ವಹಣೆ, ಖರ್ಚು ಇತ್ಯಾದಿಗಳು ಸಾಮಾನ್ಯರಿಂದ ಕಷ್ಟಸಾಧ್ಯ. ಹೀಗಾಗಿ ಮನದೊಳಗೆ ಆಸೆ ಇದ್ದರೂ ಅನೇಕರೂ ಉದ್ಯಮ (Business) ಆರಂಭಿಸಲು ಹಿಂದೇಟು ಹಾಕುತ್ತಾರೆ. ಆದರೆ, ಕಡಿಮೆ ಹೂಡಿಕೆಯೊಂದಿಗೆ ಭರ್ಜರಿ ಆದಾಯ ಗಳಿಸಬಲ್ಲ ಕಿರು ಉದ್ಯಮ (Small Business) ಸ್ಥಾಪಿಸಲು ಭಾರತೀಯ ಅಂಚೆ ಇಲಾಖೆ ಒಂದು ಅವಕಾಶ ಒದಗಿಸಿದೆ. ಅಂಚೆ ಇಲಾಖೆಯ (Indian Post) ಫ್ರಾಂಚೈಸ್​ ಸ್ಕೀಮ್​ ಮೂಲಕ ಕಡಿಮೆ ಹೂಡಿಕೆಯೊಂದಿಗೆ ಉತ್ತಮ ಆದಾಯ, ಲಾಭ ಗಳಿಸಬಹುದಾಗಿದೆ. ಈ ಯೋಜನೆಗೆ ಕನಿಷ್ಠ 5,000 ರೂ. ಹೂಡಿಕೆ ಮಾಡಬೇಕಾಗುತ್ತದೆ. ಭಾರತೀಯ ಅಂಚೆ ಇಲಾಖೆಯು ಕೇವಲ ಅಂಚೆ ಸೇವೆ ಮಾತ್ರವಲ್ಲದೆ ಅನೇಕ ಸೇವೆಗಳನ್ನು ಒದಗಿಸುತ್ತಿದೆ. ಸಣ್ಣ ಉಳಿತಾಯ ಖಾತೆಗಳು, ಆರ್​ಡಿ, ಆಧಾರ್ ಅಪ್​ಡೇಟ್ ಇತ್ಯಾದಿ ಸೇವೆಗಳು ಅಂಚೆ ಕಚೇರಿಗಳಲ್ಲಿ ದೊರೆಯುತ್ತವೆ. ಆದರೆ ಸದ್ಯ ದೇಶದಲ್ಲಿರುವ ಅಂಚೆ ಕಚೇರಿಗಳ ಸಂಖ್ಯೆ ಕಡಿಮೆ ಇದೆ. ಹೀಗಾಗಿ ಸರ್ಕಾರ ಫ್ರಾಂಚೈಸ್​ಗಳ ಮೂಲಕ ಅಂಚೆ ಕಚೇರಿಗಳ ಸಂಖ್ಯೆಯನ್ನು ಹೆಚ್ಚಿಸಲು ಪ್ರಯತ್ನಿಸುತ್ತಿದೆ. ಸರ್ಕಾರದ ಈ ಯೋಜನೆಯಲ್ಲಿ ಹೂಡಿಕೆ ಮಾಡುವ ಮೂಲಕ ಸಾರ್ವಜನಿಕರೂ ಫ್ರಾಂಚೈಸ್ ತೆರೆಯಬಹುದಾಗಿದೆ. ಆ ಮೂಲಕ ಆದಾಯ ಗಳಿಸಬಹುದಾಗಿದೆ. ತವರು ಗ್ರಾಮದಲ್ಲೇ, ಮನೆಯ ಸಮೀಪವೇ ಫ್ರಾಂಚೈಸ್ ತೆರೆಯುವ ಮೂಲಕ ಊರಿನಲ್ಲೇ ಇದ್ದುಕೊಂಡು ಆದಾಯ ಗಳಿಸಬಹುದಾಗಿದೆ.

ಏನಿದು ಅಂಚೆ ಕಚೇರಿ ಫ್ರಾಂಚೈಸ್ ಯೋಜನೆ?

