ಸಾವರನ್ ಗೋಲ್ಡ್ ಬಾಂಡ್ನ 2023-24ರ ಸಾಲಿನ ನಾಲ್ಕನೇ ಹಾಗು ಕೊನೆಯ ಸರಣಿಯ ಪ್ಲಾನ್ ನಾಳೆ (Sovereign Gold Bond 2023-24 Series IV) (ಫೆ. 12) ಬಿಡುಗಡೆ ಆಗಲಿದೆ. ಇತ್ತೀಚಿನ ವರ್ಷಗಳಲ್ಲಿ ಈ ಬಾಂಡ್ ಬಹಳ ಜನಪ್ರಿಯತೆ ಪಡೆದಿದೆ. ಚಿನ್ನದ ಬೆಲೆಗೆ ಅನುಗುಣವಾಗಿ ಇದು ರಿಟರ್ನ್ ಕೊಡುತ್ತದೆ. ಎಂಟು ವರ್ಷಕ್ಕೆ ಮೆಚ್ಯೂರ್ ಆಗುವ ಈ ಗೋಲ್ಡ್ ಬಾಂಡ್ ಬಹಳ ಹೆಚ್ಚಿನ ಮಟ್ಟದಲ್ಲಿ ಲಾಭ ತರುತ್ತದೆ. 2016ರಲ್ಲಿ ಬಿಡುಗಡೆ ಆದ ಸಾವರನ್ ಗೋಲ್ಡ್ ಬಾಂಡ್ನ ಮೊದಲ ಸರಣಿ (2016 Sovereign Gold Bond Series I) ಇದೀಗ ಫೆಬ್ರುವರಿ 8ರಂದು ಮೆಚ್ಯೂರಿಟಿ ಆಗಿದೆ. ಶೇ. 13.6ರಷ್ಟು ವಾರ್ಷಿಕ ದರದಲ್ಲಿ ಇದು ಬೆಳೆದಿದೆ. ಎಂಟು ವರ್ಷದಲ್ಲಿ ಹೂಡಿಕೆದಾರರಿಗೆ ಶೇ. 163ರಷ್ಟು ಲಾಭ ಮಾಡಿದೆ.
2016ರ ಫೆಬ್ರುವರಿ 8ರಂದು ಸಾವರನ್ ಗೋಲ್ಡ್ ಬಾಂಡ್ನ ಮೊದಲ ಟ್ರಾಂಚ್ ಬಿಡುಗಡೆ ಆದಾಗ ಒಂದು ಗ್ರಾಮ್ ಚಿನ್ನದ ಬೆಲೆಯಾಗಿ 2,600 ರೂ ನಿಗದಿ ಮಾಡಲಾಗಿತ್ತು. ಮೆಚ್ಯೂರ್ ಆದಾಗ, ಅಂದರೆ ಈಗ ಒಂದು ಗ್ರಾಮ್ ಚಿನ್ನದ ಬೆಲೆ 6,271 ರೂ ಆಗಿದೆ. ಎಂಟು ವರ್ಷದ ಅಂತರದಲ್ಲಿ ಒಂದು ಗ್ರಾಮ್ ಚಿನ್ನದ ಮೌಲ್ಯ 3,671 ರೂನಷ್ಟು ಹೆಚ್ಚಾಗಿದೆ.
ನೀವು 2016ರಲ್ಲಿ 100 ಗ್ರಾಮ್ ಚಿನ್ನದ ಮೇಲೆ ಹೂಡಿಕೆ ಮಾಡಿರುತ್ತೀರಿ. ಅಂದರೆ 2,60,000 ರೂ ಹೂಡಿಕೆ ಮಾಡಿರುತ್ತೀರಿ. ಈಗ ನಿಮ್ಮ ಹೂಡಿಕೆ ಮೌಲ್ಯ 6,27,100 ರೂಗೆ ಹೆಚ್ಚಾಗಿರುತ್ತದೆ. ಎರಡು ಪಟ್ಟಿಗಿಂತ ಹೆಚ್ಚೇ ನಿಮಗೆ ಆದಾಯ ಆಗಿದೆ.
