AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸಾವರೀನ್ ಗೋಲ್ಡ್ ಬಾಂಡ್: ಅಪ್ಪಟ ಚಿನ್ನ… ಒಂದು ಹೂಡಿಕೆ ಹಲವು ಲಾಭ; ಯಾಕೆ ಈ ಸ್ಕೀಮ್ ಮಹತ್ವದ್ದು?

Sovereign Gold Bond: ಸಾವರೀನ್ ಗೋಲ್ಡ್ ಬಾಂಡ್ ಯೋಜನೆಯಲ್ಲಿ ಒಬ್ಬ ವ್ಯಕ್ತಿ ಒಂದು ಗ್ರಾಮ್​ನಿಂದ 4 ಕಿಲೋವರೆಗಿನ ಚಿನ್ನದ ಮೇಲೆ ಹಣ ಹೂಡಿಕೆ ಮಾಡಬಹುದು. ಇವತ್ತಿನ ಚಿನ್ನದ ಬೆಲೆಗೆ ಬಾಂಡ್ ಖರೀದಿಸಿದರೆ ಎಂಟು ವರ್ಷದ ಬಳಿಕ ಇರುವ ಚಿನ್ನದ ಬೆಲೆಗೆ ಅನುಗುಣವಾಗಿ ರಿಟರ್ನ್ ಸಿಗುತ್ತದೆ. ಎಸ್​ಜಿಬಿಗಳಿಂದ ಸಾಲ ಪಡೆಯಬಹುದು. ಲಾಭ ತೆರಿಗೆ, ಟಿಡಿಎಸ್ ಕಡಿತ ಇರುವುದಿಲ್ಲ.

ಸಾವರೀನ್ ಗೋಲ್ಡ್ ಬಾಂಡ್: ಅಪ್ಪಟ ಚಿನ್ನ... ಒಂದು ಹೂಡಿಕೆ ಹಲವು ಲಾಭ; ಯಾಕೆ ಈ ಸ್ಕೀಮ್ ಮಹತ್ವದ್ದು?
ಸಾವರೀನ್ ಗೋಲ್ಡ್ ಬಾಂಡ್
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Dec 15, 2023 | 3:38 PM

ಸಾವರೀನ್ ಗೋಲ್ಡ್ ಬಾಂಡ್ ಸ್ಕೀಮ್ ಎಂಬುದು ಚಿನ್ನದ ಮೇಲೆ ಹೂಡಿಕೆ ಮಾಡುವ ಯೋಜನೆ. ಭೌತಿಕ ಚಿನ್ನ (Physical gold) ಬೇಕಿಲ್ಲದ, ಆದರೆ ಚಿನ್ನದ ಮೇಲೆ ಹೂಡಿಕೆ ಮಾಡಬಯಸುವವರಿಗೆ ಹೇಳಿ ಮಾಡಿಸಿದ ಸ್ಕೀಮ್ ಇದು. ಆರ್​ಬಿಐ ಈ ಗೋಲ್ಡ್ ಬಾಂಡ್​ಗಳನ್ನು ವಿತರಿಸುತ್ತದೆ. ಯಾವುದೇ ರಿಸ್ಕ್ ಇಲ್ಲದೇ ಸುರಕ್ಷಿತವಾಗಿ ಈ ಸ್ಕೀಮ್​ನಲ್ಲಿ ಹಣ ತೊಡಗಿಸಬಹುದು. ಚಿನ್ನದ ವಾಸ್ತವಿಕ ಬೆಲೆಗೆ ಅನುಗುಣವಾಗಿ ನಿಮ್ಮ ಹೂಡಿಕೆಯ ರಿಟರ್ನ್ ವ್ಯತ್ಯಯವಾಗುತ್ತದೆ. ಭೌತಿಕ ಚಿನ್ನ ಬದಲು ಎಲೆಕ್ಟ್ರಾನಿಕ್ ರೂಪದಲ್ಲಿ ಚಿನ್ನ ಹೊಂದಿರುವುದರಿಂದ ಇದು ಸುರಕ್ಷಿತ ಎನಿಸಿದೆ.

ಸಾವರೀನ್ ಗೋಲ್ಡ್ ಬಾಂಡ್ ಯಾವಾಗ ಸಿಗುತ್ತದೆ?