ಅಂಚೆ ಇಲಾಖೆ ಎರಡು ರೀತಿಯ ಪ್ರಾಂಚೈಸ್​ಗೆ​​ ಅವಕಾಶ ನೀಡುತ್ತದೆ. ಅವುಗಳೆಂದರೆ, ಫ್ರಾಂಚೈಸ್ಡ್ ಔಟ್​ಲೆಟ್ ಮತ್ತು ಫ್ರಾಂಚೈಸೀ ಆಫ್​ ಪೋಸ್ಟಲ್ ಏಜೆಂಟ್ಸ್. ಈ ಪೈಕಿ ಯಾವುದಾದರೂ ಒಂದನ್ನು ಆಯ್ದುಕೊಳ್ಳಬಹುದು. ಔಟ್​ಲೆಟ್ ಫ್ರಾಂಚೈಸ್​​ ಅಡಿಯಲ್ಲಿ ಅಂಚೆ ಕಚೇರಿ ಇಲ್ಲದ ಕಡೆಗಳಲ್ಲಿ ಕಚೇರಿ ತೆರೆಯಬಹುದು. ಪೋಸ್ಟಲ್​ ಏಜೆಂಟ್​ಗಳಾದರೆ ಗ್ರಾಮೀಣ ಮತ್ತು ನಗರ ಪ್ರದೇಶಗಳಲ್ಲಿ ಮನೆ ಮನೆಗೆ ತೆರಳಿ ಸ್ಟೇಷನರಿ ಮತ್ತು ಅಂಚೆ ಸ್ಟಾಂಪ್​ಗಳ ವಿತರಣೆ ಮಾಡಬೇಕಾಗುತ್ತದೆ.

ಅಂಚೆ ಕಚೇರಿ ಫ್ರಾಂಚೈಸ್​ಗೆ ಅರ್ಜಿ ಸಲ್ಲಿಸುವುದು ಹೇಗೆ?

ಇಂಡಿಯಾ ಪೋಸ್ಟ್ ವೆಬ್​ಸೈಟ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ. ನಂತರ ಅರ್ಜಿಯನ್ನು ಡೌನ್​ಲೋಡ್ ಮಾಡಿ ಭರ್ತಿ ಮಾಡಿ ಸಲ್ಲಿಸಬೇಕು. ಷರತ್ತುಗಳು ಮತ್ತು ನಿಬಂಧನೆಗಳನ್ನು ಸರಿಯಾಗಿ ಗಮನಿಸಿಕೊಳ್ಳಿ. ಈ ಯೋಜನೆಯಡಿ ಫ್ರಾಂಚೈಸ್​ ತೆರೆಯಲು ಹೆಚ್ಚಿನ ಅರ್ಹತೆಗಳೇನೂ ಬೇಕಾಗಿಲ್ಲ. ಇಲಾಖೆ ಹೇಳಿರುವ ಷರತ್ತುಗಳು ಮತ್ತು ನಿಬಂಧನೆಗಳನ್ನು ಪೂರೈಸಿದರೆ ಸಾಕು. 18 ವರ್ಷ ಮೇಲ್ಪಟ್ಟವರಾಗಿರಬೇಕು. ಫ್ರಾಂಚೈಸ್​ಗೆ ಅರ್ಜಿ ಸಲ್ಲಿಸುವವರ ಕುಟುಂಬದವರು ಯಾರೂ ಅಂಚೆ ಕಚೇರಿಯ ಉದ್ಯೋಗಿ ಆಗಿರಬಾರದು.

ಇದನ್ನೂ ಓದಿ: ಗದಗದಲ್ಲಿ ಅರಳಿದ ಕಲಾಚೇತನ; ಕಾವೆಂಶ್ರೀ ಎಂಬ ಹೋಟೆಲ್ ಉದ್ಯಮಿಯ ಕಲಾಸೇವೆಯ ಯಶೋಗಾಥೆಗೆ ನಮೋ

ಅಂಚೆ ಕಚೇರಿ ಫ್ರಾಂಚೈಸ್​ ತೆರೆಯಲು ಎಷ್ಟು ಖರ್ಚಾಗುತ್ತದೆ?

