ಬಹಳ ಸರ್ವೇ ಸಾಮಾನ್ಯವಾಗಿ ಜನರು ಬಳಸುವ ಸೇವಿಂಗ್ಸ್ ಸ್ಕೀಮ್ಗಳಲ್ಲಿ ಫಿಕ್ಸೆಡ್ ಡೆಪಾಸಿಟ್, ರೆಕರಿಂಗ್ ಡೆಪಾಸಿಟ್ ಇತ್ಯಾದಿ ಇವೆ. ಎಫ್ಡಿ ಅಥವಾ ಫಿಕ್ಸೆಡ್ ಡೆಪಾಸಿಟ್ನಲ್ಲಿ ಒಮ್ಮೆಗೇ ಡೆಪಾಸಿಟ್ ಇಡುತ್ತೀರಿ. ಆರ್ಡಿ ಸ್ಕೀಮ್ನಲ್ಲಿ ನೀವು ಮಾಸಿಕವಾಗಿ ನಿರ್ದಿಷ್ಟ ಮೊತ್ತದ ಹಣವನ್ನು ಕಟ್ಟುತ್ತಾ ಹೋಗಬಹುದು. ಎಫ್ಡಿಯಲ್ಲಿ ಸಿಗುವ ರಿಟರ್ನ್ಗಿಂತ ಆರ್ಡಿಯಲ್ಲಿ ಸಿಗುವುದು ತುಸು ಕಡಿಮೆ. ಆದರೆ, ಪ್ರತೀ ತಿಂಗಳು ಕಡಿಮೆ ಕಡಿಮೆ ಮೊತ್ತದ ಹಣವನ್ನು ಕಟ್ಟುತ್ತಾ ಹೋಗುವ ದೊಡ್ಡ ಅನುಕೂಲ ಆರ್ಡಿಗೆ ಇದೆ. ಇದೇ ವೇಳೆ, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಹೊಸ ಆರ್ಡಿ ಸ್ಕೀಮ್ವೊಂದನ್ನು ಆರಂಭಿಸಿದೆ. ಈ ಪ್ಲಾನ್ ಹೆಸರು ಹರ್ ಘರ್ ಲಖಪತಿ. ಅಂದರೆ ಪ್ರತೀ ಮನೆಯಲ್ಲೂ ಲಕ್ಷಾಧಿಪತಿ ಸೃಷ್ಟಿಯಾಗಬೇಕು ಎನ್ನುವ ಉದ್ದೇಶದಿಂದ ಆರಂಭಿಸಲಾದ ರಿಕರಿಂಗ್ ಡೆಪಾಸಿಟ್ ಪ್ಲಾನ್ ಇದು.
ಎಸ್ಬಿಐನ ಹರ್ ಘರ್ ಲಖಪತಿ ಆರ್ಡಿ ಸ್ಕೀಮ್ನಲ್ಲಿ ಉತ್ತಮ ಬಡ್ಡಿ ಸಿಗುತ್ತದೆ. ಆರ್ಡಿ ಅವಧಿ ಮೂರರಿಂದ ನಾಲ್ಕು ವರ್ಷದ್ದಿರುತ್ತದೆ. ಸಾಮಾನ್ಯ ಗ್ರಾಹರಿಗೆ ವಾರ್ಷಿಕವಾಗಿ ಶೇ. 6.77ರಷ್ಟು ಬಡ್ಡಿ ಸಿಗುತ್ತದೆ. ಇದು ಪೋಸ್ಟ್ ಆಫೀಸ್ನ ಆರ್ಡಿ ಪ್ಲಾನ್ಗೆ ಸಿಗುವಷ್ಟೇ ಬಡ್ಡಿಯಾಗಿದೆ.
