
ಬೆಂಗಳೂರು, ನವೆಂಬರ್ 18: ಸೌತ್ ಇಂಡಿಯನ್ ಬ್ಯಾಂಕ್ ಇದೀಗ ಮಹಿಳೆಯರಿಗೆಂದು ವಿಶೇಷ ಸೇವಿಂಗ್ಸ್ ಅಕೌಂಟ್ ಯೋಜನೆ ಆರಂಭಿಸಿದೆ. ಈ ಎಸ್ಐಬಿ ಹರ್ ಅಕೌಂಟ್ನಲ್ಲಿ (SIB HER account) ಮಹಿಳೆಯರಿಗೆ ನಾನಾ ರೀತಿಯ ಸೌಲಭ್ಯಗಳು ಮತ್ತು ಅನುಕೂಲತೆಗಳನ್ನು ನೀಡಲಾಗುತ್ತಿದೆ. ಭರ್ಜರಿ ಇನ್ಷೂರೆನ್ಸ್ನಿಂದ (Insurance) ಹಿಡಿದು ಅನ್ಲಿಮಿಟೆಡ್ ಎಟಿಎಂ ವಿತ್ಡ್ರಾವರೆಗೆ ಹಲವು ಫೀಚರ್ಗಳು ಮಹಿಳೆಯರ ಎಸ್ಐಬಿ HER ಅಕೌಂಟ್ನಲ್ಲಿ ಇವೆ.
ಇದನ್ನೂ ಓದಿ: ಕೈಯಲ್ಲಿ ಹಣ ನಿಲ್ಲುತ್ತಿಲ್ಲವಾ? ಮೊದಲು ಕೈಬಿಟ್ಟುಹೋಗೋದು ಹಣ ಅಲ್ಲ; ಇದು ತಿಳಿದಿರಿ…
ಬ್ಯಾಂಕ್ನಲ್ಲಿ ಆಟೊ ಸ್ವೀಪ್ ಫೆಸಿಲಿಟಿಯಲ್ಲಿ (Auto Sweep facility) ಸೇವಿಂಗ್ಸ್ ಅಕೌಂಟ್ ಮತ್ತು ಎಫ್ಡಿ ಹಣದ ತಾಳಮೇಳ ಇರುತ್ತದೆ. ಇದರಲ್ಲಿ ಸೇವಿಂಗ್ಸ್ ಅಕೌಂಟ್ ಅನ್ನು ಫಿಕ್ಸೆಡ್ ಡೆಪಾಸಿಟ್ ಅಕೌಂಟ್ಗೆ ಲಿಂಕ್ ಮಾಡಲಾಗಿರುತ್ತದೆ. ನಿಗದಿತ ಮಿತಿಗಿಂತ ಹೆಚ್ಚಿನ ಹಣವು ಎಸ್ಬಿ ಅಕೌಂಟ್ನಲ್ಲಿ ಇದ್ದರೆ ಅದನ್ನು ಎಫ್ಡಿಗೆ ಆಟೊಮ್ಯಾಟಿಕ್ ಆಗಿ ವರ್ಗಾಯಿಸಲಾಗುತ್ತದೆ.
ಹಾಗೆಯೆ, ಎಸ್ಬಿ ಅಕೌಂಟ್ನಲ್ಲಿ ಬ್ಯಾಲನ್ಸ್ ನಿಗದಿತ ಮಿತಿಗಿಂತ ಕಡಿಮೆಗೆ ಬಂದರೆ, ಅಷ್ಟು ಹಣವನ್ನು ಎಫ್ಡಿಯಿಂದ ಇಲ್ಲಿಗೆ ಟ್ರಾನ್ಸ್ಫರ್ ಮಾಡಲಾಗುತ್ತದೆ. ಈ ರೀತಿಯ ವ್ಯವಸ್ಥೆಯಿಂದ ಗ್ರಾಹಕರ ಹಣಕ್ಕೆ ಹೆಚ್ಚಿನ ಬಡ್ಡಿ ಸಿಗಲು ಸಾಧ್ಯವಾಗುತ್ತದೆ.
ಇದನ್ನೂ ಓದಿ: ಡಿಜಿಟಲ್ ಗೋಲ್ಡ್ನಲ್ಲಿ ಹೂಡಿಕೆ ಸುರಕ್ಷಿತವಲ್ಲವಾ? ಸೆಬಿ ಹೇಳಿದ್ದೇನು? ಪರ್ಯಾಯಗಳೇನು?
ಸೌತ್ ಇಂಡಿಯನ್ ಬ್ಯಾಂಕ್ನ HER ಅಕೌಂಟ್ನಲ್ಲಿ 50,000 ರೂ ಮಾಸಿಕ ಬ್ಯಾಲನ್ಸ್ ಇರಬೇಕೆಂಬ ನಿಯಮ ಇದೆ. ಆದರೆ, ಗ್ರಾಹಕರು ಒಂದು ಲಕ್ಷ ರೂ ಅನ್ನು ಫಿಕ್ಸೆಡ್ ಡೆಪಾಸಿಟ್ಗೆ ಇಟ್ಟರೆ, ಮಂತ್ಲಿ ಬ್ಯಾಲನ್ಸ್ ಎಷ್ಟಿದ್ದರೂ ಚಿಂತೆ ಪಡಬೇಕಿಲ್ಲ. ಅಥವಾ ಹಿಂದಿನ ತಿಂಗಳಲ್ಲಿ ಈ ಅಕೌಂಟ್ನ ಡೆಬಿಡ್ ಕಾರ್ಡ್ನಿಂದ 50,000 ರೂ ವ್ಯಯಿಸಿದ್ದರೂ ಈ ತಿಂಗಳು 50,000 ರೂ ಮಾಸಿಕ ಬ್ಯಾಲನ್ಸ್ ಕಾಯ್ದುಕೊಳ್ಳುವ ಅಗತ್ಯ ಇರುವುದಿಲ್ಲ.
ಎಸ್ಐಬಿಯ ಬೇರೆ ಸಾಮಾನ್ಯ ಅಕೌಂಟ್ಗಳಲ್ಲಿ ಕನಿಷ್ಠ ಬ್ಯಾಲನ್ಸ್ 5,000 ರೂವರೆಗೂ ಇದೆ.
ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
Published On - 6:27 pm, Tue, 18 November 25