ಅಂಚೆ ಕಚೇರಿ ಫ್ರಾಂಚೈಸ್ ತೆರೆಯಲು 5,000 ರೂ. ಬಧ್ರತಾ ಠೇವಣಿ ಇಡಬೇಕಾಗುತ್ತದೆ. ಉಳಿದಂತೆ ಸ್ಟೇಷನರಿ ವಸ್ತುಗಳ ಖರೀದಿ ಇತ್ಯಾದಿಗಳಿಗೆ ತುಸು ಖರ್ಚಾಗಬಹುದು. ಫ್ರಾಂಚೈಸ್​ಗಾಗಿ ಕನಿಷ್ಠ 200 ಚದರ ಅಡಿಯ ಕಚೇರಿ ಸ್ಥಳ ಬೇಕಾಗುತ್ತದೆ.

ಅಂಚೆ ಕಚೇರಿ ಫ್ರಾಂಚೈಸ್​ನಿಂದ ಎಷ್ಟು ಆದಾಯ ಗಳಿಸಬಹುದು?

ಅಂಚೆ ಕಚೇರಿ ಫ್ರಾಂಚೈಸ್​ನಿಂದ ನಿಗದಿತ ಆದಾಯ ಎಂಬುದು ಇಲ್ಲವಾದರೂ ತಾವು ನೀಡಿದ ಸೇವೆಗಳಿಗೆ ಅನುಗುಣವಾಗಿ ಕಮಿಷನ್ ದೊರೆಯುತ್ತದೆ. ಹೆಚ್ಚೆಚ್ಚು ಸೇವೆಗಳನ್ನು ನೀಡಿದಷ್ಟೂ ಕಮಿಷನ್ ಹೆಚ್ಚು ದೊರೆಯುತ್ತದೆ. ಅಂಚೆ ಫ್ರಾಂಚೈಸ್​ ಮೂಲಕ ನೀಡುವ ಸೇವೆಗಳಿಗೆ ದೊರೆಯುವ ಕಮಿಷನ್ ದರ ವಿವರ ಹೀಗಿದೆ;

  • ಬುಕಿಂಗ್ ರಿಜಿಸ್ಟರ್ಡ್ ಆರ್ಟಿಕಲ್ಸ್ – 3 ರೂ.
  • ಬುಕಿಂಗ್ ಸ್ಪೀಡ್​ ಪೋಸ್ಟ್ ಆರ್ಟಿಕಲ್ಸ್ – 5 ರೂ.
  • ಮನಿ ಆರ್ಡರ್ ಬುಕಿಂಗ್ (100 – 200 ರೂ.ವರೆಗೆ) – 3.50 ರೂ.
  • ಮನಿ ಆರ್ಡರ್ ಬುಕಿಂಗ್ (200 ರೂ. ಮೇಲ್ಪಟ್ಟ) – 5 ರೂ.
  • ತಿಂಗಳಿಗೆ 1,000 ರೂ.ಗಿಂತ ಹೆಚ್ಚು ಮೊತ್ತದ ಸ್ಪೀಡ್ ಮತ್ತು ರಿಜಿಸ್ಟರ್ಡ್ ಪೋಸ್ಟ್ ಮಾಡಿದರೆ – ಶೇ 20ರಷ್ಟು ಹೆಚ್ಚುವರಿ ಕಮಿಷನ್
  • ಚಿಲ್ಲರೆ ಸೇವೆಗಳಿಗೆ – ಗಳಿಸಿದ ಆದಾಯಕ್ಕೆ ಶೇ 40ರ ಕಮಿಷನ್