ಇದನ್ನೂ ಓದಿ: ನವೆಂಬರ್ನಲ್ಲಿ 14 ಲಕ್ಷದಷ್ಟು ಹೆಚ್ಚಿದ ಇಪಿಎಫ್ ಸದಸ್ಯರ ಸಂಖ್ಯೆ; ಉದ್ಯೋಗಾವಕಾಶವೂ ಹೆಚ್ಚಳ
ಹಾಗೆಯೇ, ಹಿರಿಯ ನಾಗರಿಕರಿಗೆ ವಾರ್ಷಿಕ ಶೇ. 7.25 ಬಡ್ಡಿ ಸಿಗುತ್ತದೆ. ಇದು ಎಸ್ಬಿಐನ ಗರಿಷ್ಠ ಎಫ್ಡಿ ದರಕ್ಕೆ ಸಮವಾಗಿದೆ. ಎಸ್ಬಿಐನ ಇತರ ರೆಗ್ಯುಲರ್ ಆರ್ಡಿ ಸ್ಕೀಮ್ಗಳಲ್ಲಿ 60 ವರ್ಷಕ್ಕಿಂತ ಕಡಿಮೆ ವಯಸ್ಸಿನವರಿಗೆ ಶೇ. 6.50; ಹಾಗೂ ಹಿರಿಯ ನಾಗರಿಕರಿಗೆ ಶೇ. 7 ಬಡ್ಡಿ ಇದೆ. ಹರ್ ಘರ್ ಲಖಪತಿ ಸ್ಕೀಮ್ನಲ್ಲಿ 25 ಮೂಲಾಂಕಗಳಷ್ಟು ಹೆಚ್ಚು ಬಡ್ಡಿ ಸಿಗುತ್ತದೆ.
ರೆಗ್ಯುಲರ್ ಆರ್ಡಿ ಸ್ಕೀಮ್ಗಳಲ್ಲಿ ಆರು ತಿಂಗಳಿಂದ ಠೇವಣಿ ಅವಧಿ ಆರಂಭವಾಗುತ್ತದೆ. ಎಸ್ಬಿಐ ಹರ್ ಘರ್ ಲಖಪತಿ ಸ್ಕೀಮ್ನಲ್ಲಿ ಕನಿಷ್ಠ ಅವಧಿ 12 ತಿಂಗಳಿಂದ ಆರಂಭವಾಗುತ್ತದೆ. 10 ವರ್ಷದವರೆಗೂ ಆರ್ಡಿ ಅವಕಾಶ ಇದೆ. ಪ್ರತೀ ವರ್ಷ ಮಕ್ಕಳ ಶಾಲೆಗೆ ಶುಲ್ಕ ಹೊಂದಿಸಲು ಇತ್ಯಾದಿ ನಿಯಮವಾದ ಫಿಕ್ಸೆಡ್ ಎಕ್ಸ್ಪೆನ್ಸ್ಗೆ ಈ ರೀತಿಯ ಆರ್ಡಿಯನ್ನು ಪ್ಲಾನ್ ಮಾಡುವುದು ಸಮಂಜಸ ಎನಿಸುತ್ತದೆ.
ಇದನ್ನೂ ಓದಿ: ಪರ್ಸನಲ್ ಲೋನ್: ನಿಶ್ಚಿತ ಬಡ್ಡಿದರ ಆಯ್ಕೆಗೆ ಅವಕಾಶ ಇರಬೇಕು: ಆರ್ಬಿಐ ನಿಯಮ
ಆರ್ಡಿ ಸ್ಕೀಮ್ಗಳಲ್ಲೂ ಲಾಕಿನ್ ಪೀರಿಯಡ್ ಇರುತ್ತದೆ. ಈ ಲಾಕ್ ಇನ್ ಪೀರಿಯಡ್ನೊಳಗೆ ನೀವು ಹಣ ಹಿಂಪಡೆಯಲು ಆಗುವುದಿಲ್ಲ. ಹಾಗೊಂದು ವೇಳೆ ಹಿಂಪಡೆಯುವುದಾದರೆ ಶೇ. 0.5ರಿಂದ 1ರವರೆಗೆ ಪೆನಾಲ್ಟಿ ಕಟ್ಟಬೇಕಾಗುತ್ತದೆ.
ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