ಸರ್ಕಾರ 2023-24ರ ವರ್ಷದ ಮೂರನೇ ಸರಣಿ ಗೋಲ್ಡ್ ಬಾಂಡ್​ಗಳನ್ನು ಡಿಸೆಂಬರ್ 18ರಿಂದ 22ರವರೆಗೂ ಬಿಡುಗಡೆ ಮಾಡುತ್ತಿದೆ. ಡಿಸೆಂಬರ್ 28ಕ್ಕೆ ಬಾಂಡ್ ವಿತರಣೆ ಆಗುತ್ತದೆ. ಬಾಂಡ್​ನಲ್ಲಿ ಚಿನ್ನದ ಬೆಲೆ ಎಷ್ಟು ಎಂಬುದು ಇವತ್ತು ಸಂಜೆ ಅಥವಾ ನಾಳೆ ನಿಗದಿಯಾಗಬಹುದು. ಬಾಂಡ್ ಬಿಡುಗಡೆ ದಿನಕ್ಕೆ ಮುಂಚಿನ ನಿರ್ದಿಷ್ಟ ದಿನದಂದು ಇರುವ ಚಿನ್ನದ ಬೆಲೆಯನ್ನು ನಿಗದಿ ಮಾಡುವುದು ಸಂಪ್ರದಾಯ.

ಸಾವರಿನ್ ಗೋಲ್ಡ್ ಬಾಂಡ್​ಗಳನ್ನು ಆರ್​ಬಿಐ ಒಂದು ವರ್ಷದಲ್ಲಿ ಸರಣಿಯಾಗಿ ಹಲವು ಬಾರಿ ವಿತರಿಸುತ್ತದೆ. ಒಂದೊಂದು ಸರಣಿಯೂ ಐದು ದಿನದ ಅವಧಿಯವರೆಗೆ ಲಭ್ಯ ಇರುತ್ತದೆ.

ಇದನ್ನೂ ಓದಿ: Corporate FD: ಕಾರ್ಪೊರೇಟ್ ಠೇವಣಿ ಎಂದರೇನು? ಬ್ಯಾಂಕ್ ಎಫ್​​ಡಿಗೂ ಅದಕ್ಕೂ ಏನು ವ್ಯತ್ಯಾಸ? ಯಾವುದು ಉತ್ತಮ?

ಈ ಸ್ಕೀಮ್​ನಲ್ಲಿ ಕನಿಷ್ಠ ಹೂಡಿಕೆ 1 ಗ್ರಾಮ್ ಚಿನ್ನವಾಗಿರುತ್ತದೆ. ಸಾಮಾನ್ಯ ವ್ಯಕ್ತಿ ಗರಿಷ್ಠ 4 ಕಿಲೋ ಚಿನ್ನದವರೆಗೆ ಹೂಡಿಕೆ ಮಾಡಬಹುದು. ಇಲ್ಲಿ ಚಿನ್ನವು 24 ಕ್ಯಾರಟ್​ನದ್ದಾಗಿರುತ್ತದೆ. 1 ಗ್ರಾಮ್ ಚಿನ್ನದ ಮೇಲೆ ಹೂಡಿಕೆ ಎಂದರೆ 24 ಕ್ಯಾರಟ್​ನ 1 ಗ್ರಾಮ್ ಚಿನ್ನದ ಬೆಲೆಯಷ್ಟು ಹಣವನ್ನು ಹೂಡಿಕೆಯಾಗಿ ಪಡೆಯಲಾಗುತ್ತದೆ. ಆ ಮೊತ್ತಕ್ಕೆ ಬಾಂಡ್ ಬಿಡುಗಡೆ ಮಾಡಲಾಗುತ್ತದೆ.

ಎಂಟು ವರ್ಷಕ್ಕೆ ಬಾಂಡ್ ಮೆಚ್ಯೂರ್ ಆಗುತ್ತದೆ. ಮೆಚ್ಯೂರ್ ಆದಾಗ ಅಂದು ಚಿನ್ನದ ಬೆಲೆ ಎಷ್ಟಿದೆ ಅಷ್ಟು ಮೊತ್ತ ನಿಮಗೆ ರಿಟರ್ನ್ ಆಗಿ ಸಿಗುತ್ತದೆ. ಉದಾಹರಣೆಗೆ ನೀವು ಇವತ್ತು 1 ಗ್ರಾಮ್ ಚಿನ್ನದ ದರವಾದ 6,300 ರೂಗೆ ಬಾಂಡ್ ಪಡೆಯುತ್ತೀರಿ. ಎಂಟು ವರ್ಷದ ಬಳಕ 1 ಗ್ರಾಮ್ ಚಿನ್ನದ ಬೆಲೆ 12,000 ಆಗಿದ್ದರೆ ನಿಮಗೆ 12,000 ರೂ ರಿಟರ್ನ್ ಸಿಗುತ್ತದೆ. ಗಮನಿಸಿ, ಇಲ್ಲಿ ನಿಮಗೆ ಚಿನ್ನ ಸಿಗುವುದಿಲ್ಲ, ಆದರೆ ಚಿನ್ನದ ಬೆಲೆಯಷ್ಟು ಹಣ ಸಿಗುತ್ತದೆ.