ಇನ್ನಷ್ಟು ವಾಣಿಜ್ಯ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ

Published On - 11:29 am, Thu, 26 January 23

ಮಲ್ಲಿಕಾರ್ಜುನ ಖರ್ಗೆ, ಪರಮೇಶ್ವರ್ ಯಾವತ್ತೋ ಸಿಎಂ ಆಗಬೇಕಿತ್ತು: ಹೆಚ್​ಡಿಕೆ
ಮಲ್ಲಿಕಾರ್ಜುನ ಖರ್ಗೆ, ಪರಮೇಶ್ವರ್ ಯಾವತ್ತೋ ಸಿಎಂ ಆಗಬೇಕಿತ್ತು: ಹೆಚ್​ಡಿಕೆ
ಮಗನಿಗೆ ದುಬಾರಿ ಬೆಲೆಯ ಕಾರನ್ನು ಉಡುಗೊರೆಯಾಗಿ ನೀಡಿದ ಹಾರ್ದಿಕ್ ಪಾಂಡ್ಯ
ಮಗನಿಗೆ ದುಬಾರಿ ಬೆಲೆಯ ಕಾರನ್ನು ಉಡುಗೊರೆಯಾಗಿ ನೀಡಿದ ಹಾರ್ದಿಕ್ ಪಾಂಡ್ಯ
ಹನುಮನ ಆಶೀರ್ವಾದದಿಂದಲೇ ರಿಷಬ್​​ಗೆ ಪಾತ್ರ ಸಿಕ್ಕಿದೆ ಎಂದ ಪತ್ನಿ: ವಿಡಿಯೋ
ಹನುಮನ ಆಶೀರ್ವಾದದಿಂದಲೇ ರಿಷಬ್​​ಗೆ ಪಾತ್ರ ಸಿಕ್ಕಿದೆ ಎಂದ ಪತ್ನಿ: ವಿಡಿಯೋ
40 ಭಾರತೀಯ ಮೂಲದ ಆಟಗಾರರನ್ನು ಶ್ಲಾಘಿಸಿದ ಮೋದಿ
40 ಭಾರತೀಯ ಮೂಲದ ಆಟಗಾರರನ್ನು ಶ್ಲಾಘಿಸಿದ ಮೋದಿ
ಮೋದಿ ಪ್ರಸ್ತಾಪಿಸಿದ ಅಂಗಾಂಗ ದಾನದ ಬಗ್ಗೆ ಡಾಕ್ಟರ್ ಹೇಳಿದ್ದಿಷ್ಟು
ಮೋದಿ ಪ್ರಸ್ತಾಪಿಸಿದ ಅಂಗಾಂಗ ದಾನದ ಬಗ್ಗೆ ಡಾಕ್ಟರ್ ಹೇಳಿದ್ದಿಷ್ಟು
ಗುಡ್ ನ್ಯೂಸ್: ಶೀಘ್ರದಲ್ಲೇ ನೈಸ್‌ ರೋಡ್‌ ಸಂಪರ್ಕಿಸುವ ರಸ್ತೆ ಆರಂಭ
ಗುಡ್ ನ್ಯೂಸ್: ಶೀಘ್ರದಲ್ಲೇ ನೈಸ್‌ ರೋಡ್‌ ಸಂಪರ್ಕಿಸುವ ರಸ್ತೆ ಆರಂಭ
ಭಾರೀ ಅಗ್ನಿ ಅವಘಡ:20 ಕೋಟಿ ರೂ.ಹೆಚ್ಚು ಮೌಲ್ಯದ ವಸ್ತುಗಳು ಭಸ್ಮ
ಭಾರೀ ಅಗ್ನಿ ಅವಘಡ:20 ಕೋಟಿ ರೂ.ಹೆಚ್ಚು ಮೌಲ್ಯದ ವಸ್ತುಗಳು ಭಸ್ಮ
ಶಾಸಕ ಚಂದ್ರು ಲಮಾಣಿ ವಿರುದ್ಧ ನಡೆದಿತ್ತಾ ಷಡ್ಯಂತ್ರ?ಸ್ವಾಮೀಜಿ ಆಡಿಯೋ ವೈರಲ್
ಶಾಸಕ ಚಂದ್ರು ಲಮಾಣಿ ವಿರುದ್ಧ ನಡೆದಿತ್ತಾ ಷಡ್ಯಂತ್ರ?ಸ್ವಾಮೀಜಿ ಆಡಿಯೋ ವೈರಲ್
ಶಾರ್ಟ್​ ಸರ್ಕ್ಯೂಟ್​ನಿಂದ ಸುಗಂಧ ದ್ರವ್ಯ ಗೋದಾಮು ಧಗಧಗ!
ಶಾರ್ಟ್​ ಸರ್ಕ್ಯೂಟ್​ನಿಂದ ಸುಗಂಧ ದ್ರವ್ಯ ಗೋದಾಮು ಧಗಧಗ!
ಲಂಚ ಸ್ವೀಕರಿಸುವಾಗ ಸಿಕ್ಕಿಬಿದ್ದ ಬಿಜೆಪಿ ಶಾಸಕನ ಪರ ರಾಜಣ್ಣ ಬ್ಯಾಟಿಂಗ್
ಲಂಚ ಸ್ವೀಕರಿಸುವಾಗ ಸಿಕ್ಕಿಬಿದ್ದ ಬಿಜೆಪಿ ಶಾಸಕನ ಪರ ರಾಜಣ್ಣ ಬ್ಯಾಟಿಂಗ್