ಇದನ್ನೂ ಓದಿ: ಗವರ್ನ್ಮೆಂಟ್ ಬಾಂಡ್ಗಳಲ್ಲಿ ಹಣ ಹೂಡಿಕೆ ಮಾಡುವುದು ಸರಿಯಾದ ಮಾರ್ಗವಾ? ಈ ವಿಷಯ ತಿಳಿದಿರಲಿ
ಇದರ ಜೊತೆಗೆ, ನಿಮ್ಮ ಹೂಡಿಕೆಗೆ ವರ್ಷಕ್ಕೆ ಶೇ. 2.5ರಷ್ಟು ಬಡ್ಡಿ ಆದಾಯವೂ ನಿಯಮಿತವಾಗಿ ಬರುತ್ತಿರುತ್ತದೆ. ಎಲ್ಲವೂ ಸೇರಿ 2016ರ ಈ ಸಾವರನ್ ಗೋಲ್ಡ್ ಬಾಂಡ್ ಪ್ಲಾನ್ನಲ್ಲಿ ಮಾಡಿದ್ದ ಹೂಡಿಕೆ ವರ್ಷಕ್ಕೆ ಶೇ. 13.6ರಷ್ಟು ಬೆಳೆದಂತಾಗುತ್ತದೆ.
ಚಿನ್ನದ ಮೇಲಿನ ಇತರ ಹೂಡಿಕೆ ಇನ್ಸ್ಟ್ರುಮೆಂಟ್ಗಳಲ್ಲಿ ಗೋಲ್ಡ್ ಇಟಿಎಫ್ ಒಂದು. 2016ರ ಫೆಬ್ರುವರಿ 8ರಿಂದ 2026ರ ಫೆಬ್ರುವರಿ 8ರವರೆಗೆ ನಿಪ್ಪೋನ್ ಇಂಡಿಯಾ ಗೋಲ್ಡ್ ಇಟಿಎಫ್ ಶೇ. 9.31ರ ವಾರ್ಷಿಕ ದರದಲ್ಲಿ ಹೂಡಿಕೆಗೆ ಲಾಭ ತಂದಿದೆ.
ಇದನ್ನೂ ಓದಿ: ಸಾವರನ್ ಗೋಲ್ಡ್ ಬಾಂಡ್ ಫೆ. 12ರಿಂದ 16ರವರೆಗೆ; ಇದು ಈ ವರ್ಷದ ಕೊನೆಯ ಸರಣಿ
ಸಾವರನ್ ಗೋಲ್ಡ್ ಬಾಂಡ್ ಸ್ಕೀಮ್ ಅನ್ನು ಆರ್ಬಿಐ ನಿರ್ವಹಿಸುತ್ತದೆ. 2015ರಲ್ಲಿ ಮೊದಲ ಬಾರಿಗೆ ಇದನ್ನು ಜಾರಿಗೆ ತರಲಾಯಿತು. 2023ರ ನವೆಂಬರ್ 30ರಂದು ಮೊದಲ ಸರಣಿಯ ಬಾಂಡ್ ಮೆಚ್ಯೂರ್ ಆಗಿದೆ. ಆ ಸರಣಿಯ ಬಾಂಡ್ ಶೇ. 12.9ರಷ್ಟು ವಾರ್ಷಿಕ ದರದಲ್ಲಿ ಲಾಭ ತಂದಿದೆ. ಈಗ 2024ರ ಫೆ. 8ರಂದು ಮೆಚ್ಯೂರ್ ಆಗಿದ್ದು ಎರಡನೇ ಸರಣಿ. ಇದು ಶೇ. 13.6ರ ವಾರ್ಷಿಕ ದರದಲ್ಲಿ ಹೂಡಿಕೆದಾರರಿಗೆ ಲಾಭ ಕೊಟ್ಟಿದೆ.
ಚಿನ್ನದ ಬೆಲೆ ವರ್ಷದಲ್ಲಿ ಶೇ. 12ರಷ್ಟಾದರೂ ಬೆಳೆಯುವ ಸಾಧ್ಯತೆ ಹೆಚ್ಚಿದೆ. ಹೀಗಾಗಿ, ಸಾವರನ್ ಗೋಲ್ಡ್ ಬಾಂಡ್ನಲ್ಲಿ ಹೂಡಿಕೆ ಮಾಡುವುದು ಬಹಳ ಉತ್ತಮ ಆಯ್ಕೆ.
ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