ಸಾವರೀನ್ ಗೋಲ್ಡ್ ಬಾಂಡ್ ಸ್ಕೀಮ್​ನಿಂದ ಬಡ್ಡಿ ಆದಾಯ

ಎಸ್​ಜಿಬಿಯಲ್ಲಿ ನೀವು 100 ಗ್ರಾಮ್ ಚಿನ್ನದ ಮೇಲೆ ಒಟ್ಟು 6,30,000 ರೂ ಹೂಡಿಕೆ ಮಾಡುತ್ತೀರಿ. ಅದಕ್ಕೆ ನಿಮಗೆ ವಾರ್ಷಿಕ ಶೇ 2.50ರಷ್ಟು ಬಡ್ಡಿ ಕೂಡ ಹೆಚ್ಚುವರಿಯಾಗಿ ಸಿಗುತ್ತದೆ. ಅಂದರೆ, ಒಂದು ವರ್ಷದಲ್ಲಿ 15,750 ರೂ ಬಡ್ಡಿ ಸಿಗುತ್ತದೆ. ಪ್ರತೀ ಆರು ತಿಂಗಳಿಗೊಮ್ಮೆ ಬಡ್ಡಿ ಹಣವು ನಿಮ್ಮ ಬ್ಯಾಂಕ್ ಖಾತೆಗೆ ಸಲ್ಲುತ್ತದೆ.

ಇದನ್ನೂ ಓದಿ: Sovereign Gold Bond Scheme: ಸಾವರೀನ್ ಗೋಲ್ಡ್ ಬಾಂಡ್ ಸ್ಕೀಮ್, 3ನೇ ಮತ್ತು 4ನೇ ಸರಣಿ ಬಾಂಡ್​ಗಳ ಬಿಡುಗಡೆ ದಿನಾಂಕ ಪ್ರಕಟ

ಸಾವರೀನ್ ಗೋಲ್ಡ್ ಬಾಂಡ್​ನಿಂದ ಇತರ ಪ್ರಯೋಜನಗಳು

  • ಸಾವರೀನ್ ಗೋಲ್ಡ್ ಬಾಂಡ್ ಮೇಲೆ ನೀವು ಬ್ಯಾಂಕ್​ನಲ್ಲಿ ಸಾಲ ಪಡೆಯಬಹುದು.
  • ಈ ಬಾಂಡ್​ನಿಂದ ಸಿಗುವ ಲಾಭದ ಹಣಕ್ಕೆ ಕ್ಯಾಪಿಟಲ್ ಗೇನ್ ಟ್ಯಾಕ್ಸ್ ಇರುವುದಿಲ್ಲ.
  • ಈ ಬಾಂಡ್​ನ ಹಣಕ್ಕೆ ಟಿಡಿಎಸ್ ಕಡಿತ ಇರುವುದಿಲ್ಲ.
  • ಸಾವರೀನ್ ಗೋಲ್ಡ್ ಬಾಂಡ್ ಅನ್ನು ಇನ್ನೊಬ್ಬರಿಗೆ ವರ್ಗಾಯಿಸಬಹುದು, ಗಿಫ್ಟ್ ಆಗಿ ಕೊಡಬಹುದು.

ಸಾವರೀನ್ ಗೋಲ್ಡ್ ಬಾಂಡ್​ಗಳನ್ನು ಹೇಗೆ ಪಡೆಯುವುದು?

ಎಸ್​ಜಿಬಿಗಳನ್ನು ಶ್ಕೆಡ್ಯೂಲ್ಡ್ ಕಮರ್ಷಿಯಲ್ ಬ್ಯಾಂಕುಗಳಲ್ಲಿ ಪಡೆಯಬಹುದು. ಆಯ್ದ ಅಂಚೆ ಕಚೇರಿಗಳು, ಷೇರು ವಿನಿಮಯ ಕೇಂದ್ರಗಳೂ ಕೂಡ ಸಾವರೀನ್ ಗೋಲ್ಡ್ ಬಾಂಡ್​ಗಳನ್ನು ವಿತರಿಸುತ್ತವೆ.

ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಉಗ್ರರ ವಿರುದ್ಧ ಕ್ರಮಕೈಗೊಳ್ಳಿ, ಮೋದಿ ಜೊತೆ ನಾವಿದ್ದೇವೆ: ಮುಸ್ಲಿಂ ಮುಖಂಡರು
ಉಗ್ರರ ವಿರುದ್ಧ ಕ್ರಮಕೈಗೊಳ್ಳಿ, ಮೋದಿ ಜೊತೆ ನಾವಿದ್ದೇವೆ: ಮುಸ್ಲಿಂ ಮುಖಂಡರು
‘ಕಿತ್ಗೊಂಡು ತಿನ್ನುವವರಿಗೆ ಹೊಟ್ಟೆ ತುಂಬಲ್ಲ’; ಹಾಡು ಹೇಳಿದ ಸಾಧು ಕೋಕಿಲ
‘ಕಿತ್ಗೊಂಡು ತಿನ್ನುವವರಿಗೆ ಹೊಟ್ಟೆ ತುಂಬಲ್ಲ’; ಹಾಡು ಹೇಳಿದ ಸಾಧು ಕೋಕಿಲ
ಕಾರ್ಯಕ್ರಮದಲ್ಲಿ ಸಚಿವ ವೆಂಕಟೇಶ್​ರನ್ನು ವಿಶೇಷವಾಗಿ ಹೊಗಳಿದ ಸಿದ್ದರಾಮಯ್ಯ
ಕಾರ್ಯಕ್ರಮದಲ್ಲಿ ಸಚಿವ ವೆಂಕಟೇಶ್​ರನ್ನು ವಿಶೇಷವಾಗಿ ಹೊಗಳಿದ ಸಿದ್ದರಾಮಯ್ಯ
ಅಮಿತ್ ಶಾ ಆದೇಶ ಕೇಳಿ ಪಾಕಿಸ್ತಾನಿ ಮಹಿಳೆಯ ಅತ್ತೆಗೆ ಹೃದಯಾಘಾತ
ಅಮಿತ್ ಶಾ ಆದೇಶ ಕೇಳಿ ಪಾಕಿಸ್ತಾನಿ ಮಹಿಳೆಯ ಅತ್ತೆಗೆ ಹೃದಯಾಘಾತ
‘ಅವರು ಹೇಡಿಗಳು, ಗಂಡಸ್ತನ ಇದ್ರೆ ಸೈನಿಕರ ವಿರುದ್ಧ ಹೋರಾಡಲಿ’; ಚಂದನ್ ಶೆಟ್ಟ
‘ಅವರು ಹೇಡಿಗಳು, ಗಂಡಸ್ತನ ಇದ್ರೆ ಸೈನಿಕರ ವಿರುದ್ಧ ಹೋರಾಡಲಿ’; ಚಂದನ್ ಶೆಟ್ಟ
ಬರವಣಿಗೆ ನನ್ನ ಶಕ್ತಿಯಾಗಿತ್ತು ಎನ್ನುತ್ತಾರೆ 425 ನೇ ರ‍್ಯಾಂಕ್ ಪಡೆದ ಮೇಘನಾ
ಬರವಣಿಗೆ ನನ್ನ ಶಕ್ತಿಯಾಗಿತ್ತು ಎನ್ನುತ್ತಾರೆ 425 ನೇ ರ‍್ಯಾಂಕ್ ಪಡೆದ ಮೇಘನಾ
ಇಂದಿನಿಂದ ಹುಬ್ಬಳ್ಳಿಯಲ್ಲಿ ಆರಂಭವಾಗಿರುವ 2-ದಿನದ ಎಜುಕೇಶನ್ ಎಕ್ಸ್​ಪೋ
ಇಂದಿನಿಂದ ಹುಬ್ಬಳ್ಳಿಯಲ್ಲಿ ಆರಂಭವಾಗಿರುವ 2-ದಿನದ ಎಜುಕೇಶನ್ ಎಕ್ಸ್​ಪೋ
ಯುದ್ಧದ ಬಗ್ಗೆ ಸಿಎಂ ಸಿದ್ದರಾಮಯ್ಯ ಏನು ಹೇಳಿದ್ದಾರೆ ಗೊತ್ತಿಲ್ಲ: ಲಕ್ಷ್ಮಿ
ಯುದ್ಧದ ಬಗ್ಗೆ ಸಿಎಂ ಸಿದ್ದರಾಮಯ್ಯ ಏನು ಹೇಳಿದ್ದಾರೆ ಗೊತ್ತಿಲ್ಲ: ಲಕ್ಷ್ಮಿ
ಕೋಲಾರದಲ್ಲಿ ಜನಪದ ಗಾಯಕನಿಂದ ನಿರ್ಮಾಣವಾದ ಹೈಟೆಕ್ ​ಬಸ್ ನಿಲ್ದಾಣ
ಕೋಲಾರದಲ್ಲಿ ಜನಪದ ಗಾಯಕನಿಂದ ನಿರ್ಮಾಣವಾದ ಹೈಟೆಕ್ ​ಬಸ್ ನಿಲ್ದಾಣ
ಪಾಕಿಸ್ತಾನಕ್ಕೆ ಅದರದ್ದೇ ಭಾಷೆಯಲ್ಲಿ ಉತ್ತರ ಕೊಡಬೇಕು: ಧ್ರುವ ಸರ್ಜಾ
ಪಾಕಿಸ್ತಾನಕ್ಕೆ ಅದರದ್ದೇ ಭಾಷೆಯಲ್ಲಿ ಉತ್ತರ ಕೊಡಬೇಕು: ಧ್ರುವ ಸರ್ಜಾ